ಬ್ಯಾಂಕ್ ಮ್ಯಾನೇಜರ್‌ನ ನೋವು

ತನ್ನ ತಪ್ಪಿನಿಂದಾಗಿ ಸಾಲದ ವ್ಯವಹಾರಗಳನ್ನು ಹಾಳುಮಾಡಿಕೊಂಡು ಅಥವಾ ಯಾರಿಗೂ ಜಾಮೀನು ಹಾಕಿ ‘ಸಿಬಿಲ್’ನಲ್ಲಿ ತನ್ನ ಅಂಕಗಳನ್ನು ಕಳೆದುಕೊಂಡು ಕೊನೆಗೂ ಯಾವುದೇ ಸಾಲ ಪಡೆಯಲಾಗದೆ ಪರಿತಪಿಸುವವರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿಸಿದ್ದೆ. ಇದಾದರೂ ಹೆಚ್ಚು ಕಡಿಮೆ ಸ್ವಯಂಕೃತ ಅಪರಾಧದಿಂದ ಆಗಿದ್ದಾಗಿದೆ. ಆದರೆ ಇನ್ನೊಂದು ಸಮಸ್ಯೆ ಬಹಳ ವಿಚಿತ್ರವಾಗಿರುವಂತದ್ದು. ಯಾವುದೇ ಸಾಲ ಪಡೆಯಲು ಸಾಮಾನ್ಯವಾಗಿ ಓರ್ವ ಜಾಮೀನುದಾರ ಬೇಕಾಗಿರುತ್ತದೆೆ. ಸಾಲಕ್ಕಾಗಿ ಹೇಗೋ ಕಷ್ಟಪಟ್ಟು ಆದಾಯವಿರುವ ಓರ್ವ ಜಾಮೀನುದಾರನನ್ನು ಹುಡುಕುತ್ತಾರೆ. ಆದರೆ ಕೊನೆಯಲ್ಲಿ ಅವರ ಸಿಬಿಲ್ ಅನ್ನು ತೆಗೆದು ನೋಡಿದಾಗ ಅವರು ಹಿಂದಿನ ಯಾವುದೋ ಒಂದಿಷ್ಟು ಸಾಲಗಳನ್ನು ಹಾಗೇ ಬಾಕಿ ಉಳಿಸಿಕೊಂಡಿರುತ್ತಾರೆ. ಸದ್ಯಕ್ಕಂತೂ ಆ ಸಾಲವನ್ನು ಕಟ್ಟುವ ಯಾವುದೇ ಇರಾದೆ ಅವರಿಗೆ ಇರುವುದಿಲ್ಲ. ಆದರೆ ಆ ಬಾಕಿಯಿಂದಾಗಿ ಸಿಕ್ಕ ಒಬ್ಬ ಜಾಮೀನುದಾರನ ಸಿಬಿಲ್ ಅಂಕ ಕಡಿಮೆಯಾಗಿ ಸಾಲದ ಅರ್ಜಿದಾರನಿಗೆ ಕೊನೆಯಲ್ಲಿ ಸಾಲ ಸಿಗದಂತಾಗುತ್ತದೆ. ಒಂದು ವೇಳೆ ಸಾಲ ಬೇಕಾಗಿದ್ದಲ್ಲಿ ಅನಿವಾರ್ಯವಾಗಿ ಆ ಜಾಮೀನುದಾರ ಹಾಗೇ ಉಳಿಸಿದ ಎಲ್ಲಾ ಸಾಲದ ಬಾಕಿಗಳನ್ನು ಪೂರ್ಣವಾಗಿ ಇವರೇ ಕೈಯಿಂದ ಕಟ್ಟಿ ಆ ಬ್ಯಾಂಕಿನಿoದ ‘ನೋ ಡ್ಯೂ ಸರ್ಟಿಫಿಕೇಟ್’ ತಂದು ತನ್ನ ಹೊಸ ಸಾಲಕ್ಕೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೇ ಜಾಮೀನಿಗಾಗಿ ಅವರ ಸಾಲವನ್ನು ಕಟ್ಟಿದವರು ಎಷ್ಟೋ ಜನರಿದ್ದಾರೆ. ಹೇಗಾದರೂ ಮಾಡಿ ಮುಂದೆ ವಸೂಲಾತಿ ಮಾಡಬಹುದೆಂಬ ಆಶಾಭಾವನೆಯೊಂದಿಗೆ ಜಾಮೀನುದಾರನ ಬಾಕಿಯನ್ನೆಲ್ಲ ಕಟ್ಟಿ ಹೊಸ ಸಾಲವನ್ನು ಪಡೆಯುತ್ತಾರೆ. ಆದರೆ ಹೀಗೆ ತೀರಿಸಿದ ಸಾಲಗಳು ಸುಲಭವಾಗಿ ಹಿಂದುರಿಗಿ ಬರುವುದಿಲ್ಲ. ಯಾಕೆಂದರೆ ಹಿಂದೆ ಬ್ಯಾಂಕ್‌ಗೆ ಕಟ್ಟಲು ಆಗದವರು ಇವರಿಗೆ ಹೇಗೆ ಕಟ್ಟುತ್ತಾರೆ! ಅಲ್ಲದೇ ಜಾಮೀನು ಹಾಕಿರುವ ಒಂದು ಋಣ ಯಾವಾಗಲೂ ವಸೂಲಿ ವಿಚಾರಕ್ಕೆ ಅಡ್ಡ ಬರುತ್ತದೆ.
ಸಾಲ ಮರುಪಾವತಿ ಮಾಡದಿದ್ದಲ್ಲಿ ಮಾತ್ರವಷ್ಟೇ ಸಿಬಿಲ್ ಅಂಕಗಳು ಕಡಿಮೆಯಾಗುವುದಿಲ್ಲ. ಬದಲಾಗಿ ಪದೇ ಪದೇ ಸಿಬಿಲ್ ವರದಿಯನ್ನು ತೆಗೆದರೂ ಕೂಡಾ ಆ ವ್ಯಕ್ತಿಯ ಅಂಕಗಳು ಕಡಿಮೆಯಾಗುತ್ತದೆ. ಏಕೆಂದರೆ ಪದೇ ಪದೇ ಆ ವ್ಯಕ್ತಿ ಸಾಲಕ್ಕಾಗಿ ಬೇರೆ ಬೇರೆ ಕಡೆ ಪ್ರಯತ್ನ ಮಾಡುತ್ತಾ ಇದ್ದಾನೆ ಎನ್ನುವ ಅರ್ಥದೊಂದಿಗೆ ಸಿಬಿಲ್ ಅಂಕಗಳು ಕುಸಿಯುತ್ತದೆ. ಒಟ್ಟಿನಲ್ಲಿ ಎಲ್ಲಾ ಅರ್ಹತೆಗಳು ಇದ್ದು, ಸಿಬಿಲ್ ಮಾನದಂಡದಲ್ಲಿ ಕನಿಷ್ಟ ಅಂಕಗಳು ಇಲ್ಲದೇ ಇದ್ದಾಗ ಕೊನೆಯಲ್ಲಿ ಸಾಲವಿಲ್ಲದೇ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಬಹುದು.
ಬ್ಯಾಂಕ್‌ಗಳು ಇಷ್ಟೆಲ್ಲಾ ನಿಯಮಗಳನ್ನು ಸುಮ್ಮನೇ ಮಾಡಿರುವುದಿಲ್ಲ. ಏಕೆಂದರೆ ಇದು ಹಣಕಾಸಿನ ವಿಚಾರ. ಹೆಚ್ಚಿನ ಸಾಲಗಳು ಮರುಪಾವತಿಯಾಗದೆ ಬಾಕಿಯಾಗಿರುವುದನ್ನು ಗಮನಿಸಿದಾಗ ಉದ್ದೇಶಪೂರಕವಾಗಿ ಕಟ್ಟದೇ ಬಾಕಿ ಉಳಿಸಿಕೊಂಡಿರುವoತಹ ಸಂಖ್ಯೆಗಳು ಕಡಿಮೆಯಿರುತ್ತದೆ, ಬಹುತೇಕ ಸಂದರ್ಭದಲ್ಲಿ ಕಟ್ಟಲು ಸಾಕಷ್ಟು ಆದಾಯಗಳಿಲ್ಲದೇ ಕಂತುಬಾಕಿಯಾಗಿ ತಮ್ಮ ಹೊರೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ ಕೊನೆಗೆ ದೊಡ್ಡ ಬಾಕಿಯನ್ನು ಉಳಿಸಿಕೊಳ್ಳುವಂತಾದ್ದಾಗಿರುತ್ತದೆ. ಸಾರ್ವಜನಿಕರು ಬ್ಯಾಕಿನ ಮೇಲೆ ಅತ್ಯಂತ ನಂಬಿಕೆಯಿಟ್ಟು ತಾವು ಕಷ್ಟಪಟ್ಟು ಉಳಿಸಿದ ಹಣವನ್ನು ಠೇವಣಿಯಾಗಿ ಇಡುತ್ತಾರೆ. ಅದೇ ಠೇವಣಿಯನ್ನು ಬಳಸಿ ಬ್ಯಾಂಕುಗಳು ಅಗತ್ಯವಿರುವ ಜನರಿಗೆ ಸಾಲವಾಗಿ ನೀಡುತ್ತವೆ. ಆದ್ದರಿಂದ ಜನಸಾಮಾನ್ಯರು ಬ್ಯಾಂಕಿನ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವುದರ ಜೊತೆಗೆ ಅವರು ಕಷ್ಟ ಪಟ್ಟು ಉಳಿಸಿದ ಹಣವನ್ನು ಅತ್ಯಂತ ಸುರಕ್ಷತೆಯಿಂದ ಸಾಲದ ವ್ಯವಹಾರಕ್ಕಾಗಿ ಬಳಸುವುದರಿಂದ ಅನಿವಾರ್ಯವಾಗಿ ಬ್ಯಾಂಕ್‌ಗಳು ಇಂತಹ ಕಠಿಣ ನಿಯಮವನ್ನು ವಿಧಿಸಬೇಕಾಗುತ್ತದೆ. ಇದು ಖಂಡಿತಾ ಬ್ಯಾಂಕಿನ ಅಥವಾ ಹಣಕಾಸು ವ್ಯವಸ್ಥೆಯ ನಿಯಂತ್ರಕ ಸಂಸ್ಥೆಗಳ ತಪ್ಪಲ್ಲ. ಜನಸಾಮಾನ್ಯರ ಒಳಿತಿಗಾಗಿ ಮಾಡಿರುವ ಕಾನೂನಾತ್ಮಕ ವ್ಯವಸ್ಥೆಯಾಗಿದೆ.
ಇಂತಹ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿಗಳಿಗೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಬಡಜನತೆ ಈ ಎಲ್ಲಾ ನಿಯಮಗಳನ್ನು ಗೆದ್ದು ಬ್ಯಾಂಕ್‌ನ ಕಡಿಮೆ ಬಡ್ಡಿ ದರದ ಸಾಲವನ್ನು ಪಡೆಯುವುದು ಒಂದು ಯಕ್ಷಪಶ್ನೆಯಾಗಿಯೇ ಇಂದಿಗೂ ಉಳಿದಿದೆ. ಬ್ಯಾಂಕಿನಿoದ ಸಾಲ ಬೇಕಾದಲ್ಲಿ ಸಾಕಷ್ಟು ಆದಾಯಗಳಿರಬೇಕು, ದಾಖಲೆಗಳಿರಬೇಕು, ಆಸ್ತಿಗಳಿರಬೇಕು, ಜಾಮೀನಿರಬೇಕು ಇದೆಲ್ಲವೂ ಸತ್ಯ. ಆದರೆ ಇವುಗಳೆಲ್ಲ ಉಳ್ಳವರ ಕೈಗಳಲ್ಲಿ ಮಾತ್ರ ಇರುತ್ತದೆ. ‘ಬಡವನಾದ ನಾನೇನು ಮಾಡಲಯ್ಯ!’ ಎಂದು ಬಡವ ಬ್ಯಾಂಕನ್ನು ಪ್ರಶ್ನಿಸಿದರೆ ಬ್ಯಾಂಕ್ ಮ್ಯಾನೇಜರ್‌ನಲ್ಲಿ ಉತ್ತರವಿಲ್ಲ. ಆತ ಬಡವನಾಗಿದ್ದರಿಂದಲೇ ಆತನಲ್ಲಿ ಆಸ್ತಿ – ಪಾಸ್ತಿಗಳು, ಜಾಮೀನು, ದಾಖಲಾಲೆಗಳು ಇಲ್ಲ. ಬಡವನಾಗಿದ್ದರಿಂದಲೇ ಸಾಲಕ್ಕೆ ಅರ್ಜಿ ಹಾಕುತ್ತಾನೆ. ಕಷ್ಟಪಟ್ಟು ದುಡಿಯುವುದೇ ಅವನ ಆಸ್ತಿಯಾಗಿದೆ. ಸಾಧಿಸುವ ಛಲ ದಾಖಲೆಯಾಗಿದೆ. ಹಾಗೆಯೇ ಶಿಸ್ತು, ಬದ್ಧತೆಗಳೆ ಜಾಮೀನು ಆಗಿವೆ. ಆದರೆ ಬ್ಯಾಂಕಿನ ಕಂಪ್ಯೂಟರ್‌ಗೆ ಇವುಗಳು ಅರ್ಥವಾಗುವುದಿಲ್ಲ. ಉಳ್ಳವರಿಗೆ ಬ್ಯಾಂಕಿನ ಸಾಲ ಬೇಕಾದಲ್ಲಿ ಕೊಡಲು ಎಲ್ಲವೂ ಇದೆ. ಆದರೆ ಅವರಿಗೆ ಸಾಲದ ಅಗತ್ಯವಿಲ್ಲ. ಸಾಮಾನ್ಯವಾಗಿ ಠೇವಣಿ ಇಡಲು ಮಾತ್ರ ಅವರು ಬ್ಯಾಂಕಿಗೆ ಹೋಗುತ್ತಾರೆ. ಬಡವರ ವಿಚಾರದಲ್ಲಿ ಇದು ತದ್ವಿರುದ್ದವಾಗಿದೆ. ಉತ್ತರವೇ ಇಲ್ಲದ ಈ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳಲು ಸರಕಾರಗಳು ಆದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅನೇಕ ಲೋನ್ ಸ್ಕೀಮ್‌ಗಳನ್ನು ಜಾರಿಗೆ ತಂದು ಸುಲಭವಾಗಿ ಬ್ಯಾಂಕಿನಿoದ ಬಡವರಿಗೆ ಸಾಲ ಸಿಶ್ರೀಯುತ ಅನಿಲ್ ಕುಮಾರ್ ಎಸ್.ಎಸ್.ಗಬೇಕೆಂಬ ನಿಟ್ಟಿನಲ್ಲಿ ಒಂದಿಷ್ಟು ನಿಯಮಗಳ ಸಡಿಲಿಕೆ, ಸಬ್ಸಿಡಿ, ಮುಂತಾದ ಪ್ರಯತ್ನಗಳನ್ನು ಮಾಡಿದೆ. ಆದರೆ ವಿಶ್ವದ ಅತೀ ಹೆಚ್ಚು ಜನಸಂಖ್ಯೆ, ಅದರಲ್ಲೂ ಹೆಚ್ಚು ಬಡವರನ್ನು ಹೊಂದಿದ ನಮ್ಮ ದೇಶಕ್ಕೆ ಈ ಸ್ಕೀಮ್‌ಗಳು ಭೀಮನ ಹೊಟ್ಟೆಗೆ ಅರೆಮಜ್ಜಿಗೆ ಕೊಟ್ಟಂತಾಗುತ್ತದೆ. ಅರ್ಥಾತ್ ಇಂತಹ ಸ್ಕೀಮ್‌ಗಳನ್ನು ಸರ್ವರಿಗೂ ನೀಡುವಂತ ಆರ್ಥಿಕ ಶಕ್ತಿ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಖಂಡಿತ ಇಲ್ಲ. ಹೀಗಿರುವಾಗ ಇನ್ಯಾವ ಶಕ್ತಿ ಈ ಬಡವರ ಕೈ ಹಿಡಿಯಲು ಸಾಧ್ಯ? ಸ್ವಲ್ಪ ಯೋಚಿಸಿ…

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *