ಚಾರ ಶೌರ್ಯ ಘಟಕದ ಛಲ ಬಿಡದ ಸಾಧನೆ ಒಂದು ತಿಂಗಳು ಸ್ವಚ್ಛತೆಗೆ ಮೀಸಲು

ರಾಜ್ಯದಲ್ಲಿರುವ ಶೌರ್ಯ ತಂಡದ ಸದಸ್ಯರು ನಿತ್ಯ ಒಂದಲ್ಲೊ0ದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಎಲ್ಲೆ ಅವಘಡಗಳು ಸಂಭವಿಸಿದರೂ ಅಲ್ಲಿ ಶೌರ್ಯ ತಂಡದವರಿರುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಹೆಗ್ಗಡೆಯವರು ಹಾಕಿಕೊಟ್ಟ ‘ಸಮಾಜ ಸೇವೆ’ ಎಂಬ ಮಾರ್ಗದಲ್ಲಿ ನಡೆಯುವ ಪ್ರತಿಯೊಂದು ಶೌರ್ಯ ತಂಡಗಳು ತಮ್ಮದೇ ಆದ ಬೇರೆ ಬೇರೆ ಸಾಧನೆ, ಪ್ರಯತ್ನಗಳಿಂದ ಮನೆ ಮಾತಾಗಿವೆ. ಅವುಗಳನ್ನು ನಿರಂತರದ ಪ್ರತಿ ಸಂಚಿಕೆಯಲ್ಲಿ ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ.ಹೆಬ್ರಿಯ ಸರ್ಕಲ್‌ನಿಂದ-ಬೇಳ0ಜೆ, ದೂಪದ ಕಟ್ಟೆಯ ಅರಣ್ಯ ಪ್ರದೇಶ, ಬೇಳಂಜೆ ಗರಡಿ ರಸ್ತೆ, ಹಾಲಿ ಕೊಡ್ಲು, ಕುಚ್ಚೂರು […]

ಕೆರೆ ರಕ್ಷಣೆಯ ಕ್ಷೇತ್ರಪಾಲರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಎಲ್ಲಾ ನಾಗರೀಕತೆಗಳ ಉಗಮ ನದಿ ದಡಗಳಲ್ಲೇ ಆಗಿವೆ. ನೀರಿಲ್ಲದಿದ್ದರೆ ಜನರೂ ಇಲ್ಲ, ಜೀವನವೂ ಇಲ್ಲ. ನಾವು ಇತಿಹಾಸದಲ್ಲಿ ರಾಜ-ಮಹಾರಾಜರ ಯುದ್ಧ, ರಾಜ್ಯಗಳ ವಿಸ್ತರಣೆಯ ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಆದರೆ ಜನರಿಗಾಗಿ ಸಾಲುಮರಗಳನ್ನು ನೆಡೆಸುವುದು, ಕೆರೆಗಳನ್ನು ನಿರ್ಮಿಸುವುದು, ತಂಗಲು ಛತ್ರಗಳನ್ನು ಕಟ್ಟಿಸುವುದು ಇವೆಲ್ಲಾ ಕೆಲವೇ ಕೆಲವು ರಾಜರ ಕಾಲದಲ್ಲಿ ಮಾತ್ರ ನಡೆದಿದೆ.ಹಿಂದಿನವರು ಇಪ್ಪತ್ತು ಮೂವತ್ತು ಎಕರೆಗಳಷ್ಟು ದೊಡ್ಡ ಗಾತ್ರದ ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಅದರಲ್ಲಿ ಕ್ರಮೇಣ ಹೂಳು ತುಂಬಿ ಅವುಗಳು ನಿಷ್ಪçಯೋಜಕವಾಗಿದ್ದವು. ಒಂದು […]

ಪ್ರಗತಿನಿಧಿ (ಸಾಲದ) ಬೇಡಿಕೆ ಸದಸ್ಯರಿಂದ – ನಿರ್ಣಯ ಸಂಘದಿಂದ

– ಅನಿಲ್ ಕುಮಾರ್ ಎಸ್.ಎಸ್. ಸಂಘದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಾರದ ಸಭೆಯ ಮಹತ್ವ ಹಾಗೂ ಅವುಗಳ ಪ್ರಯೋಜನವನ್ನು ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ವಾರದ ಸಭೆಯಲ್ಲಿ ಪ್ರಗತಿನಿಧಿ (ಸಾಲದ) ಬೇಡಿಕೆಯ ನಿರ್ಣಯವನ್ನು ಕೈಗೊಳ್ಳುವುದು ಅತ್ಯಂತ ಪ್ರಮುಖ ವಿಷಯವಾಗಿದೆ. ತಂತ್ರಜ್ಞಾನಕ್ಕೆ ಎಂದಿನಿoದಲೂ ಪ್ರಾಮುಖ್ಯತೆಯನ್ನು ನೀಡುತ್ತಿರುವ ಯೋಜನೆಯ ಪ್ರಗತಿನಿಧಿ ನಿರ್ವಹಣೆಯನ್ನು ಸಂಪೂರ್ಣವಾಗಿ ತಂತ್ರಜ್ಞಾನದ ಮೂಲಕ ನಿರ್ವಹಿಸಲಾಗುತ್ತದೆ. ಸಂಘದ ಸದಸ್ಯರು ತಮ್ಮ ಮೊಬೈಲ್‌ನಲ್ಲಿ ಯೋಜನೆಯ ಸದಸ್ಯರ ಲೀಡ್ ಆ್ಯಪ್ ಎನ್ನುವ ಒಂದು ಸರಳ ಆ್ಯಪ್ ಅನ್ನು ಅಳವಡಿಸಿಕೊಂಡಿದ್ದಾರೆ. ಈ ಆ್ಯಪ್‌ನಲ್ಲಿ ಒಂದು ಸಂಘದ […]

ಸ್ವಚ್ಛತೆ ಪರಮೋಚ್ಛ ಧರ್ಮ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಿತ್ಯವೂ ಪತ್ರಿಕೆಯನ್ನು ಓದುವುದು ನನ್ನ ಅಭ್ಯಾಸ ಮತ್ತು ಹವ್ಯಾಸ. ಇತ್ತೀಚೆಗೆ ಪತ್ರಿಕೆ ಓದುವಾಗ ‘ನಿಮ್ಮ ಮನೆಯ ಸ್ವಚ್ಛತೆಗಾಗಿ ದಿನಕ್ಕೆ ಹತ್ತು ನಿಮಿಷ ಮೀಸಲಿಡಿ’ ಎನ್ನುವ ಸಂದೇಶ ಓದಿದೆ. ಇದನ್ನು ಓದಿದಾಗ ನೆನಪಾದ ವಿಚಾರವೆಂದರೆ ನಮ್ಮ ಮನೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ನಾವೇ ಕಾಪಾಡದಿದ್ದರೆ ಇನ್ಯಾರು ಕಾಪಾಡಬೇಕು? ಎನ್ನುವುದು. ನಮ್ಮ ಮನೆಯ ಬೇಲಿ ಅಥವಾ ಕಾಂಪೌoಡ್ ಎಲ್ಲಿಯವರೆಗೆ ಇದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಪರಿಸರ. ಉಳಿದ ಸುತ್ತಮುತ್ತಲಿನ ಜಾಗ ಸಾರ್ವಜನಿಕ ಪ್ರದೇಶ ಎನ್ನುವ […]

ದೇಶದ ನಂಬರ್‌ 1 ಬಿ.ಸಿ. ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ದಿನಾಂಕ 13.1.2025ರಂದು ‘ವರ್ಲ್ಡ್ ಬ್ಯಾಂಕ್’ನ (World Bank)ನ ಹಿರಿಯ ಅಧಿಕಾರಿಗಳು, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಹಿರಿಯ ಅಧಿಕಾರಿಗಳು ಹಾಗೂ ಸಾಧನ್ ಸಂಸ್ಥೆಯ ಅಧಿಕಾರಿಗಳು ‘ಗ್ರಾಮಾಭಿವೃದ್ಧಿ ಯೋಜನೆ’ಯ ಕೇಂದ್ರ ಕಛೇರಿಗೆ ಭೇಟಿ ನೀಡಿದ್ದರು. ವರ್ಲ್ಡ್ ಬ್ಯಾಂಕ್ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಶಾಲಿಯಾದ ಆರ್ಥಿಕ ಸಂಸ್ಥೆಯಾಗಿದ್ದು, 189 ದೇಶಗಳ ಜಾಲವನ್ನು ಹೊಂದಿರುತ್ತದೆ. ಗ್ರಾಮೀಣ ಪ್ರದೇಶದ ಆರ್ಥಿಕ ಸಬಲೀಕರಣದ ಪ್ರಮುಖ ಯೋಜನೆಗೂ ವರ್ಲ್ಡ್ ಬ್ಯಾಂಕಿನಿoದ ಭಾರತವು ಕೆಲವು ಆರ್ಥಿಕ ಸೌಲಭ್ಯವನ್ನು ಪಡೆದುಕೊಂಡಿರುತ್ತದೆ. ಈ […]