ರಕ್ಷಣಾ ಸಚಿವಾಲಯದಿಂದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡೋ – ಪಾಕ್ ಯುದ್ಧದಲ್ಲಿ ಬಳಸಿದ ಯುದ್ಧ ಟ್ಯಾಂಕ್ ಕೊಡುಗೆ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡದೆ ತೆರಳುವುದು ಕಡಿಮೆ. ಅಲ್ಲಿಗೆ ಭೇಟಿ ನೀಡಿದವರು ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಶ್ರೀ ಹೆಗ್ಗಡೆಯವರ ಆಸಕ್ತಿಯನ್ನು ಕಂಡು ಬೆರಗಾಗುತ್ತಾರೆ. ಇದೀಗ ಕೇಂದ್ರ ರಕ್ಷಣಾ ಸಚಿವಾಲಯವು 1971ರ ಇಂಡೋ ಪಾಕ್ ಯುದ್ಧ, ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಳಕೆಯಾದ‘ಟಿ – 565’ ಎಂಬ ಹೆಸರಿನ ಯುದ್ಧ ಟ್ಯಾಂಕ್ ಅನ್ನು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ನೀಡಿದೆ.ಸುಮಾರು 40 ವರ್ಷಗಳ ಕಾಲ ದೇಶದ ರಕ್ಷಣಾ ಕಾರ್ಯದಲ್ಲಿ ಬಳಕೆಯಾದ ಟಿ – 565 […]

ಅಬ್ಬಾ ಎಂಥಾ ಚಳಿ..!

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನನ್ನ ಕೋಣೆಯ ಕಿಟಕಿಯಿಂದ ನೋಡಿದರೆ ಕಾಣುವ ಅನೇಕ ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷವೂ ಒಂದು. ಈ ವೃಕ್ಷವು ಬೃಹದಾಕಾರವಾಗಿ ಸದಾ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ರಾತ್ರಿ ಆದೊಡನೆ ಈ ವೃಕ್ಷ ಸಾವಿರಾರು ಹಕ್ಕಿಗಳಿಗೆ ತಂಗಲು ಆಸರೆಯಾಗುತ್ತದೆ. ಬೆಳಗ್ಗಿನ ಜಾವ ನೋಡಿದರೆ ಐದಾರು ಮಂದಿಯಾದರೂ ವೃಕ್ಷಕ್ಕೆ ಭಕ್ತಿಯಿಂದ ಸುತ್ತು ಬರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಂತೂ ಮರ ಎಲೆಗಳನ್ನು ಹೊದ್ದುಕೊಂಡು ಹಸಿರಾಗಿ ಕಂಗೊಳಿಸುವುದನ್ನು ನೋಡುವುದೇ ಒಂದು ರೀತಿಯ ಆನಂದ. ಆದರೆ ಚಳಿಗಾಲ ಬಂದೊಡನೆ ಒಂದೊoದೆ ಎಲೆಗಳನ್ನು ಕಳಚಿಕೊಂಡು […]

ಲಾಲನೆಗೆ ಮಿತಿಯಿರಲಿ, ಪಾಲನೆ ಆದ್ಯತೆಯ ಕರ್ತವ್ಯವಾಗಲಿ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದೆ ಒಂದು ಕಾಲವಿತ್ತು, ನಾಲ್ಕಾರು ಗ್ರಾಮಗಳಿಗೊಂದು ಶಾಲೆ, ಮೈಲುಗಟ್ಟಲೆ ಬರಿಗಾಲಲ್ಲೆ ನಡೆದು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಧ್ಯಾಪಕರ ಮೇಲೆ ಎಲ್ಲಿಲ್ಲದ ಗೌರವ. ಆಸಕ್ತಿಯಿಂದ ಹೇಳಿಕೊಟ್ಟಿದ್ದನ್ನು ಕಲಿಯುತ್ತಿದ್ದರು. ಅದೇ ಮುಂದಕ್ಕೆ ಜೀವನ ಪಾಠವು ಆಗುತ್ತಿತ್ತು. ಮನೆಯಿಂದ ಮಧ್ಯಾಹ್ನಕ್ಕೆ ಒಂದಿಷ್ಟು ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಶಾಲೆ ಬಿಡುತ್ತಿದ್ದಂತೆ ಪುನಃ ಮೈಲುಗಟ್ಟಲೆ ಬರಿಗಾಲಲ್ಲಿ ನಡೆದು ಮನೆ ತಲುಪುತ್ತಿದ್ದರು. ಆಟ, ಕಲಿಕೆ ಎಲ್ಲದರಲ್ಲೂ ಎಲ್ಲಿಲ್ಲದ ಉತ್ಸಾಹವಿತ್ತು. ಅಂದು ಮಕ್ಕಳಿಗೆ ಒಂದು ಜೊತೆ ಚಪ್ಪಲಿಯನ್ನು ಕೊಡಿಸುವುದು ಪೋಷಕರಿಗೆ ಕಷ್ಟವಾಗಿತ್ತು. […]

ಭೇದಗಳನ್ನು ಮರೆಯೋಣ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಭಕ್ತ ಜನ ಮುಂದೆ ನೀನವರ ಹಿಂದೆ… ನೀನವರ ಹಿಂದೆ..’ ಎಂಬ ಹಾಡಿನಂತೆ ಪಾದಯಾತ್ರೆಯಲ್ಲಿ ಭಕ್ತ ಜನ ಮುಂದೆ ಬರುತ್ತಾ ಇದ್ದರೆ ದೇವರು ಬಹುಶಃ ಪಾದಯಾತ್ರಿಗಳ ಭಕ್ತಿಗೆ ಮೆಚ್ಚಿ ಅವರ ಹಿಂದಿನಿAದಲೇ ಬಂದಿದ್ದಾರೆ. ಪಾದಯಾತ್ರೆಯಲ್ಲಿ ಓಡಿಕೊಂಡು ಬಂದ ಹಾಗೆ ಕೆಲವೇ ತಾಸುಗಳಲ್ಲಿ ಕ್ಷೇತ್ರವನ್ನು ತಲುಪಿದ್ದೇವೆ ಅಂದರೆ ಅದು ಓಡಿಕೊಂಡು ಬಂದದ್ದಲ್ಲ. ಭಕ್ತ ಜನರನ್ನು ದೇವರು ಹಿಂದಿನಿoದ ತಳ್ಳಿಕೊಂಡೇ ಬಂದದ್ದು. ಭಕ್ತ ಜನರು ಮುಂದೆ ಇದ್ದಾಗ ದೇವರು ಹಿಂದಿನಿoದ ತಳ್ಳಿಕೊಂಡು ಬರುತ್ತಾರಂತೆ. ಶ್ರದ್ಧೆಯ ಆವೇಶ […]