2023 ಮೇ
ಬದಲಾದ ಕಾಲದಲ್ಲಿ ವೋಟ್ ಫ್ರಮ್ ಹೋಮ್!
ವಯಸ್ಸಾದವರು, ದಿವ್ಯಾಂಗರಿಗೆ ಮನೆಯಿಂದಲೇ ಮತದಾನದ ಅವಕಾಶ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪ್ರಯೋಗ ರಾಜೀವ ಹೆಗಡೆ ಕೊರೊನಾ ಕಾಲಘಟ್ಟದ ಬಳಿಕ ಜಗತ್ತಿನಾದ್ಯಂತ ‘ವರ್ಕ್ ಫ್ರಮ್ ಹೋಮ್’ ಎಂದರೆ ಮನೆಯಿಂದಲೇ ಕೆಲಸ ಎನ್ನುವ ಪರಂಪರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಆರಂಭವಾಯಿತು. ಕೋವಿಡ್-19 ಮಹಾಮಾರಿಯು ಜಗತ್ತಿನಲ್ಲಿ ಜನರಿಗೆ ಉಸಿರು ಕಟ್ಟುವಂತೆ ಮಾಡಿತು. ಆದರೆ ಅದರಿಂದ ಒಂದಿಷ್ಟು ಒಳಿತುಗಳು ಕೂಡ ಆದವು.ಕೋಟ್ಯಂತರ ಉದ್ಯೋಗಿಗಳಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿತು. ಸಾವಿರಾರು ಕಂಪೆನಿಗಳು ಕಚೇರಿಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನು ನಿಲ್ಲಿಸಿ, ಮನೆಯಿಂದಲೇ ಪರಿಣಾಮಕಾರಿ ಕೆಲಸ ತೆಗೆದುಕೊಳ್ಳುವ […]
ಭಕ್ತರ ಇಷ್ಟಾರ್ಥ ಈಡೇರಿಸುವ ‘ಶಿಬಿ’ ಕೆರೆ
ಡಾ. ಚಂದ್ರಹಾಸ್ ಚಾಮಾಡಿ ಶಿಬಿ ಚಕ್ರವರ್ತಿ ಆಡಳಿತ ನಡೆಸಿದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಶಿಬಿ ಎಂಬಲ್ಲಿ ನಲುವತ್ತು ಎಕರೆ ಆರು ಗುಂಟೆ ವಿಸ್ತೀರ್ಣದ ಕೆರೆಯೊಂದು ಇದೆ. ‘ಶಿಬಿ ಕೆರೆ’ ಎಂಬ ಹೆಸರಿನ ಈ ಕೆರೆಗೆ ಹಿಂದಿನ ಕಾಲದಲ್ಲಿ ರಾಜರು ಯುದ್ಧಕ್ಕೆ ಹೊರಡುವ ಮುಂಚೆ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ. ಸಂತಾನ ಭಾಗ್ಯಕ್ಕಾಗಿ ಕೆರೆಗೆ ಬಾಗಿನ ಅರ್ಪಿಸುವ ಸಂಪ್ರದಾಯವೂ ಇಲ್ಲಿತ್ತು. ಇಲ್ಲಿಗೆ ಹರಕೆ ಹೊತ್ತು ಸಂತಾನಭಾಗ್ಯದ ಭಾಗ್ಯ ಪಡೆದ ಹತ್ತಾರು ಮಂದಿ ಈ ಊರಿನಲ್ಲೆ ಕಾಣಸಿಗುತ್ತಾರೆ.ಜನಸಂಖ್ಯೆ ಹೆಚ್ಚುತ್ತಿದ್ದಂತೆ […]
ಮೊಬೈಲ್ ದುನಿಯಾ
ಚೇತನಾ ಚಾರ್ಮಾಡಿ ಮೊಬೈಲ್ ಎನ್ನುವುದು ಇದೀಗ ಪ್ರತಿಯೊಬ್ಬರ ಬದುಕಿನ ಅಗತ್ಯಗಳಲ್ಲೊಂದಾಗಿದೆ. ಪ್ರಾರಂಭದಲ್ಲಿ ಸೂಟ್‌ಕೇಸ್‌ನಂತೆ ಇದ್ದ ಮೊಬೈಲ್ ಫೋನ್‌ಗಳು ಇಂದು ಅಂಗೈಯಗಲಕ್ಕಿoತಲೂ ಕಿರಿದಾಗಿವೆ. ಕೇವಲ ಕರೆ, ಸಂದೇಶ ಕಳುಹಿಸಲು ಮಾತ್ರ ಸಾಧ್ಯವಾಗುತ್ತಿದ್ದ ಮೊಬೈಲ್‌ಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದು ಇಂದು ಒಂದು ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಶೇ. 70 ರಷ್ಟು ಕೆಲಸಗಳು ಮೊಬೈಲ್‌ನಲ್ಲಿ ಮಾಡಲು ಸಾಧ್ಯವಾಗುತ್ತಿದೆ.ಮೊಬೈಲ್ ಫೋನ್‌ನ ಹುಟ್ಟು : ಜಗತ್ತಿನಲ್ಲೆ ಮೊತ್ತ ಮೊದಲ ಬಾರಿಗೆ ಮೊಬೈಲ್ ಫೋನ್ ಅನ್ನು ಕಂಡುಹಿಡಿದ ಕೀರ್ತಿ ಮೊಟರೊಲಾ ಸಂಸ್ಥೆಗೆ ಸೇರುತ್ತದೆ. ಅಲ್ಲದೆ ಇದೇ […]
ಸಬಲೀಕರಣದ ಮೌನ ಸೆಲೆ
ಬಡಿದೆಬ್ಬಿಸುವ ಭಾಷಣಗಳಿಲ್ಲರೋಚಕವೆನಿಸುವ ವಾಕ್ಯಗಳಿಲ್ಲಗಹಗಹಿಸಿ ನಗಿಸಿ ಮರೆಸುವ ಉಲ್ಲೇಖಗಳಿಲ್ಲಕಣ್ಣೀರು ತರಿಸುವ ಕಥೆಗಳಂತೂ ಇಲ್ಲವೇ ಇಲ್ಲಬಡಿದೆಬ್ಬಿಸಲು ಅವರಲಿ ಬಡಿಗೆಯೇ ಇಲ್ಲರಣ ಕಹಳೆಯನೂದುವ ಅಬ್ಬರವಲ್ಲಿಲ್ಲಅನುಕಂಪದಲೆ ಹರಿಸುವ ರಾಜಕಾರಣಿಯವರಲ್ಲಕ್ಷಣಿಕದಾಕರ್ಷಣೆಯ ವಾಗ್ಮಯ ಅವರದಲ್ಲನಮ್ಮಮ್ಮ ಹೇಮಮ್ಮ ಹೇಮಾವತಮ್ಮಹೊರನೋಟದಲಿ ಕಾಣದಾ ಜ್ಞಾನಸಾಗರಆಂತರ್ಯದೊಳಗಿಹುದು ಸಾಹಿತ್ಯ ಅಪಾರಶುಭ್ರಾಗಸದಲ್ಲಿ ಎಂದಿಗಾದರೊಮ್ಮೆಹೊಳೆವ ಕೋಲ್ಮಿಂಚಿನoದದಲಿಹೊರಬರುವ ಭಂಡಾರಪರoಪರೆಗೆ ವಿಜ್ಞಾನವನು ಲೇಪಿಸುವ ಅವರ ಚಾತುರ್ಯಅಬಲೆಯರಿಗೆ ಬಲನೀಡುವ ನಿತ್ಯದಾ ಕೈಂಕರ್ಯಜೊತೆಯಲೇ ಬಲಹೀನರಿಗೆ ನಿಂತು ನೀಡುವ ಔದಾರ್ಯವದನದಲಿ ಆ ಜಿಹ್ವದಲಿ ಎಂದೂ ಮಾಸದ ಮಾಧುರ್ಯಈ ಪರಿಯ ಸೊಬಗಂತೂ ಕಾಣುವುದು ಅಪರೂಪಯುಗಗಳಿಗೊಮ್ಮೆ ಮಾತ್ರ ಜನಿಸಿ ಬರುವ ಹೇಮ ಸ್ವರೂಪಸಂಭ್ರಮವು ಎಮಗಿಂದು ತಮ್ಮ […]
ಐ.ಎ.ಎಸ್. ಯಶಸ್ಸು ಅಸಾಧ್ಯವಲ್ಲ
ಗುರುಪ್ರಸಾದ್ ಟಿ. ಎನ್. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐ.ಎ.ಎಸ್. (ಭಾರತೀಯ ಆಡಳಿತಾತ್ಮಕ ಸೇವೆಗಳು) ಅಧಿಕಾರಿಯಾಗಬೇಕೆಂಬ ಬಯಕೆಯೇನೋ ಹಲವರಿಗಿರುತ್ತದೆ. ಆದರೆ ಇವರಲ್ಲಿ ಗುರಿ ತಲುಪುವವರು ಕೆಲವರಷ್ಟೇ. ಉಳಿದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಅಸಾಧ್ಯ ಎಂದು ತಮ್ಮ ಮಹದಾಸೆಯನ್ನು ಕೈಯಾರೆ ಚಿವುಟಿಬಿಡುತ್ತಾರೆ. ಹಾಗಾದರೆ ಐ.ಎ.ಎಸ್. ಪರೀಕ್ಷೆ ಅಷ್ಟೊಂದು ಕಷ್ಟವೇ? ಇದಕ್ಕೆ ಏಕೆ ಇಷ್ಟೊಂದು ಮಹತ್ವ? ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಮಾಡಬೇಕಿರುವುದೇನು? ವಯೋಮಿತಿ, ವಿದ್ಯಾರ್ಹತೆ ಮೊದಲಾದ ಸಂಗತಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ.) ವರ್ಷಕ್ಕೆ ಒಂದು ಬಾರಿ […]