ಕುಟುಂಬ ವಿಭಾಗ (2021 ಆಗಸ್ಟ್ )
ರಾಜ್ಯದ 10 ಸಾವಿರಕ್ಕೂ ಅಧಿಕ ವಿಶೇಷಚೇತನರಿಗೆ ಆಸರೆಯಾದ ‘ಜನಮಂಗಲ’ ಉಚಿತ ಸಲಕರಣೆ
>ಡಾ| ಎಲ್.ಎಚ್.ಮಂಜುನಾಥ್,ಕಾರ್ಯನಿರ್ವಾಹಕ ನಿರ್ದೇಶಕರು ಅಂಗವೈಕಲ್ಯತೆ ಶಾಪವಲ್ಲ, ಅಂಗವಿಕಲರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಿ ಎಲ್ಲರಂತೆ ಸಂತೋಷದ ಬದುಕನ್ನು ಬಾಳಲು ಅವಕಾಶ ಕಲ್ಪಿಸುವುದು ಸರಕಾರ ಹಾಗೂ ಸಮಾಜದ ಜವಾಬ್ದಾರಿ. ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 10.41 ಲಕ್ಷ ಅಂಗವಿಕಲರಿದ್ದಾರೆ ಎಂಬ ಮಾಹಿತಿಯಿದೆ. ಕುಟುಂಬವೊಂದರಲ್ಲಿ ಒಬ್ಬ ಅಂಗವಿಕಲನಿದ್ದರೆ ಆ ಕುಟುಂಬ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿರುತ್ತದೆ. ಅಂಗವಿಕಲರನ್ನು ಪ್ರತಿನಿತ್ಯ ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕಿದೆ. ನಿತ್ಯ ದುಡಿದು ತಿನ್ನುವ ಕುಟುಂಬವಾದರೂ ಇವರ ಯೋಗಕ್ಷೇಮ ನೋಡಿಕೊಳ್ಳಲು ಓರ್ವರು ಮನೆಯಲ್ಲಿಯೇ ಇರಬೇಕಾಗುತ್ತದೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ಬದುಕಂತೂ ದುರಂತಮಯವಾದುದು. […]