ಇಂದಿನ ಮಕ್ಕಳೆ ಮುಂದಿನ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ರಾಯರು ಮೂರು – ನಾಲ್ಕು ವರ್ಷಗಳ ಬಳಿಕ ದೂರದ ಊರಿನಲ್ಲಿ ನೆಲೆಸಿದ್ದ ತನ್ನ ಎರಡನೆಯ ಮಗನನ್ನು ನೋಡಲು ಹೊರಟಿದ್ದರು. ಮಗನಿಗಿಂತಲೂ ಮೊಮ್ಮಗ ಆಯುರ್‍ನನ್ನು ನೋಡುವ ತವಕ ಎಲ್ಲಿಲ್ಲದಷ್ಟಿತ್ತು. 4 ವರ್ಷಗಳ ಹಿಂದೆ ನೋಡಿದ್ದಾಗ ಕೇವಲ ಮೂರು ವರ್ಷದ ಮಗುವಾಗಿದ್ದ ಆಯುರ್ ಈಗ ಎಷ್ಟು ತುಂಟನಾಗಿರಬಹುದೆಂದೆಲ್ಲಾ ಊಹಿಸುತ್ತಿದ್ದರು. ತನ್ನ ಅಂಗೈಯ ಎರಡರಷ್ಟು ಗಾತ್ರದ ದೊಡ್ಡ ಚಾಕಲೇಟನ್ನು ಆಯುರ್‍ಗೆ ಕೊಡಬೇಕೆಂದು ಹತ್ತಾರು ಅಂಗಡಿಗಳಲ್ಲಿ ಹುಡುಕಿ […]

ಹಬ್ಬಗಳ ಆಚರಣೆಯಲ್ಲಿ ಪರಿಸರ ಜಾಗೃತಿ ಇರಲಿ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಭಾರತ ಹಬ್ಬಗಳ ದೇಶ. ಮಳೆಗಾಲದಲ್ಲಿ ನಾಗರಪಂಚಮಿಯಂದು ನಮ್ಮ ಹಬ್ಬಗಳ ಸರಮಾಲೆ ಆರಂಭವಾಗುತ್ತದೆ. ಇದು ಮುಗಿಯುವುದು ನಮ್ಮೂರ ದೇವಸ್ಥಾನದ ಜಾತ್ರೋತ್ಸವದಲ್ಲಿ. ಇದರ ನಡುವೆಯೇ ಕುಟುಂಬಗಳಲ್ಲಿ ನಡೆಯುವ ಮದುವೆ, ಮುಂಜಿ, ಸೀಮಂತ ಇವೆಲ್ಲವೂ ನಮಗೆ ಹಬ್ಬದ ದಿನಗಳೇ ಆಗಿವೆ. ಹಬ್ಬವೆಂದರೆ ನೆಂಟರು, ಇಷ್ಟರು, ಊರಿನವರು ಸೇರುತ್ತಾರೆ. ಗೌಜಿ ಗಮ್ಮತ್ತು ಇರಲೇಬೇಕು. ನಮ್ಮ ದೇಶದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ನವರಾತ್ರಿಯಂದು ಬಣ್ಣದ ವೇಷ ಹಾಕಿ ಮೆರವಣಿಗೆ ಮಾಡಿ, ಊರೆಲ್ಲ ನರ್ತಿಸಿ, […]

ಗ್ರಾಮಾಭಿವೃದ್ಧಿ ಯೋಜನೆ ಎಂಬ ಕಲ್ಪವೃಕ್ಷ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳ ಬಗ್ಗೆ ಯೋಚಿಸಿದರೆ ಅದೊಂದು ‘ವಿಶ್ವರೂಪ ದರ್ಶನ’ವಾದಂತೆ ಭಾಸವಾಗುತ್ತದೆ. ದುರ್ಗೆಯ ಕೈಗಳಲ್ಲಿರುವ ವೈವಿಧ್ಯಮಯ ಆಯುಧಗಳಂತೆ ಕಾಲ ಕಾಲಕ್ಕೆ ಸಮಾಜದ ನಾನಾ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹೊಸ ಯೋಚನೆ, ಚಿಂತನೆಗಳೊಂದಿಗೆ ಹೊಸ ಹೊಸ ಕಾರ್ಯಕ್ರಮಗಳು ಯೋಜನೆಯ ಮೂಲಕ ಮೂಡಿ ಬಂದಿರುವುದನ್ನು ನಾವು ನೋಡಬಹುದು. ಜನರಲ್ಲಿ ಉಳಿತಾಯದ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ವಾರದಲ್ಲಿ ರೂ.10ರಂತೆ ಉಳಿತಾಯದ ಉದ್ದೇಶವನ್ನಿಟ್ಟು ಆರಂಭವಾದ ಸಂಘಗಳು ಮುಂದೆ ‘ಪ್ರಗತಿಬಂಧು’ ಎಂದು ಕರೆಸಿಕೊಂಡವು. ಉಳಿತಾಯದೊಂದಿಗೆ ಶ್ರಮ ವಿನಿಮಯವೂ ನಡೆಯಿತು. ಈ […]

ಕಲಿಕೆ ನಿರಂತರವಾಗಿರಲಿ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ವಿದ್ಯೆ ಎಂದರೆ ಜ್ಞಾನ. ಅದು ಕೇವಲ ಶಾಲೆಗಳಿಗೆ, ಫಲಿತಾಂಶಕ್ಕೆ ಸೀಮಿತವಾದುದಲ್ಲ. ಬದುಕಿನಲ್ಲಿ ಪ್ರತಿಕ್ಷಣವೂ ವಿದ್ಯೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತೇವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ-ತಾಯಿಯಿಂದ ಮೊದಲ್ಗೊಂಡು, ನೆರೆ-ಹೊರೆ ಸಮಾಜದ ಮೂಲಕವಾಗಿ ಜ್ಞಾನವನ್ನು ಪಡೆಯಲಾರಂಭಿಸುತ್ತೇವೆ. ಈ ಜ್ಞಾನವೆಲ್ಲ ನಮ್ಮ ಪೂರ್ವಜರ ಆಸ್ತಿ. ಅವೆಲ್ಲವೂ ಆಯಾ ಕಾಲಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತಾ, ಸುಧಾರಣೆಗೊಳ್ಳುತ್ತಾ ತಲತಲಾಂತರದಿಂದ ನಮಗೆ ಬಳುವಳಿಯಾಗಿ ಬಂದಿದೆ. ಉದಾಹರಣೆಗೆ ಕೃಷಿಕನಾದರೆ ಯಾವಾಗ, ಏನು ಬೆಳೆ ಬೆಳೆಯಬೇಕು? ಯಾವ ಗೊಬ್ಬರ ಹಾಕಬೇಕು? ಹೇಗೆ ನಿರ್ವಹಣೆ ಮಾಡಬೇಕು […]