ರೀಲ್ಸ್‌ ಎಡಿಟ್‌ ಮಾಡಲು ಇನ್ಸ್ಟಾಗ್ರಾಂ ಎಡಿಟ್ಸ್

ನಾವು ಇಂದು ಕಂಟೆoಟ್ ಕ್ರಿಯೇಟರ್‌ಗಳ ಜಾಯಮಾನದಲ್ಲಿದ್ದೇವೆ. ಅವರಿಗೆ ಸಹಾಯವಾಗಲೆಂದೇ ಮಾರುಕಟ್ಟೆಯಲ್ಲಿ ವಿವಿಧ ಉಪಕರಣಗಳು, ಆ್ಯಪ್, ವೆಬ್‌ಸೈಟ್‌ಗಳು ಇವೆ. ಅದಕ್ಕೀಗ ಹೊಸ ಸೇರ್ಪಡೆ ‘ಇನ್ಸ್ಟಾಗ್ರಾಂ ಎಡಿಟ್ಸ್’. ಕಂಟೆoಟ್ ಕ್ರಿಯೇಟರ್‌ಗಳಿಗೆ ಸಹಾಯವಾಗಲಿ ಎಂದು ಹಾಗೂ ಟಿಕ್‌ಟಾಕ್ ಒಡೆತನದ ಜನಪ್ರಿಯ ವೀಡಿಯೋ ಎಡಿಟಿಂಗ್ ಆ್ಯಪ್ ಕ್ಯಾಪ್‌ಕಟ್‌ಗೆ ಠಕ್ಕರ್ ಕೊಡುವ ಸಲುವಾಗಿ ಇನ್‌ಸ್ಟಾಗ್ರಾಂ ‘ಎಡಿಟ್ಸ್’ ಹೆಸರಿನ ಹೊಸ ಎಡಿಟಿಂಗ್ ಆ್ಯಪ್ ಅನ್ನು ಪರಿಚಯಿಸಿದೆ.
ಒಂದೇ ಸೂರಿನಡಿ ಎಲ್ಲವೂ ಲಭ್ಯ : ಕಂಟೆoಟ್ ಮಾಡುವವರಿಗೆ ಅದರ ಕಷ್ಟದ ಅರಿವಿರುತ್ತದೆ. ಸಾಮಾನ್ಯವಾಗಿ ಸ್ಮಾರ್ಟ್ಫೋನ್‌ನಲ್ಲಿಯೇ ಒಂದು ಸಣ್ಣ ರೀಲ್ಸ್ ವೀಡಿಯೋ ಮಾಡಬೇಕು ಎಂದರೆ ಅದಕ್ಕಾಗಿ ಏನಿಲ್ಲವೆಂದರೂ ನಾಲ್ಕೈದು ಆ್ಯಪ್, ವೆಬ್‌ಸೈಟ್‌ಗಳನ್ನು ಬಳಸಬೇಕಾಗುತ್ತದೆ. ವೀಡಿಯೋ ರೆಕಾರ್ಡ್ ಮಾಡಿ ಅದನ್ನು ಎಡಿಟ್ ಮಾಡಲು, ಅದಕ್ಕೆ ಬೇಕಾದ ಮ್ಯೂಸಿಕ್, ಸೌಂಡ್ ಎಫೆಕ್ಟ್ ನೀಡಲು ಹತ್ತು ಹಲವು ವೆಬ್‌ಸೈಟ್‌ಗಳನ್ನು ತಡಕಾಡಿದಾಗ ಮಾತ್ರ ಅಂತಿಮವಾಗಿ ಒಂದು ವೀಡಿಯೋ ತಯಾರಾಗುತ್ತದೆ. ಆದರೆ ‘ಇನ್‌ಸ್ಟಾಗ್ರಾಂ ಎಡಿಟ್ಸ್ ಆ್ಯಪ್’ ಇವೆಲ್ಲದಕ್ಕೂ ಪರಿಹಾರ ನೀಡಲು ಮುಂದಾಗಿದೆ. ವೀಡಿಯೋ ರೆಕಾರ್ಡ್ ಮಾಡುವುದರಿಂದ ಮೊದಲ್ಗೊಂಡು ಎಲ್ಲವೂ ಒಂದೇ ಆ್ಯಪ್‌ನಲ್ಲಿ ಸಿಗುವ ಹಾಗೆ ಇದನ್ನು ಸಿದ್ಧಪಡಿಸಲಾಗಿದೆ.
ವೈಶಿಷ್ಟ್ಯಗಳು : ಮೊದಲ ಬಾರಿಗೆ ಎಡಿಟ್ ಮಾಡಲು ಹೋಗುವ ವ್ಯಕ್ತಿಗೂ ಬಹಳ ಸರಳವಾಗಿ ಅರ್ಥ ಆಗುವ ಹಾಗೆ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮುಖ್ಯವಾಗಿ ರೀಲ್ಸ್ ಮಾಡುವವರಿಗಾಗಿಯೇ ಇದನ್ನು ತಯಾರಿಸಲಾಗಿದೆ. ಬಹಳ ಉಪಕಾರಿ ವೈಶಿಷ್ಟö್ಯ ಅಂದರೆ ಆ್ಯಪ್ ಒಳಗಡೆಯೇ ಹಾಡುಗಳು ಸಿಗುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಟ್ರೆಂಡಿoಗ್‌ನಲ್ಲಿರುವ ಹಾಡುಗಳು, ನೀವು ಇನ್‌ಸ್ಟಾದಲ್ಲಿ ಸೇವ್ ಮಾಡಿ ಇಟ್ಟಿರುವ ಹಾಡುಗಳು ಈ ಆ್ಯಪ್‌ನಲ್ಲಿಯೇ ಸಿಗುತ್ತವೆ. ಹಾಡುಗಳನ್ನು ಡೌನ್ಲೋಡ್ ಮಾಡಲು ಪ್ರತ್ಯೇಕ ವೆಬ್‌ಸೈಟ್, ಆ್ಯಪ್ ಬಳಸಬೇಕಾಗಿಲ್ಲ. ಇನ್ನು ಇನ್‌ಸ್ಟಾದಲ್ಲಿ ಇರದ ಹಾಡನ್ನು ಬಳಸಲು ಅದು ವೀಡಿಯೋ ಫಾರ್ಮೆಟ್‌ನಲ್ಲಿ ಇದ್ದರೆ ಮಾತ್ರ ಇಂಪೋರ್ಟ್ ಮಾಡಬಹುದು.
ವೀಡಿಯೋ ಎಡಿಟ್ ಮಾಡುವಾಗ ಟೆಕ್ಸ್ಟ್ (ಪಠ್ಯ), ಆಡಿಯೋ, ಫೋಟೋ, ಕ್ಯಾಪ್ಷನ್ (ಅಡಿಬರಹ), ಟ್ರಾನ್ಸಿಶನ್, ಎಫೆಕ್ಟ್ ಹೀಗೆ ಎಲ್ಲವನ್ನೂ ಹಾಕಬಹುದು. ಇದರ ಜೊತೆಗೆ ಹೈ ಕ್ವಾಲಿಟಿಯಲ್ಲೇ (ಎಚ್‌ಡಿ) ಯಾವ ವಾಟರ್‌ಮಾರ್ಕ್ ಇಲ್ಲದೆಯೂ ವೀಡಿಯೋ ಎಕ್ಸ್ಪೋರ್ಟ್ ಮಾಡಬಹುದಾಗಿದೆ.
ಇನ್‌ಸ್ಟಾಗ್ರಾಂ ಜೊತೆಗೆ ಸಂಯೋಜನೆ : ಎಡಿಟ್ಸ್ ಆ್ಯಪ್ ಅನ್ನು ಇನ್‌ಸ್ಟಾಗ್ರಾಂ ಅಭಿವೃದ್ಧಿಪಡಿಸಿರುವುದರಿಂದ ಇದರಲ್ಲಿ ಎರಡೂ ಅಪ್ಲಿಕೇಶನ್‌ಗಳನ್ನು ಲಿಂಕ್ ಮಾಡಲಾಗಿದೆ. ನಾವು ಇನ್‌ಸ್ಟಾಗ್ರಾಂನಲ್ಲಿ ಸೇವ್ ಮಾಡಿದ ಪೋಸ್ಟ್, ರೀಲ್ಸ್ಗಳನ್ನು ಈ ಆ್ಯಪ್‌ನಲ್ಲೂ ಕಾಣಬಹುದು. ಅದಲ್ಲದೇ ನಮ್ಮ ಖಾತೆಯ ಪೋಸ್ಟ್ಗಳ ಅಂಕಿಅoಶಗಳನ್ನು ಈ ಆ್ಯಪ್‌ನಲ್ಲೂ ನೋಡಬಹುದಾಗಿದೆ. ವೀಡಿಯೋ ಮಾಡಲು ಐಡಿಯಾಗಳು ಬೇಕು ಎಂದಾದರೆ ಅಥವಾ ಕಂಟೆoಟ್ ರಚಿಸಲು ಯಾವುದಾದರೂ ಸ್ಫೂರ್ತಿ ಬೇಕು ಎಂದರೂ ಅದನ್ನು ನಿಮಗೆ ಈ ಆ್ಯಪ್ ನೀಡಲಿದೆ. ಇನ್‌ಸ್ಟಾಗ್ರಾಂನಲ್ಲಿರುವ ರೀಲ್ಸ್ಗಳನ್ನು ಇದರಲ್ಲಿಯೇ ನೋಡಿ ನಾವೂ ರೀಕ್ರಿಯೇಟ್ ಮಾಡಲು ಪ್ರಯತ್ನಿಸಬಹುದು.
ಮುಂದೆ ಬರಲಿದೆ ಮತ್ತಷ್ಟು ಹೊಸ ವೈಶಿಷ್ಟ್ಯ : : ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುವುದರ ಜೊತೆಗೆ ಎಡಿಟ್ಸ್ ಆ್ಯಪ್‌ನಲ್ಲಿ ಮುಂದೆ ಏನೆಲ್ಲಾ ಬರಲಿದೆ ಎಂಬುವುದನ್ನೂ ಇನ್‌ಸ್ಟಾಗ್ರಾಂ ಬಿಡುಗಡೆ ಮಾಡಿದೆ. ಎಡಿಟ್ಸ್ ಆ್ಯಪ್‌ನಲ್ಲಿ ನಾವು ಮಾಡುವ ಎಡಿಟಿಂಗ್‌ನ ವರ್ಕ್ಫೈಲ್‌ಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳುವುದು ಸಾಧ್ಯವಾಗಲಿದೆ. ಇದರಿಂದ ಕ್ಲಬ್ ಮಾಡಿ ವೀಡಿಯೋ ರಚಿಸುವುದು ಮುಂದಿನ ದಿನಗಳಲ್ಲಿ ಸುಲಭವಾಗಲಿದೆ. ಜೊತೆಗೆ ಹೊಸ ಫಾಂಟ್‌ಗಳು, ವಾಯ್ಸ್ ಎಫೆಕ್ಟ್, ಆ್ಯನಿಮೇಶನ್, ಫಿಲ್ರ‍್ಸ್, ಆಡಿಯೋಗಳೂ ಆ್ಯಪ್‌ನಲ್ಲೇ ಸಿಗಲಿದೆ. ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನವೂ ಸಂಯೋಜನೆಗೊಳ್ಳಲಿದೆ.
ರೀಲ್ಸ್ಗೆ ಮಾತ್ರ ಸೂಕ್ತ : ಸದ್ಯಕ್ಕೆ ಈ ಆ್ಯಪ್‌ನಲ್ಲಿ ಕಾಣುತ್ತಿರುವ ಒಂದು ಸಮಸ್ಯೆ ಎಂದರೆ ಲಾಂಗ್ ಫಾರ್ಮೆಟ್ ವೀಡಿಯೋಗಳನ್ನು ಇದರಲ್ಲಿ ಎಡಿಟ್ ಮಾಡುವುದು ಅಷ್ಟೊಂದು ಸೂಕ್ತವಲ್ಲ. ಕಾರಣ 60 ಸೆಕೆಂಡ್‌ಗಳಿಗಿoತ ಉದ್ದ ಇರುವ ವೀಡಿಯೋಗಳನ್ನು ಮಾಡಿದರೆ, ಕಾಪಿರೈಟ್ ಹೊಂದಿರುವ ಆಡಿಯೋಗಳನ್ನು ಬಳಸಿದರೆ ಅದನ್ನು ಸೇವ್ ಮಾಡಲು ಆಗುವುದಿಲ್ಲ. ಅದನ್ನು ಇನ್‌ಸ್ಟಾಗ್ರಾಂ ಹಂಚಬಹುದಾದರೂ ಬೇರೆ ಆ್ಯಪ್‌ನಲ್ಲಿ ಹಾಕಲು ಆಗುವುದಿಲ್ಲ. ಇನ್ನು 90 ಸೆಕೆಂಡ್‌ಗಿoತಲೂ ಉದ್ದ ಇರುವ ವೀಡಿಯೋದಲ್ಲಿ ಕಾಪಿರೈಟ್ ಇರುವ ಆಡಿಯೋ ಬಳಸಿದರೂ ಅದನ್ನು ಇನ್‌ಸ್ಟಾಗ್ರಾಂನಲ್ಲೂ ಶೇರ್ ಮಾಡಲು ಆಗುವುದಿಲ್ಲ. ವೀಡಿಯೋ ತನ್ನಿಂತಾನೆ ಮ್ಯೂಟ್ ಆಗಲಿದೆ.
ಡೌನ್ಲೋಡ್ ಮಾಡುವುದು ಹೇಗೆ? : ಎಡಿಟ್ಸ್ ಆ್ಯಪ್ ಈಗಾಗಲೇ ಗೂಗಲ್ ಪ್ಲೇಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಅದನ್ನು ಡೌನ್ಲೋಡ್ ಮಾಡಿ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಎಡಿಟ್ಸ್ ಆ್ಯಪ್‌ಗೆ ಲಾಗಿನ್ ಆಗಬಹುದು. ಸದ್ಯಕ್ಕೆ ಈ ಆ್ಯಪ್‌ನ ಎಲ್ಲಾ ಫೀಚರ್‌ಗಳೂ ಉಚಿತವಾಗಿ ಲಭ್ಯವಿದೆ. Playstore – Edits, an Instagram app.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *