ಮಾಸಾಶನ ಪಡೆಯುವವರ ಮನೆ ಸ್ವಚ್ಛತೆ

ಬೆಳಗಾವಿ ಜಿಲ್ಲೆಯ ಯೋಜನೆಯ ಕರ‍್ಯರ‍್ತರ ಮಾದರಿ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಶ್ರೀ ಹೆಗ್ಗಡೆ ದಂಪತಿಗಳ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಜೊತೆಗೆ ಅವರಿಂದ ಪ್ರೇರಣೆ ಪಡೆದು ತಾವು ಕೂಡಾ ಒಂದಲ್ಲೊoದು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಯಾವುದೇ ಪ್ರಚಾರವನ್ನು ಬಯಸದೆ ಅವರು ಮಾಡುವ ಸೇವೆಗಳು ಇತರರಿಗೆ ಮಾದರಿಯಾಗಬೇಕೆಂಬ ನಿಟ್ಟಿನಲ್ಲಿ ‘ನಿರಂತರ ಪತ್ರಿಕೆ’ ಅವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಈ ಬಾರಿ ಯೋಜನೆ ವ್ಯಾಪ್ತಿಯ ಬೆಳೆಗಾವಿ 2 ಜಿಲ್ಲೆಯ ಯೋಜನೆಯ ಕಾರ್ಯಕರ್ತರು […]

ಯೋಜನೆಯನ್ನು ಕಟ್ಟಿ ಬೆಳೆಸಿದವರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಎಚ್. ಮಂಜುನಾಥ್‌ರವರು ಎಲ್ಲರಿಗೂ ಚಿರಪರಿಚಿತರು. ಯೋಜನೆಯಲ್ಲಿ ಸುಮಾರು 23 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಅವರು ಇದೀಗ ನಿವೃತ್ತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಇತರರಿಗೆ ಪ್ರೇರಣೆಯಾಗಬಲ್ಲ ಅವರ ಕೆಲವು ವಿಶೇಷ ಗುಣಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಯೋಜನೆಗೆ ಸೇರಿದ ಆರಂಭದ ದಿನ ಅಪಘಾತವಾಗಿ ಒಂದು ಕೈಯನ್ನು ಕುತ್ತಿಗೆಗೆ ಕಟ್ಟಿಕೊಂಡು ಬಂದಿದ್ದ ನೆನಪು. ಕೈ ನೋವಿದ್ದರೂ ‘ನನಗೆ ವಿಶ್ರಾಂತಿ ಬೇಕು, ನೋವು ಗುಣಮುಖವಾದ ಮೇಲೆ ಕೆಲಸಕ್ಕೆ […]

ಲಕ್ಷಾಂತರ ಬಡವರ ಬೆನ್ನಿಗೆ ನಿಂತ ನಡೆದಾಡುವ ದೇವರು

ಅನಿಲ್ ಕುಮಾರ್ ಎಸ್.ಎಸ್. ಕಳೆದ ಸಂಚಿಕೆಗಳಲ್ಲಿ ಸಾಮಾನ್ಯವಾಗಿ ಬ್ಯಾಂಕ್‌ನಿoದ ಸಾಲ ಪಡೆಯಬೇಕಾದಲ್ಲಿ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು, ಅಡಮಾನಗಳು, ಗ್ಯಾರಂಟಿಗಳು ಜೊತೆಗೆ ಎಂತಹ ಉದ್ದೇಶಗಳಿಗೆ ಮಾತ್ರ ಸಾಲ ಸಿಗುತ್ತದೆ ಎಂದು ತಿಳಿದುಕೊಂಡಿದ್ದೆವು. ಈ ಎಲ್ಲಾ ಅರ್ಹತೆಗಳು ಮತ್ತು ಉದ್ದೇಶಗಳು ಸಾಮಾನ್ಯ ಜನರಿಗೆ, ಬಡವರಿಗೆ ಸುಲಭವಾಗಿ ಕೈಗೆಟಕದೆ, ಕಡಿಮೆ ಬಡ್ಡಿ ದರದ ಬ್ಯಾಂಕ್ ಸಾಲಗಳಿಂದ ಅವರು ವಂಚಿತರಾಗುತ್ತಿದ್ದರು. ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿoದ ಸಾಲ ಪಡೆದು ದುಬಾರಿ ಬಡ್ಡಿ ತೆತ್ತು, ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡಾಗುವ ಸಂದರ್ಭಗಳಿತ್ತು. ಈ ರೀತಿ ವಂಚಿತರಾಗುವ […]

ಮಾದರಿ ನಾಯಕ ಮಂಜುನಾಥ್

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನನ್ನ ಅನುಭವದಲ್ಲಿ ನಮ್ಮ ಜೊತೆಗೆ ಸೇವೆ ಮಾಡಲು ಬಂದವರು ಶ್ರೀ ಮಂಜುನಾಥ ಸ್ವಾಮಿಯಿಂದ ಆಯ್ಕೆಯಾಗಿ ಬಂದವರೆ0ದು ನಾನು ಹೇಳುತ್ತೇನೆ. ಯಾಕೆಂದರೆ ಅವರು ಸಂಸ್ಥೆಗಾಗಿ ವಿಶೇಷ ಕೆಲಸಗಳನ್ನು, ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಅನೇಕರು ನನ್ನಲ್ಲಿ ಹೇಳುವುದುಂಟು ‘ನಿಮಗೆ ಇಷ್ಟು ಒಳ್ಳೆಯ ಕಾರ್ಯಕರ್ತರು ಹೇಗೆ ಸಿಗುತ್ತಾರೆ? ನಮಗೆ ಸಿಗುವುದಿಲ್ಲ’ ಎಂದು. ಡಾ| ಎಲ್. ಎಚ್. ಮಂಜುನಾಥ್‌ರವರ ಬಗ್ಗೆ ‘ಅಂತಹ ಮನುಷ್ಯ ಹೇಗೆ ಸಿಕ್ಕಿದರು? ನಮಗೂ ಅಂತವರು ಸಿಗುತ್ತಿದ್ದರೆ ನಾವು ಕೂಡಾ ಸಾಕಷ್ಟು ಸಾಧನೆ ಮಾಡುತ್ತಿದ್ದೆವಲ್ಲ’ […]

ದಾನ ಪರಂಪರೆಗೆ ಹೊಸ ಭಾಷ್ಯ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ನನ್ನ ಎಲ್ಲಾ ಆತ್ಮೀಯ ‘ನಿರಂತರ’ ಓದುಗರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶುಭಾಶಯಗಳು.ಶ್ರೀ ಕ್ಷೇತ್ರ ಧರ್ಮಸ್ಥಳದ ಅನೇಕ ಶತಮಾನಗಳ ‘ಚತುರ್ದಾನ’ ಪರಂಪರೆಯನ್ನು ಕೈ ದಾನದಿಂದ ಸಾಂಸ್ಥಿಕ ದಾನಕ್ಕೆ ಉನ್ನತೀಕರಿಸಿದವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು. ಅನ್ನದಾನ, ವಿದ್ಯಾದಾನ, ಔಷಧದಾನ ಹಾಗೂ ಅಭಯದಾನಗಳು ಪಾರಂಪರಿಕವಾಗಿ ಕೈ ದಾನದ ಮೂಲಕ ಧರ್ಮಸ್ಥಳದಲ್ಲಿ ಅನಾದಿ ಕಾಲದಿಂದಲೂ ಯಥೇಚ್ಛವಾಗಿ ನಡೆಯುತ್ತಿತ್ತು. ಶ್ರೀ ಹೆಗ್ಗಡೆಯವರು ಈ ಚತುರ್ದಾನಗಳಿಗೆ ಸಾಂಸ್ಥಿಕ ರೂಪುರೇಷೆಗಳನ್ನು ಕೊಟ್ಟು, ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ […]