ಗೋಮಾತೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆಸುಟ್ಟರೇ ನೊಸಲಿಗೆ ವಿಭೂತಿಯಾದೆತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆನೀನಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವು ನಾನು.ಎಸ್. ಜಿ. ನರಸಿಂಹಾಚಾರ್‌ರವರ ಈ ಕವಿತೆಯ ಮೂಲಕ ಗೋವುಗಳಿಂದಾಗುವ ಪ್ರಯೋಜನಗಳ ಅರಿವು ನಮಗಾಗುತ್ತದೆ. ಹಾಲು, ಮೊಸರು ಕಡೆದಾಗ ಬರುವ ಬೆಣ್ಣೆಯಿಂದ ತುಪ್ಪವಾಗಿ, ಕೃಷಿಕರಿಗೆ ಸೆಗಣಿ ಮತ್ತು ಗೊಬ್ಬರವಾಗಿ, ಉಳುಮೆಗೆ ಎತ್ತುವಾಗಿ, ಋಷಿ ಮುನಿಗಳಿಗೆ ಧಾರ್ಮಿಕ ಕ್ರಿಯಾ ವಿಧಾನಗಳಿಗೆ, ವಿಭೂತಿಯಾಗಿ ಹೀಗೆ ಗೋವುಗಳಿಂದಾಗುವ ಪ್ರಯೋಜನಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.ದನದ ಹಾಲನ್ನು ಅಮೃತಕ್ಕೆ ಸಮಾನವಾಗಿ ಹೋಲಿಸಲಾಗುತ್ತದೆ. ಯಾಕೆಂದರೆ […]
ಬ್ಯಾಂಕ್ ಮ್ಯಾನೇಜರ್‌ನ ನೋವು
ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್. ತನ್ನ ತಪ್ಪಿನಿಂದಾಗಿ ಸಾಲದ ವ್ಯವಹಾರಗಳನ್ನು ಹಾಳುಮಾಡಿಕೊಂಡು ಅಥವಾ ಯಾರಿಗೂ ಜಾಮೀನು ಹಾಕಿ ‘ಸಿಬಿಲ್’ನಲ್ಲಿ ತನ್ನ ಅಂಕಗಳನ್ನು ಕಳೆದುಕೊಂಡು ಕೊನೆಗೂ ಯಾವುದೇ ಸಾಲ ಪಡೆಯಲಾಗದೆ ಪರಿತಪಿಸುವವರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿಸಿದ್ದೆ. ಇದಾದರೂ ಹೆಚ್ಚು ಕಡಿಮೆ ಸ್ವಯಂಕೃತ ಅಪರಾಧದಿಂದ ಆಗಿದ್ದಾಗಿದೆ. ಆದರೆ ಇನ್ನೊಂದು ಸಮಸ್ಯೆ ಬಹಳ ವಿಚಿತ್ರವಾಗಿರುವಂತದ್ದು. ಯಾವುದೇ ಸಾಲ ಪಡೆಯಲು ಸಾಮಾನ್ಯವಾಗಿ ಓರ್ವ ಜಾಮೀನುದಾರ ಬೇಕಾಗಿರುತ್ತದೆೆ. ಸಾಲಕ್ಕಾಗಿ ಹೇಗೋ ಕಷ್ಟಪಟ್ಟು ಆದಾಯವಿರುವ ಓರ್ವ ಜಾಮೀನುದಾರನನ್ನು ಹುಡುಕುತ್ತಾರೆ. ಆದರೆ ಕೊನೆಯಲ್ಲಿ ಅವರ ಸಿಬಿಲ್ […]
ದೇವಾಲಯ ಎಂಬ ಪವಿತ್ರ ಕ್ಷೇತ್ರ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ಜಗತ್ತು ನಂಬಿಕೆ, ಆತ್ಮವಿಶ್ವಾಸ, ಸತ್ಯ, ಧರ್ಮಗಳ ಆಧಾರದಲ್ಲೆ ನಿಂತಿದೆ. ಪ್ರತಿಯೊಂದು ಧರ್ಮದವರಿಗೂ ಅವರದ್ದೇ ಆದ ಧಾರ್ಮಿಕ ಶ್ರದ್ಧಾಕೇಂದ್ರಗಳಿವೆ. ಈ ಶ್ರದ್ಧಾಕೇಂದ್ರಗಳು ಮಾನವೀಯ ಮೌಲ್ಯಗಳನ್ನು ಕಲಿಸುವ, ಬೆಳೆಸುವ, ಉಳಿಸುವ ಕೆಲಸದ ಜೊತೆಗೆ ಸಮಾಜವನ್ನು ಸಮಾನತೆ, ನಂಬಿಕೆಯ ಕೊಂಡಿಯಲ್ಲಿ ಕಟ್ಟುವ ಪ್ರಯತ್ನವನ್ನು ಮಾಡುತ್ತಿವೆ. ದೇವರಿದ್ದಾನೆ ಎಂದು ನಂಬುವವರಿಗೆ ಕಷ್ಟಗಳು ಎದುರಾದಾಗ, ಸುಖಗಳು ಬಂದಾಗ ಶ್ರದ್ಧಾಕೇಂದ್ರಗಳ ಮೊರೆ ಹೋಗುತ್ತಾರೆ. ಅಲ್ಲಿ ಸಿಗುವ ನೆಮ್ಮದಿ, ಧನಾತ್ಮಕ ಅಂಶಗಳು ಬೇರೆಲ್ಲೂ ಸಿಗಲಾರದು. ಆದ್ದರಿಂದಲೇ ವರ್ಷದುದ್ದಕ್ಕೂ ಧಾರ್ಮಿಕ ಕ್ಷೇತ್ರಗಳು […]
ಬದಲಾಗುತ್ತಿರುವ ಭಾರತ ವಿಶ್ವಕಪ್ ಕ್ರಿಕೆಟ್‌ನಲ್ಲಿ ನಮ್ಮ ಸಾಧನೆ
ಡಾ| ಎಲ್.ಎಚ್. ಮಂಜುನಾಥ್ ಇದೀಗ ಭಾರತದೆಲ್ಲೆಡೆ ಕ್ರಿಕೆಟ್ ಜ್ವರ. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತ ಅದ್ವಿತೀಯವಾದ ಸಾಧನೆಯನ್ನು ಮಾಡುತ್ತಿದೆ. ಈ ಲೇಖನ ಅಚ್ಚಿಗೆ ಹೋಗುವಾಗ ವಿಶ್ವಕಪ್ ಅಂತಿಮ ಹಣಾಹಣಿಗೆ ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಇದೆ. ಫೈನಲ್‌ನಲ್ಲಿ ಏನೇ ಆಗಲಿ, ಭಾರತ ಈ ತಿಂಗಳಿನಲ್ಲಿ ತೋರಿಸಿದ ಸಾಧನೆ ಎಲ್ಲರನ್ನು ನಿಬ್ಬೆರಗಾಗಿಸಿದೆ. ತಾನು ಆಡಿದ ಹತ್ತು ಪಂದ್ಯಗಳಲ್ಲಿ ವಿವಿಧ ಸಾಮರ್ಥ್ಯಗಳ ಸ್ಪರ್ಧಿಗಳನ್ನು ಸೋಲಿಸಿದೆ. ಈ ಗೆಲುವು, ಯಶಸ್ಸು ಭಾರತೀಯರ ಬದಲಾದ ಮನಸ್ಥಿತಿಯನ್ನು ಎತ್ತಿತೋರಿಸುತ್ತಿದೆ.ಬ್ರಿಟಿಷರ ಆಟವೆಂದು ಕರೆಯಲ್ಪಡುತ್ತಿದ್ದ […]