ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
‘ಇದು ನನಗೆ ಅಜ್ಜಿ ಕೊಟ್ಟ ಸೀರೆ, ಇದು ನನ್ನ ತಂದೆಯ ಪೆಟ್ಟಿಗೆ, ಇದು ನಮ್ಮ ಮದುವೆಯಾದಾಗ ನನ್ನ ತಾಯಿ ಕೊಡಿಸಿದ ಫ್ಯಾನು, ಇದು ನನಗೆ ದೊರೆತ ಮೊದಲ ಬಹುಮಾನದ ಬಟ್ಟಲು. ಇದರಲ್ಲೇ ಈಗಲೂ ಉಣ್ಣುತ್ತಿದ್ದೇನೆ, ಇದು ನನ್ನ ತಂದೆ ಓಡಿಸುತ್ತಿದ್ದ ಸೈಕಲ್. ಇದನ್ನು ಯಾರು ಕೇಳಿದರೂ ಕೊಡುವುದಿಲ್ಲ. ಇವೆಲ್ಲ ನನಗೆ ಅಮೂಲ್ಯ ವಸ್ತುಗಳು. ಈ ವಸ್ತುಗಳಲ್ಲಿ ನನ್ನೆಲ್ಲ ನೆನಪುಗಳು ಅಡಗಿದೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಕಾಪಿಟ್ಟಿದ್ದೇನೆ.’ ಎಂದು ಹೇಳುವ ಅನೇಕರನ್ನು ನೋಡಿರುತ್ತೇವೆ.
ತಂದೆಯ ಕಾಲದ ಮದುವೆಯ ಆಲ್ಬಂ ಅನ್ನು ಈಗಲೂ ಮನೆಯಲ್ಲಿ ಜೋಪಾನವಾಗಿ ಇಟ್ಟು ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಅದನ್ನು ತಿರುವಿ ತಮ್ಮ ವಿವಾಹದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಳ್ಳುವ ಅನೇಕ ಹಿರಿಯರನ್ನು ನೋಡಿದ್ದೇವೆ. ಆ ಆಲ್ಬಂಗೆ ಬೆಲೆ ತೆರಲಾಗದು. ಅದು ಅವರ ಭಾವನೆಗಳ ತಿಜೋರಿ. ಇಂತಹ ಅನೇಕ ಉದಾಹರಣೆ ಪ್ರತಿಯೊಬ್ಬರ ಮನೆಯಲ್ಲಿದೆ.ಹಳೆಯ ವಸ್ತುಗಳಾದರೂ, ಉಪಯೋಗಿಸದಿದ್ದರೂ ಧೂಳನ್ನು ಹೊಡೆದು ಅಚ್ಚುಕಟ್ಟಾಗಿ ಅವುಗಳನ್ನು ಕಾಪಿಟ್ಟು ರಕ್ಷಿಸುವುದನ್ನು ಅನೇಕ ಬಾರಿ ಅನೇಕ ಕಡೆಗಳಲ್ಲಿ ಗಮನಿಸಿದಾಗ ಆ ವಸ್ತುಗಳಲ್ಲಿ ಇರುವ ಮಧುರ ಬಾಂಧವ್ಯದ ಮೌಲ್ಯ ಅರಿವಿಗೆ ಬರುತ್ತದೆ. ವಸ್ತುಗಳಿಗೆ ಜೀವವಿಲ್ಲದಿದ್ದರೂ ಆ ವಸ್ತುಗಳನ್ನು ನೀಡಿದ, ಆ ವಸ್ತುಗಳೊಂದಿಗೆ ಜೀವಿಸಿದ ಜೀವದ ಭಾವಗಳು ಆ ವಸ್ತುಗಳಿಗೆ ಮೌಲ್ಯವನ್ನು ತಂದುಕೊಡುತ್ತದೆ.
ಧರ್ಮಸ್ಥಳಕ್ಕೆ ಬಂದ ಭಕ್ತರು ಅದೆಷ್ಟೋ ಬಾರಿ ಹೇಳುವುದನ್ನು ಕೇಳಿದ್ದೇನೆ; ‘ಸ್ವಾಮಿ, ನಾನು ಉಜಿರೆಗೆ ಬಂದಾಗಲೆಲ್ಲ ನಾನು ಕಲಿತ ಎಸ್.ಡಿ.ಎಂ. ಕಾಲೇಜಿನ ಕ್ಯಾಂಪಸ್ ಅನ್ನು ನನ್ನ ಮಗನಿಗೆ ತೋರಿಸುವುದುಂಟು, ನನ್ನ ಕಾಲೇಜು ದಿನಗಳನ್ನು ಅವನಲ್ಲಿ ಹಂಚಿಕೊಳ್ಳುವುದು0ಟು. ಆ ಮಧುರತೆ ದೊರೆಯುವುದು ನಾನು ಸದಾ ಉಜಿರೆಗೆ ಬಂದಾಗಲೇ. ಹೀಗೆ ಒಂದು ಶಾಲೆ, ಕಾಲೇಜು, ಪ್ರತಿಯೊಂದು ವಸ್ತುವೂ ಆಪ್ಯಾಯಮಾನವಾದುದು. ಅನೇಕರು ಹಳೆಯ ವಸ್ತುಗಳನ್ನು ಜೋಪಾನ ಮಾಡುತ್ತಾರೆ. ಆ ವಸ್ತುಗಳ ಮೂಲಕ ತಮ್ಮ ನೆನಪನ್ನು ಮರುಸೃಷ್ಟಿಸಿಕೊಳ್ಳುತ್ತಾರೆ. ಆ ದಿನಗಳನ್ನು ಮನನ ಮಾಡುತ್ತಾರೆ. ಸವಿಯನ್ನು ಪುನರಾವರ್ತಿಸಿಕೊಳ್ಳುತ್ತಾರೆ. ಅವುಗಳು ಬದುಕಿಗೊಂದು ಸಿಹಿ, ಸ್ಫೂರ್ತಿ, ಶಕ್ತಿ ನೀಡುತ್ತವೆ. ಸಂಬ0ಧಗಳ ಉಳಿಯುವಿಕೆಗೆ ಅವುಗಳು ಶಾಶ್ವತ ಕೊಂಡಿಯಾಗಿ ಬೆಸೆದುಕೊಂಡಿರುತ್ತವೆ.
ದುಡ್ಡು ಕೊಟ್ಟರೂ ಸಿಗಲಾರದಷ್ಟು ಮೌಲ್ಯ ಆ ವಸ್ತುಗಳಲ್ಲಿ ಇರುತ್ತವೆ. ಆ ಮಧುರ ನೆನಪಿನ ಮೌಲ್ಯದ ಪ್ರೀತಿಗೆ ಬೆಲೆ ಕಟ್ಟಲಾಗದು. ಬದುಕಿನಲ್ಲಿ ನೆನಪುಗಳಿಗೆ ವಿಶೇಷ ಸ್ಥಾನವಿದೆ. ಆ ನೆನಪುಗಳನ್ನು ಉಳಿಸುವಲ್ಲಿ ಮುಖ್ಯ ಭೂಮಿಕೆ ವಹಿಸುವ ವಸ್ತುಗಳಿಗೆ ಅದಕ್ಕಿಂತಲೂ ಅಧಿಕ ಮೌಲ್ಯವಿದೆ.
ಮದುವೆಯ ಮೊದಲ ವಾರ್ಷಿಕೋತ್ಸವದ ನೆನಪು, ಮಗುವಿನ ಮೊದಲ ಹುಟ್ಟುಹಬ್ಬದ ನೆನಪು, ದಾಂಪತ್ಯ ಜೀವನದ ೨೫ರ ಬೆಳ್ಳಿಹಬ್ಬದ ಸಂಭ್ರಮ ಹೀಗೆ ಅನೇಕ ಸವಿ ನೆನಪುಗಳು ಸದಾ ಸ್ಮರಣೀಯವಾಗಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಆ ಸಂದರ್ಭಗಳನ್ನು ಸ್ಮöÈತಿಪಟಲದಲ್ಲಿ ಸದಾ ಹಸಿರಾಗಿರಿಸಲು ವಸ್ತುಗಳನ್ನೋ, ಆಭರಣಗಳನ್ನೋ ಖರೀದಿಸುತ್ತೇವೆ. ಕಾಲಕ್ರಮೇಣ ಖರೀದಿಸಿದ ವಸ್ತುಗಳ ಬೆಲೆ ಕಳೆದುಕೊಂಡು ಅಪಮೌಲ್ಯವಾದರೂ ಅವುಗಳನ್ನು ಖರೀದಿಸಿದ ಸಂದರ್ಭ, ಆ ಸಂದರ್ಭದ ಪ್ರೀತಿ, ನೆನಪು ಆ ವಸ್ತುಗಳ ಮೌಲ್ಯವನ್ನು ಇಮ್ಮಡಿಗೊಳಿಸುತ್ತದೆ.
ಅನೇಕ ಬಾರಿ ಮನೆಯಲ್ಲಿ ಮಕ್ಕಳು ‘ಅಮ್ಮ ಆ ಹಳೇಯ ಗಡಿಯಾರ ಯಾಕೆ ಇಟ್ಟಿದ್ದೀರ, ಗುಜರಿಗೆ ಹಾಕಬಹುದಲ್ಲವೇ’ ಎಂದು ಹೇಳುವುದುಂಟು. ಆದರೆ ಅಮ್ಮ, ಮಕ್ಕಳ ಆ ಮಾತಿಗೆ ಸುತಾರಾಂ ಒಪುö್ಪವುದಿಲ್ಲ. ‘ಅದು ನನ್ನ ತಾಯಿ ನಾನು ಮದುವೆಯಾಗಿ ಗಂಡನ ಮನೆ ಸೇರಿದಾಗ ಕೊಟ್ಟದ್ದು, ೪೦ ವರ್ಷ ಆಗಿದೆ. ನಾನು ಆ ಗಡಿಯಾರದಲ್ಲಿ ನನ್ನ ಪ್ರತಿ ಕಾಲದ ನೆನಪುಗಳನ್ನು ಕಟ್ಟಿಕೊಂಡಿದ್ದೇನೆ. ನನ್ನ ಕಾಲದ ನಂತರ ಬೇಕಾದರೆ ಗುಜರಿಗೆ ಹಾಕಿ, ನಾನಿರುವವರೆಗೆ ಅದು ನನ್ನ ಜೊತೆ ಇರಬೇಕು’ ಎಂದು ಹೇಳುತ್ತಾರೆ. ಗಡಿಯಾರದ ಮೂಲಕ ತಾಯಿಯು ಪ್ರೀತಿ, ಸವಿನೆನಪುಗಳನ್ನು ಅನುಭವಿಸುವುದನ್ನು ನಾವಿಲ್ಲಿ ಕಾಣಬಹುದು. ಇಂತಹ ಅನೇಕ ನಿದರ್ಶನಗಳನ್ನು ನಾವು ದಿನನಿತ್ಯ ನೋಡುತ್ತೇವೆ.
ಪ್ರತಿಯೊಂದು ವಸ್ತು, ಜಾಗಕ್ಕೆ ಅದರದ್ದೇ ಆದ ಮೌಲ್ಯ, ಇತಿಹಾಸವಿದೆ. ಯಾವುದನ್ನೂ ಕಡೆಗಣಿಸಬಾರದು. ಅದರಲ್ಲಿ ಯಾರದೋ ಭಾವನೆಗಳು, ನೆನಪುಗಳಿರಬಹುದು. ಅನೇಕರು ಹಳೇಯ ನೆನಪುಗಳನ್ನು, ವಸ್ತುಗಳನ್ನು ಸದಾ ತಮ್ಮಲ್ಲಿಟ್ಟುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಂರಕ್ಷಿಸುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ‘ನನ್ನ ತಂದೆ ಇದೇ ಸ್ಕೂಟರ್‌ನಲ್ಲಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ನನ್ನನ್ನು ಓದಿಸಿದರು’ ಎಂಬ ಭಾವನೆಯೊಂದಿಗೆ ಅವರು ಬಳಸಿದ ಸ್ಕೂಟರ್ ಅನ್ನು ಸಂರಕ್ಷಿಸಿದ್ದ ಕಥೆಗಳನ್ನು ಕೇಳಿದ್ದೇವೆ. ನನ್ನ ತಂದೆ ಇದೇ ಆಟೋ ರಿಕ್ಷಾ ಚಲಾಯಿಸಿ ನನಗಾಗಿ, ಕುಟುಂಬಕ್ಕಾಗಿ ಶ್ರಮಿಸಿದರು ಎಂದು ಅವರ ಕಾಲಾನಂತರವೂ ಆಟೋವನ್ನು ಯಾರಿಗೂ ಮಾರದೆ ಇಟ್ಟುಕೊಂಡಿರುವ ಬಗ್ಗೆ ಕೇಳಿದ್ದೇವೆ. ಹಾಗಾಗಿ ಮನಸ್ಸಿನ ಆ ಭಾವನೆಗೆ ಎಂದಿಗೂ ಬೆಲೆಕಟ್ಟಲು ಅಸಾಧ್ಯ.
ಅನೇಕರು ಶ್ರೀ ಕ್ಷೇತ್ರಕ್ಕೆ ಬಂದಾಗ ‘ಸ್ವಾಮಿ, ನಾನು ರುಡ್‌ಸೆಟ್‌ನಲ್ಲಿ ತರಬೇತಿಯನ್ನು ಪಡೆದು ಉದ್ಯಮ ನಡೆಸುತ್ತಿದ್ದೇನೆ. ರುಡ್‌ಸೆಟ್‌ನಲ್ಲಿ ಕಳೆದ ಆ ದಿನಗಳು ನನ್ನ ಪಾಲಿಗೆ ಎಂದೂ ಮರೆಯಲಾಗದ ದಿನಗಳು. ಪ್ರತಿ ಬಾರಿ ಇಲ್ಲಿ ಬಂದು ಆ ದಿನಗಳನ್ನು ಮೆಲುಕು ಹಾಕುತ್ತೇನೆ ಅಂದರೆ, ಇನ್ನೂ ಕೆಲವರು ಬಂದು; ‘ಸ್ವಾಮಿ, ಮದ್ಯವರ್ಜನ ಶಿಬಿರದಲ್ಲಿ ಕಳೆದ ಆ ದಿನಗಳು ನನ್ನ ಜೀವನವನ್ನೇ ಬದಲಿಸಿತು. ಶಿಬಿರದ ಆ ಕ್ಷಣಗಳು ನನ್ನ ಜೀವನದಲ್ಲಿ ಸದಾ ಅಮೂಲ್ಯವಾದುದು’ ಎನ್ನುತ್ತಾರೆ. ಅವರ ಈ ಭಾವನೆಗಳೇ ಪ್ರತಿಯೊಂದು ವಸ್ತು, ವಿಷಯ, ವಿಚಾರಗಳಿಗೂ ಜೀವ ತುಂಬುತ್ತವೆ.
೯೦ರ ದಶಕದ ಸಂದರ್ಭವನ್ನು ಒಮ್ಮೆ ಯೋಚಿಸೋಣ. ಆಗ ಮಕ್ಕಳ ಆಟ ಹೇಗಿತ್ತು! ಮೊಬೈಲ್‌ಗಳು ಇರಲಿಲ್ಲ. ಜಾಲತಾಣಗಳು, ಇಂಟರ್ನೆಟ್ ಎಂದರೆ ಗೊತ್ತಿರಲಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ಮಕ್ಕಳು ಚೆನ್ನೆಮಣೆ, ಲಗೋರಿ, ಮರಕೋತಿ, ಕುಂಟೆಬಿಲ್ಲೆ, ಚೌಕಾಬಾರ ಸೇರಿದಂತೆ ಅನೇಕ ದೇಸೀ ಆಟಗಳನ್ನು ಆಡುತ್ತಿದ್ದರು. ಗದ್ದೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಕೂಡು ಕುಟುಂಬ ಹೆಚ್ಚಾಗಿದ್ದ ಸಂದರ್ಭವದು. ರಜೆ ಬಂತೆ0ದರೆ ಅಜ್ಜಿ ಮನೆಗೆ ಮಕ್ಕಳು ಓಡಿ ಬರುತ್ತಿದ್ದರು. ಒಟ್ಟು ಸೇರಿ ಆಡುತ್ತಿದ್ದರು. ಮಾವಿನ ಹಣ್ಣು, ಗೇರು ಬೀಜ, ಹಲಸಿನ ಹಣ್ಣು ಇಂತಹ ಹಣ್ಣುಗಳನ್ನು ತಿನ್ನಲೂ ಸ್ಪರ್ಧೆ ಇರುತ್ತಿತ್ತು. ಅಜ್ಜಿ ಕಥೆ ಕೇಳಲು ಉತ್ಸುಕರಾಗಿರುತ್ತಿದ್ದರು. ಅಜ್ಜಿ ಮಾಡುವ ತಿಂಡಿ ತಿನಸಿನ ಪರಿಮಳದ ನೆನಪೇ ಅವರನ್ನು ಅಜ್ಜಿ ಮನೆಯತ್ತ ಸೆಳೆಯುತ್ತಿದ್ದವು. ಸಣ್ಣಪುಟ್ಟ ವಿಚಾರದಲ್ಲೇ ಎಲ್ಲರೂ ಖುಷಿ ಕಾಣುತ್ತಿದ್ದರು. ಆ ಖುಷಿಯನ್ನು ಜೀವನ ಪರ್ಯಂತ ನೆನಪಿಸಿಕೊಳ್ಳುತ್ತಾರೆ. ಈಗಲೂ ಎಲ್ಲರೂ ಒಟ್ಟು ಸೇರಿದಾಗ ಚಿಕ್ಕವರಾಗಿದ್ದಾಗ ಆಡಿದ ಆ ದಿನಗಳ ಖುಷಿ, ಮೇಷ್ಟುç ಕೊಟ್ಟ ಏಟಿನ ರುಚಿಯ ಬಗ್ಗೆ ನೆನಪಿಸಿಕೊಳ್ಳುವವರೇ ಹೆಚ್ಚು. ಅವೆಲ್ಲ ಸದಾ ಮರೆಯಲಾಗದ ನೆನಪುಗಳಾಗಿ ಶಾಶ್ವತವಾಗಿ ಉಳಿಯುವಂಥದ್ದು ಮತ್ತು ಅದೇ ಮುಂದೆ ಕಥೆಗಳಾಗಿ ಪರಿವರ್ತನೆಯಾಗುತ್ತವೆ. ‘ನಮ್ಮ ಕಾಲದಲ್ಲಿ ಕರೆಂಟ್ ಇರಲಿಲ್ಲ, ಸುತ್ತಲೂ ಕಾಡು ಇತ್ತು, ಚಿರತೆ ಬರುತ್ತಿತ್ತು, ಟಮಟೆ ಬಾರಿಸಿ ಓಡಿಸುತ್ತಿದ್ದೆವು’ ಎಂದು ಅಜ್ಜಿ ಕಥೆ ಕಟ್ಟಿ ಮಕ್ಕಳಿಗೆ ಹೇಳುವುದನ್ನು ಕೇಳಿರುತ್ತೇವೆ. ಅವೆಲ್ಲ ಅವರ ಜೀವನದಲ್ಲಿ ನಡೆದ ನೈಜ ಘಟನೆಗಳೇ ಆಗಿದ್ದು, ಆ ಅನುಭವ, ನೆನಪುಗಳೇ ಕಥೆಗಳಾಗಿ ಜೀವಂತಿಕೆ ಪಡೆದುಕೊಂಡಿವೆ.
ಇAದು ಜೀವನದ ಜಂಜಾಟದಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎಂಬ ಪರಿಸ್ಥಿತಿಗೆ ತಲುಪುತ್ತಿದ್ದೇವೆ. ಒತ್ತಡವೇ ಜೀವನ ಎನ್ನುವಷ್ಟರ ಮಟ್ಟಿಗೆ ಜನಜೀವನ ಬದಲಾಗಿದೆ. ಆಫೀಸ್, ಮೊಬೈಲ್, ಹೆಚ್ಚು ಅಂಕಗಳಿಸುವುದು ಎನ್ನುವ ಸಂಕುಚಿತ ಗುರಿಗಳಿಗೆ ಮಾತ್ರ ಬದುಕನ್ನು ಹೆಚ್ಚಿನವರು ಮೀಸಲಿರಿಸಿದ್ದಾರೆ. ಹೆಚ್ಚು ಅಂಕಗಳಿಸಿ ಅತ್ಯುತ್ತಮ ಉದ್ಯೋಗ ಗಳಿಸುವುದು ಮಾತ್ರ ಕೆಲವರ ಜೀವನದ ಗುರಿ. ಅದರ ಹೊರತಾಗಿ ಬೇರೇನನ್ನೂ ಅವರು ಯೋಚಿಸುವುದಿಲ್ಲ. ಉದ್ಯೋಗ ದೊರೆತ ಮೇಲೆ ಅದರ ಕುರಿತಾಗಿ ಮಾತ್ರ ಚಿಂತನೆ, ಉಳಿದೆಲ್ಲ ವಿಚಾರದ ಕುರಿತು ಗಮನವೇ ಹರಿಸುವುದಿಲ್ಲ. ಮಡದಿ, ಮಕ್ಕಳ ಜೊತೆ ಸಮಯ ಕಳೆಯುವ ಕುರಿತಾಗಿ ಚಿಂತನೆಗಳೇ ಇರುವುದಿಲ್ಲ.
ಅಂದಿನ ಕಾಲದಲ್ಲಿ ಎಲ್ಲರೂ ಮಣ್ಣಿನೊಂದಿಗೆ ಆಡಿ, ಎದ್ದು ಬಿದ್ದು ಬೆಳೆದವರು. ಆದರೆ ಇಂದು ಡಿಜಿಟಲ್ ಯುಗ. ಮಣ್ಣಿನ ಸಂಬAಧಕ್ಕಿAತ ಮಕ್ಕಳಿಗೆ ಮೊಬೈಲ್ ಸಂಬAಧ ಜಾಸ್ತಿಯಾಗಿದೆ. ಮಕ್ಕಳು ಸ್ಮಾರ್ಟ್ಫೋನ್ ವ್ಯಸನಿಗಳಾಗಿದ್ದಾರೆ. ಫೋನ್ ನೀಡದಿದ್ದರೆ ಮಕ್ಕಳು ಊಟ, ತಿಂಡಿ ಏನನ್ನೂ ಮಾಡುವುದಿಲ್ಲ ಎಂದು ಹಠ ಹಿಡಿಯುತ್ತಾರೆ. ಆ ಕಾಲದಲ್ಲಿ ಮಕ್ಕಳು ‘ಮಣ್ಣಿನಲ್ಲಿ ಮನೆ ಕಟ್ಟಿಕೊಡಬೇಕು ಆಗ ಊಟ ಮಾಡುತ್ತೇನೆ’ ಎಂದು ಹಠ ಹಿಡಿಯುತ್ತಿದ್ದರು. ಈಗ ಕಾಲ ಬದಲಾಗಿದೆ. ಪೋಷಕರು ಕೂಡಾ ಮಕ್ಕಳು ಹಠ ಹಿಡಿದರೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಸಮಾಧಾನ ಪಡಿಸಲು ಬೇರಾವುದೇ ಉಪಾಯವನ್ನೂ ಬಳಸುವುದಿಲ್ಲ. ಇದರಿಂದ ಮಕ್ಕಳು-ಪೋಷಕರಿಂದ ಹಾಗೂ ಪೋಷಕರು-ಮಕ್ಕಳಿಂದ ದೂರವಾಗುತ್ತಿದ್ದಾರೆ. ಸಂಬAಧಗಳ ಕೊಂಡಿಯೇ ಕಳಚುತ್ತಿದೆ. ಬಾಲ್ಯದ ಮಕ್ಕಳಾಟಿಕೆ ಕಡಿಮೆಯಾಗಿ ಮೊಬೈಲ್ ಆಟಿಕೆಗೆ ಮೀಸಲಾಗುತ್ತಿದೆ. ಇದರಿಂದ ಅದೆಷ್ಟು ಬಾಲ್ಯದ ಮಧುರ ಪಯಣ ಮರೆಯಾಗುತ್ತಿದೆ. ಮುಂದೊAದು ದಿನ ಮಗು ದೊಡ್ಡದಾದ ಮೇಲೆ ‘ನಿನ್ನ ಬಾಲ್ಯ ಹೇಗಿತ್ತು! ಎಂದು ಕೇಳಿದರೆ ಕೇವಲ ಮೊಬೈಲ್ ಆಟ’ ಎಂಬಷ್ಟರ ಮಟ್ಟಿಗೆ ನೆನಪುಗಳು ಸೀಮಿತವಾಗುತ್ತವೆ. ಈ ಬಗ್ಗೆ ಪೋಷಕರೂ ಎಚ್ಚರವಹಿಸಬೇಕಾಗಿದೆ.
‘ಹಳೆ ಬೇರು, ಹೊಸ ಚಿಗುರು’ ಎಂಬAತೆ ಹಳೆಯದ್ದು ಎಂದೂ ಹಳಸುವುದಿಲ್ಲ. ಹಳೆಯ ನೆನಪುಗಳು ಸದಾ ನವನವೀನವಾಗಿರುತ್ತವೆ. ಅದಕ್ಕೆ ಹೊಸ ಚಿಗುರು ಹುಟ್ಟಿ ಮತ್ತೆ ಮತ್ತೆ ಜೀವಂತಿಕೆ ಪಡೆಯುತ್ತವೆ. ಇಲ್ಲೊಂದು ಪ್ರಶ್ನೆ ಉದ್ಭವಿಸಬಹುದು. ಕಹಿ ನೆನಪುಗಳನ್ನೂ ಹಾಗೇ ಜೋಪಾನವಾಗಿರಿಸಬೇಕೇ? ಎಂದು ಜೀವನದಲ್ಲಿ ಸಿಹಿ-ಕಹಿ ಎರಡೂ ಇರುತ್ತದೆ. ಕಹಿ ಘಟನೆಗಳನ್ನು ಗುಜರಿಗೆ ಹಾಕಬೇಕು. ಅಂದರೆ ಮನಸ್ಸಿನಿಂದ ತೆಗೆದು ಹಾಕಬೇಕು. ಮರೆಯಲು ಪ್ರಯತ್ನಿಸಬೇಕು. ಆ ಕಹಿ ಘಟನೆ, ಕ್ಷಣವನ್ನು ಅನುಭವಿಸಿದ ಬಳಿಕ ಅದರಿಂದ ಪಡೆದ ಜ್ಞಾನ, ಅರಿವನ್ನು ಮುಂದಿನ ಒಳಿತಿಗೆ ಮೆಟ್ಟಿಲಾಗಿ ಬಳಸಿಕೊಳ್ಳಬೇಕು. ಕಹಿ ಘಟನೆಗಳು ನಿಂತ ನೀರಿನಂತಾದರೆ, ಸಿಹಿ ಘಟನೆಗಳು ಹರಿವ ನೀರಿನಂತೆ ಬದುಕನ್ನು ಸಕಾರಾತ್ಮಕವಾಗಿರಿಸುತ್ತದೆ. ಸಿಹಿ ಘಟನೆಗಳನ್ನು ಶಾಶ್ವತವಾಗಿ ಮನಸ್ಸಿನಲ್ಲಿ ಇಟ್ಟುಕೊಂಡು ಮೆಲುಕು ಹಾಕುತ್ತಿರಬೇಕು ಆಗ ಜೀವನದಲ್ಲಿ ಲವಲವಿಕೆ ಸಾಧ್ಯವಾಗುತ್ತದೆ.