ದೊಡ್ಡ ಮೌಲ್ಯವುಳ್ಳ ಚಿಕ್ಕ ಕೆಲಸ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಇಡೀ ಪ್ರಪಂಚಕ್ಕೆ ಏನಾದರೂ ಸಹಾಯ ಮಾಡಬೇಕು ಅಥವಾ ತನ್ನ ದೇಶದ ಜನರಿಗೆ, ಪ್ರಾಣಿ-ಪಕ್ಷಿಗಳಿಗೆಲ್ಲ ಪ್ರಯೋಜನವಾಗುವಂತಹ ಒಂದು ಒಳ್ಳೆಯ ಕೆಲಸ ಮಾಡಬೇಕು. ಆದರೆ ನಾನೇನು ಮಾಡಲಿ ನನ್ನಲ್ಲಿ ಹಣವಿಲ್ಲ, ಜನವಿಲ್ಲ, ಅಧಿಕಾರ ಬಲವಿಲ್ಲ ಎನ್ನುವ ಯೋಚನೆ ಇಲ್ಲದೆ ಮಾಡಬಹುದಾದ ಬಹಳ ಸರಳ ಮತ್ತು ಸುಲಭವಾದ ಕೆಲಸವೆಂದರೆ ಅದು ‘ಒಂದು ಗಿಡವನ್ನು ನೆಟ್ಟು ಬೆಳೆಸುವುದು.’ ಈ ಜಗತ್ತನ್ನು ಉಳಿಸಬಲ್ಲವರು ಯಾರಾದರೂ ಇದ್ದರೆ ಅದು ಮರವಲ್ಲದೆ ಮನುಷ್ಯರಲ್ಲ. ಮನುಷ್ಯ ಮಾಡುತ್ತಿರುವ ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಒಳ್ಳೆಯ […]

ಬ್ಯಾಂಕ್‌ಗಳಿಗೆ ದೇಶದಲ್ಲೆ ಅತಿದೊಡ್ಡ ಬಿ.ಸಿ.ಯಾಗಿ ಯೋಜನೆ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ನಡೆದಾಡುವ ದೇವರು ಲಕ್ಷಾಂತರ ಬಡವರ ಬದುಕಿಗಾಗಿ ಬ್ಯಾಂಕ್‌ಗಳಿಗೆ ಭದ್ರತೆಯಾಗಿ ನಿಲ್ಲುವಂತಹ ಮಹಾ ತ್ಯಾಗವನ್ನು ಮಾಡಿದ್ದಾರೆಂದು ವಿವರಿಸಿದ್ದು ಅದು ಕೇವಲ ಬಾಯಿ ಮಾತಾಗಿರಲಿಲ್ಲ. ಬದಲಾಗಿ ಅತ್ಯುನ್ನತ ಸಾಂಸ್ಥಿಕ ವ್ಯವಸ್ಥೆಯಾಗಿತ್ತು. ತನ್ನ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಕಟ್ಟಿ ಬೆಳೆಸಿ, ಈ ಒಂದು ಗುರುತರವಾದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲು ವ್ಯವಸ್ಥೆಯನ್ನು ರೂಪಿಸಿದರು. ಒಂದು ‘ಚಾರಿಟೇಬಲ್ ಟ್ರಸ್ಟ್’ ಆಗಿ ಬ್ಯಾಂಕ್‌ಗಳೊoದಿಗೆ ಸಾಂಸ್ಥಿಕ ನೆಲೆಯಲ್ಲಿ ಬ್ಯಾಂಕಿನ ಪ್ರತಿನಿಧಿಯಾಗಿ […]

ಸ್ವತಂತ್ರ ಭಾರತ

ಶ್ರೀ ಅನಿಲ್ ಕುಮಾರ್ ಎಸ್. ಎಸ್. ಇಪ್ಪತ್ತೊಂದನೆ ಶತಮಾನದ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡಬೇಕು ಎಂಬುದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸಾಗಿತ್ತು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತ ವಿಜ್ಞಾನ, ತಂತ್ರಜ್ಞಾನ, ಕೃಷಿ, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.ನಮ್ಮ ದೇಶ ಸಾವಿರಾರು ವರ್ಷಗಳನ್ನು ಕಠಿಣ ಪರಿಸ್ಥಿತಿಯಲ್ಲಿ ಕಳೆದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಪ್ರಗತಿಯನ್ನು ಕಾಣುವ ಸಂದರ್ಭ ಆ ದಿನಗಳಲ್ಲಿರಲಿಲ್ಲ ಮತ್ತು […]

ಸ್ವಾತಂತ್ರ‍್ಯ ಕೇವಲ ಹಕ್ಕಾಗದೆ, ಋಣವಾಗಲಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ‘ನಿರಂತರ’ ಓದುಗರಿಗೆ 78ನೇ ವರ್ಷದ ಸ್ವಾತಂತ್ರ್ಯ ದಿನದ ಶುಭಾಶಯಗಳು.‘ಸ್ವಾತಂತ್ರ್ಯ ದಿನಾಚರಣೆ’ಯನ್ನು ಒಂದು ಸಂಭ್ರಮದ ದಿನವನ್ನಾಗಿ ನಾವೆಲ್ಲ ಆಚರಿಸುತ್ತಿದ್ದೇವೆ. ವರ್ಷಗಳು ಕಳೆದಂತೆ ‘ಸ್ವಾತಂತ್ರ್ಯ’ ಎನ್ನುವ ಪದದ ಅರ್ಥವೂ ಕೂಡ ಮುಂದಿನ ದಿನಗಳಲ್ಲಿ ನಮ್ಮ ಪೀಳಿಗೆಯವರಿಗೆ ಅರ್ಥ ಆಗದೇ ಇರಬಹುದು. ಯಾಕೆಂದರೆ ಇಂದು ಯಾವುದೇ ಮಿತಿ ಇಲ್ಲದ ಪೂರ್ಣ ಸ್ವತಂತ್ರದಿoದ ನಾವು ಬದುಕುತ್ತಿದ್ದೇವೆ. ಬ್ರಿಟಿಷರ ವಸಾಹತುಶಾಹಿಯ ಜೀವನದಲ್ಲಿ ಯಾವೆಲ್ಲ ರೀತಿಯ ಕಷ್ಟಗಳನ್ನು ನಮ್ಮ ಪೂರ್ವಜರು ಅನುಭವಿಸಿದ್ದರು ಎಂಬುವುದನ್ನು ನಾವು ಕಲ್ಪನೆ ಮಾಡಿಕೊಳ್ಳಲು ಅಶಕ್ತರಾಗಿದ್ದೇವೆ. […]