ವ್ಯಕ್ತಿತ್ವ ಪರಿಮಳಿಸಲಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನಾವು ಯಾರಿಗಾದರೂ ಹೂವಿನ ಗೊಂಚಲನ್ನು ಕೊಟ್ಟಾಗ ಅದರ ಪರಿಮಳದ ಸ್ವಲ್ಪ ಅಂಶ ನಮ್ಮ ಕೈಗೆ ಮೆತ್ತಿಕೊಂಡಿರುತ್ತದೆ. ಮಲ್ಲಿಗೆ, ಅಗರಬತ್ತಿ ಇತ್ಯಾದಿಗಳೂ ಹಾಗೇ ಕೆಲಸ ಮಾಡುತ್ತವೆ. ಅದಕ್ಕೆ ಹಿಂದಿನವರು ‘ಸೆಗಣಿಯ ಸ್ನೇಹಕ್ಕಿಂತ ಶ್ರೀಗಂಧದ ಜೊತೆ ಗುದ್ದಾಡುವುದೇ ಲೇಸು’ ಅಂದಿದ್ದಾರೆ. ಅಂದರೆ ನಾವು ಮಾಡುವ ಯಾವುದೇ ಕೆಲಸದಲ್ಲಿ ಒಳ್ಳೆಯ ಉದ್ದೇಶ ಹೊಂದಿದ್ದರೆ ಅದರ ಫಲ ನಮಗೆ ಖಂಡಿತಾ ಸಿಗುತ್ತದೆ.ನಾವು ಯಾವುದೇ ಕೆಲಸಕ್ಕೆ ಸೇರುವಾಗ ಅಲ್ಲಿ ನಮಗೆ ಸಿಗಬಹುದಾದ ಸಂಬಳದ ಬಗ್ಗೆ ಚಿಂತಿಸುತ್ತೇವೆ. ಇದರ ಬದಲಾಗಿ […]

ಕೃಷಿಕರ ಪಾಲಿಗೆ ವರವಾದ ಕೃಷಿ ಯಂತ್ರಧಾರೆ

ಶ್ರೀ ಅನಿಲ್ ಕುಮಾರ್ ಎಸ್. ಎಸ್. ಕಳೆದ ಸಂಚಿಕೆಯಲ್ಲಿ ತಿಳಿಸಿದಂತೆ ‘ಕೃಷಿ ಯಂತ್ರಧಾರೆ’ ವಿಚಾರಗಳ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ನಮ್ಮ ದೇಶದ ಕೃಷಿಯ ಬಗ್ಗೆ ಸ್ವಲ್ಪ ಗಮನಿಸೋಣ. ಕೃಷಿ ಉತ್ಪಾದನೆಯಲ್ಲಿ ನಮ್ಮ ದೇಶ ವಿಶ್ಚದಲ್ಲೆ 2ನೇ ಸ್ಥಾನದಲ್ಲಿದೆ. ಶೇ.50ಕ್ಕಿಂತಲೂ ಹೆಚ್ಚು ಜನರು ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡಿರುವುದರಿoದ ಉದ್ಯೋಗಾಧಾರಿತ ತಲಾ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಗಣನೀಯವಾಗಿ ಕಡಿಮೆ ಸ್ಥಾನವನ್ನು ಹೊಂದಿದೆ. ವಿಶ್ವದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಎಷ್ಟೇ ಕೃಷಿ ಉತ್ಪಾದನೆ […]

ಹೆಸರಲ್ಲೇನಿದೆ ಎಂದರೆ…

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಾರತೀಯ ಸಂಸ್ಕೃತಿ, ಆಚರಣೆಗಳು ಬಹಳ ವಿಶಿಷ್ಟವಾದುದು. ಜೀವನದ ಹಲವು ಕ್ಷಣ, ಸಂದರ್ಭಗಳನ್ನು ಸಂಸ್ಕೃತಿಯೊoದಿಗೆ ಮಿಳಿತಗೊಳಿಸಿ ಮಾಡುವ ಆಚರಣೆಗಳು ಬದುಕಿಗೆ ಮತ್ತಷ್ಟು ಉಲ್ಲಾಸ, ಹುರುಪನ್ನು ನೀಡುವಂಥವುಗಳಾಗಿವೆ. ಮನೆಯಲ್ಲಿ ಮಗುವಿನ ಜನನವಾದಾಗ ಆ ಮಗುವಿನ ನಾಮಕರಣದ ಕಾರ್ಯಕ್ರಮವನ್ನು ಬಹಳ ಸಂಭ್ರಮದಿoದ ಎಲ್ಲರೂ ಆಚರಿಸುತ್ತಾರೆ. ನಾಮಕರಣದಂದು ಕುಟುಂಬ, ಬಂಧು-ಮಿತ್ರರು, ಊರವರನ್ನೆಲ್ಲ ಕರೆದು ಹಬ್ಬದಂತೆ ಸಿಹಿಯೂಟ ಉಣ ಬಡಿಸುತ್ತಾರೆ. ಇದು ಮಗುವಿಗೆ ಹೆಸರಿಡುವ ಕಾರ್ಯಕ್ರಮವಾದರೂ ಅದರ ಹಿಂದಿನ ಆಸೆ, ಆಕಾಂಕ್ಷೆಗಳು, ಉದ್ದೇಶ, ಆಶಾಭಾವನೆಗಳು ಸಾಕಷ್ಟು ಇರುತ್ತವೆ. ಮಗುವಿನ […]

ಹೃದಯವನ್ನು ಹೃದಯದಲ್ಲಿಟ್ಟು ಜೋಪಾನ ಮಾಡೋಣ

ಅನಿಲ್ ಕುಮಾರ್ ಎಸ್. ಎಸ್. ಸಪ್ಟೆಂಬರ್ 29 ಅನ್ನು ವಿಶ್ವದಾದ್ಯಂತ ಎಲ್ಲಾ ದೇಶಗಳು ‘ವಿಶ್ವ ಹೃದಯ ದಿನ’ವನ್ನಾಗಿ ಆಚರಿಸುತ್ತವೆ. ನಮ್ಮ ಶರೀರದ ಎಲ್ಲಾ ಅಂಗಾoಗಗಳು ಪ್ರಾಮುಖ್ಯತೆಯನ್ನು ಹೊಂದಿದ್ದರೂ ಹೃದಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ನಾವು ಜೀವಂತವಾಗಿರಲು, ಕ್ರಿಯಾಶೀಲವಾಗಿರಲು ಹೃದಯವು ದಣಿವರಿಯದೆ ಎಷ್ಟೊಂದು ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಹೃದಯದ ಮಹತ್ವ ನಮಗೆ ಅರ್ಥವಾಗಬಹುದು.ನಮ್ಮ ಶರೀರದ ವ್ಯವಸ್ಥೆಯಲ್ಲಿ ಸೃಷ್ಟಿಕರ್ತ ಭಗವಂತ ‘ಹೃದಯ’ವನ್ನು ‘ಹೃದಯ ಸ್ಥಾನ’ದಲ್ಲಿಟ್ಟಿದ್ದಾನೆ. ಮುಷ್ಠಿ ಗಾತ್ರದ ಈ ಪುಟ್ಟ ಹೃದಯ ಇಡೀ ಶರೀರದ ಜೀವಾಧಾರ. ಒಂದೇ ಒಂದು ಕ್ಷಣವು […]