ಜೀವಜಲ

‘ನೀರು ಉಳಿಸಿ’ ಎಂಬ ಅಭಿಯಾನ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆರಂಭಗೊAಡಿದೆ. ಇಂದಿನ ದಿನಮಾನಕ್ಕೆ ಇದು ಅತ್ಯಂತ ಅಗತ್ಯವಾದ ಕಾರ್ಯಕ್ರಮ, ‘ಹನಿಗೂಡಿ ಹಳ್ಳ’ ಎಂಬ ಮಾತಿದೆ. ಹನಿ-ಹನಿ ಸೇರಿದಾಗ ಹೇಗೆ ಹಳ್ಳವಾಗಲು ಸಾಧ್ಯವಿದೆಯೋ ಹಾಗೆಯೇ ಹನಿ-ಹನಿಯಾಗಿ ನೀರು ಸೋರಿದಾಗಲೂ ಹಳ್ಳದಷ್ಟು ನೀರು ವ್ಯರ್ಥವಾಗುವುದಕ್ಕೆ ಸಾಧ್ಯವಿದೆ.ಹೆಚ್ಚಿನ ಮನೆಗಳಲ್ಲಿ ಅಡುಗೆ ಮನೆ, ಸ್ನಾನದ ಮನೆ ಹೀಗೆ ಎಲ್ಲಾದರೊಂದು ಕಡೆ ಸೋರುವ ನಳ್ಳಿಗಳು ಇದ್ದೇ ಇರುತ್ತವೆ. ಆದರೆ ಅತ್ತ ಕಡೆ ಮನೆಯವರು ಗಮನ ಕೊಡುವುದು ಕಡಿಮೆ. ಜೊತೆಗೆ ಬೇಕಾದಾಗ ರಿಪೇರಿಯವರೂ ಸಿಗುವುದಿಲ್ಲ.ಇತ್ತೀಚೆಗೆ ಪತ್ರಿಕೆಯಲ್ಲೊಂದು […]