ರೇಡಿಯೋ ಪಯಣ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಬಾಲ್ಯದಿಂದಲೂ ನನಗೆ ರೇಡಿಯೋ ಬಗ್ಗೆ ಹೆಚ್ಚಿನ ಒಲವು. ರೇಡಿಯೋದಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾರ್ತೆ, ಕೃಷಿ ಮಾಹಿತಿ ಇತ್ಯಾದಿ ಕಾರ್ಯಕ್ರಮಗಳನ್ನು ಕೇಳುವುದೆಂದರೆ ನನಗೆ ಬಲು ಇಷ್ಟ. ಕಾರು ಪ್ರಯಾಣದ ವೇಳೆ ಹೆಚ್ಚಾಗಿ ರೇಡಿಯೋ ಆಲಿಸುತ್ತಿರುತ್ತೇನೆ.1970ನೇ ದಶಕಗಳಲ್ಲಿ ರೇಡಿಯೋ ಸ್ಟೇಷನ್‌ಗಳ ಸಿಗ್ನಲ್‌ಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಆಯಾ ಆಕಾಶವಾಣಿ ಕೇಂದ್ರಗಳ ಸಂಖ್ಯೆ ನಮೂದಿಸಿರುವ ಗುರುತಿಗೆ ಸರಿಯಾಗಿ ರೇಡಿಯೋದ ಗೆರೆಗಳನ್ನು ಹೊಂದಿಸಲು ನಿಧಾನವಾಗಿ ತಿರುಗಿಸಬೇಕಿತ್ತು. ಸಿಗ್ನಲ್ ಪಡೆಯಲು ಆ್ಯಂಟೇನಾ ಬೇಕಿತ್ತು. ಅನೇಕ ಪ್ರಯತ್ನಗಳಿಂದ ತರಂಗಾoತರಗಳನ್ನು ಸೂಕ್ಷ್ಮವಾಗಿ […]
ಧರ್ಮಸ್ಥಳ ಲಕ್ಷದೀಪೋತ್ಸವ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಭಾರತೀಯ ಸಂಸ್ಕೃತಿಯಲ್ಲಿ ಬೆಳಕಿಗೆ ಎಲ್ಲಿಲ್ಲದ ಪ್ರಾಶಸ್ತ್ಯವಿದೆ. ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ’ ಇದು ಪ್ರತಿಯೊಬ್ಬ ಭಾರತೀಯನಿಗೂ ಚಿರಪರಿಚಿತವಾದ ಶ್ಲೋಕವಾಗಿದೆ. ‘ಬೆಳಕು’ ಜ್ಞಾನ, ಸತ್ಯ, ಸಮೃದ್ಧಿ, ಪರಿಶುದ್ಧತೆಯ ಪ್ರತೀಕವಾಗಿದೆ. ಬೆಳಕನ್ನು ನೀಡುವ ದೀಪಕ್ಕೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯವಿದೆ. ಕೈಹಿಡಿದು ಮುನ್ನಡೆಸುವ ದಾರಿದೀಪ, ಕುಲವನ್ನು ಮುನ್ನಡೆಸುವ ಕುಲದೀಪ, ಅನಂತತೆಯನ್ನು ಸಾರುವ ನಂದಾದೀಪ ಇವು ‘ದೀಪ’ದ ಮಹತ್ವವನ್ನು ಸಾರುತ್ತವೆ. ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಆಚರಣೆಗಳು ದೀಪದ ಮೂಲಕವೇ ಪ್ರಾರಂಭಗೊಳ್ಳುತ್ತವೆ. ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ […]