ಸ್ವಚ್ಛತೆ ಎಂಬ ಸಂಸ್ಕೃತಿ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ನಮ್ಮ ಸುತ್ತಮುತ್ತಲಿನ ಪ್ರದೇಶ, ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿ ಇರದಿದ್ದರೆ ಸರಕಾರ, ಜನಪ್ರತಿನಿಧಿಗಳತ್ತ ಬೊಟ್ಟು ಮಾಡಿ ತೋರಿಸುವ ನಾವು ಪ್ರತಿದಿನ ನಮ್ಮ ಮನೆಯಲ್ಲಿ ನಾವು ಸ್ವಚ್ಛತೆಗೆ ಎಷ್ಟು ಸಮಯವನ್ನು ಮೀಸಲಿರಿಸುತ್ತೇವೆ ಎಂದು ಯೋಚಿಸಬೇಕಿದೆ. ದಿನದಲ್ಲಿ ಹತ್ತು ನಿಮಿಷಗಳನ್ನು ಮನೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗಾಗಿ ಮೀಸಲಿಡದ ಎಷ್ಟೋ ಮಂದಿ ಇದ್ದಾರೆ. ಹೀಗಿರುವಾಗ ಪರಿಸರ ಸ್ವಚ್ಛತೆಯ ಪ್ರಜ್ಞೆ ಅವರಲ್ಲಿ ಹೇಗೆ ಬರಲು ಸಾಧ್ಯ? ನಮ್ಮ ಸುತ್ತಲಿನ ಪರಿಸರ, ಸಾರ್ವಜನಿಕ ಸ್ಥಳಗಳ ‘ಸ್ವಚ್ಛತೆ ನಮ್ಮ ಕರ್ತವ್ಯ’ ಎಂಬ […]