ಡಿಜಿಟಲ್ ವ್ಯವಹಾರದ ಹೊಸ ಹೆಜ್ಜೆ ‘ಇ – ರುಪಿ’
ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರಕಾರ ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್ ಹೀಗೆ ಹಲವಾರು ಡಿಜಿಟಲ್ ಮಾಧ್ಯಮಗಳನ್ನು ಪರಿಚಯಿಸಿದೆ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಮೂಲಕ ಮಧ್ಯವರ್ತಿಮುಕ್ತ ದುನಿಯಾವನ್ನು ಪರಿಚಯಿಸುವ ಕೆಲಸವು ವೇಗವಾಗಿ ನಡೆಯುತ್ತಿದೆ. ಆದರೆ ಫಲಾನುಭವಿಗಳಿಗೆ ಸರಕಾರದಿಂದ ನೀಡಿದ ಹಣವನ್ನು ಅವರು ಅದೇ ಕೆಲಸಕ್ಕೆ ಬಳಸುತ್ತಿಲ್ಲ, ಅರ್ಹತೆ ಇಲ್ಲದವರು ಕೆಲವು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಸರಕಾರದ ಬಳಿ ಇತ್ತು. ಇದನ್ನು […]
ಸ್ವಸಹಾಯ ಸಂಘಗಳಿಗೆ ರಕ್ಷಣೆ ನೀಡುವ ‘ಪ್ರಗತಿರಕ್ಷಾ ಕವಚ’
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಸ್ವಸಹಾಯ ಸಂಘಗಳಿoದ ಇದೀಗ ಸುಮಾರು 40 ಲಕ್ಷ ಸದಸ್ಯರು ಸಾಲಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನವರು ಮಹಿಳೆಯರೇ ಆಗಿರುವುದರಿಂದ ಉದ್ದೇಶಗಳಿಗೆ ಪಡೆದುಕೊಂಡ ಸಾಲಗಳನ್ನು ಮನೆಯಲ್ಲಿ ದುಡಿಯುತ್ತಿರುವ ಗಂಡಸರಿಗೆ ನೀಡಿ ವ್ಯವಹಾರ ನಡೆಸುತ್ತಾರೆ. ಪ್ರತಿ ವಾರ ಕಂತನ್ನು ಪಾವತಿಸುತ್ತಾರೆ. ಅಕಸ್ಮಾತ್ ಸಾಲ ಪಡೆದುಕೊಂಡ ಸದಸ್ಯರಾಗಲಿ ಅಥವಾ ಅವರು ಪಡೆದುಕೊಂಡ ಹಣವನ್ನು ವಿನಿಯೋಗಿಸುವ ಕುಟುಂಬದ ಸದಸ್ಯರಾಗಲಿ ಮರಣ ಹೊಂದಿದರೆ ವ್ಯವಹಾರ ಕುಂಠಿತವಾಗಿ ಸಾಲ ಮರುಪಾವತಿ ಕಷ್ಟವಾಗುತ್ತದೆ. ಕಂತು ಬಾಕಿಯಾದೊಡನೆ ಪ್ರಥಮವಾಗಿ […]
ಗ್ರಾಮೀಣ ಭಾರತ, ಅದುವೇ ಭಾರತ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಮಹಾತ್ಮ ಗಾಂಧೀಜಿಯವರು ‘ನೈಜ ಭಾರತದ ದರ್ಶನ ಗ್ರಾಮೀಣ ಭಾರತದಲ್ಲಿ’ ಎಂದು ಸಾರಿದ್ದರು ಹಾಗೂ ಗ್ರಾಮದ ಅಭ್ಯುದಯದಿಂದ ಮಾತ್ರ ಭಾರತದ ಅಭ್ಯುದಯ ಸಾಧ್ಯ ಎಂದು ಕನಸು ಕಂಡಿದ್ದರು. ದೇಶದ ಅರ್ಥ ವ್ಯವಸ್ಥೆಯಲ್ಲಿ ನಗರಗಳ ಆರ್ಥಿಕ ಬೆಳವಣಿಗೆ ಮಿಂಚಿನ ವೇಗದಲ್ಲಿ ಬೆಳೆಯುತ್ತಿದ್ದರೂ ಕೂಡ, ಗ್ರಾಮೀಣ ಭಾರತವು ಈಗಲೂ ಆರ್ಥಿಕತೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಸ್ಥಾನವನ್ನು ಪಡೆದಿದೆ. ದೇಶದ ಒಟ್ಟು ಜನಸಂಖ್ಯೆಯಾದ 139 ಕೋಟಿಯಲ್ಲಿ ಶೇಕಡಾ 65ರಷ್ಟು […]