ದೇಶದ ನಂಬರ್‌ 1 ಬಿ.ಸಿ. ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆ

ದಿನಾಂಕ 13.1.2025ರಂದು ‘ವರ್ಲ್ಡ್ ಬ್ಯಾಂಕ್’ನ (World Bank)ನ ಹಿರಿಯ ಅಧಿಕಾರಿಗಳು, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಹಿರಿಯ ಅಧಿಕಾರಿಗಳು ಹಾಗೂ ಸಾಧನ್ ಸಂಸ್ಥೆಯ ಅಧಿಕಾರಿಗಳು ‘ಗ್ರಾಮಾಭಿವೃದ್ಧಿ ಯೋಜನೆ’ಯ ಕೇಂದ್ರ ಕಛೇರಿಗೆ ಭೇಟಿ ನೀಡಿದ್ದರು. ವರ್ಲ್ಡ್ ಬ್ಯಾಂಕ್ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಶಾಲಿಯಾದ ಆರ್ಥಿಕ ಸಂಸ್ಥೆಯಾಗಿದ್ದು, 189 ದೇಶಗಳ ಜಾಲವನ್ನು ಹೊಂದಿರುತ್ತದೆ. ಗ್ರಾಮೀಣ ಪ್ರದೇಶದ ಆರ್ಥಿಕ ಸಬಲೀಕರಣದ ಪ್ರಮುಖ ಯೋಜನೆಗೂ ವರ್ಲ್ಡ್ ಬ್ಯಾಂಕಿನಿoದ ಭಾರತವು ಕೆಲವು ಆರ್ಥಿಕ ಸೌಲಭ್ಯವನ್ನು ಪಡೆದುಕೊಂಡಿರುತ್ತದೆ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಅನೇಕ ಸ್ವಸಹಾಯ ಸಂಘಗಳ ಮಾದರಿಗಳ ಬಗ್ಗೆ ಅಧ್ಯಯನ ನಡೆಸಿರುತ್ತಾರೆ. ಹಾಗೆಯೇ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ವ್ಯವಸ್ಥೆ ಮತ್ತು ಅವುಗಳಿಂದ ಆದ ಪ್ರಗತಿಯ ಬಗ್ಗೆಯೂ ಅಧ್ಯಯನ ನಡೆಸಿರುತ್ತಾರೆ. ನಮಗೆಲ್ಲರಿಗೂ ಹೆಮ್ಮೆ ತರುವ ವಿಷಯವೇನೆಂದರೆ, ಈ ಎಲ್ಲ ವ್ಯವಸ್ಥೆಗಳಲ್ಲಿ ನಮ್ಮ ನಿಮ್ಮೆಲ್ಲರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘ ಮಾದರಿಯು ದೇಶದಲ್ಲಿಯೇ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ತಿಳಿದು ಇನ್ನೂ ಹೆಚ್ಚಿನ ಅಧ್ಯಯನವನ್ನು ನಡೆಸಿರುತ್ತಾರೆ.
ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಆದರೆ ನಿಯಮಾನುಸಾರ ದಾಖಲೆ, ಆಸ್ತಿಪಾಸ್ತಿಗಳ ಅಡಮಾನ, ವೈಯಕ್ತಿಕ ಗ್ಯಾರಂಟಿ, ಆದಾಯ ದೃಢೀಕರಣ ಮುಂತಾದವುಗಳನ್ನೆಲ್ಲ ಒದಗಿಸಬೇಕು. ಸಾಮಾನ್ಯವಾಗಿ ಬಡವರಲ್ಲಿ ದಾಖಲೆಗಳು ಇಲ್ಲದೇ ಇರುವುದರಿಂದ ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲದಿಂದ ವಂಚಿತರಾಗುತ್ತಾರೆ. ಸಾಲದ ಅನಿವಾರ್ಯ ಆದಾಗ ಹೆಚ್ಚಿನ ಬಡ್ಡಿದರದ ಕೈಸಾಲ ಮಾಡಿ ಕೈಸುಟ್ಟುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಬಡವರ ಬದುಕಿಗೆ ಬೆಳಕಾಗಿ ಬಂದವರು ಪೂಜ್ಯ ಶ್ರೀ ಹೆಗ್ಗಡೆಯವರು. ಲಕ್ಷಾಂತರ ಬಡವರಿಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬಿ.ಸಿ. ಮಾದರಿಯಲ್ಲಿ ಬ್ಯಾಂಕಿಗೆ ಗ್ಯಾರಂಟಿ ನಿಂತು, ಬ್ಯಾಂಕಿನಿoದ ನೇರವಾಗಿ ಸ್ವಸಹಾಯ ಸಂಘಗಳ ಮೂಲಕ ಮನೆ ಬಾಗಿಲಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ದೊರಕಿಸಿಕೊಟ್ಟು, ಬಡವರ ಆರ್ಥಿಕ ಸಬಲೀಕರಣಕ್ಕೆ ಕಾರಣೀಕರ್ತರಾದವರು. ಗರಿಷ್ಠ ಮೊತ್ತದ ಸಾಲವನ್ನು ಯಾವುದೇ ದಾಖಲೆ, ಆಸ್ತಿ ಅಡಮಾನಗಳಿಲ್ಲದೇ, ಗ್ಯಾರಂಟಿ ಇಲ್ಲದೇ ಕೇವಲ ಶೇ.14 ಬಡ್ಡಿದರದಲ್ಲಿ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶೇ.13.5, ಇತರ ಜಿಲ್ಲೆಗಳಲ್ಲಿ ಶೇ.14, ಬೆಳಗಾಂ ಜಿಲ್ಲೆಯಲ್ಲಿ ಶೇ.15) ಸುಲಭವಾಗಿ ಬ್ಯಾಂಕಿನಿoದ ಸಿಗುವಂತಾಯಿತು. ಈ ಬ್ಯಾಂಕ್ ಬಡ್ಡಿದರದಲ್ಲಿ ಯೋಜನೆಗೆ ಬ್ಯಾಂಕ್ ನೀಡುವ ಸೇವಾಶುಲ್ಕ ಶೇ.೫ ಒಳಗೊಂಡಿರುತ್ತದೆ. ಒಂದು ರೀತಿಯಲ್ಲಿ ದೇಶದಲ್ಲೇ ಅತೀ ಕಡಿಮೆ ಬಡ್ಡಿದರದ ಬಿ.ಸಿ. ವ್ಯವಸ್ಥೆಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಲ ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆ ಅಲ್ಲ. ಬದಲಾಗಿ ಗ್ರಾಮ ಗ್ರಾಮಗಳಿಗೆ SHG Credit Linkage Programme ಮೂಲಕ ಬ್ಯಾಂಕಿನ ಆರ್ಥಿಕ ಸೌಲಭ್ಯವನ್ನು ಬಡವರಿಗೆ ತಲುಪಿಸುವ ಬ್ಯಾಂಕಿನ Business Correspondence ಸಂಸ್ಥೆಯಾಗಿದೆ.
ಅತೀ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕಿನಿoದ ಗರಿಷ್ಠ ಮೊತ್ತದ ಸಾಲ ಸೌಲಭ್ಯ ನೇರವಾಗಿ ಸಿಗುತ್ತಿರುವುದರಿಂದ ಅನೇಕ ಆದಾಯ ತರುವ ಆರ್ಥಿಕ ಚಟುವಟಿಕೆಗಳನ್ನು ಬಡವರಿಗೆ ಕೈಗೊಳ್ಳಲು ಸಾಧ್ಯವಾಯಿತು. ಅತ್ಯಂತ ಪಾರದರ್ಶಕ, ತಂತ್ರಜ್ಞಾನ, ಸುರಕ್ಷತೆ, ಸಂಘಗಳಿಗೆ ಬ್ಯಾಂಕ್‌ಗಳ ಕ್ಯಾಶ್ ಕ್ರೆಡಿಟ್ (ಸಿ.ಸಿ.) ಮಾದರಿಯಲ್ಲಿ ಸಾಲ ಸೌಲಭ್ಯ ಹಾಗೂ ಅದೇ ಸಿ.ಸಿ. ಖಾತೆಗೆ ಸದಸ್ಯರ ಉಳಿತಾಯದ ಜಮೆ, ಲಾಭಾಂಶ ಗಳಿಕೆ ಇತ್ಯಾದಿ ಎಲ್ಲಾ ವಿಶಿಷ್ಟತೆಗಳಿಂದಾಗಿ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘ ಮಾದರಿ ದೇಶದಲ್ಲೇ ಒಂದು ಶ್ರೇಷ್ಠ ಮಾದರಿ ಆಗಿದೆ ಹಾಗೂ ಬಡವರ ಆರ್ಥಿಕ ಸಬಲೀಕರಣದ ಕೀಲಿಕೈ ಆಗಿದೆ ಎಂದು ತಿಳಿದುಕೊಂಡ ವರ್ಲ್ಡ್ ಬ್ಯಾಂಕಿನ ಹಿರಿಯ ಅಧಿಕಾರಿಗಳು ಯೋಜನೆಯ ಕಾರ್ಯಗಳನ್ನು ಪ್ರಶಂಸಿಸಿದರು. ಬ್ಯಾಂಕ್‌ಗಳಲ್ಲಿರುವ ಅತ್ಯಂತ ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಯುವಂತಹ ತಂತ್ರಜ್ಞಾನಗಳoತೆಯೇ, ಯೋಜನೆಯೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬ್ಯಾಂಕ್‌ಗಳ ಸೇವೆಯನ್ನು ಮಾದರಿ ಡಿಜಿಟಲ್ ವ್ಯವಸ್ಥೆಗಳಲ್ಲಿ ನೀಡುತ್ತಿದೆ. ಈ ವ್ಯವಸ್ಥೆಗೆ ಅಂತಾರಾಷ್ಟಿçÃಯ ಮಾನ್ಯತೆಯಾದ ISO 27001 ಲಭ್ಯವಾಗಿರುತ್ತದೆ.
ಗ್ರಾಮಾಭಿವೃದ್ಧಿ ಯೋಜನೆ ಕೇವಲ ದೇಶದ ಅತೀ ದೊಡ್ಡ ಸಾಂಸ್ಥಿಕ ಬ್ಯಾಂಕಿoಗ್ ಬಿ.ಸಿ. ಅಷ್ಟೇ ಆಗಿಲ್ಲ. ಹಾಗೆಯೇ ಒಂದು ದೊಡ್ಡ ಚಾರಿಟೇಬಲ್ ಟ್ರಸ್ಟ್ ಕೂಡಾ ಆಗಿದೆ. ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆಯನ್ನು ಒಂದು ಚಾರಿಟೇಬಲ್ ಟ್ರಸ್ಟ್ ಆಗಿ ನೋಂದಾಯಿಸಿದ್ದಾರೆ. ಇಲ್ಲಿ ತಿಳಿಯಬೇಕಾದ ಅತ್ಯಂತ ಪ್ರಮುಖ ವಿಷಯವೆಂದರೆ, ಯಾವುದೇ ಸಂಸ್ಥೆ ಚಾರಿಟೇಬಲ್ ಸಂಸ್ಥೆಯಾಗಿ ನೋಂದಾವಣೆಯಾದರೆ ತನಗೆ ಬರುವ ಯಾವುದೇ ಆದಾಯವನ್ನು ತನ್ನ ಖರ್ಚುಗಳಿಗೆ ಮತ್ತು ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾತ್ರ ವಿನಿಯೋಗಿಸಬೇಕು. ಹೀಗೆ ವಿನಿಯೋಗಿಸಿಕೊಂಡು ನಂತರ ಯಾವುದೇ ಮಿಗತೆ (ಆದಾಯದಲ್ಲಿ ಉಳಿಕೆ) ಉಳಿದಿದ್ದಲ್ಲಿ, ಆ ಮಿಗತೆಯನ್ನು ಯಾವುದೇ ಕಾರಣಕ್ಕೂ ಸಂಸ್ಥೆಯ ಅಧ್ಯಕ್ಷರಾಗಲೀ, ಟ್ರಸ್ಟಿಗಳಾಗಲೀ ಪಡೆದುಕೊಳ್ಳುವಂತಿಲ್ಲ. ಬದಲಾಗಿ ಸಮಾಜದ ಅಭಿವೃದ್ಧಿಗಾಗಿ ವಿನಿಯೋಗಿಸುವುದು. ಪೂಜ್ಯ ಶ್ರೀ ಹೆಗ್ಗಡೆಯವರು ಯೋಜನೆಯನ್ನು ‘ಚಾರಿಟೇಬಲ್ ಟ್ರಸ್ಟ್’ ಆಗಿ ನೋಂದಾಯಿಸುವುದರ ಮೂಲಕ ಇದೇ ಸಂಸ್ಥೆಯನ್ನು ಸಮಾಜದ ಕಲ್ಯಾಣಕ್ಕಾಗಿ ಅರ್ಪಿಸಿದ್ದಾರೆ. ಯೋಜನೆಗೆ ಬರುವ ಆದಾಯದಿಂದ ಒಂದಿಷ್ಟು ಮಿಗತೆಯನ್ನು ಉಳಿಸಿ ಸಮಾಜದಲ್ಲಿರುವ ಬಡವರ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳಿಗೆ ವೆಚ್ಚ ಮಾಡುತ್ತಿರುವುದು ನಿಮಗೆಲ್ಲ ತಿಳಿದಿದೆ. ಯೋಜನೆ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಸಂಸ್ಥೆಯ ಅಧ್ಯಕ್ಷರಾದ ಪೂಜ್ಯರು ಪ್ರತೀ ವರ್ಷ ಯೋಜನೆಗೆ ಸುಮಾರು ರೂ. 20-25 ಕೋಟಿಯಷ್ಟು ದಾನ ಮಾಡುತ್ತಾರೆ. ಲಕ್ಷಾಂತರ ಬಡವರ ಬದುಕಿಗಾಗಿ ಜವಾಬ್ದಾರಿ ಹೊತ್ತು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇಡೀ ಸಂಸ್ಥೆಯನ್ನೇ ಸಮಾಜದ ಕಲ್ಯಾಣಕ್ಕಾಗಿ ಒಂದು ‘ಚಾರಿಟೇಬಲ್ ಟ್ರಸ್ಟ್’ನ್ನಾಗಿ ಸಮರ್ಪಿಸಿ ಕೋಟ್ಯಾಂತರ ಬದುಕುಗಳಿಗೆ ಬೆಳಕಾದರು ನಮ್ಮ ನಡೆದಾಡುವ ದೇವರು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *