ಕೀಟಗಳ ಪ್ರಪಂಚವೆಂಬ ವಿಸ್ಮಯ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಇತ್ತೀಚೆಗೆ ‘ವಿಸ್ಮಯ ಕೀಟ ಪ್ರಪಂಚ’ ವೆಂಬ ಪುಸ್ತಕವೊಂದು ನನ್ನ ಕೈಸೇರಿತು. ಪುಟ ತೆರೆಯುತ್ತಿದ್ದಂತೆ ನಾನು ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ, ಬರುವಾಗ, ನಮ್ಮ ಪರಿಸರದ ಸುತ್ತಮುತ್ತ, ಮನೆಯಂಗಳದ ಹೂದೋಟದಲ್ಲಿ, ಗದ್ದೆಗಳಲ್ಲಿ, ಬಾಳೆ ತೋಟದಲ್ಲಿ ನೋಡಿದ ಕೀಟಗಳು, ಅವುಗಳ ಚಲನ – ವಲನ, ಬಣ್ಣ, ಅಂದ, ಸೌಂದರ್ಯ, ಕಾರ್ಯವೈಖರಿಯನ್ನು ಕಂಡು ಬೆರಗುಗೊಂಡೆ. ನಗಾರಿಯ ಶಬ್ದದಂತೆ ಶಬ್ದ ಮಾಡುವ ಸಿಕಾಡ ಕೀಟ, ಕೆಂಪಿರುವೆಗಳು, ಜೀರುಂಡೆ, ಬಣ್ಣ ಬಣ್ಣದ ಚಿಟ್ಟೆಗಳು, ಸಾರಂಗ ಜೀರುಂಡೆ, ಕಡ್ಡಿಕೀಟ, ಸೆಗಣಿ ಜೀರುಂಡೆ, […]

ಪ್ರಬುದ್ಧ ನಿರ್ಣಯಗಳಿಂದ ಸುಸ್ಥಿರ ಸಂಘ

ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್. ಯೋಜನೆಯ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳಿಗೆ ಎಲ್ಲಿಲ್ಲದ ಮಹತ್ವವಿರುತ್ತದೆ. ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳು ಪ್ರಬುದ್ಧಮಾನವಾಗಿದ್ದಲ್ಲಿ ಮಾತ್ರ ಆ ಸಂಘದ ಹಾಗೂ ಸದಸ್ಯರ ಸುಸ್ಥಿರತೆಯನ್ನು ಸದಾ ಕಾಪಾಡಿಕೊಂಡು ಬರಬಹುದು. ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿಕೊಂಡು ಸಾಮೂಹಿಕ ಅಭಿವೃದ್ಧಿ ಸಾಧಿಸುವುದು ಮೂಲ ಮಂತ್ರವಾಗಿದೆ. ಆದ್ದರಿಂದ ಸಂಘಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ವ್ಯಕ್ತಿಗತ ಅನುಕೂಲಕ್ಕಿಂತ ಸಂಘದ ಹಿತರಕ್ಷಣೆ ಹಾಗೂ ಸುಸ್ಥಿರತೆಗೆ ಅತ್ಯಂತ ಪ್ರಾಧಾನ್ಯತೆಯನ್ನು ನೀಡಬೇಕಾಗಿರುತ್ತದೆ. ಸಂಘಗಳು ಸದಾ ಪ್ರಬುದ್ಧಮಾನವಾದ […]

ಪ್ರಗತಿ ರಕ್ಷಾ ಕವಚ – ಸಂಘದ ಜವಾಬ್ದಾರಿಗೆ ಸೂಕ್ತ ಭದ್ರತೆ

ಡಾ| ಎಲ್.ಎಚ್ ಮಂಜುನಾಥ್ ಸ್ವಸಹಾಯ ಸಂಘ ಚಳುವಳಿಯಿಂದಾಗಿ ಅದರ ಸದಸ್ಯರು ಹೊಸ ಕನಸುಗಳನ್ನು ಕಾಣುವುದು ಸಾಧ್ಯವಾಗಿದೆ. ಬೋರ್‌ವೆಲ್, ಟ್ರಾö್ಯಕ್ಟರ್ ಖರೀದಿ, ಹೈಟೆಕ್ ಕೃಷಿ, ಜಾನುವಾರು ಖರೀದಿ, ಅಂಗಡಿ, ವ್ಯಾಪಾರ ಮುಂತಾದ ಕಸುಬುಗಳನ್ನು ಸಂಘವು ನೀಡುವ ಪ್ರಗತಿನಿಧಿಯಿಂದ ಧೈರ್ಯವಾಗಿ ಕೈಗೊಳ್ಳಲು ಸಾಧ್ಯವಾಗಿದೆ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರಗತಿನಿಧಿ ಪಡೆಯುವುದು ಸಾಮಾನ್ಯವಾಗಿದೆ. ಅಕಸ್ಮಾತ್ ಪ್ರಗತಿನಿಧಿ ಪಡೆದವರು ಮರಣ ಹೊಂದಿದರೆ ಅವರು ಪಡೆದುಕೊಂಡ ಪ್ರಗತಿನಿಧಿಯನ್ನು ಸಂಘವು ವಾಪಾಸು ಪಡೆದುಕೊಳ್ಳಲು ಮಾಡಲಾಗಿರುವ ಉಪಾಯವೇ ‘ಪ್ರಗತಿ ರಕ್ಷಾ ಕವಚ’. ವರ್ಷದ ಪ್ರಾರಂಭದಲ್ಲಿ ಸಣ್ಣ […]

ನೀರಿನೊಂದಿಗಿನ ಸಾಹಸ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ವರ್ಷ ಮಳೆಗಾಲದಲ್ಲಿ ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ಜಲಪ್ರಳಯವಾಗುವುದು ಸಾಮಾನ್ಯವಾಗಿಬಿಟ್ಟಿದೆ. ಮಳೆಯ ರಭಸಕ್ಕೆ ನದಿ, ತೊರೆಗಳು ಉಕ್ಕಿ ಹರಿದು ಕೆಲವರ ಆಸ್ತಿ, ಕೃಷಿ, ಪ್ರಾಣ ಹಾನಿಗೂ ಕಾರಣವಾಗುವುದಿದೆ. ಆದರೆ ಎಷ್ಟೋ ಬಾರಿ ನೆರೆಯಿಂದಾಗುವ, ಆಗಬಹುದಾದ ಪರಿಣಾಮಗಳ ಬಗ್ಗೆ ಗೊತ್ತಿದ್ದರೂ ಮೋಜು, ಮಸ್ತಿ, ಶೋಕಿ, ಸಾಹಸದ ಹೆಸರಿನಲ್ಲಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಬೇಸರದ ಸಂಗತಿ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಸೇತುವೆಗಳು ಮುಳುಗಡೆಯಾಗಿದ್ದರೂ ಅದರ ಮೇಲೆ ದ್ವಿಚಕ್ರ ವಾಹನ ಚಲಾಯಿಸುವ […]