ಮದ್ಯಮುಕ್ತರಿಂದ ಮದ್ಯವರ್ಜನ ಶಿಬಿರ

ಕಾಸರಗೋಡಿನ ನವಜೀವನ ಸದಸ್ಯರ ಮಾದರಿ ಪ್ರಯತ್ನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮಾದರಿಗಳನ್ನು ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗಬೇಕೆಂಬುವುದು ಯೋಜನೆಯ ಮೂಲ ಆಶಯವಾಗಿದೆ. ಇದೀಗ ಯೋಜನೆಯ ಮಾದರಿ ಕಾರ್ಯಕ್ರಮಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶಿಗರ ಗಮನವನ್ನು ಸೆಳೆದಿವೆ. ಶ್ರೀಲಂಕಾದ ಅಧ್ಯಯನ ತಂಡವೊoದು ಇಲ್ಲಿನ ಮಾದರಿಗಳನ್ನು ಅಧ್ಯಯನ ನಡೆಸಿ ತನ್ನ ದೇಶದಲ್ಲೂ ಅಳವಡಿಸಲು ಉತ್ಸುಕತೆ ತೋರಿದ್ದು ಈ ಮಾತಿಗೆ ಸಾಕ್ಷಿಯಾಗಿದೆ. ಶ್ರದ್ಧಾಕೇಂದ್ರಗಳ ಸ್ವಚ್ಛತೆ, ಕೆರೆಗಳ ಸಂರಕ್ಷಣೆ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿ ಹೀಗೆ ಕೆಲವೊಂದು ಕಾರ್ಯಕ್ರಮಗಳನ್ನು ಈಗಾಗಲೇ ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. […]

ಜನಪದರ ವೇದ – ಗಾದೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಗಾಥಾ, ನಾಣ್ಣುಡಿ, ನಾಡುನುಡಿ, ಲೋಕೋಕ್ತಿ ಈ ಪದಗಳು ಸಮಾನಾರ್ಥಕಗಳು. ‘ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.’ ಈ ಗಾದೆಗಳು ಅರ್ಥವೈಶಿಷ್ಟö್ಯವನ್ನಲ್ಲದೆ ನೀತಿಯನ್ನೂ ಹೇಳುತ್ತವೆ. ಆದ್ದರಿಂದ ಮನುಷ್ಯನ ಜೀವನಕ್ಕೆ ಗಾದೆಗಳು ಮಹದುಪಕಾರಿಗಳಾಗಿವೆ.ಇವುಗಳು ಮನುಕುಲದ ನಂದಾದೀಪ, ಮಾನವನ ಬಾಳಿನ ಅನಂತಸಾಗರದಿoದ ಆರಿಸಿ ತೆಗೆದ ಅಣಿಮುತ್ತುಗಳು. ಅವು ಸಂದರ್ಭಾನುಸಾರವಾಗಿ ಹೊರಹೊಮ್ಮುವ ನುಡಿಗಳು. ಹುಟ್ಟಿ ಬಾಳಿದ ದೇಶ, ಕಾಲ, ಪರಿಸರಗಳನ್ನು ಸಾರ್ಥಕವಾಗಿ ಪ್ರತಿಬಿಂಬಿಸುವ ನುಡಿಗನ್ನಡಿ. ‘ಸಮುದ್ರದಲ್ಲಿ ಸೇರದ ವಸ್ತುವಿಲ’್ಲ ಎಂಬ ಉಕ್ತಿಯು […]

ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು

ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಸಬಲೀಕರಣದಲ್ಲಿ ಯೋಜನೆಯ ಪಾತ್ರಗಳನ್ನು ತಿಳಿದುಕೊಂಡಿದ್ದೆವು.ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘ ಪದ್ಧತಿಯು ದೇಶಾದ್ಯಂತ ಹೆಸರುವಾಸಿಯಾಗಿದ್ದರೆ, ಪುರುಷರಿಂದಲೂ ಸ್ವಸಹಾಯ ಸಂಘಗಳ ನಿರ್ವಹಣೆ ಸಾಧ್ಯ ಎನ್ನುವುದನ್ನು ಪೂಜ್ಯ ಶ್ರೀ ಹೆಗ್ಗಡೆಯವರು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇಶಕ್ಕೇ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಯೋಜನೆಯ ಪ್ರಾರಂಭದ ದಿನಗಳಲ್ಲಿ ರೈತರ ಸ್ವಸಹಾಯ ಸಂಘಗಳನ್ನು ಪೂಜ್ಯರು ಪ್ರಾರಂಭಿಸಿದರು. ೧೦ಕ್ಕಿಂತ ಹೆಚ್ಚು ರೈತರನ್ನೊಳಗೊಂಡ ಈ ಸಂಘಗಳು ‘ಪ್ರ‍್ರಗತಿಬಂಧು ಸ್ವಸಹಾಯ ಸಂಘಗಳು’ ಎಂದು ಪ್ರಸಿದ್ಧಿ ಪಡೆದವು. ಈ ಸ್ವಸಹಾಯ […]

ಯುವಜನತೆಯಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಲಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಇಂದಿನ ಮಕ್ಕಳನ್ನು ನೀನು ಏನಾಗಬೇಕೆಂದು ಕೇಳಿದರೆ, ಕ್ರಿಕೆಟಿಗನಾಗಬೇಕೆಂದು ಹೇಳುವವರೇ ಹೆಚ್ಚು. ಕ್ರಿಕೆಟ್ ಆಟಗಾರರಂತೆ ನಾವೂ ಕೂಡ ಫೋರ್, ಸಿಕ್ಸ್ ಹೊಡೆಯಬೇಕೆಂಬ ಆಸೆಯನ್ನೂ ವ್ಯಕ್ತಪಡಿಸುತ್ತಾರೆ. ತಾವು ನೋಡಿದ ಕ್ರಿಕೆಟ್ ಆಟಗಾರರನ್ನು ಇಷ್ಟಪಟ್ಟಿರುತ್ತಾರೆ ಹಾಗೂ ಅವರ ಹಾಗೆ ಆಗಬೇಕೆಂದು ಕನಸು ಕಾಣುತ್ತಾರೆ. ಕೆಲವು ಮಕ್ಕಳು ಪೈಲೆಟ್, ಪೊಲೀಸ್, ಸೈನಿಕ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚಬೇಕೆAದು ಹಂಬಲ ಹೊಂದಿರುತ್ತಾರೆ. ಕೆಲವು ಭಕ್ತರು ಕ್ಷೇತ್ರಕ್ಕೆ ಬಂದಾಗ ಹೇಳುವುದುಂಟು; ‘ಸ್ವಾಮಿ, ಮಕ್ಕಳು ಕ್ರಿಕೆಟ್ ಬಿಟ್ಟು ಬೇರೇನೂ ಆಡುವುದಿಲ್ಲ. […]

ತೋಟ ಬೆಳೆಸಿ ದುಂಬಿಗಳನ್ನು ಆಕರ್ಷಿಸಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಚಿಟ್ಟೆಯನ್ನು ಹಿಡಿಯಬೇಕಾದರೆ ಅದರ ಹಿಂದೆ ಓಡಿ ದಣಿಯಬೇಕಾಗಿಲ್ಲ. ಒಂದು ಸುಂದರ ಕೈತೋಟ ನಿರ್ಮಾಣ ಮಾಡಿದರೆ ದುಂಬಿಗಳೇ ಅಲ್ಲಿಗೆ ಹಾರಿಕೊಂಡು ಬರುತ್ತವೆ’ ಎಂಬ ಒಂದು ಮಾತಿದೆ. ಈ ಮಾತಿನ ಅರ್ಥ ಏನೆಂದರೆ ಸಮಾಜದಲ್ಲಿ ಸಿಕ್ಕಿದವರೆಲ್ಲರ ಕಾಲಿಗೆ ಬಿದ್ದು ಒಂದು ಅವಕಾಶ ಕೊಡಿ ಅಂತ ಬೇಡಿಕೊಳ್ಳುವುದು, ಶಿಫಾರಸ್ಸಿಗಾಗಿ ದೊಡ್ಡವರ, ರಾಜಕಾರಣಿಗಳ ಮನೆ ಬಾಗಿಲಿಗೆ ಅಲೆದಾಡುವುದು ಇವನ್ನೆಲ್ಲ ಮಾಡಬೇಕಾಗಿಲ್ಲ. ಬದಲಾಗಿ ನಾಯಕತ್ವ, ಸಂವಹನ ಕಲೆಗಳನ್ನು ಕರಗತ ಮಾಡಿಕೊಂಡು, ಮನಸ್ಸು-ಬುದ್ಧಿಗಳನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ದುಶ್ಚಟಗಳಿಗೆ ಬಲಿಬೀಳದಂತೆ ನೋಡಿಕೊಳ್ಳಬೇಕು. […]

ಎಲ್ಲರ ಮನ್ನಣೆಗೂ ಪಾತ್ರರಾಗುವ ಯೋಜನೆಯ ಸದಸ್ಯರು

ಅನಿಲ್ ಕುಮಾರ್ ಎಸ್.ಎಸ್. ಆರ್ಥಿಕ ಸಬಲೀಕರಣದ ಜೊತೆಯಲ್ಲಿಯೇ ಸಾಮಾಜಿಕ ಸಬಲೀಕರಣವನ್ನು ಸಾಧಿಸಲು ಯೋಜನೆಯು ಹೇಗೆ ಸಹಕಾರಿಯಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿದೆ. ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಸಾಮಾನ್ಯ ಮಹಿಳೆಯಲ್ಲಿ ಉತ್ತಮ ಸಂಸ್ಕಾರ ಮತ್ತು ನಾಯಕತ್ವ ಗುಣಗಳನ್ನು ಯಾವ ರೀತಿ ಬೆಳೆಸಲಾಗುತ್ತದೆ ಎಂಬುವುದನ್ನು ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಅವುಗಳ ಬಗ್ಗೆ ಇನ್ನೊಂದಿಷ್ಟು ಮಾಹಿತಿಗಳನ್ನು ತಿಳಿಯೋಣ.ಯೋಜನೆಯ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರು ಸಮಾಜದಲ್ಲಿ ಸಹಜವಾಗಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಅವರಲ್ಲಿರುವ ಶಿಸ್ತು, ಸಂಸ್ಕಾರ, ಮಾತನಾಡುವ ಶೈಲಿ, ಇತರರಿಗೆ ನೀಡುವ ಗೌರವ ಇತ್ಯಾದಿಗಳಿಂದ […]

ರೀಲ್ಸ್‌ ಎಡಿಟ್‌ ಮಾಡಲು ಇನ್ಸ್ಟಾಗ್ರಾಂ ಎಡಿಟ್ಸ್

ಇಂದುಧರ ಹಳೆಯಂಗಡಿ ನಾವು ಇಂದು ಕಂಟೆoಟ್ ಕ್ರಿಯೇಟರ್‌ಗಳ ಜಾಯಮಾನದಲ್ಲಿದ್ದೇವೆ. ಅವರಿಗೆ ಸಹಾಯವಾಗಲೆಂದೇ ಮಾರುಕಟ್ಟೆಯಲ್ಲಿ ವಿವಿಧ ಉಪಕರಣಗಳು, ಆ್ಯಪ್, ವೆಬ್‌ಸೈಟ್‌ಗಳು ಇವೆ. ಅದಕ್ಕೀಗ ಹೊಸ ಸೇರ್ಪಡೆ ‘ಇನ್ಸ್ಟಾಗ್ರಾಂ ಎಡಿಟ್ಸ್’. ಕಂಟೆoಟ್ ಕ್ರಿಯೇಟರ್‌ಗಳಿಗೆ ಸಹಾಯವಾಗಲಿ ಎಂದು ಹಾಗೂ ಟಿಕ್‌ಟಾಕ್ ಒಡೆತನದ ಜನಪ್ರಿಯ ವೀಡಿಯೋ ಎಡಿಟಿಂಗ್ ಆ್ಯಪ್ ಕ್ಯಾಪ್‌ಕಟ್‌ಗೆ ಠಕ್ಕರ್ ಕೊಡುವ ಸಲುವಾಗಿ ಇನ್‌ಸ್ಟಾಗ್ರಾಂ ‘ಎಡಿಟ್ಸ್’ ಹೆಸರಿನ ಹೊಸ ಎಡಿಟಿಂಗ್ ಆ್ಯಪ್ ಅನ್ನು ಪರಿಚಯಿಸಿದೆ.ಒಂದೇ ಸೂರಿನಡಿ ಎಲ್ಲವೂ ಲಭ್ಯ : ಕಂಟೆoಟ್ ಮಾಡುವವರಿಗೆ ಅದರ ಕಷ್ಟದ ಅರಿವಿರುತ್ತದೆ. ಸಾಮಾನ್ಯವಾಗಿ ಸ್ಮಾರ್ಟ್ಫೋನ್‌ನಲ್ಲಿಯೇ ಒಂದು […]

ಆರೋಗ್ಯ ಭಾಗ್ಯವನ್ನೊದಗಿಸುವ ಯೋಗ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡುವ ಮೂಲಕ ಭಾರತವು ಇಂದು ವಿಶ್ವಗುರುವಾಗಿದೆ. ಭಾರತದಿಂದ ಪ್ರೇರಿತವಾದ ಯೋಗ ಜಗತ್ತಿನಾದ್ಯಂತ ಪಸರಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯೋಗದಿಂದ ಯಾವುದೇ ವೆಚ್ಚವಿಲ್ಲದೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆಯಲು, ದೇಹ, ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹತೋಟಿ ಹೊಂದಲು ಸಾಧ್ಯವಿದೆ. ಯೋಗವು ದೇಹ ಮತ್ತು ಮನಸ್ಸನ್ನು ಕೂಡಿಸುವ ಕೆಲಸವನ್ನು ಮಾಡುತ್ತದೆ. ಯೋಗಾಭ್ಯಾಸ ಅಂದರೆ ಕೇವಲ ವ್ಯಾಯಾಮ ಅಲ್ಲ. ದೇಹ, ಮನಸ್ಸು ಮತ್ತು ಇಂದ್ರಿಯಗಳ ಹತೋಟಿಯೊಂದಿಗೆ ನೆಮ್ಮದಿಯ ಸಾರ್ಥಕ […]

ಮುಂಜಾಗ್ರತೆಗಳೇ ಆಪತ್ತಿನ ಮದ್ದು

ಅನಿಲ್ ಕುಮಾರ್ ಎಸ್. ಎಸ್. ಪ್ರಕೃತಿಯಲ್ಲಾಗಲೀ, ಸಾಮಾನ್ಯ ಜೀವನದಲ್ಲಾಗಲೀ ಆಪತ್ತುಗಳು ಸಹಜವಾಗಿ ಬರುತ್ತವೆ. ಅದು ಯಾರ ಕೈಯಲ್ಲಿಯೂ ಇರುವುದಿಲ್ಲ. ಆದರೆ ಮುಂಜಾಗ್ರತೆ ವಹಿಸುವುದು ಮಾತ್ರ ನಮ್ಮ ಕೈಯಲ್ಲಿರುತ್ತದೆ. ಎಷ್ಟೋ ಆಪತ್ತುಗಳಿಂದ ಅಪಾರ ನಷ್ಟ ಉಂಟಾಗಿದ್ದನ್ನು ಗಮನಿಸಿದಾಗ ಒಂದು ಸಣ್ಣ ಮುಂಜಾಗ್ರತೆಯನ್ನು ಕೈಗೊಳ್ಳುವ ಮೂಲಕ ಆ ದೊಡ್ಡ ಆಪತ್ತನ್ನು ಸುಲಭವಾಗಿ ತಪ್ಪಿಸಬಹುದಿತ್ತಲ್ಲವೇ ಎಂದು ಎಷ್ಟೋ ಸಲ ಪರಿತಪಿಸಿದ್ದೇವೆ. ‘ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ’್ಲ ಎಂಬ ನೆಪ ಹೇಳಿ ಸ್ವಲ್ಪ ಸಮಯದಲ್ಲಿ ನಡೆದ ಘಟನೆಯನ್ನು ಮರೆತುಬಿಡುತ್ತೇವೆ. ಘಟನೆ ನಡೆದಾಗ […]