ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ
ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಪ್ರಗತಿನಿಧಿ ಸಾಲ ವಿತರಣೆಗೆ ಅತ್ಯಂತ ಪ್ರಾಶಸ್ತ್ಯ ನೀಡಲಾಗುವುದೆಂದು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೆವು.ತಾವು ಪಡೆದುಕೊಂಡ ಸಾಲದ ಮರುಪಾವತಿಯ ಎಲ್ಲಾ ವಿವರಗಳನ್ನು ‘ಮರುಪಾವತಿ ಚೀಟಿ’ಯ ಮೂಲಕ ಸದಸ್ಯರು ತಿಳಿದುಕೊಳ್ಳುತ್ತಾರೆ. ಪ್ರಗತಿನಿಧಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಮರುಪಾವತಿ ಚೀಟಿಯನ್ನು ಪಡೆದುಕೊಂಡು ತಾವು ಪ್ರತಿ ವಾರ ಕಟ್ಟಿದ ಮೊತ್ತವನ್ನು ಕೊನೆಯ ಕಾಲಂನಲ್ಲಿ ನಮೂದಿಸಿ ತಮ್ಮ ಮರುಪಾವತಿಯ ಲೆಕ್ಕಾಚಾರವನ್ನು ಅತ್ಯಂತ ನಿಖರತೆಯಿಂದ ನಿರ್ವಹಿಸುತ್ತಾರೆ. ಈ ‘ಮರುಪಾವತಿ ಚೀಟಿ’ ಪ್ರಕಾರ ಮೊತ್ತವನ್ನು ತಿಂಗಳಿಗೊಮ್ಮೆ […]