ಕಳವಾದ ಮೊಬೈಲ್‌ಗೆ
ಲಾಕ್ ಮಾಡಿ
ಇನ್ಮುಂದೆ ನಿಮ್ಮ ಮೊಬೈಲ್ ಕಳವಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಳವಾದ ಫೋನನ್ನು ಕೂತಲ್ಲಿಯೇ ಪೊಲೀಸ್ ಅಥವಾ ವಾರಸುದಾರರು ಬಳಕೆ ಆಗದಂತೆ ಲಾಕ್ ಮಾಡುವ ಸೌಲಭ್ಯವನ್ನು ರಾಜ್ಯ ಪೊಲೀಸ್ ಇಲಾಖೆ ಒದಗಿಸುತ್ತಿದೆ.ಈಗಾಗಲೆ ಎಲ್ಲ ಮೊಬೈಲ್ ಕಂಪೆನಿ ಮತ್ತು ಟೆಲಿಕಾಂ ಕಂಪೆನಿಗಳೊoದಿಗೆ ಮೊಬೈಲ್ ಬ್ಲಾಕಿಂಗ್ ಬಗ್ಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ.ಮೊಬೈಲ್ ಕಳವಾದರೆ ನಾವೇನು ಮಾಡಬೇಕು?ಮೊಬೈಲ್ ಕಳವಾದ ಬಗ್ಗೆ ಪೊಲೀಸ್ ಇಲಾಖೆಯ ‘ಇ – ಲಾಸ್ಟ್’ನಲ್ಲಿ ದೂರು ದಾಖಲಿಸಬೇಕು. ‘ಇ – ಲಾಸ್ಟ್’ನಲ್ಲಿ […]
ಏನಿದು ಜಿ.ಐ. ಟ್ಯಾಗ್
ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಜಿ.ಐ. ಟ್ಯಾಗ್ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವ ಘೋಷಣೆ ಮಾಡಿರುವುದು ರಾಜ್ಯದ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ಹಾಗೂ ಜಿ.ಐ. ಟ್ಯಾಗ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ‘ಅಮೃತಕಾಲ’ದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.ಜಿ.ಐ. ಟ್ಯಾಗ್ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಎಂದರ್ಥ. ಒಂದು ಉತ್ಪನ್ನದ ಭೌಗೊಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿ.ಐ. […]
ಮಕ್ಕಳಿಗೆ ಕೆಮ್ಮು – ಜ್ವರ ಬಂದರೆ ಏನು ಮಾಡಬೇಕು?
ಕೆಮ್ಮು ಮತ್ತು ಜ್ವರವೇ ಒಂದು ರೋಗವಲ್ಲ. ಅವೆರಡೂ ಒಳಗಿರುವ ಬೇರೊಂದು ರೋಗದ ಎರಡು ಮುಖ್ಯ ಲಕ್ಷಣಗಳಷ್ಟೇ. ಹಾಗಾಗಿ ಕೆಮ್ಮು ಮತ್ತು ಜ್ವರಕ್ಕೆ ಔಷಧ ಮಾಡುವುದಕ್ಕಿಂತ ಮುಖ್ಯವಾಗಿ ಅವುಗಳು ಬಂದಿರುವ ಕಾರಣವನ್ನು ಕಂಡುಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.ನಮ್ಮ ಶರೀರಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅದ್ಭುತ ತಾಕತ್ತಿದೆ. ಕೆಮ್ಮು ಎಂಬುವುದು ಒಂದು ಪೀಡೆಯಲ್ಲ. ಅದು ದೇಹವನ್ನು ರಕ್ಷಿಸಿಕೊಳ್ಳುವ ತಾಕತ್ತಿನ ಒಂದು ಅಂಶ. ನಮ್ಮ ಉಸಿರಾಟದ ನಾಳಗಳಲ್ಲಿ ಬೇಡವಾದ ಕೀಟಾಣುಗಳ ದಾಳಿಯಿಂದ ಅವುಗಳನ್ನು ಹೊರಹಾಕುವ ಒಂದು ತಂತ್ರವೇ ಈ ಕೆಮ್ಮು. ಹಾಗಾಗಿ […]
ನಾಳಿನ ಭವಿಷ್ಯ ನಿಂತಿದೆ ಇಂದಿನ ವರ್ತಮಾನದಲ್ಲಿ
ಪೂಜ್ಯ ಶ್ರೀ ಹೆಗ್ಗಡೆಯವರು ಮೊನ್ನೆ ರಾಜ್ಯಸಭೆಯಲ್ಲಿ ಅಭಿವಂದನಾ ಭಾಷಣದಲ್ಲಿ ಅನೇಕ ಅತ್ಯುತ್ತಮ ವಿಚಾರಗಳನ್ನು ಮಂಡಿಸಿದರು. ವರ್ತಮಾನ ಕಾಲ ಹಾಗೂ ಭೂತಕಾಲದ ನಡುವಿನ ಸಂಬoಧವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿದರು. ವರ್ತಮಾನದಲ್ಲಿ ಅಂದರೆ ಈ ದಿನ ನಾವು ಯಾವ ಕಾರ್ಯಗಳನ್ನು ಮಾಡುತ್ತೇವೂ ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆಯೇ ಹೊರತು ಗತಕಾಲದ ಕಾರ್ಯಗಳು ಅಲ್ಲ ಎನ್ನುವ ನೈಜತೆಯನ್ನು ದೇಶಕ್ಕೆ ತಿಳಿಸಿದರು. ಗತಕಾಲ ಅಥವಾ ಭೂತಕಾಲದ ಎಲ್ಲಾ ಘಟನಾವಳಿಗಳಿಂದ ನಾವು ಪಾಠವನ್ನು ಕಲಿತು ವರ್ತಮಾನದಲ್ಲಿ ಅತ್ಯುತ್ತ್ತಮ ಕಾರ್ಯಗಳನ್ನು ಮಾಡಿದ್ದಲ್ಲಿ ಮಾತ್ರ ಸುಂದರ ಭವಿಷ್ಯವನ್ನು […]
ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಿ
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಲು ಅವರಿಗೆ ಪ್ರೇರಣೆ ನೀಡಿದ ಅಂಶಗಳನ್ನಷ್ಟೇ ಅವರ ಭಾಷಣದಿಂದ ಆಯ್ದು ಇಲ್ಲಿ ನೀಡಲಾಗಿದೆ.ನನ್ನ ಬಾಲ್ಯವನ್ನು ನಾನು ಕವಿ ರತ್ನಾಕರವರ್ಣಿಯ ಮೂಡುಬಿದಿರೆಯಲ್ಲಿ ಕಳೆದೆ. ನನ್ನ ತಂದೆಯವರು ಸಂಸ್ಕೃತ, ಪ್ರಾಕೃತ ಮತ್ತು ಕನ್ನಡದ ವಿದ್ವಾಂಸರಾಗಿದ್ದರು. ಅವರು ನನಗೆ ಬಾಲ್ಯದಲ್ಲಿ ಪಂಪ, ರನ್ನ ಮತ್ತು ಸಂಸ್ಕೃತದ ಇತರ ಕಾವ್ಯಗಳ ಜೊತೆಗೆ ಕನ್ನಡದ ಅಮರಕೋಶ ವ್ಯಾಕರಣವನ್ನೂ ಸಹ ಬಾಯಿಪಾಠ ಮಾಡಿಸುತ್ತಿದ್ದರು. […]
ನೀರಿನಲ್ಲಿ ಪ್ರಾಣಿ – ಪಕ್ಷಿಗಳಿಗೂ ಪಾಲಿರಲಿ
ಚಳಿಗಾಲ ಮುಗಿದು ಬೇಸಿಗೆಗಾಲ ಆರಂಭವಾಗುತ್ತಿದೆ. ರಾಜ್ಯದ ಕೆಲವೊಂದು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ದಿನಗಳಿವು. ಆದರೆ ಹಿಂದಿನ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಇದಕ್ಕೆ ಕಾರಣ ಪರಿಸರ ಸಂರಕ್ಷಣೆ ಮತ್ತು ರಾಜ್ಯದ ಕೆರೆಗಳ ಪುನಶ್ಚೇತನ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೇ ರಾಜ್ಯದ ಐನೂರರಷ್ಟು ಕೆರೆಗಳ ಹೂಳೆತ್ತಲಾಗಿದೆ. ವಿಶೇಷವೆಂದರೆ ಹೆಚ್ಚಿನ ಎಲ್ಲ ಕೆರೆಗಳಲ್ಲಿ ಹೂಳೆತ್ತುತ್ತಿದ್ದಂತೆ ನೀರು ದೊರೆತಿದೆ. ಕಳೆದ ಮಳೆಗಾಲದಲ್ಲಿ ಸುರಿದ […]
‘ನಿರಂತರ’ ಪತ್ರಿಕೆಯನ್ನು ಓದಿರಿ, ಪ್ರಜ್ಞಾವಂತರಾಗಿ ಬೆಳೆಯಿರಿ
ಆತ್ಮೀಯರೇ, ನಿಮ್ಮ ‘ನಿರಂತರ’ ಪತ್ರಿಕೆಗೆ ಇದೀಗ ಇಪ್ಪತ್ತರ ಹರೆಯ. 2003ರಲ್ಲಿ ಪ್ರಾರಂಭಗೊAಡ ಈ ಪತ್ರಿಕೆ ಇಂದು ರಾಜ್ಯದ ಜನಪ್ರಿಯ ಮಾಸಿಕ ಆಗಿದೆ. ನಿರಂತರದ ಎಲ್ಲ ಪುಟಗಳೂ ಇದೀಗ ವರ್ಣಮಯವಾಗಿವೆ. ಲೇಖನಗಳ ಮೂಲಕ ಪ್ರಸ್ತುತ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಿ, ಜ್ವಲಂತ ವಿಷಯಗಳನ್ನು ಬೆಳಕಿಗೆ ತರುತ್ತಿರುವ ಸದಭಿರುಚಿಯ ಪತ್ರಿಕೆಯಾಗಿದೆ. ಸಾಮಾನ್ಯರೂ ಓದುವಂತೆ ಸರಳ ಭಾಷೆಯ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದು, ಓದಲು ಸುಲಭವಾಗಿದೆ.‘ನಿರಂತರ’ ಪತ್ರಿಕೆಯಲ್ಲಿ ನಮ್ಮ ಬದುಕಿಗೆ ಬೇಕಾಗುವ ಎಲ್ಲ ಹೂರಣಗಳನ್ನು ಜೋಡಿಸಲಾಗಿದೆ. ಮುಖ್ಯವಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು […]