ಅಪಘಾತಮುಕ್ತ (Zero Accident) ಸಂಚಾರಿ ವ್ಯವಸ್ಥೆ ನಿರ್ಮಿಸೋಣ

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ ಜೂನ್ ತಿಂಗಳು ಕಾಲಿಡುತ್ತಿದ್ದಂತೆಯೇ ಮಳೆರಾಯನ ಆಗಮನವಾಗುತ್ತದೆ. ಗುಡುಗು – ಸಿಡಿಲುಗಳ ಅಬ್ಬರ. ಈ ಅಬ್ಬರದ ನಡುವೆ ಆಂಬುಲೆನ್ಸ್ ಸೈರನ್‌ನ ಅಬ್ಬರವೂ ಆಗಿಂದಾಗ್ಗೆ ಕೇಳುತ್ತದೆ. ಹೌದು, ಮಳೆಗಾಲದಲ್ಲಿ ವಿಪರೀತ ರಸ್ತೆ ಅಪಘಾತಗಳು ಆಗುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಆಂಬುಲೆನ್ಸ್ನ ಸೈರನ್ ಸದ್ದು ಮಳೆಗಾಲದ ಕಾರ್ಮೋಡದ ವಾತಾವರಣದಲ್ಲಿ ಇನ್ನಷ್ಟು ಭಯವನ್ನು ಸೃಷ್ಟಿಸುತ್ತದೆ. ರಸ್ತೆಗಳ ಗುಣಮಟ್ಟ ಕಳಪೆಯಾಗಿ ಹೊಂಡ – ಗುಂಡಿಗಳಿದ್ದರೂ ಅಪಘಾತಗಳಾಗುತ್ತವೆ. ಅವುಗಳೆಲ್ಲವನ್ನು ಸರಿಪಡಿಸಿ ನುಣಪಾದ ಉತ್ತಮ ರಸ್ತೆಗಳನ್ನು ಮಾಡಿದರೂ ವೇಗದ ಸವಾರಿಯಿಂದ […]

‘ನೀತಿಕಥೆ’ಗಳೆಂಬ ದಾರಿದೀಪ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದರ್ಧ ತಾಸು ಭಾಷಣವನ್ನು ಕೇಳಿ ಮನೆ ತಲುಪಿದ ನಂತರ ನಮ್ಮ ನೆನಪಿನ ಪಟಲದಲ್ಲಿ ಉಳಿಯುವುದು ಭಾಷಣದಲ್ಲಿ ಹೇಳಿದ ಒಂದೆರಡು ಕತೆಗಳು ಮಾತ್ರ. ಎಲ್ಲೋ ಕೇಳಿದ, ಓದಿದ ನೀತಿ ಕಥೆಗಳನ್ನು ಬರೆದಿಟ್ಟುಕೊಳ್ಳುವವರು ನಮ್ಮಲ್ಲಿದ್ದಾರೆ. ನೀತಿಯನ್ನು ಬೋಧಿಸುವ ನೀತಿಕಥೆಗಳನ್ನು ಪ್ರತಿಯೊಬ್ಬರು ಓದಿದಲ್ಲಿ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಬದಲಾಗುವುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ನೀತಿ ಕಥೆಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಇವುಗಳೊಳಗಿನ ಸಾರ ನಮಗೆಲ್ಲರಿಗೂ ದಾರಿದೀಪವಾಗಲಿ.ಸನ್ಯಾಸಿಯೊಬ್ಬ ಒಂದು ಮನೆ ಜಗಲಿಯಲ್ಲಿ ರಾತ್ರಿ […]

ಹೈನುಗಾರಿಕೆ ಮಾಡಿ. ಕೃಷಿ ಸಂಪತ್ತನ್ನು ವೃದ್ಧಿಸಿಕೊಳ್ಳಿರಿ.

ಡಾ| ಎಲ್. ಎಚ್. ಮಂಜುನಾಥ್ ಒಂದು ಕಾಲ ಇತ್ತು, ಹಳ್ಳಿಗಳಲ್ಲಿ ಹೆಚ್ಚಿನ ಮನೆಗಳಲ್ಲಿ ದನ – ಕರುಗಳು, ಎಮ್ಮೆ ಮುಂತಾದ ಜಾನುವಾರುಗಳನ್ನು ಸಾಕುವುದು ವಾಡಿಕೆಯಾಗಿತ್ತು. ಎಷ್ಟೇ ಬಡವರಾಗಿದ್ದರೂ ಮನೆಯಲ್ಲಿ ಜಾನುವಾರುಗಳನ್ನು ಇಟ್ಟುಕೊಳ್ಳುವುದು ಪುಣ್ಯದ ಕೆಲಸ ಎಂದು ಭಾವಿಸುತ್ತಿದ್ದರು. ನಮ್ಮ ರಾಜ್ಯದ ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಹೈನುಗಾರಿಕೆ ಇಲ್ಲದೇ ಹೋದರೂ ಕಡಿಮೆ ಹಾಲು ಕೊಡುವ ಮಲೆನಾಡು ಗಿಡ್ಡ, ಅಮೃತಮಹಲ್, ಹಳ್ಳಿಕಾರ್ ಮುಂತಾದ ದನಗಳನ್ನು ರೈತರು ಸಾಕುತ್ತಿದ್ದರು. ಸಾಗಾಟದಲ್ಲಿ ಯಾಂತ್ರೀಕರಣವಾದ ನಂತರ ಜಾನುವಾರು ಸಾಕಣೆಗೆ ಬಹಳ ದೊಡ್ಡ ಆಘಾತವಾಯಿತೆಂದೇ […]

ಪರಿಸರ ಬೆಳೆಸಲು ಇದು ಸಕಾಲ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ 50 ವರ್ಷಗಳಿಂದೀಚೆಗೆ ಪರಿಸರದ ಬಗ್ಗೆ ಚಿಂತನೆ ಹೆಚ್ಚಾಗುತ್ತಿದೆ. ಹಿಂದೆ ‘ಅರಣ್ಯ’ ಅನ್ನುವುದು ಭಯಾನಕವಾದಂತಹ ಮತ್ತು ಕೆಲವರಿಗೆ ಲಾಭದಾಯಕವಾದಂತಹ ಸ್ಥಾನವಾಗಿತ್ತು. ಭಯಾನಕ ಎಂದರೆ ಸಾಕಷ್ಟು ಕಾಡು ಪ್ರಾಣಿಗಳು ಮತ್ತು ಬೃಹತ್ ವೃಕ್ಷಗಳು, ಹಾವು ಕೀಟಾದಿಗಳು ಇದ್ದಿದ್ದರಿಂದ ಕಾಡಿನೊಳಗೆ ಪ್ರವೇಶ ಮಾಡುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಕಾಡುಪ್ರಾಣಿಗಳು ಇವೆ ಅನ್ನುವ ಭಯವಿತ್ತು. ಇನ್ನು ಕಾಡಿನ ಉತ್ಪತ್ತಿಗಳನ್ನೆ ನಂಬಿ ಬದುಕುವವರೂ ಇದ್ದರು. ಅವರ ಪಾಲಿಗೆ ಕಾಡು ಲಾಭದಾಯಕವಾಗಿತ್ತು.ವನ್ಯಜೀವಿಗಳು ಕಡಿಮೆಯಾಗುತ್ತಾ ಹೋದಂತೆ ನಾಡು ಬೆಳೆಯುತ್ತಾ ಕಾಡು ನಾಶವಾಗುತ್ತಾ […]