ನಿತ್ಯವೂ ಮಹಿಳಾ ದಿನವಾಗಲಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಾರ್ಚ್ 08 ವಿಶ್ವ ಮಹಿಳಾ ದಿನ. ಈ ದಿನದಂದು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಾಧಕರನ್ನು ಗೌರವಿಸಲಾಗುತ್ತದೆ. ವಿಚಾರಗೋಷ್ಠಿಗಳಲ್ಲಿ ಮಹಿಳಾ ಸಬಲೀಕರಣದ ಕುರಿತು ಚರ್ಚೆಗಳು ನಡೆಯುತ್ತವೆ. ಎಲ್ಲೆಡೆ ಭಾಷಣಗಳು ಕೇಳಿಬರುತ್ತವೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗುತ್ತದೆ. ಹಾಗಾದರೆ ನಿಜವಾದ ಮಹಿಳಾ ದಿನ ಎಂದರೆ ಹೇಗೆ? ಈ ದಿನ ಕೇವಲ ಒಂದೇ ದಿನಕ್ಕೆ ಸೀಮಿತವೆ? ಇದನ್ನು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಕೇಳಿಕೊಳ್ಳಬೇಕಿದೆ.ಮಹಿಳಾ ದಿನಕ್ಕೊಂದು ನಿಜವಾದ ಅರ್ಥ ಬರುವುದು ಮಹಿಳೆಯರು ಮಾಡುವ ಸಾಧನೆ […]
ಉತ್ಪಾದಕ ಹಾಗೂ ಆರ್ಥಿಕಚಟುವಟಿಕೆಗಳ ಉದ್ದೇಶಗಳಿಗೆ ಪ್ರಾಶಸ್ತ್ಯ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಹಿಂದಿನ ಸಂಚಿಕೆಯಲ್ಲಿ ಸಂಘದ ಸದಸ್ಯರಿಂದಲೇ ಪ್ರಗತಿನಿಧಿ ಸಾಲ ಮಂಜೂರಾತಿ ಕೈಗೊಳ್ಳುವುದು ಹಾಗೂ ಅವುಗಳ ವಿವಿಧ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡಿದ್ದೇವೆ.ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ನೇರವಾಗಿ ಸಾಲ ಸೌಲಭ್ಯವನ್ನು ಪಡೆಯುವ ನಿರ್ಧಾರವನ್ನು ಸ್ವಸಹಾಯ ಸಂಘಗಳೇ ಕೈಗೊಳ್ಳುವುದಾದರೂ ಕೂಡ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದಾ ಮುಂಜಾಗ್ರತೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಸದಸ್ಯರು ಯಾವ ಉದ್ದೇಶಕ್ಕಾಗಿ ಸಾಲದ ಬೇಡಿಕೆ ನೀಡಿದ್ದಾರೆ ಎನ್ನುವುದಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಸಾಲಗಳು ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶವನ್ನು […]
ನಂಬಿಕೆಯ ಜೊತೆ ವೈಜ್ಞಾನಿಕತೆಯೂ ಇರಲಿ
ಶ್ರೀ ಹೆಗ್ಗಡೆಯವರು ಪಂಚಾಂಗ ಎಂದರೆ ಪಂಚ ಅಂಗಗಳಿಂದ ಕೂಡಿದ ಗಣಿತದ ಗಣಿ. ಅವೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಇವು ನಿತ್ಯವೂ ಬದಲಾವಣೆ ಆಗುತ್ತವೆ. ಇದರೊಂದಿಗೆ ವಿಷ ಮತ್ತು ಅಮೃತ ಘಳಿಗೆಗಳು ಬದಲಾಗುತ್ತಾ ಹೋಗುತ್ತವೆ.ಕೆಲವೊಮ್ಮೆ ದೈನಂದಿನ ಪಂಚಾಂಗದಲ್ಲಿ ತೋರಿಬರುವ ನಕ್ಷತ್ರ, ಘಳಿಗೆಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಜಯ ಸಾಧಿಸಲು ಕರಣ ಮೊದಲಾದ (ಕರಣಾತ್ ಚಿಂತಿತಂ ಕಾರ್ಯಂ) ಅಂಶಗಳ ಜೊತೆಗೆ ಹದಿನೈದು ದಿನಗಳಿಗೆ ಬದಲಾಗುವ ಎರಡು ಪಕ್ಷಗಳು ಕೂಡಾ ಸಹಕಾರಿಯಾಗುತ್ತವೆ […]
ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್‍ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ಸೇರ್ಪಡೆ (Financial Inclusion) ಕಾರ್ಯಕ್ರಮದಡಿ ವ್ಯಕ್ತಿಗತ ಹಾಗೂ ಆಯ್ದ ಸಂಸ್ಥೆಗಳನ್ನು ನಿಯೋಜಿಸಿಕೊಂಡು ಗ್ರಾಮ ಗ್ರಾಮಗಳಲ್ಲೂ ಬ್ಯಾಂಕಿಂಗ್ ಸೇವಾ ಸೌಲಭ್ಯ ದೊರೆಯುವಂತಾಗಬೇಕೆಂದು ತನ್ನ ಅನೇಕ ಸುತ್ತೋಲೆಗಳು ಹಾಗೂ ಮಾರ್ಗದರ್ಶನಗಳಲ್ಲಿ ನಿರ್ದೇಶಿಸಿರುತ್ತದೆ. ಇದರನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ನ್ನು […]
2025 ಮಾರ್ಚ್

2025 ಫೆಬ್ರವರಿ
