ಭಾರತದಲ್ಲಿ ಬಾಹ್ಯಾಕಾಶ ಉದ್ದಿಮೆ ಆಕಾಶದಷ್ಟು ಅವಕಾಶ

ಭವ್ಯಶ್ರೀ ಎಂ. ಎ. ಯುರೋಪ್ ಖಂಡದ ಕೆಲ ದೇಶಗಳು, ಅಮೆರಿಕ ಸಂಯುಕ್ತ ಸಂಸ್ಥಾನ ಹೀಗೆ ಕೆಲವೇ ದೇಶಗಳ ಸ್ವತ್ತಾಗಿದ್ದ ‘ಬಾಹ್ಯಾಕಾಶ ಉದ್ದಿಮೆ’ ಎಂಬ ಸಂಕೀರ್ಣ ಉದ್ಯಮ ರಂಗದಲ್ಲಿ ಭಾರತ ತನ್ನ ಛಾಪನ್ನು ಮೂಡಿಸಲು ಪ್ರಾರಂಭಿಸಿದೆ.ದೀಪಾವಳಿ ಹಬ್ಬ ಪ್ರಾರಂಭದ ಹಿಂದಿನ ದಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಂದು ಸಾವಿರ ಕೋಟಿ ರೂಪಾಯಿ ಶುಲ್ಕ ಪಡೆದು ಇಂಗ್ಲೆoಡ್ ಮೂಲದ ‘ಒನ್ ವೆಬ್’ ಸಂಸ್ಥೆಯ 36 ಉಪಗ್ರಹಗಳನ್ನು ಕಕ್ಷೆಗೆ ಸುರಕ್ಷಿತವಾಗಿ ತಲುಪಿಸಿದೆ. ಇಸ್ರೋ ಈ ಮೊದಲು ವಿದೇಶಿ ಉಪಗ್ರಹಗಳನ್ನು ಹಾರಿಸಿದ್ದ […]

ಮಕ್ಕಳ ಮಾನಸಿಕ ಖಿನ್ನತೆಗೆ ಕಾರಣವಾಗದಿರಲಿ ಫೋಟೋಗ್ರಾಫಿ

ಡಾ‌. ಲಕ್ಷ್ಮೀಶ್ ಭಟ್ ನೀವು ಸುಮಾರು 35 ವರ್ಷ ವಯಸ್ಸಿಗಿಂತ ಹಿರಿಯರಾಗಿದ್ದರೆ ಒಮ್ಮೆ ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ. ಆವಾಗೆಲ್ಲ ನಮ್ಮ ಒಂದು ಫ್ಯಾಮಿಲಿ ಫೋಟೊ ತೆಗೆದುಕೊಳ್ಳುವುದು ಅಂದರೇನೇ ಅದೊಂದು ಸಂಭ್ರಮ. ಮಣ್ಣಿನ ಗೋಡೆಗೊಂದು ಆಣಿ ಬಡಿದು ನೇತುಹಾಕಿದ 40 ವರ್ಷಕ್ಕೂ ಹಳೆಯ ಮರದ ಚೌಕಟ್ಟಿನೊಳಗಿನ ನಮ್ಮ ಒಂದೇ ಒಂದು ಫೋಟೊ ಇಂದಿಗೂ ನಮ್ಮ ಮನೆಯ ಅಮೂಲ್ಯ ಆಸ್ತಿ. ಅದರಲ್ಲೂ ನಮ್ಮ ಮನೆಯ ಪಡಸಾಲೆಯಲ್ಲಿ ಕಬ್ಬಿಣದ ಡಬಿರಿ ಪೆಟ್ಟಿಗೆಯಲ್ಲಿ ಇರುವ ನಮ್ಮ 7ನೇ ತರಗತಿಯ ಕೊನೆಯ ದಿನದ ಶಾಲೆಯ […]

ಬ್ರಿಟೀಷರ ಕಾಲದ ಕೆರೆಯ ಪುನಶ್ಚೇತನಕ್ಕೆ ದೊರೆಯಿತು ಯೋಜನೆಯ ನೆರವು

ಡಾ. ಚಂದ್ರಹಾಸ್ ಚಾರ್ಮಾಡಿ ‘ಕನ್ನಂಪಲ್ಲಿ’ ಕೆರೆಯ ಇತಿಹಾಸ ಕೆರೆಯ ಗಾತ್ರಕ್ಕಿಂತಲೂ ದೊಡ್ಡದು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಕೆರೆಯ ಹಿಂದೆ ನಮ್ಮವರ ಶ್ರಮವಿದೆ, ತ್ಯಾಗವಿದೆ. ಸುಮಾರು 157 ವರ್ಷಗಳ ಹಿಂದೆ ನೀರಿನ ವ್ಯವಸ್ಥೆಗಾಗಿ ಕಟ್ಟಲ್ಪಟ್ಟ ‘ಕನ್ನಂಪಲ್ಲಿ’ ಕೆರೆ ಇದೇ ಊರಿನಲ್ಲಿ ಇನ್ನೊಂದು ಕೆರೆಯ ಹುಟ್ಟಿಗೂ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕನ್ನಂಪಲ್ಲಿ ವಡ್ಡಗನಹಳ್ಳಿ ಗ್ರಾಮದಲ್ಲಿರುವ ಈ ಕೆರೆ ಭರ್ತಿಯಾಗಿ ಪ್ರತಿ ವರ್ಷ ಸಾಕಷ್ಟು ನೀರು ಪೋಲಾಗುತ್ತಿತ್ತು. ಪೋಲಾಗುವ ನೀರನ್ನು ಸಂಗ್ರಹಿಸಬೇಕೆoದು ಕನ್ನಂಪಲ್ಲಿ ಕೆರೆಗಿಂತ 300 ಮೀಟರ್ […]

ಅಮ್ಮನಿಗೊಂದು ಪತ್ರ

ಶ್ರೀಮತಿ ಹೇಮಾವತಿ ಹೆಗ್ಗಡೆಯವರು ವಾಟ್ಸಪ್, ಫೇಸ್‌ಬುಕ್, ಇ – ಮೇಲ್, ಟ್ವಿಟ್ಟರ್, ಇನ್‌ಸ್ಟಾಗ್ರಾಂನoತಹ ತಂತ್ರಜ್ಞಾನಗಳಿoದಾಗಿ ಇಂದು ಪತ್ರಗಳನ್ನು ಬರೆಯುವವರ ಸಂಖ್ಯೆ ವಿರಳವಾಗುತ್ತಿದೆ ಎನ್ನುವುದು ಸತ್ಯ. ಆದರೆ ಪತ್ರಗಳನ್ನು ಓದಿದಾಗ ಸಿಗುವಷ್ಟು ಸಂತೋಷ ಸಾಮಾಜಿಕ ಜಾಲತಾಣಗಳ ಮೂಲಕ ಓದಿದಾಗ ಸಿಗಲಾರದು.ಈ ಹಿಂದೆ ‘ನಿರಂತರ’ ಪತ್ರಿಕೆಯಲ್ಲಿ ಪ್ರಕಟವಾಗುವ ‘ಗೆಳತಿ’ ಅಂಕಣವನ್ನು ಓದಿ ಓದುಗರು ಪೋಸ್ಟ್ಕಾರ್ಡ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದರಿಂದಾಗಿ ನನ್ನ ಲೇಖನಗಳಿಂದ ಆಗುವ ಪ್ರಯೋಜನ, ಸಾಮಾಜಿಕ ಬದಲಾವಣೆಗಳ ಬಗ್ಗೆಯೂ ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಓದುಗರು […]

ಇನ್ನು ‘ಇ – ರುಪಿ’ ಕಾಲ

ಡಾ. ಎ. ಜಯಕುಮಾರ್ ಶೆಟ್ಟಿ ಹಣಕಾಸಿನ ವ್ಯವಹಾರ ಕಬ್ಬಿಣ, ತಾಮ್ರ, ಬೆಳ್ಳಿ, ಲೋಹ ಹೀಗೆ ಹಲವು ಹಂತಗಳನ್ನು ದಾಟಿ ಈಗ ನಾವು ಬಳಸುತ್ತಿರುವ ನಾಣ್ಯ, ನೋಟಿನ ರೂಪಕ್ಕೆ ಬಂದು ನಿಂತಿದೆ. ಮುಂದುವರಿದು ನಗದು ವ್ಯವಹಾರ ಡಿಜಿಟಲ್ ರೂಪವನ್ನು ಪಡೆದಿದೆ. ಇದೀಗ ಡಿಜಿಟಲ್ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ಹೊಸ ಯುಗವೊಂದು ಆರಂಭವಾಗುತ್ತಿದೆ. ಅದರ ಹೆಸರೇ ‘ಇ – ರುಪಿ’. ಇದನ್ನು ‘ಡಿಜಿಟಲ್ ಕರೆನ್ಸಿ’ ಎಂದೂ ಕರೆಯುತ್ತಾರೆ.ಕೇಂದ್ರ ಸರಕಾರ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದಂತೆ ‘ಇ – ರುಪಿ’ ಕುರಿತಾದ […]

ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ

ಡಾ| ಸಂದೀಪ್ ಹೆಚ್. ಎಸ್ ಶೀತ ಜ್ವರ : ಇದು ಬದಲಾದ ಹವಾಮಾನ, ತಂಗಾಳಿ, ಪ್ರಯಾಣಗಳಿಂದ ಹೆಚ್ಚು ಹರಡುವ ಅತಿ ಸರ್ವೇಸಾಮಾನ್ಯವಾದ ಸಮಸ್ಯೆ. ಹೆಚ್ಚಾಗಿ ಹೈನೋವೈರಸ್ ಮೊದಲಾದ ವೈರಾಣುಗಳಿಂದ ಗಾಳಿಯ ಮುಖಾಂತರ ಹಾಗೂ ಅಶುದ್ಧವಾದ ಕೈಗಳಿಂದ ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಹರಡಬಲ್ಲದು. ಇವುಗಳ ಸಹೋದರನೆ ಕೋವಿಡ್ ಮಹಾಮಾರಿ. ಒಣಕೆಮ್ಮು, ಚಳಿಜ್ವರ, ಮೈ ಕೈ ನೋವು, ಸುಸ್ತು, ಕಣ್ಣು ಕೆಂಪಾಗುವುದು, ತಲೆನೋವು, ಗಂಟಲು ಕೆರೆತ, ಶೀತ/ಮೂಗು ಕಟ್ಟುವುದು ಇದರ ಲಕ್ಷಣ. ಹೆಚ್ಚಾಗಿ ವೈರಾಣುವಿನ ಕಾಯಿಲೆಯಾದ್ದರಿಂದ ಆ್ಯಂಟಿ ಬಯಾಟಿಕ್ ಔಷಧದ […]

ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ರಾಜ್ಯೋತ್ಸವದ ಗರಿ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ‘ರಾಜ್ಯೋತ್ಸವ ಪ್ರಶಸ್ತಿ’ಯು ನಮ್ಮ ರಾಜ್ಯದ ಉನ್ನತ ಪ್ರಶಸ್ತಿಗಳಲ್ಲೊಂದಾಗಿದೆ. ಕಲೆ, ಸಾಹಿತ್ಯ, ಶಿಕ್ಷಣ, ಆಡಳಿತ, ಉದ್ದಿಮೆ, ಕ್ರೀಡೆ, ಕೃಷಿ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಮಾಜಸೇವೆ ಹೀಗೆ ಹತ್ತಾರು ವಲಯಗಳಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿ ಕರ್ನಾಟಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ ಮಹಾಸಾಧಕರಿಗೆ ಈ ಪ್ರಶಸ್ತಿಯು ಭಾಜನವಾಗುವುದು. 2022ನೇ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ನಮ್ಮ ಯೋಜನೆಯ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಎಚ್. ಮಂಜುನಾಥ್ ಸರ್‌ರವರಿಗೆ ನೀಡಿರುವುದು ನಮಗೆಲ್ಲರಿಗೂ ಬಹಳ ಅಭಿಮಾನದ ವಿಷಯವಾಗಿದೆ. ಪೂಜ್ಯ ಶ್ರೀ […]

ನಮ್ಮ ನಡಿಗೆ ವಾರದ ಸಭೆಯ ಕಡೆಗೆ

ಡಾ| ಎಲ್. ಎಚ್. ಮಂಜುನಾಥ್ ಕಳೆದ ಎರಡು ವರ್ಷಗಳ ಕೊರೊನಾ ಸಮಸ್ಯೆ ನಮ್ಮ ಸ್ವಸಹಾಯ ಸಂಘಗಳ ವಾರದ ಸಭೆಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ವಾರದ ಸಭೆಗಳು ನಡೆಸಲು ಸಾಧ್ಯವಿಲ್ಲದೆ ಇರುವಾಗ ವಾರದ ಕಂತು ಮರುಪಾವತಿಯ ಬಗ್ಗೆ ನಮ್ಮ ಕಾರ್ಯಕರ್ತರು ವಿಶೇಷ ಅಭಿಯಾನಗಳನ್ನು ಮಾಡಿ ವಾರದ ಕಂತುಗಳ ಮರುಪಾವತಿಯ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರಿoದ ಆರ್ಥಿಕ ನಿರ್ವಹಣೆಯು ಉತ್ತಮವಾಗಿದ್ದರೂ, ಸಂಘಗಳ ವಾರದ ಸಭೆಯ ಕೊರತೆಯಿಂದಾಗಿ ಸಾಮಾಜಿಕ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ನಾವು ಇಂದು ಎದುರಿಸುತ್ತಿದ್ದೇವೆ.ಸ್ವಸಹಾಯ ಸಂಘದಲ್ಲಿರುವ ಸಾಮಾನ್ಯ ಜನರಿಗೆ […]

ಸತ್ಯವನ್ನರಿತು ವ್ಯವಹರಿಸುವ ಕಲೆ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಸತ್ಯವನ್ನು ಗುರುತಿಸಿ ವ್ಯವಹರಿಸುವುದು ಒಂದು ಕಲೆ. ಈ ಕಲೆಯನ್ನು ಅರಿತುಕೊಂಡವನು ಮಾತ್ರ ಉತ್ತಮ ನಾಯಕನಾಗಬಲ್ಲ. ಹೆಚ್ಚಿನವರು ತಮ್ಮ ಖಾಸಗಿ ವಿಷಯಗಳಿಗಿಂತ ಮುಖ್ಯವಾಗಿ ಇತರರ ಬದುಕಿನ ಬಗ್ಗೆ ಅರಿತುಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಇದು ಮಾನವನ ಒಂದು ದೌರ್ಬಲ್ಯವೂ ಹೌದು. ಬದುಕಿನಲ್ಲಿ ಹೊಗಳಿಕೆ – ತೆಗಳಿಕೆಗಳು ಎರಡು ಇದ್ದದ್ದೇ. ಪ್ರೀತಿಪಾತ್ರರ ಬಗ್ಗೆ ಯಾರಾದರೂ ಹೊಗಳಿಕೆಯ ಮಾತುಗಳನ್ನಾಡಿದರೆ ಸಂತೋಷಪಡುತ್ತೇವೆ. ತೆಗಳಿಕೆಯ ಮಾತುಗಳನ್ನಾಡಿದರೆ ಅವರ ವಿರುದ್ಧವೇ ರೇಗಾಡುತ್ತೇವೆ. ಎಷ್ಟೋ ಬಾರಿ ಒಬ್ಬರ ಬಗ್ಗೆ ಇನ್ನೊಬ್ಬರು ಹೇಳಿದ್ದನ್ನೇ ಸತ್ಯವೆಂದು […]