ನಮ್ಮ ಗಣೇಶ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಕ್ಕಳು ಚಿಕ್ಕಂದಿನಲ್ಲಿ ದೇವರ ಬಳಿಗೆ ಬರಬೇಕಾದರೆ ಅವರಿಗೆ ದೇವರ ಬಗೆಗಿನ ಅನೇಕ ಕಥೆಗಳನ್ನು ಹೇಳಬೇಕಾಗುತ್ತದೆ. ಅದರಲ್ಲೂ ಮಕ್ಕಳಿಗೆ ಇಷ್ಟವಾಗುವ ಬಾಲ್ಯದ ಬಹಳಷ್ಟು ರೋಚಕ ಕತೆಗಳನ್ನು ಹೊಂದಿರುವ ದೇವರೆಂದರೆ ಕೃಷ್ಣ ಮತ್ತು ಗಣೇಶ. ಇತ್ತೀಚೆಗೆ ಗಣೇಶೋತ್ಸವ ಬಂದು ಹೋಗಿದೆ. ಮಕ್ಕಳನ್ನು ದೇವಸ್ಥಾನಕ್ಕೆ, ಗಣೇಶನ ಮೆರವಣಿಗೆ ನೋಡುವುದಕ್ಕೆ ಕರೆದುಕೊಂಡು ಹೋಗಿರುತ್ತೀರಾ, ಆದರೆ ಎಷ್ಟು ಜನ ಗಣೇಶನ ಕತೆ ಹೇಳಿದ್ದೀರಾ? ವಿಘ್ನವಿನಾಶಕ, ಬುದ್ಧಿಪ್ರದಾಯಕ, ಸಕಲ ವಿದ್ಯೆ ಕಲೆ ಸಾಹಿತ್ಯಕ್ಕೆ ದೇವರು ಈ ವಿನಾಯಕ. ಗಣೇಶ ಅಂದರೆ […]

ಬ್ಯಾಂಕ್ ಮ್ಯಾನೇಜರ್‌ನ ನೋವು

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ದಾಖಲೆಗಳು, ಅರ್ಹತೆ, ಉದ್ದೇಶಗಳು ಸಮರ್ಪಕವಾಗಿರದೇ ಸಾಮಾನ್ಯರಿಗೆ ಬ್ಯಾಂಕಿನಿoದ ಸಾಲ ಸಿಗದೇ ಇರುವುದರ ಬಗ್ಗೆ ತಿಳಿಸಿದೆ. ಒಂದು ವೇಳೆ ಇವೆಲ್ಲಾ ಸಮರ್ಪಕವಾಗಿದ್ದರೂ ಕೊನೆಗೆ ಬ್ಯಾಂಕಿನ ಜಾತಕದಲ್ಲಿ ದೋಷ ಕಂಡು ಬಂದು ಇವರಿಗೆ ಸಾಲ ಸಿಗದೇ ಇರಬಹುದು. ಅಚ್ಚರಿ ಪಡಬೇಡಿ, ಜಾತಕ ಎಂದರೆ ಜೋತಿಷ್ಯ ಶಾಸ್ತçದ ಜಾತಕ ಅಲ್ಲ, ಅದು ವ್ಯವಹಾರ ಜೀವನದ ಜಾತಕ. ಅದಕ್ಕೆ ಸಿಬಿಲ್(CIBIL) ಎನ್ನುತ್ತಾರೆ. ಸಿಬಿಲ್ ಎನ್ನುವುದು ಒಬ್ಬ ವ್ಯಕ್ತಿಯ ಸಾಲ ವ್ಯವಹಾರಗಳ ಗುಣಮಟ್ಟ, ಪ್ರಾಮಾಣಿಕತೆ ಹಾಗೂ […]

ಚಿಂತೆಯಿಂದ ದೂರವಿರೋಣ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಚಿತೆ ಮತ್ತು ಚಿಂತೆಗೆ ಬಿಂದು ಮಾತ್ರ ವ್ಯತ್ಯಾಸ ಎಂಬುದನ್ನು ನಾವು ಕೇಳಿದ್ದೇವೆ. ಚಿಂತೆಯಿoದ ಮನುಷ್ಯನ ದೇಹ, ಇಂದ್ರಿಯ, ಮನಸ್ಸು ಮತ್ತು ಕರ್ಮ ಎಲ್ಲವೂ ಕರಗಲು ಪ್ರಾರಂಭವಾಗುತ್ತದೆ. ಚಿಂತೆಯನ್ನುoಟು ಮಾಡುತ್ತಿರುವ ವಿಷಯದ ಬಗ್ಗೆ ನಮಗಿರುವ ಕಾಳಜಿ, ಅವಶ್ಯಕತೆ, ಪ್ರೀತಿ, ಪ್ರೇಮ ಮುಂತಾದ ಭಾವಗಳು ಈ ಚಿಂತೆಯ ಮೂಲ. ಊಹಾತ್ಮಕ ಚಿಂತೆಗಳು ಕೂಡಾ ಮನುಷ್ಯನನ್ನು ದಹಿಸಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಸಂಸಾರದಲ್ಲಿ ಬರುವಂಥ ಸಣ್ಣಪುಟ್ಟ ವಿಚಾರಗಳೂ, ದಾಂಪತ್ಯದಲ್ಲಿ ತಂದೆ ತಾಯಿ ಮತ್ತು ಮಕ್ಕಳ ಮಧ್ಯೆ, ವ್ಯವಹಾರದಲ್ಲಿ, […]

75 ವರ್ಷಗಳ ಸಾರ್ಥಕ ಬದುಕು

ಡಾ| ಎಲ್.ಎಚ್. ಮಂಜುನಾಥ್ ಪರರಿಗೆ ಸದಾ ಉಪಕಾರ ಮಾಡುವುದನ್ನು ಜಗತ್ತಿಗೆ ಎಲ್ಲಾ ಧರ್ಮಗಳು ಬೋಧಿಸುತ್ತಿವೆ. ಆದರೆ ಇದನ್ನು ಮನಃಪೂರ್ತಿಯಾಗಿ ಅನುಷ್ಠಾನ ಮಾಡುವವರು ಜಗತ್ತಿನಲ್ಲಿ ಅತಿ ವಿರಳ. ಅದೇ ರೀತಿ ಮಾನವ ಕುಲದಲ್ಲಿ ಯಾವುದಾದರೊಂದು ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ಸಾಧನೆ ಮಾಡುವವರು ಬಹಳಷ್ಟಿರಬಹುದು. ಆದರೆ ಮನುಕುಲದ ಒಳಿತನ್ನೇ ಮನದಲ್ಲಿಟ್ಟುಕೊಂಡು, ಹಲವಾರು ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕನಸು ಕಂಡು ನನಸು ಮಾಡುವವರನ್ನು ದಾರ್ಶನಿಕನೆಂದು (Visionary) ಸಮಾಜ ಗುರುತಿಸುತ್ತದೆ. ಇಂಥoವರನ್ನು ಭಾವನಾಜೀವಿ, ಕಲ್ಪನಾವಿಹಾರಿ ಎಂದೂ ಕರೆಯಬಹುದಾಗಿದೆ.ಇಂತಹ ದಿವ್ಯ ಚಕ್ಷಗಳನ್ನೊಳಗೊಂಡ ನಮ್ಮೆಲ್ಲರ ಆರಾಧ್ಯಮೂರ್ತಿ ಧರ್ಮಸ್ಥಳದ […]