ನಿತ್ಯವೂ ಮಹಿಳಾ ದಿನವಾಗಲಿ

ಮಾರ್ಚ್ 08 ವಿಶ್ವ ಮಹಿಳಾ ದಿನ. ಈ ದಿನದಂದು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಾಧಕರನ್ನು ಗೌರವಿಸಲಾಗುತ್ತದೆ. ವಿಚಾರಗೋಷ್ಠಿಗಳಲ್ಲಿ ಮಹಿಳಾ ಸಬಲೀಕರಣದ ಕುರಿತು ಚರ್ಚೆಗಳು ನಡೆಯುತ್ತವೆ. ಎಲ್ಲೆಡೆ ಭಾಷಣಗಳು ಕೇಳಿಬರುತ್ತವೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗುತ್ತದೆ. ಹಾಗಾದರೆ ನಿಜವಾದ ಮಹಿಳಾ ದಿನ ಎಂದರೆ ಹೇಗೆ? ಈ ದಿನ ಕೇವಲ ಒಂದೇ ದಿನಕ್ಕೆ ಸೀಮಿತವೇ? ಇದನ್ನು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಕೇಳಿಕೊಳ್ಳಬೇಕಿದೆ.ಮಹಿಳಾ ದಿನಕ್ಕೊಂದು ನಿಜವಾದ ಅರ್ಥ ಬರುವುದು ಮಹಿಳೆಯರು ಮಾಡುವ ಸಾಧನೆ ಮತ್ತು ಮಹಿಳೆಯರ ಸಬಲೀಕರಣದಿಂದ. ಈ […]