ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು

ಸೀರೆ, ಚೂಡಿದಾರ್, ಹೊದಿಕೆ, ಪ್ಯಾಂಟ್, ಅಂಗಿ, ಲುಂಗಿ ಮೊದಲಾದ ಬಟ್ಟೆಬರೆಗಳು ಒಂದಷ್ಟು ಸಮಯ ಉಪಯೋಗವಾದ ಬಳಿಕ ಅಥವಾ ಅವುಗಳ ಬಣ್ಣ ಕೊಂಚ ಮಾಸಿದ ನಂತರ ಕಸದ ಬುಟ್ಟಿಯನ್ನು ಸೇರುವುದೇ ಹೆಚ್ಚು. ಒಂದಷ್ಟು ಮನೆಗಳಲ್ಲಿ ಅವುಗಳನ್ನು ಎಸೆಯಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಮನೆಮಂದಿ ಪರಿತಪಿಸುತ್ತಾರೆ. ಹಳೆಯ ಬಟ್ಟೆಗಳಿಗೆ ಹೊಸ ಮೆರುಗನ್ನು ತುಂಬಿ ನವನವೀನ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವ, ಫ್ಯಾಷನ್‌ಪ್ರಿಯರಿಗೆ ಇಷ್ಟವೆನಿಸುವಂತೆ ಬಗೆಬಗೆಯ ವಸ್ತುಗಳನ್ನು ತಯಾರಿಸುವ ಕಲೆಯೂ ಜನಪ್ರಿಯವಾಗುತ್ತಿದೆ.ಧಾರವಾಡದ ಕಮಲಾಪುರದ ಪತ್ರೇಶ್ವರ ನಗರದ ಪ್ರಿಯಾ ಖೋದಾನ್‌ಪುರವರು ಕಳೆದ ಹತ್ತು ವರ್ಷಗಳಿಂದ […]

ಅಕ್ಕಿ ರೊಟ್ಟಿ ಮಾರಿ ಮನೆ ಕಟ್ಟಿದರು

ರಾಮಚಂದ್ರರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅಡಕೆ ಮರವೇರಿದರೆ ಸಿಗುತ್ತಿದ್ದುದು 300 ರೂಪಾಯಿ ಸಂಬಳ. ತನ್ನ ಕೆಲಸಗಳು ಹೆಚ್ಚಿನ ದೈಹಿಕ ಸಾಮರ್ಥ್ಯವನ್ನು ಬಯಸುವ ಕಾರಣ 30 ದಿನಗಳಲ್ಲೂ ಕೆಲಸ ಮಾಡುವುದು ಅಸಾಧ್ಯವಾದ ಮಾತೇ ಸರಿ. ಹಾಗೆಂದು ಮೂರನೇ ತರಗತಿ ಮುಗಿಸಿ ಹೋಟೆಲ್‌ನತ್ತ ಮುಖ ಮಾಡಿದ ರಾಮಚಂದ್ರರವರಿಗೆ ಹೋಟೆಲ್ ಕೆಲಸವು ನೆಮ್ಮದಿಯನ್ನು ನೀಡಿರಲಿಲ್ಲ. ತನ್ನ ಅತ್ತೆ ಮಂಗಳೂರಿನ ರೊಟ್ಟಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರೊಟ್ಟಿ ತಯಾರಿ ಘಟಕವನ್ನು ಆರಂಭಿಸುವ ಬಗ್ಗೆ ರಾಮಚಂದ್ರರವರಿಗೆ ಧೈರ್ಯ ತುಂಬಿದರು. ಆಗ ರಾಮಚಂದ್ರರವರು ಸ್ವ ಉದ್ಯೋಗದ ಕುರಿತ […]

ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ

ಯಾರಿಗೆ, ಹೇಗೆ ಬರುತ್ತದೆ?ರೇಬೀಸ್ ಕಾಯಿಲೆಯು ಒಂದು ವೈರಸ್ ಜೀವಿಯಿಂದ ಬರುತ್ತದೆ. ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷö್ಮ. ಅದರ ಹೆಸರು ‘ಲಿಸ್ಸಾ.’ ರೋಗಪೀಡಿತ ಪ್ರಾಣಿಯ ಅಥವಾ ಮಾನವರ ಜೊಲ್ಲಿನಿಂದ ಲಿಸ್ಸಾ ವೈರಸ್ ವಿಸರ್ಜಿಸಲ್ಪಡುತ್ತದೆ. ಎಂದರೆ, ರೋಗ ಹರಡಬೇಕೆಂದರೆ ರೋಗಗ್ರಸ್ಥ ಪ್ರಾಣಿಯು ಕಚ್ಚಬೇಕು. ಕಚ್ಚಿದಾಗ ಆ ಪ್ರಾಣಿಯ ಅಥವಾ ಮನುಷ್ಯನ ದೇಹವನ್ನು ವೈರಸ್ ಸೇರುತ್ತದೆ. ನಂತರ ರಕ್ತಮಾರ್ಗದಲ್ಲಿ ಹೋಗದೇ, ನರಗಳ ಮೂಲಕ ದಿನಕ್ಕೆ ಸುಮಾರು 6 ಸೆಂ.ಮೀ. ವೇಗದಲ್ಲಿ 1-2 ದಿನಗಳಲ್ಲಿ ಕೇಂದ್ರ ನರಮಂಡಲದತ್ತ ಪ್ರಯಾಣ ಬೆಳೆಸುತ್ತದೆ. ಒಮ್ಮೆ ಮಿದುಳನ್ನು ಸೇರಿ […]

ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?

ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಸಮಸ್ಯೆಯನ್ನು, ಆತ್ಮಹತ್ಯೆಯ ಪ್ರವೃತ್ತಿಯನ್ನು ಪ್ರಚೋದಿಸುವ ಅನೇಕ ಅಂಶಗಳು, ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದವು ಕೆಲವು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಬರುವ ದಿನಗಳ ಆಸುಪಾಸು ದಿನಗಳಂತೂ ಆ ವಯಸ್ಸಿನ ಮಕ್ಕಳ ತಂದೆ ತಾಯಿಯಂದಿರಿಗೆ ಏನೋ ಆಂತರಿಕ ಆತಂಕ! ಯಾವ ಮಗು ಎಲ್ಲಿ ಹೇಗೆ ಸಾಯುತ್ತಾನೆ/ಳೆ ಎಂಬ ದುಗುಡ. ಹೌದಾ! ಅವನಾ? ಅವಳಾ? ಅವನು/ಳು ಹೀಗೆ ಮಾಡಿಕೊಂಡನಾ?/ಳಾ? ಅಷ್ಟು ಮಾನಸಿಕವಾಗಿ ವೀಕಾ? ಅವನು/ಳು ಎಂಬAತಹ ಮಾತುಗಳು. ನಾವು ನೀವು ಯೋಚನೆ ಮಾಡದವರೂ […]

ನನ್ನ ಬರಹಗಳ ಮೊದಲ ಓದುಗರು ಶ್ರೀ ಹೆಗ್ಗಡೆಯವರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಗೆಳತಿ’ ಅಂಕಣದಲ್ಲಿ ಪ್ರಕಟಗೊಂಡ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಲೇಖನಗಳನ್ನು ಒಟ್ಟುಗೂಡಿಸಿ ಮೂರು ಭಾಗಗಳಾಗಿ ವಿಂಗಡಿಸಿ ‘ಗೆಳತಿ’ ಎಂಬ ಪುಸ್ತಕಗಳನ್ನು ಹೊರತರಲಾಗಿದೆ. ಮಾರ್ಚ್ ೮ರಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ|| ಸಂಧ್ಯಾ ಎಸ್. ಪೈಯವರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತೃಶ್ರೀಯವರು ತಮ್ಮ ಬರಹ ಆರಂಭಕ್ಕೆ ಪ್ರೇರಣೆ, ಬರಹದಲ್ಲಿ ಒತ್ತು ನೀಡುವ ವಿಷಯಗಳು, ತಾವು ಬರವಣಿಗೆ ಆರಂಭಿಸಿದ ಬಗೆ ಹೀಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊ0ಡರು. ಅವರ ಮಾತಿನ […]

ಮಕ್ಕಳಲ್ಲಿ ಬೊಜ್ಜು ನಿಯಂತ್ರಣ ಹೇಗೆ?

ಸುಮಾರು 7 ತಿಂಗಳ ಹಿಂದಿನ ಮಾತು. ಅಂದು ಅಮ್ಮ ಮಗಳಿಬ್ಬರು ಆಸ್ಪತ್ರೆಗೆ ಬಂದರು. ಮಗಳಿಗೆ 14ವರ್ಷ. ಆದರೆ ಅವಳ ತೂಕ 85 ಕೆ.ಜಿ. ತಾಯಿ ಹೇಳಿದರು ಕೊರೊನಾ ಬರುವುದಕ್ಕೆ ಮೊದಲು, ಅಂದರೆ 2020 ಕ್ಕಿಂತ ಮುಂಚೆ ಅವಳ ತೂಕ 50 ಕೆ.ಜಿ. ಇತ್ತು. ಈ 2 ವರ್ಷದಲ್ಲಿ ಅವಳ ತೂಕದಲ್ಲಿ ಇಷ್ಟು ಹೆಚ್ಚಾಗಿದೆ ಎಂದು. ಮಗಳ ತೂಕದ ಬಗ್ಗೆ ಬಹಳಷ್ಟು ಚಿಂತಿತರಾಗಿದ್ದ ಅವರು ನಾನು ಕೇಳುವುದಕ್ಕೂ ಮೊದಲೇ ಮಾಡಿಸಿಕೊಂಡು ಬಂದಿದ್ದ ಥೈರಾಯ್ಡ್ ರಿಪೋರ್ಟ್ ಅನ್ನು ಸಹ ತೋರಿಸಿದರು. […]

ಆತ್ಮನಿರ್ಭರ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಮಧ್ಯಪ್ರದೇಶದಲ್ಲಿ ಪಾಠಲ್‌ಕೊಟ್ ಎಂಬ ಪ್ರದೇಶ ಇದೆ. 79 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 12 ಗ್ರಾಮಗಳು ಇದ್ದು, ಸಹಾಸ್ರಾರು ಸಂಖ್ಯೆಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಇಲ್ಲಿಯ ಜನರು ಪಟ್ಟಣ ಅಥವಾ ಅರೆ ಪಟ್ಟಣದ ಸಂಪರ್ಕದಿ0ದ ಹೆಚ್ಚು ಕಡಿಮೆ ಹೊರಗಿದ್ದು, ಸ್ವಾವಲಂಬನೆಯಿ0ದ ಜೀವನ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳುದಾದರೆ ಇದೊಂದು ಆತ್ಮನಿರ್ಭರ ಗ್ರಾಮ. ಇವರು ಕೇವಲ ಉಪ್ಪು ಮತ್ತು ಬೆಂಕಿ ಪೊಟ್ಟಣವನ್ನು […]

ಪರಿವರ್ತನೆಯ ಪ್ರವರ್ತಕರು

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರಿಗೆ, ದಿನಾಂಕ 08-03-2022 ರಂದು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳೂ, ನೌಕರವೃಂದದವರು ಮತ್ತು ಪಾಲುದಾರ ಸದಸ್ಯರ ಪರವಾಗಿ ಅರ್ಪಿಸಿದ ಸನ್ಮಾನ ಪತ್ರ.ಸರ್ವಾದರಣೀಯರೇ, : ಬೆಳ್ತಂಗಡಿ ತಾಲೂಕಿನ ಸುಸಂಸ್ಕೃತ ಮನೆತನ ಪೆರಾಡಿ ಬೀಡಿನ ಸಜ್ಜನ ಶ್ರೀ ರಘುಚಂದ್ರ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಅಮ್ಮನವರ ತೃತೀಯ ಕುಸುಮವಾಗಿ […]

ಅಧ್ಯಯನದಲ್ಲಿ ಆನಂದಪಡುವವರು

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರೇ ಹೇಳುವಂತೆ ಅವರ ಬರಹಗಳ ಮೊದಲ ಓದುಗರು ‘ಶ್ರೀ ಹೆಗ್ಗಡೆಯವರು’. ಮಾತೃಶ್ರೀಯವರ ಎಲ್ಲ ಬರಹಗಳನ್ನು ಓದಿರುವ ಶ್ರೀ ಹೆಗ್ಗಡೆಯವರು ಅವರ ಕೃತಿಗಳ ಬಿಡುಗಡೆ ಸಂದರ್ಭದಲ್ಲಿ ಯಾವ ರೀತಿಯ ಮಾರ್ಗದರ್ಶನ ನೀಡಿದರು ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ಸಾಕಷ್ಟು ‘ನಿರಂತರ’ದ ಓದುಗರು ಪತ್ರಿಕೆಗೆ ಕರೆ ಮಾಡಿ ಪೂಜ್ಯರ ಭಾಷಣದ ಆಡಿಯೋವನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಓದುಗರ ಕೋರಿಕೆಯಂತೆ ಪೂಜ್ಯರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಡಿದ ಭಾಷಣದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.ನಮ್ಮ […]