ಪಿಎಂ ದಿಶಾ ಯೋಜನೆಯ ಪ್ರಯೋಜನ ಪಡೆಯಿರಿ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಸಂವಹನ ತಂತ್ರಜ್ಞಾನ (ಕಮ್ಯುನಿಕೇಶನ್ ಟೆಕ್ನಾಲಜಿ) ಮೊಬೈಲ್ ಆವಿಷ್ಕಾರದೊಂದಿಗೆ ನಾವು ಊಹಿಸುವುದಕ್ಕಿಂತ ವೇಗವಾಗಿ ಬೆಳೆದಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಮನೆಯಲ್ಲಿ ಟೆಲಿಫೋನ್ ಹಾಕಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಮತ್ತು ಟೆಲಿಫೋನ್ ಇದ್ದರೂ ದೂರದ ಊರುಗಳಿಗೆ ಕರೆ ಮಾಡಬೇಕೆಂದರೆ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ನಂತರ ಎಸ್.ಟಿ.ಡಿ. ಸೌಲಭ್ಯ ಬಂದರೂ ಎಲ್ಲ ಟೆಲಿಫೋನ್‌ಗಳಿಗೂ ಆ ಭಾಗ್ಯ ಇರಲಿಲ್ಲ. ತೊಂಭತ್ತರ ದಶಕದಲ್ಲಿ ಪ್ರಾರಂಭವಾದ ಇ-ಮೇಲ್, ಇಂಟರ್‌ನೆಟ್ ತಂತ್ರಜ್ಞಾನ ಜಗತ್ತಿನಲ್ಲಿ ಸಂವಹನ ಕ್ರಾಂತಿಯನ್ನು ಮಾಡಿಸಿತು. ಇದರಿಂದ ಒಬ್ಬರಿಗೊಬ್ಬರು […]
ವಿದ್ಯಾರ್ಥಿಗಳ ಭವಿಷ್ಯದ ‘ಯಶೋ’ಗಾಥೆಗೆ ಭದ್ರ ಬುನಾದಿ ಹಾಕಿದವರು
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಒಂದು ದೇಶದ ಸಮಗ್ರ ಅಭಿವೃದ್ಧಿಗೂ ಅಲ್ಲಿಯ ಶಿಕ್ಷಣ ವ್ಯವಸ್ಥೆಗೂ ಒಂದು ರೀತಿಯ ನೇರ ಸಂಬAಧವಿದೆ. ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದಲ್ಲಿ ವಿಶ್ವದರ್ಜೆಗೇರಿಸುವ ಪ್ರಯತ್ನಗಳಾಗುತ್ತಿವೆ. ಡಿಜಿಟಲ್ ಇಂಡಿಯಾದ ಈ ಕಾಲಘಟ್ಟದಲ್ಲಿ ಡಿಜಿಟಲ್ ಶಿಕ್ಷಣ ಅನಿವಾರ್ಯ ಮತ್ತು ಅವಕಾಶವು ಆಗಿದೆ. ಕೋವಿಡ್ ಸಂದರ್ಭದಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆಯಾದ ಡಿಜಿಟಲ್ ಶಿಕ್ಷಣ ಇಂದು ಪರಿಹಾರ ಮತ್ತು ಫಲಪ್ರದ […]
ಹೆಣ್ಣಿನ ಬದುಕಿನ ಬೆಳಕು – ಸೋದರ ಪ್ರೇಮ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಕಾಲ ಇತ್ತು, ಸಾಧಾರಣ ನನ್ನ ಅಮ್ಮನ ಕಾಲ ಅಂದರೆ ಸುಮಾರು 60-70 ವರ್ಷಗಳ ಹಿಂದೆ. ಆಗ ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆ ಇರಲಿಲ್ಲ. ಮಾತ್ರವಲ್ಲ, ಅದಕ್ಕೆ ಬೇಕಾದ ವ್ಯವಸ್ಥೆಗಳೂ ಇರಲಿಲ್ಲ. ಹಾಗಾಗಿ ಹೆಂಗಸರು ಎರಡು ವರ್ಷಕ್ಕೊಮ್ಮೆ ಬಸರಿ-ಬಾಣಂತನದ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತಿತ್ತು. ಆಗ ಅವಿಭಕ್ತ ಕುಟುಂಬಗಳೂ ಇದ್ದುದರಿಂದ ಅಕ್ಕ-ತಂಗಿಯರು ಹೆರಿಗೆಗೆ ಬಂದರೆ ಅಪ್ಪನ ಜತೆ ಅಣ್ಣ-ತಮ್ಮಂದಿರು ಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದರು. ಹೆಚ್ಚಿನ ಪ್ರಪಂಚ ಜ್ಞಾನವಿಲ್ಲದೆ ಅಮ್ಮ ಬಾಣಂತಿಯ ಎಣ್ಣೆ ನೀರು, ಪಥ್ಯದ […]
ಸ್ವಚ್ಛತೆ ಎಂಬ ಸಂಸ್ಕೃತಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ಸುತ್ತಮುತ್ತಲಿನ ಪ್ರದೇಶ, ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿ ಇರದಿದ್ದರೆ ಸರಕಾರ, ಜನಪ್ರತಿನಿಧಿಗಳತ್ತ ಬೊಟ್ಟು ಮಾಡಿ ತೋರಿಸುವ ನಾವು ಪ್ರತಿದಿನ ನಮ್ಮ ಮನೆಯಲ್ಲಿ ನಾವು ಸ್ವಚ್ಛತೆಗೆ ಎಷ್ಟು ಸಮಯವನ್ನು ಮೀಸಲಿರಿಸುತ್ತೇವೆ ಎಂದು ಯೋಚಿಸಬೇಕಿದೆ. ದಿನದಲ್ಲಿ ಹತ್ತು ನಿಮಿಷಗಳನ್ನು ಮನೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗಾಗಿ ಮೀಸಲಿಡದ ಎಷ್ಟೋ ಮಂದಿ ಇದ್ದಾರೆ. ಹೀಗಿರುವಾಗ ಪರಿಸರ ಸ್ವಚ್ಛತೆಯ ಪ್ರಜ್ಞೆ ಅವರಲ್ಲಿ ಹೇಗೆ ಬರಲು ಸಾಧ್ಯ? ನಮ್ಮ ಸುತ್ತಲಿನ ಪರಿಸರ, ಸಾರ್ವಜನಿಕ ಸ್ಥಳಗಳ ‘ಸ್ವಚ್ಛತೆ ನಮ್ಮ ಕರ್ತವ್ಯ’ ಎಂಬ […]
ತಾಂತ್ರಿಕತೆಯೆಂಬ ಮಂತ್ರ ದಂಡ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಹಿಂದೆ ನಾವೆಲ್ಲ ಮಕ್ಕಳಾಗಿದ್ದಾಗ ಬಂಧು-ಮಿತ್ರರ ಸಂದೇಶ ಹೊತ್ತ ಪತ್ರಕ್ಕಾಗಿ ವಾರಗಟ್ಟಲೆ ಕಾಯುತ್ತಿದ್ದೆವು. ಪತ್ರ ಬರೆದು ಮರುತ್ತರಕ್ಕೆ ಕಾಯುತ್ತಿದ್ದ ಕ್ಷಣಗಳು ಮರೆಯಲಾರದಂಥವು. ಯಾರ ಜೊತೆಗಾದರೂ ತುರ್ತಾಗಿ ಮಾತನಾಡಬೇಕಿದ್ದರೆ, ಸಂದೇಶ ನೀಡಬೇಕಿದ್ದರೆ ಟ್ರಂಕ್ ಕಾಲ್ ಬುಕ್ ಮಾಡಿ ದಿನಗಟ್ಟಲೆ ಕಾಯಬೇಕಾದ ಸಂದರ್ಭಗಳಿದ್ದವು. ಆ ದಿನಗಳಲ್ಲಿ ಇಂದಿನಷ್ಟು ಸರಕಾರಿ ಸೇವೆಗಳು ಇರಲಿಲ್ಲ. ಇದ್ದರೂ ಸೇವೆಗಳನ್ನು ಪಡೆಯಲು ಪಟ್ಟಣಕ್ಕೆ ಹೋಗಬೇಕು, ಒಂದು ಸಾರಿ ಹೋದರೆ ಸಾಲದು, ನಾಲ್ಕೈದು ಬಾರಿ ಹೋಗಬೇಕು, ಒಮ್ಮೆ ಹೋಗಿ ಬರಲು ಸಾಕಷ್ಟು ದುಡ್ಡು […]