ರಕ್ಷಣಾ ಸಚಿವಾಲಯದಿಂದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡೋ – ಪಾಕ್ ಯುದ್ಧದಲ್ಲಿ ಬಳಸಿದ ಯುದ್ಧ ಟ್ಯಾಂಕ್ ಕೊಡುಗೆ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡದೆ ತೆರಳುವುದು ಕಡಿಮೆ. ಅಲ್ಲಿಗೆ ಭೇಟಿ ನೀಡಿದವರು ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಶ್ರೀ ಹೆಗ್ಗಡೆಯವರ ಆಸಕ್ತಿಯನ್ನು ಕಂಡು ಬೆರಗಾಗುತ್ತಾರೆ. ಇದೀಗ ಕೇಂದ್ರ ರಕ್ಷಣಾ ಸಚಿವಾಲಯವು 1971ರ ಇಂಡೋ ಪಾಕ್ ಯುದ್ಧ, ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಳಕೆಯಾದ
‘ಟಿ – 565’ ಎಂಬ ಹೆಸರಿನ ಯುದ್ಧ ಟ್ಯಾಂಕ್ ಅನ್ನು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ನೀಡಿದೆ.
ಸುಮಾರು 40 ವರ್ಷಗಳ ಕಾಲ ದೇಶದ ರಕ್ಷಣಾ ಕಾರ್ಯದಲ್ಲಿ ಬಳಕೆಯಾದ ಟಿ – 565 ಯುದ್ಧ ಟ್ಯಾಂಕ್‌ಗೆ ಬಹು ಗೌರವವಿದೆ. 40 ಟನ್‌ಗಳಷ್ಟು ತೂಕ ಹೊಂದಿರುವ ಟ್ಯಾಂಕ್ 9 ಅಡಿ ಎತ್ತರ, 17.6 ಅಡಿ ಉದ್ದ ಮತ್ತು 10.5 ಅಡಿ ಅಗಲವಾಗಿದೆ. ಸೋವಿಯತ್ ಒಕ್ಕೂಟದ ಸಿಬ್ಬಂದಿಯಿAದ ತಯಾರಾದ ಈ ಟ್ಯಾಂಕ್ 1968ರಲ್ಲಿ ಭಾರತೀಯ ಸೇನೆಗೆ ಸೇರಿದೆ. ಈ ಟ್ಯಾಂಕ್ ಯುದ್ಧಭೂಮಿಯಲ್ಲಿ ಗಂಟೆಗೆ 51 ಕಿ.ಮೀ. ವೇಗವಾಗಿ ಚಲಿಸಬಲ್ಲದು. 500 ಅಶ್ವಶಕ್ತಿಯ ಸಾಮರ್ಥ್ಯವನ್ನು ಇದು ಹೊಂದಿದೆ.

Facebook
Twitter
WhatsApp
LinkedIn
Telegram

One Response

Leave a Reply

Your email address will not be published. Required fields are marked *