ಸ್ವಯಂ, ಸ್ವ್ವಸಹಾಯ ಮತ್ತು ಸಮಷ್ಠಿ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ‘ಅಂತ್ಯೋದಯ’, ‘ಸರ್ವೋದಯ’ ಹಾಗೂ ‘ಗ್ರಾಮಾಭ್ಯುದಯ’ ಎಂಬ ಮೂರು ಪರಿಕಲ್ಪನೆಗಳ ಮೂಲಕ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಕಂಡಿದ್ದರು. ‘ಅಂತ್ಯೋದಯ’ ಎನ್ನುವುದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯಾಗಿದ್ದು, ‘ಸರ್ವೋದಯ’ ಎನ್ನುವುದು ಸಮಾಜದ ಸರ್ವರ ಅಭಿವೃದ್ಧಿಯಾಗಿರುತ್ತದೆ. ಹೀಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಸರ್ವರ ಶ್ರೇಯಾಭಿವೃದ್ಧಿಯ ಮೂಲಕ ಪ್ರತಿ ಗ್ರಾಮಗಳು ಅಭ್ಯುದಯವಾಗಬೇಕೆನ್ನುವುದು ರಾಷ್ಟ್ರಪಿತರ ಕನಸಾಗಿತ್ತು.ಪೂಜ್ಯ ಡಾ|| ಡಿ. ವೀರೇಂದ್ರ […]