ಬದುಕುವುದ್ಯಾಕೆ?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜಗತ್ತಿನಾದ್ಯಂತ ಪರಿಹಾರ ಕಾಣದ ಸಾಕಷ್ಟು ಸಮಸ್ಯೆಗಳಿದ್ದರೂ ಜನರು ಸಂತೋಷದಿAದ ಜೀವನ ನಡೆಸುತ್ತಿದ್ದಾರೆ. ಅಂದರೆ ಕಾಡುವ ಕೈಗಳು, ಸಮಸ್ಯೆಗಳಿಗಿಂತ ಕಾಪಾಡುವ ಶಕ್ತಿ, ಕೈಗಳ ಬಗ್ಗೆ ಜನರು ಇನ್ನೂ ಭರವಸೆಯನ್ನು ಇಟ್ಟುಕೊಂಡಿದ್ದಾರೆ ಎಂದೇ ಅರ್ಥ. ಗುರುನಾನಕರು ಒಂದು ಹಳ್ಳಿಗೆ ಹೋಗಿದ್ದಾಗ ಆ ಹಳ್ಳಿಯ ಮಂದಿ ಅವರಿಗೆ ಅದ್ಧೂರಿಯ ಸ್ವಾಗತ ಕೋರಿ ಗೌರವದಿಂದ ನೋಡಿಕೊಂಡರು. ಗುರುಗಳು ಹಳ್ಳಿಯಿಂದ ಹೊರಡುವ ಸಮಯದಲ್ಲಿ ‘ನೀವೆಲ್ಲಾ ಚದುರಿ ಹೋಗಿ ಯಾರೂ ಒಂದೆಡೆ ಇರಬೇಡಿ’ ಅಂದರು. ಇದನ್ನು ಕೇಳಿ ಹಳ್ಳಿಗರಿಗೆ ಆಶ್ಚರ್ಯದೊಂದಿಗೆ […]

ಆರ್ಥಿಕ ಸಬಲೀಕರಣದ ಜೊತೆಯಲ್ಲಿಯೆ ಸಾಮಾಜಿಕ ಸಬಲೀಕರಣ

ಹಿಂದಿನ ಸಂಚಿಕೆಯಲ್ಲಿ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ‘ಕಂತು ವಸೂಲಾತಿ’ ಪ್ರಕ್ರಿಯೆಗೆ ಆಸ್ಪದ ಕೊಡದೆ ಪ್ರತೀ ಸದಸ್ಯರು ಜವಾಬ್ದಾರಿಯಿಂದ ಸಮರ್ಪಕವಾಗಿ ‘ಮರುಪಾವತಿ’ ಮಾಡುತ್ತಾರೆಂದು ತಿಳಿಸಲಾಗಿತ್ತು.ಈ ಜವಾಬ್ದಾರಿಯುತ ವ್ಯವಸ್ಥೆಯನ್ನು ಸದಸ್ಯರೇ ಕಾಪಾಡಿಕೊಳ್ಳಲು ಮುಖ್ಯವಾದ ಕಾರಣಗಳು ಯೋಜನೆಯ ಸ್ವಸಹಾಯ ಸಂಘಗಳು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸುವ ಒಂದು ಪರಿಣಾಮಕಾರಿ ವೇದಿಕೆ ಆಗಿರುವುದಾಗಿದೆ. ಸ್ವಸಹಾಯ ಸಂಘಗಳು ರಚನೆಯಾದ ಪ್ರಾರಂಭದಿoದಲೇ 6 ಪ್ರಮುಖ ವಿಸ್ತೃತವಾದ ತರಬೇತಿಗಳನ್ನು ನೀಡುವುದರ ಮೂಲಕ ಸಂಘಕ್ಕೆ ಗಟ್ಟಿಯಾದ ಅಡಿಪಾಯವನ್ನು ಹಾಕಲಾಗುತ್ತದೆ. ಆ ತರಬೇತಿಗಳ ವಿವರಗಳನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೆವು. […]

ತಂಬಾಕುಮುಕ್ತ ಸಮಾಜ ಕಟ್ಟೋಣ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರುಟ್ಟೋಣ ಪ್ರತಿ ವರ್ಷ ಮೇ 31 ಅನ್ನು ‘ವಿಶ್ವ ತಂಬಾಕುಮುಕ್ತ ದಿನ’ವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದ ಮೂಲಕ ಯಾರು ಧೂಮಪಾನ, ತಂಬಾಕು ಸೇವನೆ ಮಾಡುತ್ತಾರೋ ಅವರನ್ನು ದುಶ್ಚಟಗಳ ದಾಸರಾಗದಂತೆ ಎಚ್ಚರಿಸಲಾಗುತ್ತಿದೆ.ಜನರಲ್ಲಿ ದುಶ್ಚಟಗಳು ಹೆಚ್ಚಳವಾದಾಗ ಅವುಗಳನ್ನು ನಿಯಂತ್ರಿಸಲು ಸರಕಾರವು ಜಾಗೃತಿ, ಮನವರಿಕೆ, ಎಚ್ಚರಿಕೆ, ದಂಡ ಪ್ರಯೋಗ, ತೆರಿಗೆ ಹೆಚ್ಚಳ ಹೀಗೆ ವಿವಿಧ ಪ್ರಯತ್ನಗಳನ್ನು ಮಾಡಿದೆ, ಮಾಡುತ್ತಿದೆ. ಮದ್ಯ, ಹೊಗೆಸೊಪ್ಪು ಹಾಗೂ ಅದರ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದರೆ ಜನರಿಗೆ ಅದನ್ನು ಕೊಂಡುಕೊಳ್ಳಲು ಕಷ್ಟವಾಗುತ್ತದೆ. […]

ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ

ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಕ್ಷೇತ್ರದ ಬೀಡಿಗೆ ಬರುವ ಅನೇಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವುದು ಧರ್ಮಾಧಿಕಾರಿಗಳಾದ ಶ್ರೀ ಹೆಗ್ಗಡೆಯವರ ನಿತ್ಯ ಕಾಯಕವಾಗಿತ್ತು. ಹೆಚ್ಚಿನ ಸಮಸ್ಯೆಗಳಿಗೆ ಆ ಸಂದರ್ಭಕ್ಕೊ0ದು ಪರಿಹಾರವನ್ನು ಸೂಚಿಸುತ್ತಿದ್ದರು. ಆದರೆ ಅವುಗಳಿಗೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆ0ಬುವುದು ಶ್ರೀ ಹೆಗ್ಗಡೆಯವರ ಮಹಾನ್ ಚಿಂತನೆಯಾಗಿತ್ತು. ಏಕಾಂತದಲ್ಲಿರುವಾಗಲೆಲ್ಲ ಈ ಬಗ್ಗೆ ಸುದೀರ್ಘವಾಗಿ ಯೋಚನೆಗಳನ್ನು ಮಾಡುತ್ತಿದ್ದರು. ದಿನಕಳೆದಂತೆ ಕೆಲವೊಂದು ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳತೊಡಗಿದರು. ಅಂತಹ ಕಾರ್ಯಕ್ರಮಗಳಲ್ಲಿ ಉಚಿತ ಸಾಮೂಹಿಕ ವಿವಾಹವು ಒಂದು. […]