ಬ್ಯಾಂಕ್‌ಗಳಿಗೆ ದೇಶದಲ್ಲೆ ಅತಿದೊಡ್ಡ ಬಿ.ಸಿ.ಯಾಗಿ ಯೋಜನೆ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ನಡೆದಾಡುವ ದೇವರು ಲಕ್ಷಾಂತರ ಬಡವರ ಬದುಕಿಗಾಗಿ ಬ್ಯಾಂಕ್‌ಗಳಿಗೆ ಭದ್ರತೆಯಾಗಿ ನೀಲ್ಲುವಂತಹ ಮಹಾ ತ್ಯಾಗವನ್ನು ಮಾಡಿದ್ದಾರೆಂದು ವಿವರಿಸಿದ್ದು ಅದು ಕೇವಲ ಬಾಯಿ ಮಾತಾಗಿರಲಿಲ್ಲ. ಬದಲಾಗಿ ಅತ್ಯುನ್ನತ ಸಾಂಸ್ಥಿಕ ವ್ಯವಸ್ಥೆಯಾಗಿತ್ತು. ತನ್ನ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಕಟ್ಟಿ ಬೆಳೆಸಿ, ಈ ಒಂದು ಗುರುತರವಾದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲು ವ್ಯವಸ್ಥೆಯನ್ನು ರೂಪಿಸಿದರು. ಒಂದು ‘ಚಾರಿಟೇಬಲ್ ಟ್ರಸ್ಟ್’ ಆಗಿ ಬ್ಯಾಂಕ್‌ಗಳೊಂದಿಗೆ ಸಾಂಸ್ಥಿಕ ನೆಲೆಯಲ್ಲಿ ಬ್ಯಾಂಕಿನ ಪ್ರತಿನಿಧಿಯಾಗಿ […]