‘ನಿರಂತರ’ ಜುಲೈ – 2022 ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೇ ಓದಬಹುದು.
ಸಿರಿಧಾನ್ಯ ಬಳಕೆಗಿದು ಸಕಾಲ
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯೇ ಜಾಸ್ತಿಯಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿ ಗೋಧಿ ಮತ್ತು ಅಕ್ಕಿಯನ್ನು ಬೆಳೆಸುವ ಭರಾಟೆಯಲ್ಲಿ ಕ್ರಮೇಣ ಸಿರಿಧಾನ್ಯಗಳು ಮರೆತು ಹೋಗಿ ಹೊಸ ಪೀಳಿಗೆಯವರಿಗೆ ಸಿರಿಧಾನ್ಯವೆಂದರೆ ಏನೆಂದೇ ಗೊತ್ತಿಲ್ಲದಂತಾಗಿದೆ. ರಾಗಿ, ಸಜ್ಜೆ, ನವಣೆ, ಕೊರಲೆ, ಹಾರಕ, ಊದಲು, ಬರಗು, ಸಾಮೆ, ಜೋಳ ಈ ನವಧಾನ್ಯಗಳನ್ನು ‘ಸಿರಿಧಾನ್ಯಗಳು’ ಅಥವಾ ‘ಕಿರುಧಾನ್ಯ’ಗಳೆಂದು ಕರೆಯುತ್ತಾರೆ. ಇವುಗಳ ಪೈಕಿ ಆಧುನಿಕ ಬೇಸಾಯ ಕ್ರಮಗಳನ್ನು ಬಳಸಿ ಉತ್ಪಾದಿಸಲಾಗುತ್ತಿರುವ ಧಾನ್ಯಗಳ ಪೈಕಿ ಜೋಳ ಅಗ್ರಸ್ಥಾನದಲ್ಲಿದೆ. […]
ಆಜಾದಿ ಕಾ ಅಮೃತ ಮಹೋತ್ಸವ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಕಳೆದ 75 ವರ್ಷಗಳಿಂದ ನಮ್ಮ ಪೀಳಿಗೆ ಸ್ವಾತಂತ್ರ್ಯದ ಸವಿ ಜೀವನವನ್ನು ಅನುಭವಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಂದು ತಮ್ಮ ಜೀವ ತ್ಯಾಗ ಮಾಡಿದ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ಋಣ ಶಾಶ್ವತವಾಗಿ ನಮ್ಮ ಮೇಲಿದೆ. ಹಾಗೆ ನಮ್ಮ ಮುಂದಿನ ಪೀಳಿಗೆಗೂ ಇದೆ. ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಲ್ಪವೂ ಜಗ್ಗದೇ ಆಂಗ್ಲರ ಗುಂಡೇಟಿಗೆ ಸಿಂಹದoತೆ ಎದೆಯೊಡ್ಡಿದ್ದ ವೀರರನ್ನು ನಾವು ಎಂದಿಗೂ ಪೂಜಿಸಬೇಕು. ಅವರ ತ್ಯಾಗ, ಬಲಿದಾನದ ಫಲವಾಗಿ […]