ಕರೆಂಟಿಲ್ಲದ ಆ ದಿನ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನಾವು ಚಿಕ್ಕವರಿರುವಾಗ ಹಳ್ಳಿಯಲ್ಲಿರುವ ನಮ್ಮ ಅಜ್ಜನ ಮನೆಯಲ್ಲಿ ಕರೆಂಟಿರಲಿಲ್ಲ. ಆದ್ದರಿಂದ ಹಗಲೆಲ್ಲಾ ಗುಡ್ಡ, ಬೆಟ್ಟ, ಗದ್ದೆ ಎಲ್ಲಿ ಬೇಕೆಂದರಲ್ಲಿ ಅಲೆದಾಡಿ ರಾತ್ರಿ ಆಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದೆವು. ಬೇಗ ಊಟ ಮುಗಿಸಿದರೆ ಮತ್ತೆ ನೀರವ ಮೌನ, ಕತ್ತಲೆ. ಅಲ್ಲಿ ನಮ್ಮ ಸಹಾಯಕ್ಕೆ ಬರುತ್ತಿದ್ದವರು ಆಳು ಮಕ್ಕಳು. ಅವರಲ್ಲಿ ಅನೇಕ ಗಾದೆ ಮಾತುಗಳು, ಒಗಟು, ಜಾನಪದ ಕತೆ, ಭೂತಪ್ರೇತದ ಕತೆಗಳ ಮುಗಿಯಲಾರದ ಭಂಡಾರವೇ ಇರುತ್ತಿತ್ತು. ಜೊತೆಗೆ ಮನೆಯ ಹಿರಿಯರು, ಅಮ್ಮ, ದೊಡ್ಡಮ್ಮನವರ ಶಾಸ್ತ್ರ, ಕಾವ್ಯಗಳ […]

ಸ್ವಾತಂತ್ರ್ಯ ಸೇನಾನಿಗಳನ್ನು ನೆನೆಯೋಣ!

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಎಪ್ಪತ್ತನಾಲ್ಕು ವರ್ಷಗಳನ್ನು ಪೂರೈಸಿ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ನೆನೆಯಬೇಕಾದುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯು ಹೌದು. ಇಂದು ನಾವು ಸ್ವತಂತ್ರವಾಗಿ ಬದುಕಿದ್ದರೆ ಅದರ ಹಿಂದೆ ಸಾವಿರಾರು ಮಂದಿಯ ಬಲಿದಾನ, ತ್ಯಾಗವಿದೆ. ಸಂಘಟನಾತ್ಮಕ ಹೋರಾಟವಿದೆ. ನಮ್ಮ ಹಿರಿಯರ ಐತಿಹಾಸಿಕ ವಿಜಯದ ಕೊಡುಗೆಯೇ ನಮ್ಮ ವರ್ತಮಾನದ ಸಂಭ್ರಮ. ಆ ಕಾಲದಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ ಎಷ್ಟಿತ್ತು, ಅವರ ಬದುಕಿನ ಸುಖ – ದುಃಖ, ಬವಣೆ […]