ಮತ್ತಷ್ಟು ಸುರಕ್ಷತೆ, ಪಾರದರ್ಶಕತೆಯೊಂದಿಗೆ ಶೀಘ್ರ ಪ್ರಗತಿನಿಧಿ ವ್ಯವಸ್ಥೆ

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್.

ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದು ಆರ್ಥಿಕವಾಗಿ ಹಿಂದುಳಿದ ಲಕ್ಷಾಂತರ ಗ್ರಾಮೀಣ ಜನರಿಗೆ
ಸ್ವ-ಸಹಾಯ ಸಂಘಗಳ ಮೂಲಕ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿoದ ನೇರವಾಗಿ ಆರ್ಥಿಕ ಸೌಲಭ್ಯವನ್ನು ತಲುಪಿಸಲು ಶ್ರೀ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಸ್ಥಾಪಿಸಿ ಅಭೂತಪೂರ್ವವಾದ ಆರ್ಥಿಕ ಸಬಲೀಕರಣವನ್ನು ಕರ್ನಾಟಕ ರಾಜ್ಯದಲ್ಲಿ ಉಂಟುಮಾಡಿದ್ದಾರೆ. ಸ್ವ-ಸಹಾಯ ಸಂಘಗಳು ಬ್ಯಾಂಕ್‌ನಿAದ ಪಡೆಯುವ ಆರ್ಥಿಕ ಸೌಲಭ್ಯವನ್ನು ‘ಸಾಲ’ ಎಂದು ಕರೆಯದೆ ಗ್ರಾಮೀಣ ಜನರ ಪ್ರಗತಿಗಾಗಿ ವಿನಿಯೋಗಿಸುವ ‘ಪ್ರಗತಿನಿಧಿ’ ಎಂದು ಪೂಜ್ಯರು ನಾಮಾಂಕರಿಸಿದ್ದಾರೆ. ಇಲ್ಲಿಯವರೆಗೆ ಬ್ಯಾಂಕ್‌ಗಳಿoದ ಒಂದು ಲಕ್ಷ ಕೋಟಿ ರೂಪಾಯಿಯಷ್ಟು ಮೊತ್ತದ ಆರ್ಥಿಕ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೆ ಯೋಜನೆ ತಲುಪಿಸುವುದರೊಂದಿಗೆ, ಅವರ ಪ್ರಗತಿಯಲ್ಲಿ ಪಾಲುದಾರ ಬಂಧು ಆಗಿದೆ. ಯೋಜನೆಯ ಈ ಪ್ರಗತಿನಿಧಿ ವ್ಯವಸ್ಥೆಗೆ ವಿನೂತನ ಡಿಜಿಟಲ್ ಸ್ಪರ್ಶ ಈಗ ನೀಡಲಾಗಿದ್ದು ಈ ವಿನೂತನ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ಸದಸ್ಯರಿಗೆ ಪ್ರಗತಿನಿಧಿ ಶೀಘ್ರವಾಗಿ ಸಿಗುವುದಲ್ಲದೇ, ಇನ್ನೂ ಹೆಚ್ಚಿನ ಸುರಕ್ಷತೆ, ಪಾರದರ್ಶಕತೆ ಮತ್ತು ಸಮಯಕ್ಕೆ ಸರಿಯಾಗಿ ಪ್ರಗತಿನಿಧಿ ದೊರೆಯುತ್ತದೆ. ಸಂಘದ ನಿರ್ಣಯಗಳಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಪ್ರಗತಿನಿಧಿಗಾಗಿ ಸದಸ್ಯರು ನೇರವಾಗಿ ಯೋಜನೆಯನ್ನು ಸಂಪರ್ಕಿಸುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ನಮ್ಮ ಸದಸ್ಯರು ಈ ವಿನೂತನ ಬಯೋಮೆಟ್ರಿಕ್ ತಂತ್ರಜ್ಞಾನದ ಡಿಜಿಟಲ್
SK-21 ಕುರಿತಾಗಿ ಈ ಕೆಳಗಿನ ಪ್ರಮುಖ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕಾಗಿ ವಿನಂತಿ.
1. ಸದಸ್ಯರು ತಮ್ಮ ಪ್ರಗತಿನಿಧಿ ಬೇಡಿಕೆಯನ್ನು ಸಂಘದ ಮೂಲಕ ನೇರವಾಗಿ ಯೋಜನೆಗೆ ತಲುಪಿಸಲು
‘ಎಸ್.ಕೆ.ಡಿ.ಆರ್.ಡಿ.ಪಿ. ಮೆಂಬರ್ ಲೀಡ್ ಆ್ಯಪ್’ ಎನ್ನುವ ಸರಳ ಆ್ಯಪ್ ಅನ್ನು ಒದಗಿಸಲಾಗಿದೆ. 2. ಈ ಆ್ಯಪ್‌ನಿಂದ ಸಂಘದ ಸದಸ್ಯರ ಅಥವಾ ಆ ಸಂಘದ ಇತರ ಸದಸ್ಯರ ಪ್ರಗತಿನಿಧಿ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. 3. ಈ ಆ್ಯಪ್ ಬಳಸಲು ಸಾಧ್ಯವಿಲ್ಲದ (ಸ್ಮಾರ್ಟ್ಫೋನ್ ಇಲ್ಲದ) ಸದಸ್ಯರಿಗೆ ಯೋಜನೆಯ ಕೇಂದ್ರ ಕಚೇರಿಗೆ ಪ್ರಗತಿನಿಧಿ ಬೇಡಿಕೆ ಸಲ್ಲಿಸಲು ‘ಮಿಸ್ಡ್ ಕಾಲ್ ಸೇವೆ’ಯನ್ನು ಒದಗಿಸಲಾಗಿದೆ (ಟೋ.ಸಂ.08048214444). ಈ ಸೇವೆಯಲ್ಲಿ ಕೇಂದ್ರ ಕಛೇರಿಯ ಪ್ರಗತಿನಿಧಿ ಸಹಾಯವಾಣಿ ಸಿಬ್ಬಂದಿಗಳು ಸದಸ್ಯರು ಮಾಡಿದ ಮಿಸ್ಡ್ಕಾಲ್ ಆಧಾರದ ಮೇಲೆ ಪುನಃ ಅವರಿಗೆ ಕರೆ ಮಾಡಿ ಸದಸ್ಯರಿಂದ ಬೇಡಿಕೆಯ ವಿವರವನ್ನು ಪಡೆದುಕೊಳ್ಳುವರು.
4. ಪ್ರಗತಿನಿಧಿ ಪಡೆಯಲು ಅರ್ಹ ಇರುವ ಸದಸ್ಯರಿಗೆ ಮಾತ್ರ ಈ ಮೇಲಿನ ಎರಡು ಮೂಲಗಳಿಂದ ಪ್ರಗತಿನಿಧಿ ಬೇಡಿಕೆ ಸಲ್ಲಿಸಬಹುದು.
5. ಸದಸ್ಯರ ಲೀಡ್ ಆ್ಯಪ್‌ನಿಂದಾಗಲಿ ಅಥವಾ ಮಿಸ್ಡ್ಕಾಲ್‌ನಿಂದಾಗಲಿ ಯಾವುದೇ ಬೇಡಿಕೆಗಳು ಬಂದರೂ ಅವುಗಳು ಕ್ಷಣಾರ್ಧದಲ್ಲಿ ಮೇಲ್ವಿಚಾರಕರ ಟ್ಯಾಬ್‌ಗೆ ತಂತ್ರಜ್ಞಾನದ ಮೂಲಕ ತಲುಪುವುದು. 6. ಮೇಲ್ವಿಚಾರಕ/ಯೋಜನಾಧಿಕಾರಿಗಳ ಪರಿಶೀಲನೆಯನ್ನು (ಪ್ರಗತಿನಿಧಿ ಮೊತ್ತಕ್ಕೆ ಅನುಸಾರವಾಗಿ) ಸಂಪೂರ್ಣವಾಗಿ ತಂತ್ರಜ್ಞಾನದ ಮೂಲಕ ಅನುಪಾಲನೆ ಮಾಡಲಾಗುವುದು. 7. ಸದಸ್ಯರ ಪ್ರಗತಿನಿಧಿ ಬೇಡಿಕೆಯನ್ನು ತಮ್ಮ ಟ್ಯಾಬ್‌ನಲ್ಲಿ ಪಡೆದ ಮೇಲ್ವಿಚಾರಕರು/ಯೋಜನಾಧಿಕಾರಿಗಳು ಸಂಘದ ವಾರದ ಸಭೆಗೆ ಭೇಟಿ ನೀಡಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಪ್ರಗತಿನಿಧಿ ಪಡೆಯಲು ಆ ಸದಸ್ಯರಿಗೆ ಎಲ್ಲಾ ಅರ್ಹತೆಗಳಿದೆಯೇ? ಅದು ಸಮರ್ಪಕವಾಗಿದೆಯೇ? ಎಂದು ಪರಿಶೀಲಿಸುತ್ತಾರೆ. ಅಗತ್ಯವಿದ್ದಲ್ಲಿ ಸದಸ್ಯರ ಮನೆ ಭೇಟಿ ಮಾಡಿ ಪರಿಶೀಲಿಸುತ್ತಾರೆ. ಸದಸ್ಯರು ಸಂಘಕ್ಕೆ ನೀಡುವ ಭದ್ರತೆಗಳನ್ನು ಹಾಗೂ ವಿನಿಯೋಗದಾರರ ಮಾಹಿತಿಗಳನ್ನು ಪರಿಶೀಲಿಸಿ ಅರ್ಹವಾದ ಪ್ರಗತಿನಿಧಿಗೆ ಮಾತ್ರ ಮಂಜೂರಾತಿ ಶಿಫಾರಸ್ಸು ನೀಡುತ್ತಾರೆ.
8. ಮುಂದುವರಿದು, ಆ ಪ್ರಗತಿನಿಧಿ ಬಿಡುಗಡೆಗಾಗಿ ವಾರದ ಹಣ ಸಂಗ್ರಹಣಾ ದಿನದಂದು ತಮ್ಮ ಸಂಘದ ಎಲ್ಲಾ ಸದಸ್ಯರು (ಕನಿಷ್ಠ ಶೇ.70ಕ್ಕಿಂತ ಹೆಚ್ಚು) ಸಂಘದ ನಿರ್ಣಯ ಪುಸ್ತಕ, ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ ಇತ್ಯಾದಿಗಳೊಂದಿಗೆ ಸಿ.ಎಸ್.ಸಿ. ಕೇಂದ್ರಕ್ಕೆ ಭೇಟಿ ನೀಡಬೇಕು. ಸಿ.ಎಸ್.ಸಿ. ಕೇಂದ್ರದಲ್ಲಿ ಈಗಾಗಲೇ ಮೇಲ್ವಿಚಾರಕರು ಅಪ್‌ಲೋಡ್ ಮಾಡಲಾದ ಪರಿಶೀಲನಾ/ಅನುಮೋದನೆಯ ಮಾಹಿತಿಗಳು ಕಂಪ್ಯೂಟರ್‌ನಲ್ಲಿ ನೇರವಾಗಿ ಲಭ್ಯವಿದ್ದು, ಕೆಲವೊಂದು ಪರಿಶೀಲನೆಗಳನ್ನು ನಡೆಸಲಾಗುವುದು. ಇದೇ ಸಂದರ್ಭ ಕಂಪ್ಯೂಟರ್‌ನ ಧ್ವನಿವರ್ಧಕದಿಂದ ಪ್ರಗತಿನಿಧಿ ಬೇಡಿಕೆಯ ವಿವರ ಹಾಗೂ ಗುಂಪಿನ ನಿರ್ಣಯಗಳನ್ನು ಸದಸ್ಯರೆಲ್ಲರೂ ಆಲಿಸಿ ತಮ್ಮ ಅಂತಿಮ ನಿರ್ಣಯ ಕೈಗೊಳ್ಳಲು ಅವಕಾಶ ನೀಡಲಾಗುವುದು. ಸರ್ವಾನುಮತದಿಂದ ಒಪ್ಪಿದ್ದಲ್ಲಿ ಎಲ್ಲಾ ಸದಸ್ಯರ ಬೆರಳಚ್ಚಿನ ದೃಢೀಕರಣ (Biometric Authentication) ಪಡೆದು ಕ್ಷಣಾರ್ಧದಲ್ಲಿ ಡಿಜಿಟಲ್ SK-21 ಅನ್ನು ತಯಾರಿಸಿ, ದ್ವಿ-ಪ್ರತಿ ಪ್ರಿಂಟ್ ಪಡೆಯಲಾಗುವುದು. ಜೊತೆಗೆ ವೈಯಕ್ತಿಕ ಸಾಲದ ಅರ್ಜಿ(SK-51), ಡಿ.ಪಿ. ನೋಟ್ ಪ್ರತಿಯನ್ನು ಪಡೆದು ಎಲ್ಲಾ ಸದಸ್ಯರ ಸಹಿ ಪಡೆಯಲಾಗುವುದು. 9. ಸಾಲದ ವಿತರಣೆ ಪ್ರಕ್ರಿಯೆಗೆ ತಂತ್ರಜ್ಞಾನದಿoದಲೇ ಜಿಲ್ಲಾ ಕಛೇರಿಗೆ ಈ ಎಲ್ಲಾ ಮಾಹಿತಿಗಳು ರವಾನೆ ಆಗಲಿರುವುದು. ಸಂಘದ ಸದಸ್ಯರ ಕೇವಲ ಒಂದೇ ಭೇಟಿಯಲ್ಲಿ ಪ್ರಗತಿನಿಧಿಯ ವಿತರಣೆಯನ್ನು ಮಾಡುವ ಉದ್ದೇಶದಿಂದ ಸ್ವ-ಸಹಾಯ ಸಂಘದ ಕಾರ್ಡ್ನ ಮೂಲಕ ಸಾಲ ಬಿಡುಗಡೆ ಪ್ರಕ್ರಿಯೆಯನ್ನು ಅದೇ ದಿನ ಅದೇ ಕ್ಷಣದಲ್ಲಿ ಸಿ.ಎಸ್.ಸಿ. ಕೇಂದ್ರದಲ್ಲಿ ಕೈಗೊಳ್ಳಲಾಗುವುದು. 10. ಮುಂದಿನ ಹಂತದಲ್ಲಿ ಶೀಘ್ರವಾಗಿ ಜಿಲ್ಲಾ ಕಚೇರಿಯಿಂದ ಸಾಲದ ಮೊತ್ತ ಆಐಖಿ ಪ್ರಕ್ರಿಯೆಯಲ್ಲಿ ನೇರವಾಗಿ ಸದಸ್ಯರ ಖಾತೆಗೆ ಜಮೆ ಮಾಡಲಾಗುವುದು.
ಯೋಜನೆಯ ಎಲ್ಲಾ ನೀತಿ ನಿಯಮಗಳನ್ನು ಸಮಸ್ತ ಸದಸ್ಯರು ಪಾಲನೆ ಮಾಡಿ, ಈ ವಿನೂತನ ಡಿಜಿಟಲ್ ಪ್ರಗತಿನಿಧಿ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿ, ತಮ್ಮ ಪ್ರಗತಿಯೊಂದಿಗೆ ಸಂಘದ ಸುಸ್ಥಿರತೆಯನ್ನು ಸದಾ ಕಾಯ್ದುಕೊಳ್ಳುವಂತೆ ವಿನಂತಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *