ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಜಿ.ಐ. ಟ್ಯಾಗ್ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವ ಘೋಷಣೆ ಮಾಡಿರುವುದು ರಾಜ್ಯದ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ಹಾಗೂ ಜಿ.ಐ. ಟ್ಯಾಗ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರಕಾರಕ್ಕೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ‘ಅಮೃತಕಾಲ’ದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಜಿ.ಐ. ಟ್ಯಾಗ್ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಎಂದರ್ಥ. ಒಂದು ಉತ್ಪನ್ನದ ಭೌಗೊಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿ.ಐ. ಟ್ಯಾಗ್ ಅನ್ನು ನೀಡಲಾಗುತ್ತಿದೆ. ಈ ಟ್ಯಾಗ್ ನೀಡುವಿಕೆಯಿಂದ ಒಂದು ಉತ್ಪನ್ನದ ಮೂಲ ಯಾವ ಪ್ರದೇಶದ್ದು ಎಂದು ಗೊತ್ತಾಗುತ್ತದೆ. ವಿಶ್ವ ವ್ಯಾಪಾರ ಸಂಸ್ಥೆ ಇಂಥದೊoದು ವ್ಯವಸ್ಥೆಯನ್ನು 2003ರಲ್ಲಿ ಜಾರಿಗೆ ತರಲಾಯಿತು. ಇದರಡಿ ಕೃಷಿ, ಕರಕುಶಲ, ಆಹಾರವಸ್ತು, ಔದ್ಯಮಿಕ ಉತ್ಪನ್ನ, ಮದ್ಯ ಉತ್ಪನ್ನಗಳಿಗೆ ಜಿ.ಐ. ಟ್ಯಾಗ್ ದೊರೆಯುತ್ತದೆ. ಒಂದು ಉತ್ಪನ್ನದ ಹಕ್ಕು ಮತ್ತು ಪೇಮೆಂಟ್ ರಕ್ಷಿಸಲು ಈ ಟ್ಯಾಗ್ ಸಹಾಯ ಮಾಡುತ್ತದೆ. ಡಾರ್ಜಿಲಿಂಗ್ ಟೀ ದೇಶದಲ್ಲಿ ಜಿ.ಐ. ಟ್ಯಾಗ್ ಪಡೆದ ಮೊದಲ ಉತ್ಪನ್ನವಾಗಿದೆ.
ಲಾಭವೇನು? ಯಾವುದೇ ಒಂದು ವಸ್ತು ಭೌಗೋಳಿಕ ಸೂಚ್ಯಂಕ ಪಡೆದುಕೊಂಡರೆ ಅದರ ಜನಪ್ರಿಯತೆ ಹೆಚ್ಚುತ್ತದೆ. ಆ ಉತ್ಪನ್ನ ಬ್ರಾö್ಯಂಡ್ ಆಗಿ ರೂಪುಗೊಳ್ಳುತ್ತದೆ. ಆಗ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಅಲ್ಲದೆ ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತದೆ. ಹಾಗಾಗಿ ಉತ್ಪನ್ನಗಳನ್ನು ಬೆಳೆಯುವ ಕೃಷಿಕರಿಗೆ ಉತ್ತಮ ಆದಾಯ ದೊರೆಯುತ್ತದೆ.
ಜಿ.ಐ. ಟ್ಯಾಗ್ ಹೊಂದಿರುವ ರಾಜ್ಯದ ಉತ್ಪನ್ನಗಳು
ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್‌ಸೋಪ್, ಕೊಡಗು ಕಿತ್ತಳೆ, ಧಾರವಾಡ ಪೇಡ, ಬಾಗಲಕೋಟೆಯ ಇಳಕಲ್ ಸೀರೆ, ಬ್ಯಾಡಗಿ ಮೆಣಸು, ಉಡುಪಿ ಮಲ್ಲಿಗೆ, ಉಡುಪಿಯ ಮಟ್ಟುಗುಳ್ಳ ಬದನೆಕಾಯಿ, ರಾಮನಗರ ಚೆನ್ನಪಟ್ಟಣದ ಗೊಂಬೆಗಳು, ಮೈಸೂರು ರೇಷ್ಮೆ, ಮೈಸೂರು ಅಗರಬತ್ತಿ, ನಂಜನಗೂಡಿನ ರಸಬಾಳೆ, ಮೈಸೂರು ಗಂಧದ ಎಣ್ಣೆ, ಮೈಸೂರು ಗಂಜಿ ಫಾ ಕಲೆ, ಬೆಂಗಳೂರಿನ ನೀಲಿ ದ್ರಾಕ್ಷಿ, ಬೆಂಗಳೂರಿನ ಕೆಂಪು ಎಳ್ಳುಗಡ್ಡಿ, ಕೊಡಗು ಹಸಿರು ಏಲಕ್ಕಿ, ದೇವನಹಳ್ಳಿಯ ಚಕ್ಕೋತ, ಕಮಲಾಪುರದ ಕೆಂಪು ಬಾಳೆಹಣ್ಣು, ಸಂಡೂರಿನ ಬಂಜಾರ ಕಸೂತಿ, ಕಿನ್ನಾಳದ ಆಟಿಕೆಗಳು, ಶಿವಮೊಗ್ಗದ ಅಪ್ಪೆ ಮಿಡಿ, ಮೈಸೂರಿನ ಚಿತ್ರಕಲೆ ಹೀಗೆ ರಾಜ್ಯದಲ್ಲಿ ೪೨ ಉತ್ಪನ್ನಗಳು ಜಿ.ಐ. ಟ್ಯಾಗ್ ಅನ್ನು ಹೊಂದಿವೆ.