2022 ಮೇ
ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?
ಜ್ವರ ಮಕ್ಕಳಲ್ಲಿ ಕಂಡುಬರುವ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಬಹುಶಃ ಜ್ವರವೇ ಬಾರದ ಮಗುವಿಲ್ಲ. ಜ್ವರದ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿಗಳು ಇಲ್ಲಿವೆ.ಜ್ವರ ಇದ್ದಾಗ ಮಗುವಿಗೆ ಮದ್ದು ಕೊಟ್ಟು ಶಾಲೆಗೆ ಕಳುಹಿಸಬಹುದೇ?ಜ್ವರ ಸಾಧಾರಣವಾಗಿ ಸೋಂಕಿನಿ0ದ ಬರುತ್ತದೆ. ಆ ಸೋಂಕು ಬೇರೆ ಮಕ್ಕಳಿಗೆ ಶಾಲೆಯಲ್ಲಿ ಹರಡಬಹುದು. ಜ್ವರ ಇದ್ದ ಮಗುವಿಗೆ ಶಾಲೆಯಲ್ಲಿ ಶ್ರಮವಾಗಬಹುದು. ಹಾಗಾಗಿ ಶಾಲೆಗೆ ಜ್ವರ ಇದ್ದಾಗ ಮಗುವನ್ನು ಕಳುಹಿಸುವುದು ಸೂಕ್ತವಲ್ಲ.ಜ್ವರ ಇದ್ದಾಗ ಮಗು ಊಟ ಮಾಡುತ್ತಿಲ್ಲ ಏನು ಮಾಡಲಿ?ಜ್ವರ ಬಂದಾಗ ಹಸಿವು ಕಡಿಮೆ ಆಗುವುದು ಸಹಜ. […]
ಬೇವಿಗೆ ಕಾಡುವ ಬಹುಭಕ್ಷಕ ಕೀಟಕ್ಕೆ ಪರಿಹಾರವೇನು?
ಬೇವು ಔಷಧೀಯ ಗುಣಗಳಿಂದಾಗಿ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬೇವನ್ನು ‘ಆರೋಗ್ಯ ಸಂಜೀವಿನಿ’ ಎಂದು ಕರೆಯಲಾಗುತ್ತದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಬೇವಿಗೆ ಇತ್ತೀಚಿನ ವರ್ಷಗಳಲ್ಲಿ ಚಹಾ ಸೊಳ್ಳೆಯ (Tea mosquito bug) ಬಾಧೆಯು ಸಮಸ್ಯೆಯಾಗಿದೆ. ಈ ಕೀಟಬಾಧೆಯನ್ನು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಇದರ ಬಾಧೆಯನ್ನು ಗುರುತಿಸಲಾಗಿದೆ. ಪ್ರಸ್ತುತ ವರ್ಷ ಈ ಕೀಟಬಾಧೆಯ ತೀವ್ರತೆ ಹೆಚ್ಚಾಗಿ ಕಂಡುಬ0ದಿದೆ.ಈ ಕೀಟವು ಬಹುಭಕ್ಷಕ ಕೀಟವಾಗಿದ್ದು […]