ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ

ಅನಿಲ್ ಕುಮಾರ್ ಎಸ್.ಎಸ್. ‘ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು’ ಎನ್ನುವ ವಿಷಯದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಶ್ರಮ ವಿನಿಮಯದ ಮೂಲಕ ಅವರವರ ಭೂಮಿಯಲ್ಲಿ ತಮ್ಮ ಸಂಘದ ಸದಸ್ಯರು ಉಚಿತವಾಗಿ ಒಬ್ಬರಿಗೊಬ್ಬರು ಸಹಕಾರ ಮಾಡುತ್ತಾ ತಮ್ಮ ಕೃಷಿ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುವುದನ್ನು ವಿವರವಾಗಿ ತಿಳಿದುಕೊಂಡಿದ್ದೆವು. ಸಾಮಾನ್ಯವಾಗಿ ರೈತರೇ ಸದಸ್ಯರಾಗಿರುವ ಈ ಪ್ರಗತಿಬಂಧು ಸಂಘಗಳಿಗೆ ಅವರ ಕೃಷಿ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಪೂಜ್ಯರು ಮತ್ತಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳ ಮೂಲಕ ಈ ಕೆಳಕಾಣಿಸಿದ ವಿಶೇಷ […]

ಸೋಲನ್ನು ಸೋಲಿಸಬಲ್ಲವರು

ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ, ಪ್ರಸಿದ್ಧಿ ಪಡೆಯಬೇಕಾದರೆ, ತನ್ನ ಜೀವನ ಯಶೋಗಾಥೆಯ ವಸ್ತುವಾಗಬೇಕಾದರೆ ಅದರ ಹಿಂದೆ ಸಾಕಷ್ಟು ಹೋರಾಟ, ಸಾಧನೆಗಳಿರುತ್ತವೆ. ಶೇ. 99ರಷ್ಟು ಜನರಿಗೆ ತಮ್ಮ ಸೋಲನ್ನು ಹೇಳಿಕೊಳ್ಳಲು ಅನೇಕ ಕಾರಣಗಳು, ಸಮರ್ಥನೆಗಳಿರುತ್ತವೆ. ಆದರೆ ಯಾರೂ ಯಶಸ್ಸನ್ನು ತನ್ನದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುತ್ತಾರೋ ಅವರನ್ನು ಸೋಲಿಸುವುದು ಕಷ್ಟ. ಸೋಲು ಸೋಲುವವರನ್ನು ಸೋಲಿಸಿದರೆ, ಅದೇ ಸೋಲು ಗೆಲ್ಲುವವರಲ್ಲಿ ಹುಮ್ಮಸ್ಸನ್ನು ತುಂಬುತ್ತದೆ. ಸೋತವರು ಒಂದು ಸೋಲಿಗೆ ಅಂಜಿ ಹಿಂಜರಿದರೆ, ಗೆಲ್ಲಬೇಕೆನ್ನುವವರು ಯಶಸ್ಸು ಪಡೆಯುವವರೆಗೂ ಸೋಲುತ್ತಲೇ ಇರುತ್ತಾರೆ. ಪ್ರಯತ್ನಿಸಿದಾತ ಸೋತರೂ ಅದಕ್ಕೊಂದು ಬೆಲೆಯಿದೆ. […]

ಅಂಗಾಂಗ ದಾನ

ಶ್ರೀ ಡಿ. ವೀರೇಂದ್ರ ಹೆಗ್ಗಡೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ದೇವಾನುದೇವತೆಯರನ್ನು ಪೂಜಿಸುತ್ತೇವೆ. ಈ ಎಲ್ಲ ದೇವಾನುದೇವತೆಗಳ ಹುಟ್ಟಿಗೆ ಅದರದ್ದೇ ಆದ ಒಂದೊoದು ಕಥೆ, ಸನ್ನಿವೇಶ, ಸಂದರ್ಭಗಳು ಇರುತ್ತವೆ. ನಮ್ಮಲ್ಲಿ ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮೊದಲು ಸ್ತುತಿಸುವುದು ವಿಘ್ನವಿನಾಶಕ ಗಣಪತಿಯನ್ನು. ಬೇರೆಲ್ಲ ದೇವಾನುದೇವತೆಗಳಿಂದ ಈ ಗಜವದನ ತನ್ನ ದೇಹಾಕಾರದಿಂದ ವಿಶೇಷವಾಗಿದ್ದಾನೆ. ಯಾಕೆಂದರೆ ಆತನದ್ದು ಆನೆಯ ಮುಖ. ಗಣಪತಿಗೆ ಆನೆ ಮುಖ ಹೇಗೆ ಬಂತು ಎಂಬುದರ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ರೀತಿಯ ಕಥೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿ ಇರುವಂಥದ್ದು, […]