ನಿರಾಕುಲತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಸುಖ ಅಂದರೇನು? ಒಂದು ರೀತಿಯಲ್ಲಿ ನಿರಾಕುಲತೆಯ ಹೆಸರೇ ಸುಖ. ಎಲ್ಲಿ ಆಕುಲತೆ, ವಿಕಲ್ಪಗಳಿರುತ್ತವೆಯೋ ಅಲ್ಲಿ ಸುಖವಿಲ್ಲ. ಬೆಳಗ್ಗಿನ ಉಪಾಹಾರ ಸೇವಿಸಬೇಕಾದರೆ ಇದನ್ನು ಯಾರು ಮಾಡಿದ್ದು! ಏನೇನು ಹಾಕಿರಬಹುದು? ಶುಚಿಯಾಗಿ ಮಾಡಿದ್ದಾರೋ, ಇಲ್ಲವೋ ಅಂತ ಯೋಚನೆಗಳು ಶುರುವಾದರೆ ತಿಂಡಿಯಲ್ಲಿ ಮನಸ್ಸು ನಿಲ್ಲುವುದಿಲ್ಲ. ಅದಕ್ಕೆ ಯೋಗಿಗಳು ಮನೆ, ಮಕ್ಕಳ ಗೊಡವೆ ಬಿಟ್ಟು ಆ ಮಟ್ಟಿನ ಆಕುಲತೆಯಿಂದ ದೂರ ಆದರು. ಕೆಲವರಿಗೆ ತಮ್ಮ ಮನೆ ಬಿಟ್ಟು ದೂರ ಹೋದರೆ ಆಕುಲತೆ ಜಾಸ್ತಿ. ತಿಂಡಿ ಸರಿಯಾಗಿ ಸೇರುವುದಿಲ್ಲ, […]

ಭ್ರಷ್ಟಾಚಾರ ವಿರೋಧಿ ನಡೆ ನಮ್ಮೆಲ್ಲರ ಶಿಷ್ಟಾಚಾರವಾಗಲಿ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಪ್ರತಿ ವರ್ಷ ಡಿಸೆಂಬರ್ ೦೯ ರಂದು “ಅಂತರಾಷ್ಟಿçÃಯ ಭ್ರಷ್ಟಾಚಾರ ವಿರೋಧಿ ದಿನ”ವನ್ನಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಒಂದು ದೇಶದಲ್ಲಿ ಭ್ರಷ್ಟಾಚಾರವು ಯಾವ ಮಟ್ಟದಲ್ಲಿ ಬೇರೂರಿದೆ ಎನ್ನುವುದು ಆ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಟ್ರಾನ್ಸ÷್ಫರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯು ವಿಶ್ವದ ದೇಶಗಳಲ್ಲಿರುವ ಭ್ರಷ್ಟಾಚಾರದ ಮಟ್ಟವನ್ನು ಸೂಚ್ಯಂಕಗಳ ಮೂಲಕ ತಿಳಿಸುವ ಅಧಿಕೃತ ಸಂಸ್ಥೆಯಾಗಿದ್ದು, ಪ್ರತಿವರ್ಷ ‘ಭ್ರಷ್ಟಾಚಾರ ಗ್ರಹಿಕೆ’ ಸೂಚ್ಯಂಕದ ಪಟ್ಟಿಯನ್ನು ನೀಡುತ್ತಿದೆ. […]

ಕ್ರೆಡಿಟ್ ಕಾರ್ಡ್ ನ ಸುರಕ್ಷಿತ ಬಳಕೆ ಹೇಗೆ?

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನಾಗರಿಕ ಸಮಾಜದಲ್ಲಿ ಕಾಲದಿಂದ ಕಾಲಕ್ಕೆ ಹಣ ಚಲಾಯಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಾಡಿನಲ್ಲಿದ್ದ ಮಾನವ, ತನ್ನ ವಸಾಹತುಗಳನ್ನು ನಿರ್ಮಿಸಿಕೊಂಡ ಮೊದಲ ದಿನಗಳಲ್ಲಿ ವಸ್ತುಗಳನ್ನು ಬದಲಾಯಿಸಿಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು. ನಂತರ ಚರ್ಮದ ನಾಣ್ಯ, ಕಲ್ಲಿನ ನಾಣ್ಯ, ಬೆಳ್ಳಿ, ಚಿನ್ನದ ನಾಣ್ಯಗಳು ಆಯಾ ದೇಶ, ಪ್ರದೇಶಗಳ ಅರ್ಥ ವ್ಯವಸ್ಥೆಯ ಸಂಕೇತವಾಗಿ ರೂಪುಗೊಂಡವು. ಚಿನ್ನ, ಬೆಳ್ಳಿಯ ಬೆಲೆ ಗಗನಕ್ಕೇರಿದ ನಂತರ ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ನಾಣ್ಯಗಳು ಹೊರಬಂದುವು. ಜಗತ್ತಿನಲ್ಲಿ ಬರೆಯುವ ಕಾಗದದ […]

ಬದುಕಿನಲ್ಲಿ ಗೆಲ್ಲುವುದು ಹೇಗೆ?

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಗೆಲ್ಲಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಯಾವ ಮಾರ್ಗದ ಮೂಲಕ, ಹೇಗೆ ಗೆಲ್ಲಬೇಕೆಂಬ ಅರಿವು ಕೆಲವರಲ್ಲಿ ಇರುವುದಿಲ್ಲ. ಪ್ರತಿ ವರ್ಷವು ಹೊಸ ವರುಷದ ಆರಂಭದಲ್ಲಿ ಮುಂಬರುವ ವರ್ಷದಲ್ಲಿ ಬದುಕಿನಲ್ಲಿ ಗೆಲ್ಲುವ ಆಶಯಗಳೊಂದಿಗೆ ಹೆಚ್ಚಿನವರು ಹಲವಾರು ಪ್ರತಿಜ್ಞೆಗಳನ್ನು ಕೈಗೊಳ್ಳುತ್ತಾರೆ. ದೇವರ ಮೊರೆಯೂ ಹೋಗುತ್ತಾರೆ. ಆದರೆ ದಿನಕಳೆದಂತೆ ಬದುಕಿನಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುವುದಿಲ್ಲ.‘‘ಹೇ ಭಗವಂತ, ನಾನೊಂದು ಸತ್ಕಾರ್ಯವನ್ನು ಆರಂಭಿಸಿದ್ದೇನೆ. ಇದರ ಮೇಲೆ ನಿಮ್ಮ ಅನುಗ್ರಹವಿರಲಿ’’ ಎಂಬುದಾಗಿ ಯಾವುದಾದರೊಂದು ಉತ್ತಮ ಕಾರ್ಯವನ್ನು ಆರಂಭಿಸುವ […]