ನಾಳಿನ ಭವಿಷ್ಯ ನಿಂತಿದೆ ಇಂದಿನ ವರ್ತಮಾನದಲ್ಲಿ
ಶ್ರೀ ಅನಿಲ್ ಕುಮಾರ್ ಎಸ್.ಎಸ್. ಪೂಜ್ಯ ಶ್ರೀ ಹೆಗ್ಗಡೆಯವರು ಮೊನ್ನೆ ರಾಜ್ಯಸಭೆಯಲ್ಲಿ ಅಭಿವಂದನಾ ಭಾಷಣದಲ್ಲಿ ಅನೇಕ ಅತ್ಯುತ್ತಮ ವಿಚಾರಗಳನ್ನು ಮಂಡಿಸಿದರು. ವರ್ತಮಾನ ಕಾಲ ಹಾಗೂ ಭೂತಕಾಲದ ನಡುವಿನ ಸಂಬoಧವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿದರು. ವರ್ತಮಾನದಲ್ಲಿ ಅಂದರೆ ಈ ದಿನ ನಾವು ಯಾವ ಕಾರ್ಯಗಳನ್ನು ಮಾಡುತ್ತೇವೂ ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆಯೇ ಹೊರತು ಗತಕಾಲದ ಕಾರ್ಯಗಳು ಅಲ್ಲ ಎನ್ನುವ ನೈಜತೆಯನ್ನು ದೇಶಕ್ಕೆ ತಿಳಿಸಿದರು. ಗತಕಾಲ ಅಥವಾ ಭೂತಕಾಲದ ಎಲ್ಲಾ ಘಟನಾವಳಿಗಳಿಂದ ನಾವು ಪಾಠವನ್ನು ಕಲಿತು ವರ್ತಮಾನದಲ್ಲಿ ಅತ್ಯುತ್ತ್ತಮ ಕಾರ್ಯಗಳನ್ನು […]
‘ಹಿತ್ತಲ ಗಿಡ ಮದ್ದಲ್ಲ’ ಆದರೆ ಅಲ್ಲಿ ‘ತರಕಾರಿ’ಬೆಳೆಯಬಹುದಲ್ಲವೇ?
ಶ್ರೀ ಅನಿಲ್ ಕುಮಾರ್ ಎಸ್.ಎಸ್. ರಾಮಣ್ಣ ಕೆಲಸ ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿರುವಾಗ ಹೆಂಡತಿ ತರಕಾರಿ ತರಲು ಹೇಳಿದ್ದು ನೆನಪಾಯಿತು. ಮೂರು ನಾಲ್ಕು ದಿನಕ್ಕಾಗುವಷ್ಟು ಇರಲಿ ಎಂದು ಕೆಲವು ತರಕಾರಿಗಳನ್ನು ಸ್ವಲ್ಪ, ಸ್ವಲ್ಪ ತೆಗೆದುಕೊಂಡರು. ಅಂಗಡಿಯ ಭೀಮಣ್ಣ ರೂ. 280 ಎಂದು ಚೀಟಿಯನ್ನು ಕೊಟ್ಟರು. ಹುಬ್ಬೇರಿಸಿದ ರಾಮಣ್ಣ ತರಕಾರಿಯ ಬೆಲೆ ಗಗನಕ್ಕೇರಿದೆ ಎಂದು ಗೊಣವಿಗೊಂಡನು. ರಾಮಣ್ಣನ ಮಾತಿನ ಒರಸೆ ಅರ್ಥ ಮಾಡಿಕೊಂಡ ಭೀಮಣ್ಣ, ತರಕಾರಿ ಬೆಲೆಯನ್ನು ಸಮರ್ಥಿಸಿಕೊಳ್ಳಲು ಶುರು ಮಾಡಿದ. ಒಂದೊoದು ತರಕಾರಿಯ ಹೆಸರಿನೊಂದಿಗೆ ಅವುಗಳನ್ನು ಪೂರೈಕೆ […]