ಏಳು ಅಡಿ ರೂಮಿನಲ್ಲಿ ಯಲ್ಲವ್ವಳ ಬದುಕು

ಚಂದ್ರಹಾಸ್ ಚಾರ್ಮಾಡಿ ಊರಿನಲ್ಲಿ ದೊರೆಯುವ ಕಲ್ಲುಗಳಿಂದ ಗೋಡೆಕಟ್ಟಿ ಏಳು ಅಡಿ ಉದ್ದ, ಮೂರು ಅಡಿ ಅಗಲದ ಮನೆ ನಿರ್ಮಿಸಲು ಸಾಧ್ಯನಾ? ಗೂಡಿನ ಗಾತ್ರದ ಈ ಮನೆಯಲ್ಲಿ ವಾಸಿಸುವುದಾದರೂ ಹೇಗೆ? ಕಲ್ಲುಗಳು ಜರಿದು ಬೀಳಲ್ವಾ! ಗಾಳಿಗೆ ತಗಟುಶೀಟು ಹಾರಿ ಹೋಗಲ್ವಾ? ಮಳೆ ನೀರು ಒಳಗೆ ಬರಲ್ವಾ? ಅಡುಗೆ, ಮಲಗುವ, ದಿನಸಿಗಳ ಸಂಗ್ರಹಣೆ ಎಲ್ಲಿ ಮಾಡುತ್ತಾರೆ? ಹೀಗೆ ಹತ್ತಾರು ಪ್ರಶ್ನೆಗಳು ನಿಮ್ಮಲ್ಲಿರಬಹುದಲ್ಲವೇ? ಈ ಎಲ್ಲ ಸಮಸ್ಯೆಗಳ ಮಧ್ಯೆ ಕಳೆದ ಹದಿನಾರು ವರ್ಷಗಳಿಂದ ಗೂಡಿನ ಗಾತ್ರದ ಮನೆಯಲ್ಲಿ ಬದುಕು ಸಾಗಿಸಿದ ಯಲ್ಲವ್ವರವರನ್ನು […]

ಬಾಳಿಗೆ ಪ್ರೇರಣೆಯಾಗುವ ಹಿರಿಯರ ಸ್ಮರಣೆ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಮ್ಮ ಬದುಕಿನಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ, ಪರಂಪರೆ, ಪದ್ಧತಿ, ರೀತಿ – ನೀತಿಗಳನ್ನು ಆಚರಿಸುತ್ತೇವೆ. ನಮ್ಮ ಪೂರ್ವಜರನ್ನು, ಹಿರಿಯರನ್ನು ವರ್ಷಕ್ಕೊಮ್ಮೆಯಾದರೂ ಸ್ಮರಿಸುವಂಥ, ನಮ್ಮನ್ನು ಅಗಲಿದ ಅವರಿಗೆ ಗೌರವ ಸಲ್ಲಿಸುವಂಥ ಆಚರಣೆಗಳು ನಮ್ಮಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ಕಡೆಗಳಲ್ಲಿ ಇರುವುದು ನಮಗೆಲ್ಲ ತಿಳಿದಿರುವಂಥದ್ದು. ನಾವೂ ಕೂಡ ಮಹಾಲಯ ಆಚರಣೆ ಸಮಯದಲ್ಲಿ, ಇನ್ನು ಕೆಲವರು ದೀಪಾವಳಿಯ ಪಾಡ್ಯ ದಿನ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಅವರನ್ನು ಸ್ಮರಿಸಿಕೊಳ್ಳುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ನಮ್ಮನ್ನಗಲಿದ ಹಿರಿಯರಿಂದ ನಾವು […]

ಆರೋಗ್ಯ ವಿಮೆ ಮಾಡಿಸಿ ನಿಶ್ಚಿಂತೆಯಿಂದಿರಿ

ಡಾ. ಎಲ್. ಎಚ್. ಮಂಜುನಾಥ್ ಕಳೆದ ಐದು ವರ್ಷಗಳಿಂದೀಚೆಗೆ ಚಿಕಿತ್ಸಾ ವೆಚ್ಚಗಳು ಗಣನೀಯವಾಗಿ ಜಾಸ್ತಿಯಾಗಿವೆ. ಆರೋಗ್ಯ ಸಮಸ್ಯೆ ಬಂದಾಗ ಸಾಮಾನ್ಯರು ಮತ್ತಷ್ಟು ಬಡವರಾಗುತ್ತಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನೆರವು ಪಡೆದುಕೊಂಡು ಅನೇಕ ನೂತನ ವ್ಯವಹಾರಗಳನ್ನು ಪ್ರಾರಂಭಿಸಿರುವ ನನ್ನ ಸಹೋದರ ಸಹೋದರಿಯರು ಈ ನಿಟ್ಟಿನಲ್ಲಿ ಬಹಳಷ್ಟು ಜಾಗೃತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಚಿಂತಿಸಿದ ಪೂಜ್ಯರು 2003ನೇ ಇಸವಿಯಲ್ಲಿಯೇ ಪ್ರಾರಂಭಿಸಿದ ಆರೋಗ್ಯ ವಿಮಾ ಯೋಜನೆ ‘ಸಂಪೂರ್ಣ ಸುರಕ್ಷಾ’. ಬಹುಶಃ ಭಾರತ ದೇಶದ ಪ್ರಥಮ ಸಮುದಾಯ ಆರೋಗ್ಯ ವಿಮಾ ಯೋಜನೆ ಎಂದು […]

ಗೋಮಾತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆಸುಟ್ಟರೇ ನೊಸಲಿಗೆ ವಿಭೂತಿಯಾದೆತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆನೀನಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವು ನಾನು.ಎಸ್. ಜಿ. ನರಸಿಂಹಾಚಾರ್‌ರವರ ಈ ಕವಿತೆಯ ಮೂಲಕ ಗೋವುಗಳಿಂದಾಗುವ ಪ್ರಯೋಜನಗಳ ಅರಿವು ನಮಗಾಗುತ್ತದೆ. ಹಾಲು, ಮೊಸರು ಕಡೆದಾಗ ಬರುವ ಬೆಣ್ಣೆಯಿಂದ ತುಪ್ಪವಾಗಿ, ಕೃಷಿಕರಿಗೆ ಸೆಗಣಿ ಮತ್ತು ಗೊಬ್ಬರವಾಗಿ, ಉಳುಮೆಗೆ ಎತ್ತುವಾಗಿ, ಋಷಿ ಮುನಿಗಳಿಗೆ ಧಾರ್ಮಿಕ ಕ್ರಿಯಾ ವಿಧಾನಗಳಿಗೆ, ವಿಭೂತಿಯಾಗಿ ಹೀಗೆ ಗೋವುಗಳಿಂದಾಗುವ ಪ್ರಯೋಜನಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.ದನದ ಹಾಲನ್ನು ಅಮೃತಕ್ಕೆ ಸಮಾನವಾಗಿ ಹೋಲಿಸಲಾಗುತ್ತದೆ. ಯಾಕೆಂದರೆ […]

ಬ್ಯಾಂಕ್ ಮ್ಯಾನೇಜರ್‌ನ ನೋವು

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್. ತನ್ನ ತಪ್ಪಿನಿಂದಾಗಿ ಸಾಲದ ವ್ಯವಹಾರಗಳನ್ನು ಹಾಳುಮಾಡಿಕೊಂಡು ಅಥವಾ ಯಾರಿಗೂ ಜಾಮೀನು ಹಾಕಿ ‘ಸಿಬಿಲ್’ನಲ್ಲಿ ತನ್ನ ಅಂಕಗಳನ್ನು ಕಳೆದುಕೊಂಡು ಕೊನೆಗೂ ಯಾವುದೇ ಸಾಲ ಪಡೆಯಲಾಗದೆ ಪರಿತಪಿಸುವವರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿಸಿದ್ದೆ. ಇದಾದರೂ ಹೆಚ್ಚು ಕಡಿಮೆ ಸ್ವಯಂಕೃತ ಅಪರಾಧದಿಂದ ಆಗಿದ್ದಾಗಿದೆ. ಆದರೆ ಇನ್ನೊಂದು ಸಮಸ್ಯೆ ಬಹಳ ವಿಚಿತ್ರವಾಗಿರುವಂತದ್ದು. ಯಾವುದೇ ಸಾಲ ಪಡೆಯಲು ಸಾಮಾನ್ಯವಾಗಿ ಓರ್ವ ಜಾಮೀನುದಾರ ಬೇಕಾಗಿರುತ್ತದೆೆ. ಸಾಲಕ್ಕಾಗಿ ಹೇಗೋ ಕಷ್ಟಪಟ್ಟು ಆದಾಯವಿರುವ ಓರ್ವ ಜಾಮೀನುದಾರನನ್ನು ಹುಡುಕುತ್ತಾರೆ. ಆದರೆ ಕೊನೆಯಲ್ಲಿ ಅವರ ಸಿಬಿಲ್ […]

ದೇವಾಲಯ ಎಂಬ ಪವಿತ್ರ ಕ್ಷೇತ್ರ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಈ ಜಗತ್ತು ನಂಬಿಕೆ, ಆತ್ಮವಿಶ್ವಾಸ, ಸತ್ಯ, ಧರ್ಮಗಳ ಆಧಾರದಲ್ಲೆ ನಿಂತಿದೆ. ಪ್ರತಿಯೊಂದು ಧರ್ಮದವರಿಗೂ ಅವರದ್ದೇ ಆದ ಧಾರ್ಮಿಕ ಶ್ರದ್ಧಾಕೇಂದ್ರಗಳಿವೆ. ಈ ಶ್ರದ್ಧಾಕೇಂದ್ರಗಳು ಮಾನವೀಯ ಮೌಲ್ಯಗಳನ್ನು ಕಲಿಸುವ, ಬೆಳೆಸುವ, ಉಳಿಸುವ ಕೆಲಸದ ಜೊತೆಗೆ ಸಮಾಜವನ್ನು ಸಮಾನತೆ, ನಂಬಿಕೆಯ ಕೊಂಡಿಯಲ್ಲಿ ಕಟ್ಟುವ ಪ್ರಯತ್ನವನ್ನು ಮಾಡುತ್ತಿವೆ. ದೇವರಿದ್ದಾನೆ ಎಂದು ನಂಬುವವರಿಗೆ ಕಷ್ಟಗಳು ಎದುರಾದಾಗ, ಸುಖಗಳು ಬಂದಾಗ ಶ್ರದ್ಧಾಕೇಂದ್ರಗಳ ಮೊರೆ ಹೋಗುತ್ತಾರೆ. ಅಲ್ಲಿ ಸಿಗುವ ನೆಮ್ಮದಿ, ಧನಾತ್ಮಕ ಅಂಶಗಳು ಬೇರೆಲ್ಲೂ ಸಿಗಲಾರದು. ಆದ್ದರಿಂದಲೇ ವರ್ಷದುದ್ದಕ್ಕೂ ಧಾರ್ಮಿಕ ಕ್ಷೇತ್ರಗಳು […]