ಶೌರ್ಯದ ಸಾಹಸಿಗರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಕುಟುಂಬ, ಸಮಾಜ, ದೇಶಕ್ಕೆ ಯಾವುದೇ ಸಂದರ್ಭದಲ್ಲಾದರೂ ವಿಪತ್ತು, ದುರ್ಘಟನೆಗಳು, ಆಪತ್ತುಗಳು ಎದುರಾಗಬಹುದು. ಇಂಥಾ ಸಂದರ್ಭದಲ್ಲಿ ಸರಕಾರದ ವಿಪತ್ತು ನಿರ್ವಹಣಾ ಪಡೆಗಳು, ಪೊಲೀಸರು, ಇನ್ನೂ ದೊಡ್ಡ ಘಟನೆಗಳು ನಡೆದಲ್ಲಿ ಸೇನೆಯವರು ಸಹ ಪಾಲ್ಗೊಂಡು ಜನರನ್ನು ರಕ್ಷಿಸುವ, ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುವ ಕೆಲಸವನ್ನು ಮಾಡುತ್ತಾರೆ. ವಿಪತ್ತು ನಿರ್ವಹಣೆ ತಕ್ಷಣಕ್ಕೆ ಆಗಬೇಕಾದ ಕೆಲಸ. ಇಲ್ಲಿ ಮತ್ತೆ ಮಾಡುತ್ತೇವೆ, ನಾಳೆ ನೋಡೋಣ ಎನ್ನುವಂತಿಲ್ಲ. ಇದೂ ಒಂದು ರೀತಿಯಲ್ಲಿ ನಮ್ಮ ಸೈನಿಕರು ಗಡಿಯಲ್ಲಿ ಹೋರಾಡಿದಂತೆಯೇ. ಅಲ್ಲಿ ನಮ್ಮವರ […]

ಯೋಜನೆಯ ಅರ್ಹ ಸಂಘಗಳಿಗೆ ಎನ್.ಆರ್.ಎಲ್.ಎಮ್. ಸೌಲಭ್ಯ

ಅನಿಲ್ ಕುಮಾರ್ ಎಸ್. ಎಸ್. ನಮ್ಮ ಯೋಜನೆಯ ಅರ್ಹ ಸಂಘದ ಸದಸ್ಯರಿಗೆ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಅಭಿಯಾನ (ಎನ್.ಆರ್.ಎಲ್.ಎಮ್.) ಕಾರ್ಯಕ್ರಮದ ಪ್ರಯೋಜನಗಳನ್ನು ತಲುಪಿಸುವ ನಿಟ್ಟಿನಲ್ಲಿ ಬಹಳ ದೊಡ್ಡ ಮಟ್ಟದ ಅಭಿಯಾನವನ್ನು ನಮ್ಮ ಕಾರ್ಯಕರ್ತರು ನಡೆಸುತ್ತಿದ್ದಾರೆ. ಈ ಒಂದು ಅಭಿಯಾನದಲ್ಲಿ ಅರ್ಹ ಸಂಘದ ಸದಸ್ಯರು ಉತ್ತಮ ಸಹಕಾರವನ್ನು ನೀಡುತ್ತಾ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ತಮ್ಮ ಸಂಘ ಹಾಗೂ ಸದಸ್ಯತ್ವದ ವಿವರಗಳನ್ನು ಎನ್.ಆರ್.ಎಲ್.ಎಮ್. ಪೋರ್ಟಲ್‌ನಲ್ಲಿ ದತ್ತಾಂಶಗೊಳಿಸುತ್ತಿದ್ದಾರೆ. ಕೆಲವು ಸದಸ್ಯರು ಈ ಬಗ್ಗೆ ಕಾರ್ಯಕರ್ತರು ನೀಡಿದ ಮಾಹಿತಿಯನ್ನು ಅರ್ಥೈಸಿಕೊಂಡಿದ್ದಾರೆ. ಆದರೆ ಹೆಚ್ಚಿನ […]

ಫ್ಯಾಶನ್ ಸಿಟಿ ಫ್ರಾನ್ಸ್

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ವಿದೇಶಿಗರ ಜನಜೀವನ, ಅಲ್ಲಿನ ವೈರುಧ್ಯ, ಸಾಂಸ್ಕೃತಿಕ ಸೊಬಗು, ನಿತ್ಯದ ಆಗುಹೋಗುಗಳು ನಮ್ಮಲ್ಲೂ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತವೆ. ಅಲ್ಲಿಯ ಅಭಿವೃದ್ಧಿ ಕೆಲಸಗಳನ್ನು ನಮ್ಮ ದೇಶ, ನಮ್ಮ ರಾಜ್ಯದಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಂಡು ನಾವು ಇನ್ನಷ್ಟು ಪ್ರಗತಿಯನ್ನು ಕಾಣಬಹುದು ಹಾಗೂ ಅಲ್ಲಿನ ಧನಾತ್ಮಕ ವಿಚಾರಗಳನ್ನು ನಾವು ಯಾವ ರೀತಿ ಅಳವಡಿಸಿಕೊಳ್ಳಬಹುದು ಎನ್ನುವ ಚಿಂತನೆಗೆ ವಿದೇಶ ಪ್ರವಾಸಗಳು ಒಂದು ಉತ್ತಮ ವೇದಿಕೆ. ಯಾವುದೇ ದೇಶಗಳಿಗೆ ಹೋದರೂ ಅಲ್ಲಿನ ಕೃಷಿಕರ, ಕಾರ್ಮಿಕರ ಜೊತೆ ಮಾತನಾಡುತ್ತೇನೆ. ಅವರ ಚಿಂತನೆ, […]

ಸಾಮಾಜಿಕ ಸೇವೆಯಿಂದ ಸಂತೋಷ

ಡಾ| ಎಲ್. ಎಚ್. ಮಂಜುನಾಥ್ ಇಂದಿನ ದಿನಮಾನಗಳಲ್ಲಿ ಸಮಾಜಸೇವೆ ಎಂಬ ಶಬ್ದವನ್ನು ಹಲವಾರು ಅರ್ಥಗಳಲ್ಲಿ ವಿಶ್ಲೇಷಿಸಲಾಗುತ್ತದೆ. ಪ್ರತಿಯೊಂದು ಊರಿನಲ್ಲಿಯೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಸಹೃದಯಿ ಸೇವಕರು ಇದ್ದೇ ಇರುತ್ತಾರೆ. ಅವರು ಯಾವುದೇ ಪ್ರಚಾರವನ್ನು ಬಯಸುವುದಿಲ್ಲ. ನಿರೀಕ್ಷೆಗಳನ್ನೂ ಇಟ್ಟುಕೊಳ್ಳುವುದಿಲ್ಲ. ತಾವು ಇತರರಿಗೆ ನೀಡುವ ಸೇವೆಯಿಂದಲೇ ಅವರು ತೃಪ್ತಿಯನ್ನು ಪಡೆಯುತ್ತಾರೆ. ಆದುದರಿಂದ ಇಂತಹ ವ್ಯಕ್ತಿಗಳನ್ನು ಸಮಾಜಸೇವಕರೆಂದು ಕರೆಯುವುದಕ್ಕಿಂತ ‘ಸಾಮಾಜಿಕ ಸೇವಕ’ರೆಂದು ಕರೆಯುವುದು ಹೆಚ್ಚು ಅರ್ಥಪೂರ್ಣ ಎಂದು ನನಗೆ ಅನಿಸುತ್ತದೆ.ತನಗಿಂತ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಸಂವೇದನಾಶೀಲತೆ ಎಲ್ಲರಲ್ಲಿಯೂ ಸುಪ್ತವಾಗಿ ಇರುತ್ತದೆ. ಕಾಲಕಳೆದಂತೆ […]