ರೊಟ್ಟಿ ತಯಾರಿಸಿ ಸ್ವಾವಲಂಬಿಯಾದರು

ರೊಟ್ಟಿಗೂ ಉತ್ತರ ಕರ್ನಾಟಕದ ಜನರಿಗೂ ಸಾಂಪ್ರದಾಯಿಕ ನಂಟು. ರೊಟ್ಟಿ ಇಲ್ಲಿನ ಜನರ ನಿತ್ಯದ ಆಹಾರ. ರೊಟ್ಟಿಯಿದ್ದರಷ್ಟೆ ಇವರ ಊಟ ಪರಿಪೂರ್ಣವಾಗುತ್ತದೆ. ಈ ಭಾಗಗಳಲ್ಲಿ ಮುಂಜಾನೆ ಹೆಚ್ಚಿನ ಮನೆಗಳಲ್ಲಿ ಕೈಯಲ್ಲೆ ಬಡಿದು ರೊಟ್ಟಿ ತಯಾರಿಸುವ ಸದ್ದು ಕೇಳಿ ಬರುವುದು ಸರ್ವೇಸಾಮಾನ್ಯ. ಕೈಯಿಂದ ರೊಟ್ಟಿ ತಯಾರಿಗೆ ಹೆಚ್ಚು ಸಮಯ ತಗಲುವುದರಿಂದ ಅನೇಕರು ರೊಟ್ಟಿ ಮಾರಾಟಗಾರರಿಂದ ಖರೀದಿಸುತ್ತಾರೆ. ರೊಟ್ಟಿ ತಯಾರಕರು ಯಂತ್ರಗಳ ಮೊರೆ ಹೋಗುತ್ತಾರೆ. ಸಮಾರಂಭಗಳಲ್ಲಿ, ಹೊಟೇಲ್‍ಗಳಿಗೆ ಪೂರೈಸಲು ಹೆಚ್ಚು ರೊಟ್ಟಿಗಳು ಅಗತ್ಯವಿರುವುದರಿಂದ ರೊಟ್ಟಿ ತಯಾರಿಗೆ ಇತ್ತೀಚಿನ ವರ್ಷಗಳಲ್ಲಿ ಯಾಂತ್ರಿಕತೆಯ ಸ್ಪರ್ಶ […]

ಕೈ ಹಿಡಿದ ಸ್ವ ಉದ್ಯೋಗ

ರಾಣೇಬೆನ್ನೂರು ತಾಲೂಕಿನ ಕಂಚಿಗಾರ್ ಓಣಿಯ ರವಿ ಕುಮಾರ್‍ರವರದ್ದು ಹತ್ತು ಮಂದಿಯೊಂದಿಗಿನ ಕೂಡು ಕುಟುಂಬ. ಮನೆಗೆ ಇವರೇ ಹಿರಿಯ ಮಗ. ಇವರು ಓದಿದ್ದು 8ನೇ ತರಗತಿಯಾದರೂ, ಚಿಕ್ಕಂದಿನಲ್ಲೇ ಜೀವನದ ಬಗ್ಗೆ ಕಲಿತ ಪಾಠ ಬೆಟ್ಟದಷ್ಟು.ರವಿ ಅವರ ತಂದೆ ಹಲವು ವರ್ಷಗಳಿಂದ ಮನೆಯಲ್ಲೇ ಬೇಕರಿ ತಿಂಡಿ ತಯಾರಿಸುತ್ತಿದ್ದರು. ಪ್ರಾರಂಭದಲ್ಲಿ ಇವರು ಮಾಡುತ್ತಿದ್ದ ತಿಂಡಿ ಸಾಕಷ್ಟು ಹೆಸರು ಪಡೆದಿತ್ತು. 200 ಮಂದಿಗೆ ಇವರು ಅನ್ನದಾತರಾಗಿದ್ದರು. ಆದರೆ ಮುಂದೊಂದು ದಿನ ಉದ್ಯೋಗದಲ್ಲಿ ನಷ್ಟ ಉಂಟಾಗಿ ತಿಂಡಿ ತಯಾರಿ ಕಾಯಕವನ್ನು ಕೈ ಬಿಡುವ ಸಂದರ್ಭ […]

ನಿದ್ದೆ ಮಾಡಿ ಲವಲವಿಕೆಯಿಂದಿರಿ

‘ರಾತ್ರಿ ಏನು ಮಾಡಿದರೂ ನಿದ್ದೆ ಬರಲ್ಲ. ಹಗಲಿನಲ್ಲಿ ದಿನವಿಡೀ ಬರುವ ಆಕಳಿಕೆ ತಡೆಯಲಾಗುವುದಿಲ್ಲ. ಉತ್ಸಾಹ, ಏಕಾಗ್ರತೆಯಿಲ್ಲದೆ ಒಂದು ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ಹೇಳಿ?…’ ನಗರ, ಹಳ್ಳಿ ಎನ್ನದೆ ಹೆಚ್ಚಿನ ಜನರು ನಿದ್ರಾಹೀನತೆಯ ಸಮಸ್ಯೆಯ ಬಗ್ಗೆ ಗೊಣಗುವುದನ್ನು ಕೇಳಿರಬಹುದು. ನಿದ್ದೆ ಬರಲು ಪರಿಹಾರ ಸೂಚಿಸಿ ಎಂದು ವೈದ್ಯರ ಮೊರೆ ಹೋಗುವುದೂ ಇದೆ. ಮತ್ತೆ ಕೆಲವರು ತಾವೇ ವೈದ್ಯರು ಎಂಬಂತೆ ಮೆಡಿಕಲ್‍ಗಳಲ್ಲಿ ಸಿಗುವ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ಳುವುದೂ ಇದೆ. […]

ಆನ್‍ಲೈನ್ ಲೋನ್
ಬಗ್ಗೆ ಎಚ್ಚರ!

ಕಿನ್ನಿಗೋಳಿಯ ಯುವಕನೊಬ್ಬ ಇತ್ತೀಚೆಗೆ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ತನಿಖೆಯ ಬೆನ್ನು ಹಿಡಿದ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಮೊಬೈಲ್ ಆ್ಯಪ್ ಲೋನ್ ಮೂಲಕ ಲೋನ್ ಪಡೆದು ಅವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಗಳು ದೊರೆತವು. ಈ ಘಟನೆ ಮರೆಮಾಚುವ ಮುನ್ನವೇ ಸುಶಾಂತ್ ಎಂಬ ಯುವಕ ಮಂಗಳೂರಿನಲ್ಲಿ ನೇಣಿಗೆ ಶರಣಾದ. ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಯಿತು. ಹಲವಾರು ಸಂಶಯಗಳೊಂದಿಗೆ ತನಿಖೆಯ ಬೆನ್ನು ಹತ್ತಿದ ಖಾಕಿಗಳಿಗೆ ಸುಶಾಂತ್ ಆ್ಯಪ್‍ವೊಂದರ ಮೂಲಕ ರೂ.30 ಸಾವಿರ ಆನ್‍ಲೈನ್ ಸಾಲ ಪಡೆದಿದ್ದ. ಪಡೆದ […]

ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ನೀರು ಬದುಕಿನ ಜೀವಾಳ. ಅನ್ಯಗ್ರಹಗಳ ಅನ್ವೇಷಣೆಗೆ ಹೊರಡುವ ಮಾನವ ಮೊದಲು ಹುಡುಕುವುದು ನೀರನ್ನೇ. ಅನಾದಿ ಕಾಲದಿಂದ ನೀರಿನ ಪ್ರಾಮುಖ್ಯತೆ ಕುರಿತಂತೆ ಎಲ್ಲ ಧರ್ಮಗಳಲ್ಲಿಯೂ ವಿವರಿಸಲಾಗಿದೆ. ಪ್ರಾಕೃತಿಕವಾಗಿ ದೊರೆಯುವ ನೀರು ಒಂದು ಕಾಲದಲ್ಲಿ ಯಥೇಚ್ಛವಾಗಿ ಇದ್ದರೂ ಈ ಶತಮಾನದಲ್ಲಿ ನೀರಿನ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಉಚಿತವಾಗಿ ದೊರೆಯುತ್ತಿದ್ದ ನೀರಿಗೆ ಜನರು ಹಣ ಪಾವತಿಸತೊಡಗಿ ದಶಕಗಳೇ ಕಳೆದಿವೆ. ಶಹರಗಳಲ್ಲಿ ಬಡವರು ಒಂದು ಬಕೆಟ್ ನೀರಿಗಾಗಿ ರೂ.10ರವರೆಗೆ ಪಾವತಿಸುತ್ತಾರೆಂದರೆ ಅದನ್ನು ನಂಬಲೇಬೇಕು.ಕರ್ನಾಟಕ ರಾಜ್ಯ […]

ಅರ್ಧ ‘ಹಾಲಿನ ಚಹಾ’

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ನಾನು ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಂದು ದಿನ ಇಳಿ ವಯಸ್ಸಿನ ವೃದ್ಧರು ಬಹಳ ಆತಂಕದಿಂದ ನನ್ನಲ್ಲಿ ಬಂದು ‘ನನ್ನ ಖಾತೆಗೆ ಇನ್ನೂ ಪಿಂಚಣಿ ಬಿದ್ದಿಲ್ಲ, ಏನಾದರೂ ಮಾಡಿ ಪಿಂಚಣಿ ಕೊಟ್ಟು ನನ್ನನ್ನು ಉಳಿಸಿ’ ಎಂದು ಉದ್ವೇಗದಿಂದ ಕೇಳಿದರು. ನಡುಗುತ್ತಿರುವ ಅವರ ಕೈಯನ್ನು ಹಿಡಿದು ಸಾಂತ್ವನ ಹೇಳುತ್ತಾ, ಪಕ್ಕದಲ್ಲಿರುವ ಚೇರ್‍ನಲ್ಲಿ ಅವರನ್ನು ಕುಳ್ಳರಿಸಿ ಅವರ ಪಕ್ಕದಲ್ಲಿಯೇ ನಾನು ಕುಳಿತುಕೊಂಡು, ಯಾಕೆ ಏನಾಯಿತು ಎಂದು […]

ಅತ್ತೆ – ಸೊಸೆ ಬಾಂಧವ್ಯ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಭಾರತೀಯರಿಗೆ `ಮದುವೆ’ ಎಂಬುದೊಂದು ದೊಡ್ಡ ಸಂಭ್ರಮದ ವಿಚಾರ. ಮನೆಯಲ್ಲಿ ಮದುವೆ ಇದೆ ಅಂದ್ರೆ ಒಂದೆರಡು ತಿಂಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಕಲ್ಯಾಣ ಮಂಟಪವನ್ನು ಕಾಯ್ದಿರಿಸುವುದರಿಂದ ಹಿಡಿದು ಮಂಟಪದ ಅಲಂಕಾರ, ಅಡುಗೆಯವರು, ವಾದ್ಯದವರು, ಆಮಂತ್ರಣ ಪತ್ರಿಕೆ ತಯಾರಿ ಹೀಗೆ ಮನೆ ಯಜಮಾನನಿಗೆ ಪುರುಸೊತ್ತಿಲ್ಲದಂತೆ ತಯಾರಿ ಕಾರ್ಯ ನಡೆಯಬೇಕು. ಹೆಂಗಸರಂತೂ ವಧು – ವರರ ಬಟ್ಟೆ, ಚಿನ್ನ, ಉಡುಗೊರೆಗಳ ಖರೀದಿ, ಆಹ್ವಾನಿಸಬೇಕಾದ ಅತಿಥಿಗಳ ಪಟ್ಟಿ, ಜೊತೆಗೆ ಮೂರು ಹೊತ್ತಿನ ಊಟ – ತಿಂಡಿಗಳ ಮೆನುವನ್ನು […]

ಪ್ರಕೃತಿ ಚಿಕಿತ್ಸೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಪ್ರಕೃತಿ ಚಿಕಿತ್ಸಾ ಕೇಂದ್ರ’ವನ್ನು ಆರಂಭಿಸಿದಾಗ ಅದಕ್ಕೆ ಇಷ್ಟೊಂದು ಪ್ರೋತ್ಸಾಹ ದೊರೆಯುತ್ತದೆ ಎಂಬುದರ ಕಲ್ಪನೆ ಸ್ವಾಭಾವಿಕವಾಗಿ ನನಗೆ ಇರಲಿಲ್ಲ. ಪ್ರಕೃತಿ ಚಿಕಿತ್ಸೆ ಎಂದರೆ ಶ್ರೀಮಂತರಿಗೆ ಮಾತ್ರ ಎನ್ನುವ ತಪ್ಪು ಅಭಿಪ್ರಾಯವೂ ಅನೇಕರಲ್ಲಿತ್ತು.ನಾವು ಬಡ – ಮಧ್ಯಮ ವರ್ಗದವರನ್ನೇ ಗಮನದಲ್ಲಿರಿಸಿ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಬಳಿಕ ಅನೇಕ ಬೇಡಿಕೆಗಳೂ ಬಂದವು. ಸ್ವಾಭಾವಿಕವಾಗಿ ಕೆಲವರ ಜೀವನಮಟ್ಟ ಉತ್ತಮ ಇರುತ್ತದೆ. ಅವರಿಗೆ ಸ್ವಚ್ಛತೆಗೆ ಗಮನ ಕೊಡುವುದರ ಜೊತೆಗೆ ಸ್ವಲ್ಪ ಅನುಕೂಲತೆಗಳನ್ನು […]