ನಮ್ಮ ಪಾಲೆಷ್ಟು?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಅನೇಕ ದೇಗುಲಗಳಲ್ಲಿ ದೊಡ್ಡ ನಾಮಫಲಕಗಳಲ್ಲಿ ದಾನಿಗಳ ಹೆಸರು ಬರೆದಿರುವುದನ್ನು ನಾವು ನೋಡುತ್ತೇವೆ. ಹತ್ತು, ಐದು ಲಕ್ಷ ರೂಪಾಯಿ ದಾನ ಮಾಡಿದವರ ಹೆಸರು ಮೇಲಿನ ಸಾಲಿನಲ್ಲಿರುತ್ತದೆ. ತಿಂಗಳಿಗೆ ಹತ್ತು ಲಕ್ಷ ರೂಪಾಯಿ ಆದಾಯ ಇರುವವನು ಒಂದು ಲಕ್ಷ ರೂಪಾಯಿ ದಾನ ಮಾಡಿರುತ್ತಾನೆ. ಅಂದರೆ ಅದು ಅವನ ಆದಾಯದ ಹತ್ತನೇ ಒಂದು ಅಂಶ. ಅದೇ ರೀತಿ ಕೆಳಗಿನ ಸಾಲಿನಲ್ಲಿರುವ ವ್ಯಕ್ತಿಯೊಬ್ಬ ಒಂದು ಸಾವಿರ ರೂಪಾಯಿ ದಾನ ಮಾಡಿರುತ್ತಾನೆ. ಅಂದರೆ ಆತನ ಸಂಪಾದನೆ 10 ಸಾವಿರವಾದರೆ […]

ಆಯ್ದ ಉದ್ದೇಶಗಳಿಗೆ ಮಾತ್ರ ಬ್ಯಾಂಕ್‌ ಸಾಲ

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ ಕಳೆದ ಸಂಚಿಕೆಯಲ್ಲಿ ಬ್ಯಾಂಕ್‌ನಿ0ದ ಗೃಹಸಾಲ ಪಡೆಯಲು ಎಲ್ಲಾ ರೀತಿಯಲ್ಲಿ ಪ್ರಯತ್ನಪಟ್ಟು ಬ್ಯಾಂಕ್‌ನ ವಕೀಲರಿಂದ ಅರ್ಹ ಲೀಗಲ್ ಒಪಿನಿಯನ್ ಪಡೆದ ಮೇಲೂ ಕೂಡಾ ಕೆಲವೊಂದು ವಿಚಾರದಲ್ಲಿ ಬ್ಯಾಂಕ್‌ನ ಇಂಜಿನಿಯರ್‌ಗಳು ತಮ್ಮ ವಿಚಕ್ಷಣೆಯಲ್ಲಿ ಕೆಲವು ತಪಾವತುಗಳನ್ನು ಗುರುತಿಸಿ ಕೊನೆಯಲ್ಲಿ ಸಾಲದ ಅರ್ಜಿ ತಿರಸ್ಕೃತವಾಗಿ ಪಟ್ಟ ಎಲ್ಲಾ ಶ್ರಮ ವ್ಯರ್ಥ ಆದ ಬಗ್ಗೆ ತಿಳಿದೆವು.ಒಂದು ಶಿಸ್ತುಬದ್ಧ ಅರ್ಥ ವ್ಯವಸ್ಥೆಯಲ್ಲಿ ಬ್ಯಾಂಕ್ ವಿಧಿಸುವ ನಿಯಮಗಳೆಲ್ಲವೂ ಅಗತ್ಯವಾಗಿದೆ. ಆದರೆ ಸಾಮಾನ್ಯ ಜನರಿಗೆ, ಅದರಲ್ಲೂ ಬಡವರಿಗೆ ಆ ನಿಯಮಗಳನ್ನು […]

ಶಿಕ್ಷಣ ಮತ್ತು ಕೌಶಲ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಾರತದಲ್ಲಿ ನೆಲ, ಜಲ ಮಾತ್ರವಲ್ಲದೆ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಈ ಸಂಪನ್ಮೂಲಗಳನ್ನು ಹೇಗೆ, ಯಾವಾಗ, ಯಾವ ರೀತಿಯಲ್ಲಿ ಬಳಸಬೇಕೆಂಬ ಅರಿವು ಇದ್ದಾಗ ಮಾತ್ರ ಸಂಪನ್ಮೂಲಗಳು ಪೋಲಾಗದೆ ಸದ್ಬಳಕೆಯಾಗುತ್ತವೆ. ಆ ಮೂಲಕ ನಮ್ಮ ನಾಡು ಅಭಿವೃದ್ಧಿ ಹೊಂದುತ್ತದೆ. ಆ ಅರಿವು ಹುಟ್ಟಿನಿಂದಲೇ ದೊರೆಯುವಂತದ್ದಲ್ಲ. ಅದು ಮನೆ, ಸಮಾಜ, ಶಾಲಾ, ಕಾಲೇಜುಗಳಲ್ಲಿ ಶಿಕ್ಷಣದ ಮೂಲಕ ಪಡೆಯುವಂಥದ್ದು. ಹಾಗೆಂದು ಜ್ಞಾನವನ್ನು ಕೇವಲ ಶಾಲಾ, ಕಾಲೇಜು ಕಲಿಕೆಗೆ ಸೀಮಿತಗೊಳಿಸುವ ಹಾಗಿಲ್ಲ. ಜ್ಞಾನಾರ್ಜನೆ ಹರಿಯುವ ನೀರಿನಂತೆ ನಿತ್ಯ ನಿರಂತರ.ಬುದ್ಧಿ, […]

ನಿವೃತ್ತಿಯ ನೆರಳಿನಲ್ಲಿ

ಡಾ| ಎಲ್.ಎಚ್. ಮಂಜುನಾಥ್ ನಿರಂತರ ಪ್ರಗತಿ ಪತ್ರಿಕೆಯ ಪ್ರಾರಂಭದಿ0ದಲೂ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ನಾನು ಕೆಲಸ ಮಾಡುತ್ತಾ ಬಂದಿದ್ದೇನೆ. ನೋಡನೋಡುತ್ತಿದ್ದಂತೆ ಓದುಗರ ಆಶೀರ್ವಾದದಿಂದ ಪತ್ರಿಕೆಯು ಜನಪ್ರಿಯವಾಗುತ್ತಾ ಬೆಳೆದಿದೆ. ಕಾಲಕಾಲಕ್ಕೆ ಬದಲಾದ ಸಂಪಾದಕೀಯ ಮಂಡಳಿಯ ಪ್ರಯತ್ನಗಳಿಂದಾಗಿ ‘ನಿರಂತರ ಪ್ರಗತಿ’ ಪತ್ರಿಕೆಯ ಹೂರಣ ಸಾಕಷ್ಟು ಸಮೃದ್ಧವಾಗಿದೆ. ಪೂಜ್ಯರು ಬರೆಯುವ ‘ಅಧ್ಯಕ್ಷರ ನಲ್ನುಡಿ’ ಮತ್ತು ಹೇಮಾವತಿ ಅಮ್ಮನವರ ‘ಗೆಳತಿ’ ಅಂಕಣಗಳು ಪತ್ರಿಕೆಯ ಜನಪ್ರಿಯ ಅಂಕಣಗಳಾಗಿವೆ. ಜೊತೆಯಲ್ಲಿ ಕಳೆದ 20 ವರ್ಷಗಳಿಂದ ಪ್ರತಿ ತಿಂಗಳಿಗೊ0ದರ0ತೆ ಜ್ವಲಂತ ವಿಷಯಗಳ ಬಗ್ಗೆ ‘ನಿರ್ದೇಶಕರ ನಿವೇದನೆ’ ಎಂಬ […]