ಅಧ್ಯಯನದಲ್ಲಿ ಆನಂದಪಡುವವರು

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರೇ ಹೇಳುವಂತೆ ಅವರ ಬರಹಗಳ ಮೊದಲ ಓದುಗರು ‘ಶ್ರೀ ಹೆಗ್ಗಡೆಯವರು’. ಮಾತೃಶ್ರೀಯವರ ಎಲ್ಲ ಬರಹಗಳನ್ನು ಓದಿರುವ ಶ್ರೀ ಹೆಗ್ಗಡೆಯವರು ಅವರ ಕೃತಿಗಳ ಬಿಡುಗಡೆ ಸಂದರ್ಭದಲ್ಲಿ ಯಾವ ರೀತಿಯ ಮಾರ್ಗದರ್ಶನ ನೀಡಿದರು ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ಸಾಕಷ್ಟು ‘ನಿರಂತರ’ದ ಓದುಗರು ಪತ್ರಿಕೆಗೆ ಕರೆ ಮಾಡಿ ಪೂಜ್ಯರ ಭಾಷಣದ ಆಡಿಯೋವನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಓದುಗರ ಕೋರಿಕೆಯಂತೆ ಪೂಜ್ಯರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಡಿದ ಭಾಷಣದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.
ನಮ್ಮ ಸಮಾಜದಲ್ಲಿ ಹೆಣ್ಣು ಮನೆಯನ್ನು ನಿರ್ವಹಿಸುವವಳು, ಗಂಡು ಹೊರಗೆ ದುಡಿಯುವವನು. ಕೂಲಿ ಕಾರ್ಮಿಕ ಮಹಿಳೆಯರು ಹೊರಗೆ ದುಡಿದರೂ ಗಂಡಿಗೆ ಪ್ರಾಶಸ್ತö್ಯ. ನಾವು ಬಾಲ್ಯದಲ್ಲಿದ್ದಾಗ ಯಾರಾದರೂ ಒಬ್ಬರು ಹೆಣ್ಣು ಮಗಳು ವಾಹನ ಚಲಾಯಿಸಿದರೆ ‘ನೋಡಿ ಹೆಂಗಸರು ಕಾರು ಬಿಡುತ್ತಿದ್ದಾರೆ’ ಎಂದು ಆಶ್ಚರ್ಯಪಡುತ್ತಿದ್ದರು. ಅಂದರೆ ವಾಹನ ಚಲಾಯಿಸುವುದಕ್ಕೆ ಅವರಿಗೆ ಶಕ್ತಿ ಇಲ್ಲ. ಅವರು ವಾಹನ ಚಲಾಯಿಸುತ್ತಾರೆ ಎಂದಾದರೆ ಅವಳು ಬಹಳ ಮುಂದುವರಿದ ಮಹಿಳೆ ಎಂಬ ಭಾವನೆಯಿಂದ ಬಹಳ ತಮಾಷೆ ಮಾಡುತ್ತಿದ್ದರು. ಆದರೆ ಇಂದು ವಾಹನ ಚಲಾಯಿಸುವುದು ಮಾತ್ರವಲ್ಲ, ವಾಹನದ ಎಲ್ಲಾ ಬಿಡಿಭಾಗಗಳನ್ನು ತಯಾರಿಸುವಂತಹ ಶಕ್ತಿ ಮಹಿಳೆಯರಲ್ಲಿದೆ.
ನಮ್ಮ ದೇಶದಲ್ಲಿ ಮಹಿಳೆಯರು ರಾಷ್ಟçಪತಿಗಳು, ಪ್ರಧಾನ ಮಂತ್ರಿಗಳೂ ಆಗಿದ್ದಾರೆ. ಪೊಲೀಸ್, ಸೇನೆ ಹೀಗೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದು ಪುರುಷರಿಗೆ ಸರಿಸಮಾನರಾಗಿ ಜೀವನ ನಡೆಸುತ್ತಿದ್ದಾರೆ. ಇಂದು ರಾಜ್ಯದಲ್ಲಿ ಹೆಚ್ಚಿನ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಜ್ಞಾನವಿಕಾಸ. ಮಹಿಳೆಯರಿಗೆ ಸಮಾನ ಅವಕಾಶ, ಆತ್ಮವಿಶ್ವಾಸ ಮತ್ತು ಸ್ಥೆöÊರ್ಯ ತುಂಬುವ ಕೆಲಸವನ್ನು ಈ ಕಾರ್ಯಕ್ರಮ ಮಾಡಿದೆ. ಆತ್ಮವಿಶ್ವಾಸ ಮತ್ತು ಸ್ಥೆöÊರ್ಯ ಬಂದಾಗ ಮಹಿಳೆಯರು ಸುಂದರ ಜೀವನವನ್ನು ರೂಪಿಸಿಕೊಳ್ಳುತ್ತಾರೆ.
ಇಂದು ಎಷ್ಟೋ ಸಂಸಾರಗಳಲ್ಲಿ ಮಹಿಳೆಗೆ ಕೆಲಸ ಇಲ್ಲದೆ ಹೋದರೆ ಮದುವೆ ಆಗುವುದಿಲ್ಲ ಎಂಬ ಮಟ್ಟಕ್ಕೆ ಬಂದಿದೆ. ರುಡ್‌ಸೆಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ1982ರಲ್ಲಿ ಏಕಕಾಲದಲ್ಲಿ ಆರಂಭವಾಯಿತು. ಇಂದು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಶೇ.80ರಷ್ಟು ಮಹಿಳೆಯರು, ಶೇ.೨೦ರಷ್ಟು ಪುರುಷರಿದ್ದಾರೆ. ಮಹಿಳೆಯರು ತ್ಯಾಗಮಯಿಗಳು. ಸಂಸಾರಕ್ಕಾಗಿ ತಮ್ಮ ಸುಖವನ್ನು ತ್ಯಾಗ ಮಾಡಿ, ದುಡಿಮೆ ಮಾಡಿ ಸಂಪಾದನೆಯನ್ನು ಮಾಡುತ್ತಾರೆ, ಸಂಸಾರವನ್ನು ನಿರ್ವಹಿಸುತ್ತಾರೆ, ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಾರೆ, ಪ್ರಗತಿಯನ್ನು ಸಾಧಿಸುತ್ತಾರೆ. ದೇಶದ ೫೮೫ ಜಿಲ್ಲೆಗಳಲ್ಲಿ ಅಖಿಲ ಭಾರತ ಆರ್‌ಸೆಟಿ ಸಂಸ್ಥೆಗಳಿವೆ. ನಮ್ಮ ಲೆಕ್ಕಾಚಾರದ ಪ್ರಕಾರ ಅಲ್ಲಿ ಶೇ. ೬೭ರಷ್ಟು ಮಹಿಳೆಯರು ಸ್ವಉದ್ಯೋಗಕ್ಕೆ ಪೂರಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಶ್ರೀಮತಿ ಹೇಮಾವತಿಯವರು ಹತ್ತಾರು ಕಾರ್ಯಕ್ರಮಗಳ ಮೂಲಕ ರಾಜ್ಯದ ಜನತೆಯ ಸ್ವಾವಲಂಬಿ ಬದುಕಿಗೆ ಕಾರಣೀಭೂತರಾಗಿದ್ದಾರೆ. ಶ್ರೀಮತಿಯವರು ಸದಾ ಅಧ್ಯಯನಶೀಲರು. ನಾನು ಪ್ರವಾಸಪ್ರಿಯ. ಅವರು ಮನೆಯಲ್ಲಿ ಕುಳಿತು ಅಧ್ಯಯನ ಮಾಡುತ್ತಾರೆ. ವಿಷಯಗಳನ್ನು ಗುರುತಿಸಿ, ಸಂಗ್ರಹಿಸಿಡುವ ಹವ್ಯಾಸವನ್ನು ಅವರು ಬೆಳೆಸಿಕೊಂಡಿದ್ದಾರೆ. ನಾನು ತುರ್ತು ಕಾರ್ಯಕ್ರಮಕ್ಕೆ ಹೋಗುವಾಗ ‘ಏನಾದರೂ ಪಾಯಿಂಟ್ಸ್ ಇದ್ದರೆ ಕೊಡಿ’ ಎಂದು ಕೇಳುತ್ತೇನೆ. ತಕ್ಷಣ ಸಾಕಷ್ಟು ಪಾಯಿಂಟ್ಸ್ ಮಾಡಿಕೊಡುತ್ತಾರೆ.
ನನ್ನ ಅಮ್ಮ ರತ್ನಮ್ಮನವರು ಮಂಜುವಾಣಿಗೆ ‘ಮಗಳಿಗೊಂದು ಪತ್ರ’ ಲೇಖನವನ್ನು ಬರೆಯುತ್ತಿದ್ದರು. ಅವರ ನಿಧನಾನಂತರ ಶ್ರೀಮತಿ ಹೇಮಾವತಿಯವರು ಅದನ್ನು ಮುಂದುವರಿಸಿದರು. ಇದಕ್ಕೆ ಓದುವುದು, ವಿಷಯವನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಾರೆ. ಮನೆಯಲ್ಲಿ ಹೆಚ್ಚಾಗಿ ಅವರು ಚಿಂತೆ ಮಾಡುವುದು ಲೇಖನ ಮತ್ತು ನಾಟಕಗಳ ಬಗ್ಗೆ. ಅವರು ನಾಟಕ ನಿರ್ದೇಶಕರೂ ಹೌದು. ಮನೆಯಲ್ಲಿ ಅವರು ಚಿಂತೆಯಲ್ಲಿ ಊಟ ಸರಿಯಾಗಿ ಮಾಡದೆ ಇದ್ದರೆ ಆ ದಿನ ನಾಟಕ ಇದೆ ಎಂದೇ ಅರ್ಥ. ಅವರಲ್ಲಿ ಯಾರಾದರೂ ನಾಟಕದಲ್ಲಿ ಅಭಿನಯಿಸಲು ಪಾತ್ರ ನೀಡುವಂತೆ ಮನವಿ ಮಾಡಿದರೆ ನಾಟಕಕ್ಕೆ ಪಾತ್ರಗಳನ್ನು ತಕ್ಷಣ ನಿರ್ಮಾಣ ಮಾಡಿ ಬರೆಯುತ್ತಾರೆ. ಈ ರೀತಿ ಬರವಣಿಗೆಯ ಚಿಂತನ ಶಕ್ತಿ ಅವರಲ್ಲಿದೆ. ಶ್ರದ್ಧಾ, ಶ್ರುತಾ, ಮೈತ್ರಿ, ಶ್ರೇಯಸ್‌ರವರ ಮದುವೆಯಲ್ಲಿ ಅವರೇ ಬರೆದ ಶೋಭಾನೆ ಹಾಡುಗಳನ್ನು ಹಾಡಲಾಗಿದೆ.
ಮಗಳ ಮದುವೆಗೆ ಶೋಭಾನೆ ಹಾಡುಗಳನ್ನು ಅವರೇ ಬರೆದಿದ್ದರು. ಮದುವೆಯಲ್ಲಿ ಸಾಹಿತಿಗಳಾದ ಏರ್ಯ ಲಕ್ಷಿö್ಮ ನಾರಾಯಣ ಆಳ್ವರವರು ಹಾಡು ಕೇಳುತ್ತಿದ್ದವರು ಒಮ್ಮೆಲೆ ‘ಹಾಡನ್ನು ನಿಲ್ಲಿಸಿ’ ಎಂದು ಹೇಳಿದರು. ‘ಯಾಕೆ?’ ಎಂದು ಕೇಳಿದಾಗ ‘ನನಗೆ ಆ ಹಾಡು ಕೇಳಲು ಆಗುವುದಿಲ್ಲ. ಕಣ್ಣಂಚಿನಲ್ಲಿ ನೀರು ಬರುತ್ತದೆ. ಹಾಡಿನ ಮೂಲಕ ಎಷ್ಟು ಮನಮುಟ್ಟುವ ಹಾಗೆ ಮತ್ತು ಮನಮಿಡಿಯುವ ಹಾಗೆ ಮಗಳಿಗೆ ವಿದಾಯ ಹೇಳುತ್ತಾರೆ. ನಾನು ಹೇಗೆ ಕೇಳುವುದು! ನೀವು ಹೇಗೆ ಕೇಳುವುದು! ಅದಕ್ಕೆ ಇದನ್ನು ನಿಲ್ಲಿಸಿಬಿಡಿ’ ಎಂದು ಹೇಳಿದರು. ಅಂದರೆ ಪ್ರಶಂಸೆಯನ್ನು ಅವರು ಈ ರೀತಿಯಲ್ಲಿ ವ್ಯಕ್ತಪಡಿಸಿದರು. ಆ ಹಾಡಿನ ಅರ್ಥ ಅಷ್ಟು ಮಾರ್ಮಿಕವಾಗಿ ಮತ್ತು ಭಾವನಾತ್ಮಕವಾಗಿತ್ತು. ಈಗಲೂ ಕೂಡಾ ಸಂದರ್ಭೋಚಿತವಾಗಿ ಹಾಡನ್ನು ಬರೆಯುತ್ತಾರೆ. ಕಳೆದ ಮಹಾಮಸ್ತಕಾಭಿಷೇಕದಲ್ಲಿ ಭರತ ಬಾಹುಬಲಿಯ ಚಿತ್ರಣವನ್ನು ದೃಶ್ಯ ರೂಪಕವಾಗಿ ರಂಗಸ್ಥಳದಲ್ಲಿ ತೋರಿಸಿದ್ದಾರೆ. ಅದ್ಭುತವಾದ ಚಿಂತನೆ, ಕಲ್ಪನಾಶಕ್ತಿ ಅವರಲ್ಲಿದೆ.
ಸಂಸಾರ ನಿಭಾಯಿಸುವುದೇ ಕಷ್ಟ. ಅದರಲ್ಲೂ ಬೀಡಿನ ಜವಾಬ್ದಾರಿ ಇರುವ ಸಂಸಾರವನ್ನು ನಿಭಾಯಿಸುವುದು ಇನ್ನೂ ಕಷ್ಟ. ಯರ‍್ಯಾರೆಲ್ಲ ಬಂದು ಏನೇನೋ ಸಹಾಯ ಕೇಳುತ್ತಾರೆ. ನಮ್ಮ ಅಮ್ಮ ಇದ್ದಾಗ ಯಾರಾದರೂ ಬಂದು ಮದುವೆಗೆ ಸಹಾಯ ಕೇಳಿದಾಗ ಅವರು ಚಿನ್ನ, ಹಣವನ್ನು ಕೊಡುತ್ತಿದ್ದರು. ನಂತರ ‘ಕೊಟ್ಟದ್ದು ಹೆಚ್ಚಾಯಿತಾ?’ ಎಂದು ನನ್ನಲ್ಲಿ ಕೇಳುತ್ತಿದ್ದರು. ಇದಕ್ಕೆ ‘ಇಲ್ಲ ಅಮ್ಮ, ನೀವು ಕೈ ತುಂಬಾ ಕೊಡಿ’ ಎಂದು ಹೇಳುತ್ತಿದ್ದೆ. ಅದೇ ಪರಂಪರೆಯನ್ನು ಹೇಮಾವತಿಯವರು ಕೂಡಾ ಮುಂದುವರಿಸಿಕೊAಡು ಬಂದಿದ್ದಾರೆ. ಅವರಿಗೆ ಕೊಟ್ಟಷ್ಟು ತೃಪ್ತಿ ಇಲ್ಲ.
ನಾನು ವಸ್ತು ಸಂಗ್ರಹಕಾರ. ಹಾಗಾಗಿ ಮ್ಯೂಸಿಯಂ ಮಾಡಿದೆ. ಹೇಮಾವತಿ ಅವರು ವಿಷಯ ಸಂಗ್ರಹಕಾರರು. ನನಗೆ ಯಾವುದೇ ವಸ್ತು ಕೊಟ್ಟರೂ ಬೇಕು. ನಾನು ಅದನ್ನು ಮ್ಯೂಸಿಯಂಗೆ ಕಳುಹಿಸುತ್ತೇನೆ. ಅಷ್ಟು ಸಂಗ್ರಹಿಸಿದ ಕಾರಣ ಇಂದು ಶ್ರೀಕ್ಷೇತ್ರದಲ್ಲಿ ಅಷ್ಟು ದೊಡ್ಡ ಮ್ಯೂಸಿಯಂ ಆಗಿದೆ. ವಾಹನದ ಮ್ಯೂಸಿಯಂ ಕೂಡಾ ಹಾಗೇ. ಕೆಲವರು ‘ಯಾಕೆ ಇಷ್ಟು ವಾಹನಗಳನ್ನು ಸಂಗ್ರಹಿಸುತ್ತೀರಿ. ನಿಲ್ಲಿಸಿ’ ಎಂದು ಹೇಳುತ್ತಾರೆ. ನಾನು ಇಲ್ಲ, ಇನ್ನೂ ಸ್ವಲ್ಪ ಬೇಕು ಎಂದು ಹೇಳುತ್ತೇನೆ. ಈಗ ಮೈಸೂರಿನಲ್ಲಿ ಹೊಸ ಮ್ಯೂಸಿಯಂ ಮಾಡಲಿದ್ದೇವೆ. ವಸ್ತುಸಂಗ್ರಹ ಮಾಡಿದರೆ ಅದನ್ನು ಬಿಡಲು ಮನಸ್ಸಿಲ್ಲ. ಯಾಕೆಂದರೆ ಅದನ್ನು ಮುಂದಿನ ಜನಾಂಗಕ್ಕೆ ತೋರಿಸಬೇಕು. ಹಿಂದೆ ಎತ್ತಿನ ಗಾಡಿಗಳು ಇದ್ದವು. ನೂರು ವರ್ಷದ ಹಿಂದೆ ಒಬ್ಬ ಹೇಗೆ ಕಲ್ಪನೆ ಮಾಡಿ ವಾಹನ ತಯಾರಿಸಿದ, ಪೆನ್ನು ತಯಾರಿಸಿದ ಎಂದು ಚಿಂತನೆ ಮಾಡಿ ಇತರರಿಗೆ ಅದನ್ನು ತೋರಿಸಬೇಕು ಎಂದು ಮ್ಯೂಸಿಯಂ ಮಾಡಿದ್ದೇನೆ. ಮೆಕ್ಯಾನಿಕಲ್ ನಂತರ ಹೈಡ್ರಾಲಿಕ್, ಎಲೆಕ್ಟಾçನಿಕ್ ಬಂತು. ಇವತ್ತು ಕಾರು ಬಿಡುವುದೆಂದರೆ, ಕಾರ್‌ನಲ್ಲಿ ಕುಳಿತರೆ ಸಾಕು ಹೇಗೆ ಬೇಕಾದರೂ ಓಡಿಸಬಹುದು. ಆದರೆ ಹಿಂದೆ ಕಾರು ಓಡಿಸಬೇಕಾದರೆ ಮೊದಲು ನಮ್ಮ ಜೀವಕ್ಕೆ ಇನ್‌ಶ್ಯೂರೆನ್ಸ್ ಮಾಡಿಸಿಯೇ ಓಡಿಸಬೇಕು. ಈ ವ್ಯತ್ಯಾಸ ತೋರಿಸುವುದಕ್ಕಾಗಿ ಮ್ಯೂಸಿಯಂನಲ್ಲಿ ಎಲ್ಲವನ್ನು ಜೋಡಿಸಿಡಲಾಗಿದೆ. ಇಂದಿನ ಸಣ್ಣ ಒಂದು ಮೊಬೈಲ್ ಫೋನ್‌ನಲ್ಲಿ ಸಾವಿರ ವಿಷಯಗಳಿವೆ. ಆದರೆ ಹಿಂದೆ ಒಂದು ಕ್ಯಾಲ್ಕುಲೆಟರ್ ಮಾಡಬೇಕಾದರೆ ಎಷ್ಟು ಶ್ರಮಪಟ್ಟಿರಬೇಕು ಎಂಬುದನ್ನು ನಾವು ಊಹಿಸಬೇಕು. ಹಾಗಾಗಿ ಎಲ್ಲವನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದೇನೆ. ಹೀಗೆ ನನ್ನ ಸಂಗ್ರಹ ಬೇರೆ. ಅವರ ಸಂಗ್ರಹ ಬೇರೆಯೇ ಇದೆ.
ಶ್ರೀಮತಿ ಹೇಮಾವತಿಯವರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರನ್ನು ಮಕ್ಕಳ ತರಹವೇ ನೋಡುತ್ತಾರೆ. ಸುಮಾರು ವರ್ಷಗಳ ಹಿಂದೆ ‘ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದಾಗ ಹಳ್ಳಿಗೆ ಹೋದಾಗ ಕಾರ್ಯಕರ್ತರು ಮಧ್ಯಾಹÀ್ನ ಊಟಕ್ಕೆ ಏನು ಮಾಡುತ್ತಾರೆ?’ ಎಂದು ಕೇಳಿದರು. ‘ನಾನು ಗೊತ್ತಿಲ್ಲ’ ಎಂದು ಹೇಳಿದೆ. ಕಾರ್ಯಕರ್ತರಲ್ಲಿ ಕೇಳಿದಾಗ, ಅವರು ‘ಬೆಳಿಗ್ಗೆ ಊಟ ಮಾಡಿ ಹೋದರೆ, ಮತ್ತೆ ರಾತ್ರಿಯೇ ಊಟ ಮಾಡುವುದು’ ಎಂದರು. ತಕ್ಷಣ ಹೇಮಾವತಿ ವೀ. ಹೆಗ್ಗಡೆಯವರು ಎಲ್ಲರಿಗೂ ಮಧ್ಯಾಹ್ನದ ಊಟಕ್ಕೆ ಅನುಕೂಲವಾಗಲೆಂದು ಟಿಫಿನ್ ಕ್ಯಾರಿಯರ್ ಖರೀದಿಸಿ ಕೊಟ್ಟರು. ಹೀಗೆ ಹೇಮಾವತಿಯವರು ಪ್ರತಿಯೊಂದನ್ನು ಸೂಕ್ಷö್ಮವಾಗಿ ಗಮನಿಸಿ ಅದಕ್ಕೆ ಪ್ರತಿಕ್ರಿಯಿಸುತ್ತಾರೆ.
ನಾವು ಯೋಜನೆಯ ಕಾರ್ಯಕ್ರಮಗಳನ್ನು ರೂಪಿಸುತ್ತಾ ಹೋಗುತ್ತೇವೆ. ಅವರು ಅದನ್ನು ಸೂಕ್ಷö್ಮವಾಗಿ ನೋಡುತ್ತಾರೆ. ವೃದ್ಧರಿಗೆ ಸಹಾಯ ನೀಡುವ ಉದ್ದೇಶದಿಂದ ‘ವಾತ್ಸಲ್ಯ’ ಕಾರ್ಯಕ್ರಮ ಮಾಡಿದ್ದಾರೆ. ಮುಂದೆ ಅವರಿಗೆ ಹಳ್ಳಿಗಳಲ್ಲಿ ಮನೆಗಳನ್ನು ಕಟ್ಟಿಕೊಡಬೇಕು ಎಂದು ಹೇಳಿದ್ದಾರೆ. ಕೆಲವು ಬಾರಿ ನನ್ನ ಮಾರ್ಗದರ್ಶನಕ್ಕೆ ಕಾಯದೆ ಯೋಜನೆಯ ಕಾರ್ಯಕರ್ತರಿಗೆ ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಹಾಗಾಗಿ ಎಲ್ಲವನ್ನೂ ನಾನೇ ಮಾಡಿರುವುದಲ್ಲ. ಆದರೆ ಪದ್ಮಭೂಷಣ ನನಗೆ ಬಂದಿದೆ.
ಮಗಳು ಶ್ರದ್ಧಾ ಹೇಳುತ್ತಿದ್ದಳು. ಒಂದು ದಿನ ಕಾರ್ಯಕರ್ತರೋರ್ವರ ಮನೆಗೆ ಹೋದಾಗ ಒಬ್ಬರಲ್ಲಿ ನಿಮ್ಮ ಊರು ಎಲ್ಲಿ? ಎಂದು ಕೇಳಿದರಂತೆ. ಅದಕ್ಕೆ ಉಜಿರೆ ಅಂದರAತೆ. ಇಲ್ಲಿ ಕೆಲಸಕ್ಕೆ ಇದ್ದೀರಿ, ಮಗು ಎಲ್ಲಿ? ಎಂದು ಕೇಳಿದಾಗ ಊರಲ್ಲಿ ಇದೆ ಅಂದರAತೆ. ಮಗುವನ್ನು ಬಿಟ್ಟು, ಗಂಡನನ್ನು ಬಿಟ್ಟು ಇಲ್ಲಿ ಯಾಕೆ ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದಾಗ, ಇಲ್ಲ ಅಮ್ಮ, ಹೆಗ್ಗಡೆಯವರು ಮತ್ತು ಅಮ್ಮನವರು ನನಗೆ ತಂದೆ – ತಾಯಿ. ಅವರು ಎಲ್ಲಿ ಹೇಳುತ್ತಾರೆ ಅಲ್ಲಿ ಹೋಗಿ ಕೆಲಸ ಮಾಡುತ್ತೇನೆ. ನನಗೆ ಕೆಲಸ ಮುಖ್ಯ ಅಲ್ಲ. ಅವರನ್ನು ತೃಪ್ತಿಪಡಿಸುವುದು, ಅವರ ಸೇವೆ ಮಾಡುವುದೇ ನನ್ನ ಕರ್ತವ್ಯ ಎಂದು ಹೇಳಿದರಂತೆ. ಅಂದರೆ ಅವರಲ್ಲಿ ಆ ಭಾವನೆಯನ್ನು ಮೂಡಿಸಿದವರು ಹೇಮಾವತಿಯವರು ಅನ್ನುವುದಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ.
ನಮಗಿಬ್ಬರಿಗೂ ಬೈಯುವ ಅಭ್ಯಾಸ ಕಡಿಮೆ. ನಾವು ಪ್ರಶಂಸೆ ಮಾಡಿ ಕೆಲಸವನ್ನು ತೆಗೆದುಕೊಳ್ಳುವಷ್ಟು ಬೈದು ತೆಗೆದುಕೊಳ್ಳುವುದಿಲ್ಲ. ಹೀಗೆ ಮನೆಯನ್ನು, ಮನೆಯ ಬಂಧುಗಳನ್ನು, ತಮ್ಮಂದಿರನ್ನು ಮತ್ತು ಸೊಸೆಯಂದಿರನ್ನು, ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಚೆನ್ನಾಗಿ ನೋಡಿ, ಬೆಳೆಸಿ, ಇವತ್ತು ನಮ್ಮ ಕಾರ್ಯಕ್ರಮಗಳಲ್ಲಿ ಸೇರಿ ಅದರಲ್ಲಿ ಯಶಸ್ಸು ಸಾಧಿಸುವಂತೆ ಮಾಡಿದ ಹೇಮಾವತಿಯವರನ್ನು ಅಭಿನಂದಿಸುತ್ತೇನೆ.
ಲೇಖನಗಳನ್ನು ಪುಸಕ್ತ ರೂಪದಲ್ಲಿ ಹೊರತರಬೇಕೆಂದು ನಾನು ಆಗಾಗ ಹೇಳುತ್ತಿದ್ದೆ. ಇವತ್ತು ಅದು ಈಡೇರಿದೆ. ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಪ್ರತಿ ಬರಹಗಳು ಹತ್ತಾರು ಮಂದಿಯ ಬದುಕನ್ನು ಬದಲಿಸಿದೆ, ಬದಲಿಸುತ್ತಿದೆ. ಅವರ ಬರಹಗಳ ಸಂಗ್ರಹವಿರುವ ‘ಗೆಳತಿ’ ಮತ್ತು ‘ಮಗಳಿಗೊಂದು ಪತ್ರ’ ಕೃತಿಗಳು ಸಮಾಜಕ್ಕೆ ದಾರಿದೀಪವಾಗಲಿ. ಈ ಪುಸ್ತಕಗಳು ಅವರ ಇನ್ನೊಂದಷ್ಟು ಬರವಣಿಗೆಗಳಿಗೆ ಚೈತನಶ್ಯಶಕ್ತಿಯನ್ನು ನೀಡಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates