‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಕನ್ನಡದ ಪ್ರಖ್ಯಾತ ಕವಿ ಶ್ರೀ ಎಂ.ಗೋಪಾಲಕೃಷ್ಣ ಅಡಿಗರ ಕವಿತೆಯ ಈ ಮೇಲಿನ ಸಾಲುಗಳು ಇಂದಿಗೂ ಸ್ವಾತಂತ್ರ್ಯ ಪ್ರೇಮಿಗಳಿಗೆ ಪ್ರೇರಣೆಯನ್ನೊದಗಿಸುವ ಕವಿತೆಯಾಗಿದೆ.ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ,ಹರೆಯದೀ ಮಾತ್ರಿಕನ ಮಾಟ ಮಸುಳುವ ಮುನ್ನ,ಉತ್ಸಾಹ ಸಾಹಸದ ಉತ್ತುಂಗ ವೀಚಿಗಳಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನಕಟ್ಟುವೆವು ನಾವು ಹೊಸ ನಾಡೊಂದನು!ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು 1947 ಆಗಸ್ಟ್15, 75 ವರ್ಷಗಳ ಹಿಂದೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸಾವಿರಾರು ಸಾಮಾನ್ಯರು ನೀಡಿದ ಕೊಡುಗೆ […]
ಟೆರೇಸಿನಲ್ಲೊಂದು ಮುಂಜಾನೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಪೇಟೆಯಲ್ಲಿ ಫ್ಲ್ಯಾಟ್ ಗಳೇ ಜಾಸ್ತಿ. ಮರ‍್ನಾಲ್ಕು ಅಂತಸ್ತಿನ ಫ್ಲ್ಯಾಟ್ ಗಳಲ್ಲಿ ವಾಸಿಸುವವರಿಗೆ ಮನೆಯ ಟೆರೇಸ್ ಅನ್ನು ಬಿಟ್ಟರೆ ಭೂಮಿ – ಆಕಾಶದ ಮಧ್ಯೆ ಸಂಪರ್ಕ ಕಲ್ಪಿಸುವ ಬೇರೆ ಸಾಧನ ಇಲ್ಲ ಎನ್ನಬಹುದು. ಬೆಳಿಗ್ಗೆ ಕಾಫಿ – ಟೀ ಹೀರಲೆಂದು ಟೆರೇಸ್‌ಗೆ ಬಂದರೆ ಅಲ್ಲಿ ನಿಂತು ಕೆಳಗೆ ನಡೆಯುವ ಎಲ್ಲಾ ವ್ಯವಹಾರಗಳನ್ನು ಗಮನಿಸುತ್ತಿರಬಹುದು. ಬೆಳಿಗ್ಗೆ ಕಸ ತುಂಬಿದ ಲಾರಿಗಳು ಹೋಗುವುದರಿಂದ ಹಿಡಿದು, ವೃದ್ಧ ದಂಪತಿಗಳ ವಾಕಿಂಗ್, ಸಣ್ಣ ಪ್ರಾಯದವರ ಜಾಗಿಂಗ್, ಶ್ವಾನ ಪ್ರಿಯರು […]
“ಆಯುಷ್ಮಾನ್ ಭಾರತ”
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ‘ರಂಗವ್ವ…ರoಗವ್ವ…ನಮ್ ಯೋಜ್ನೇಯಾ ಸಿ.ಎಸ್.ಸಿ. ಕೇಂದ್ರದಾಗೆ ಅದ್ಯಾನೋ ‘ಆಯುಸ್ಮಾನ್ ಕಾರ್ಡ’ ಪ್ರ‍್ರೀ ಆಗಿ ಕೋಡ್ತೌರಂತೆ ಹೋಗಿ ವಸಿ ಈಸ್ಕಂಡ್ ಬರಾನ ಬಾರವ್ವ ಎಂದು ನಿಂಗವ್ವ ಕರೆದಾಗ ಕಿತ್ತು ತಿನ್ನುವ ಬಡತನದಿಂದ ಬಳಲುತ್ತಿದ್ದ ರಂಗವ್ವಗೆ ಏನಾದರೂ ಸರ್ಕಾರದಿಂದ ಸಿಕ್ಕರೆ ಸಿಗಲಿ ಅಂತ ತಮ್ಮ ಹಳ್ಳಿಯಲ್ಲಿ ಇದ್ದ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರಕ್ಕೆ ಹೊರಟಳು. ಕೇವಲ ಬೆರಳಚ್ಚನ್ನು ಪಡೆದು ಆಯುಷ್ಮಾನ್ ಭಾರತ ಯೋಜನೆಗೆ ನೋಂದಾವಣೆ ಮಾಡಿ, […]
ಮನಸ್ಸು ನಿರ್ಮಲಗೊಳಿಸುವ ಶ್ರದ್ಧಾಕೇಂದ್ರಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಾವು ಯಾವುದೇ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡಿದಾಗ ಮೊದಲು ನಮ್ಮನ್ನು ಆಕರ್ಷಿಸುವುದು ಅಲ್ಲಿನ ಪರಿಸರ. ಸುತ್ತಮುತ್ತಲಿನ ಪರಿಸರ ಆಹ್ಲಾದಕರವಾಗಿ ಸ್ವಚ್ಛತೆಯಿಂದ ಕೂಡಿದ್ದರೆ ಅಂತಹ ಶ್ರದ್ಧಾಕೇಂದ್ರದ ಬಗ್ಗೆ ನಮಗೆ ಗೊತ್ತಿಲ್ಲದಂತೆ ನಮ್ಮಲ್ಲೊಂದು ಭಕ್ತಿಯ ಭಾವನೆ ಉದ್ದೀಪನಗೊಳ್ಳುತ್ತದೆ.ಶ್ರದ್ಧಾಕೇಂದ್ರಗಳೆoದರೆ ಅವು ಕೇವಲ ಭಕ್ತಿಯ ಕೇಂದ್ರಗಳಷ್ಟೇ ಆಗಿರದೆ ಸ್ವಚ್ಛತೆಯ ಕೇಂದ್ರಗಳು ಆಗಿರಬೇಕು. ಹಾಗಾದರೆ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಯಾರ ಹೊಣೆ? ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರದ್ಧಾಕೇಂದ್ರಗಳ ಶುಚಿತ್ವ ಕೇವಲ ಅಲ್ಲಿನ ಆಡಳಿತ ಮಂಡಳಿಯವರ ಜವಾಬ್ದಾರಿಯಷ್ಟೇ ಅಲ್ಲ, ಅದು ಪ್ರತಿಯೊಬ್ಬ […]