Bank Manager Noov
Krushimithra
Gelathi
Punarjanma
Spoorthi
Psychology
Editorial
Adhyakshara Nalnudi
20 ವರ್ಷಗಳಿಂದ ನಿರಂತರ ಓದುವ 84ರ ಹಿರಿಯ
ಗ್ರಾಮೀಣ ಭಾಗಕ್ಕೆ ಪತ್ರಿಕೆಗಳೆ ತಲುಪದ ಆ ದಿನಗಳಲ್ಲಿ ಶ್ರೀ ಹೆಗ್ಗಡೆ ದಂಪತಿಗಳು ಶ್ರೀಕ್ಷೇತ್ರದ ವಿದ್ಯಾದಾನದ ಪರಂಪರೆಯ ಒಂದು ಭಾಗವಾಗಿ ಆರಂಭಿಸಿದ ‘ನಿರಂತರ ಪ್ರಗತಿ’ ಮಾಸ ಪತ್ರಿಕೆ ಇದೀಗ 21ರ ಯುವಕ. ಸಮಾಜದ ಪ್ರಗತಿಗೆ ಪತ್ರಿಕೆ ನೀಡಿದ, ನೀಡುತ್ತಿರುವ ಕೊಡುಗೆ ಅಪೂರ್ವ. ‘ನಿರಂತರ’ ಪತ್ರಿಕೆಯ ಮೂಲಕ ಓದುವ ಹವ್ಯಾಸವನ್ನು ಆರಂಭಿಸಿದ, ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡ ಸಾವಿರಾರು ಮಂದಿ ನಮ್ಮೊಂದಿಗಿದ್ದಾರೆ. ಕಳೆದ ವರ್ಷ ಪತ್ರಿಕೆಯ ಆರಂಭದಿಂದ ಅಂದರೆ 2003ರಿಂದ ಇದುವರೆಗಿನ ನಿರಂತರದ ಎಲ್ಲಾ ಪ್ರತಿಗಳು ಓದುಗರ ಬಳಿ ಇದ್ದರೆ ಅವುಗಳೊಂದಿಗೆ […]
ಭಾಗ್ಯ ಮತ್ತು ಪುರುಷಾರ್ಥ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜೀವನದುದ್ದಕ್ಕೂ ‘ಭಾಗ್ಯ’ ಮತ್ತು ‘ಪುರುಷಾರ್ಥ’ ಇವೆರಡರ ಪಾತ್ರವು ಬಹಳ ಪ್ರಮುಖವಾಗಿದೆ. ನಮ್ಮ ಬದುಕಿನಲ್ಲಿ ಕೆಲವೊಂದು ಭಾಗ್ಯದಿಂದ ದೊರೆತರೆ ಇನ್ನು ಕೆಲವು ಪುರುಷಾರ್ಥ ಸಾಧನೆ ಮಾಡಿದಲ್ಲಿ ಮಾತ್ರ ದೊರೆಯುವಂಥದ್ದು. ನಮ್ಮ ಅಪ್ಪ – ಅಮ್ಮ, ಅಣ್ಣ – ತಮ್ಮ ಇವರೆಲ್ಲಾ ನಮಗೆ ಭಾಗ್ಯದಿಂದ ದೊರೆತವರು. ಇವರನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಅಪ್ಪ – ಅಮ್ಮ ಇಷ್ಟವಾಗುವುದಿಲ್ಲ, ಅಣ್ಣ – ತಮ್ಮಂದಿರ ಬುದ್ಧಿ ಸರಿ ಇಲ್ಲ ಅಂದರೂ ಅವರನ್ನು ಬದಲಾಯಿಸಿಕೊಳ್ಳಲು ಮಾತ್ರ ಸಾಧ್ಯವೇ ಇಲ್ಲ. […]
ಸಂಘದ ಗುಣಮಟ್ಟದಲ್ಲಿ ವಾರದ ಸಭೆಗಳು ಮತ್ತು ನಿರ್ಣಯಗಳ ಪಾತ್ರ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಯೋಜನೆಯ ಪಾರದರ್ಶಕ ವರದಿಗಳು ಹಾಗೂ ಲೆಕ್ಕಾಚಾರದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳಲಾಗಿದೆ. ಸಂಘದ ವ್ಯವಹಾರ, ಲೆಕ್ಕಾಚಾರಗಳನ್ನು ಪಾರದರ್ಶಕವಾಗಿ ಹಾಗೂ ಗುಣಮಟ್ಟಯುಕ್ತವಾಗಿ ನಿರಂತರವಾಗಿ ಉತ್ತಮ ರೀತಿಯಿಂದ ನಡೆಸಿಕೊಂಡು ಹೋಗಲು ವಾರದ ಸಭೆಯೂ ಒಂದು ಪ್ರಮುಖ ಕಾರಣವಾಗಿದೆ. ಸಂಘದ ವಾರದ ಸಭೆಗಳು ಸಂಘದ ಜೀವಾಳವಾಗಿದೆ. ವಾರದ ಸಭೆಗಳನ್ನು ನಡೆಸುವುದು ಸ್ವಸಹಾಯ ಸಂಘ ಚಳುವಳಿಯ ಒಂದು ಪ್ರಮುಖ ಭಾಗವಾಗಿದೆ. ಯೋಜನೆಯಲ್ಲಿ ವಾರದ ಸಭೆಗಳಿಗೆ ಅತೀ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಏಕೆಂದರೆ, ಸಂಘದ ಗುಣಮಟ್ಟ, ನಿರಂತರತೆ ಹಾಗೂ […]
ಸರ್ಪದೋಷ ನಿವಾರಕ ಕ್ಷೇತ್ರ
ಡಾ. ಚಂದ್ರಹಾಸ್ ಚಾರ್ಮಾಡಿ ನಾಗ ಪ್ರತಿಷ್ಠೆಯನ್ನು ಸಾಮಾನ್ಯವಾಗಿ ಅವರವರ ಭೂಮಿಯಲ್ಲಿ ಮಾಡುತ್ತಾರೆ. ನಾಗ ಪ್ರತಿಷ್ಠೆಗೆ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶವನ್ನು ಕೊಡುವುದು ತುಂಬಾ ವಿರಳ. ಆದರೆ ಅಂತಹ ಕ್ಷೇತ್ರವೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದ ವಿದುರಾಶ್ವತ್ಥ ಎಂಬ ಊರಿನಲ್ಲಿದೆ.ನಾಗನಿಗೆ ಮೊದಲ ಪೂಜೆ : ಸರ್ಪದೋಷಕ್ಕೆ ನಾಗಾರಾಧನೆ, ಹಾಲಿನ ಅಭಿಷೇಕ, ಆಶ್ಲೇಷಬಲಿ, ಪ್ರತಿಷ್ಠೆ ಹೀಗೆ ಹಲವಾರು ಪರಿಹಾರಗಳಿವೆ. ಹಾಗೆಂದು! ನಾಗಪ್ರತಿಷ್ಠೆಯನ್ನು ನಮ್ಮ ಸ್ವಂತ ಜಾಗದಲ್ಲಿ ಮಾಡುವುದು ಅಷ್ಟು ಸುಲಭವಲ್ಲ. ಅಲ್ಲಿ ಸಾಕಷ್ಟು ಸವಾಲುಗಳು ಇವೆ. ಶುದ್ಧತೆಗೂ ವಿಶೇಷ […]
ಕೀಲಿ ಕೈ ಎಂಬ ಕಾವಲುಗಾರ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕೀಲಿ ಕೈ ಎಂಬುದು ನಮಗೆಲ್ಲರಿಗೂ ಚಿರಪರಿಚಿತವಾದದ್ದು. ತಿಜೋರಿ, ಪೆಟ್ಟಿಗೆ, ಕೋಟೆ – ಕೊತ್ತಲಗಳಿಗೆ ಹೀಗೆ ಹಾಕಿದ ಬೀಗವನ್ನು ತೆರೆಯಲು ‘ಕೀಲಿ ಕೈ’ ಬೇಕೇ ಬೇಕು. ಅದರಲ್ಲೂ ಆಯಾ ಬೀಗಗಳ ಕೀಲಿ ಕೈ ಬೇಕೇ ಹೊರತು ಬೇರೆ ಯಾವುದೇ ಕೀಲಿ ಕೈಯಿಂದ ಸಾಧ್ಯವಿಲ್ಲ. ಬೆರಳಿನಷ್ಟು ಚಿಕ್ಕ ಗಾತ್ರದಿಂದ ಹಿಡಿದು ಬೃಹತ್ ಗಾತ್ರದವರೆಗಿನ ನಾನಾ ವಿನ್ಯಾಸದ ಬೀಗಗಳು ಹಾಗೂ ಅದರ ಕೀಲಿ ಕೈಗಳನ್ನು ನಾವು ಕಾಣಬಹುದು.ಹಿಂದಿನ ಕಾಲದಲ್ಲಿ ಎಲ್ಲಾ ಬೀಗ ಮತ್ತು ಕೀಗಳನ್ನು ಕೈಯಿಂದಲೇ […]
ಪ್ರತಿ ದಿನವೂ ಹೊಸ ದಿನಗಳಾಗಲಿ
ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು ಸಾಮಾನ್ಯವಾಗಿ ಜನವರಿ 1ನೇ ತಾರೀಕನ್ನು ಹೊಸ ವರ್ಷದ ದಿನ ಎಂದು ಹೆಚ್ಚಿನವರು ಆಚರಿಸುತ್ತಾರೆ. ಪ್ರಪಂಚದ ನಾನಾ ದೇಶಗಳು ಅನೇಕ ಹಿನ್ನೆಲೆಗಳ ಕಾರಣಗಳಿಂದ ತಮ್ಮದೇ ಆದ ಪ್ರತ್ಯೇಕ ಸಂವತ್ಸರಗಳನ್ನು (ಕ್ಯಾಲೆಂಡರ್) ಹೊಂದಿದ್ದಾರೆ. ಪ್ರಪಂಚಾದ್ಯಂತ ವ್ಯವಹಾರಿಕ ಹಾಗೂ ಇತರ ಏಕರೂಪದ ಅಗತ್ಯಗಳ ಕಾರಣಗಳಿಂದ ಇಂಗ್ಲಿಷ್ ಕ್ಯಾಲೆಂಡರನ್ನು ಅಧಿಕೃತವಾಗಿ ಪರಿಗಣಿಸಿ ಎಲ್ಲಾ ದೇಶಗಳು ಪಾಲಿಸುತ್ತಿರುವುದು ಒಂದು ಉತ್ತಮ ವ್ಯವಸ್ಥೆಯಾಗಿದೆ. ಆದುದರಿಂದ ಆ ಕ್ಯಾಲೆಂಡರ್‍ನಂತೆ ಜನವರಿ 1ನೇ ತಾರೀಕನ್ನು ಹೊಸ ವರ್ಷವಾಗಿ ಸಂಭ್ರಮಿಸುತ್ತಿರುವುದು ವಿಶ್ವದಾದ್ಯಂತ […]
ಜನವರಿ – 2025
ಬ್ರೆಡ್ ಮಾರುತ್ತಿದ್ದವನು ಹಲವರ ಬಾಳಿಗೆ ಬೆಳಕು ತಂದ!
– ಎ. ಆರ್. ಮಣಿಕಾಂತ್
ಭಾಗ್ಯ ಮತ್ತು ಪುರುಷಾರ್ಥ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸಂಘದ ಗುಣಮಟ್ಟದಲ್ಲಿ ವಾರದ ಸಭೆಗಳು ಮತ್ತು ನಿರ್ಣಯಗಳ ಪಾತ್ರ
– ಅನಿಲ್ ಕುಮಾರ್ ಎಸ್. ಎಸ್.
ಕೀಲಿ ಕೈ ಎಂಬ ಕಾವಲುಗಾರ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಪ್ರತಿ ದಿನವೂ ಹೊಸ ದಿನಗಳಾಗಲಿ
ಅನಿಲ್ ಕುಮಾರ್ ಎಸ್. ಎಸ್.