ಶಿಕ್ಷಣ ಮತ್ತು ಕೌಶಲ

ಭಾರತದಲ್ಲಿ ನೆಲ, ಜಲ ಮಾತ್ರವಲ್ಲದೆ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಈ ಸಂಪನ್ಮೂಲಗಳನ್ನು ಹೇಗೆ, ಯಾವಾಗ, ಯಾವ ರೀತಿಯಲ್ಲಿ ಬಳಸಬೇಕೆಂಬ ಅರಿವು ಇದ್ದಾಗ ಮಾತ್ರ ಸಂಪನ್ಮೂಲಗಳು ಪೋಲಾಗದೆ ಸದ್ಬಳಕೆಯಾಗುತ್ತವೆ. ಆ ಮೂಲಕ ನಮ್ಮ ನಾಡು ಅಭಿವೃದ್ಧಿ ಹೊಂದುತ್ತದೆ. ಆ ಅರಿವು ಹುಟ್ಟಿನಿಂದಲೇ ದೊರೆಯುವಂತದ್ದಲ್ಲ. ಅದು ಮನೆ, ಸಮಾಜ, ಶಾಲಾ, ಕಾಲೇಜುಗಳಲ್ಲಿ ಶಿಕ್ಷಣದ ಮೂಲಕ ಪಡೆಯುವಂಥದ್ದು. ಹಾಗೆಂದು ಜ್ಞಾನವನ್ನು ಕೇವಲ ಶಾಲಾ, ಕಾಲೇಜು ಕಲಿಕೆಗೆ ಸೀಮಿತಗೊಳಿಸುವ ಹಾಗಿಲ್ಲ. ಜ್ಞಾನಾರ್ಜನೆ ಹರಿಯುವ ನೀರಿನಂತೆ ನಿತ್ಯ ನಿರಂತರ.
ಬುದ್ಧಿ, ಶಕ್ತಿ, ಆಸಕ್ತಿ ಇತ್ಯಾದಿಗಳಿಗನುಸಾರವಾಗಿ ಯಾರು, ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಕೃಷಿಕನ ಮಗ ಉದ್ಯಮಿಯಾಗಬಹುದು. ಉದ್ಯಮಿಯ ಮಗ ಕೃಷಿಯಲ್ಲಿ ತೊಡಗಿಕೊಳ್ಳಬಹುದು. ಅವರವರ ಇಚ್ಛೆಯನುಸಾರ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕಾಗಿ ವ್ಯವಸ್ಥಿತವಾದ ಶಿಕ್ಷಣವನ್ನು ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ.
ಶಾಲೆ – ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲೇ ಕೌಶಲಯುಕ್ತ ಶಿಕ್ಷಣಕ್ಕೆ ಆದ್ಯತೆ ನೀಡುವ ಕೆಲಸ ಇನ್ನೂ ಹೆಚ್ಚಬೇಕಿದೆ. ಮೈಸೂರಿನ ‘ಇನ್ಸ್ಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್’ ಮತ್ತು ಧಾರವಾಡದ ‘ಎಸ್.ಡಿ.ಎಂ. ವಿಶ್ವವಿದ್ಯಾಲಯ’ದಲ್ಲಿ ‘ಬೆಂಗಳೂರು ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟಿçÃ’ಯ ಸಹಕಾರದೊಂದಿಗೆ ನೋಡಲ್ ಕೇಂದ್ರಗಳನ್ನು ಧರ್ಮಸ್ಥಳದ ವತಿಯಿಂದ ಆರಂಭಿಸಿದೆವು. ಪ್ರಾಯೋಗಿಕ ಕಾರ್ಪೋರೇಟ್ ಶಿಕ್ಷಣದ ಜೊತೆಗೆ ನೈತಿಕ, ಸಾಮಾಜಿಕ ಜವಾಬ್ದಾರಿ ಮತ್ತು ಸುಸ್ಥಿರತೆ ಬಗ್ಗೆ ಅರಿವು ವಿದ್ಯಾರ್ಥಿಗಳಿಗೆ ಲಭಿಸಬೇಕು ಎಂಬುವುದು ಇದರ ಉದ್ದೇಶ. ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸುತ್ತಿರುವ ಎಲ್ಲ ಸಂಸ್ಥೆಗಳಲ್ಲಿ, ಭಾರತೀಯ ನೀತಿ ಮತ್ತು ಮೌಲ್ಯಗಳ ತಿಳುವಳಿಕೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಸುಗಮ ಕಲಿಕೆಗೆ ಪೂರಕ ಹಾಗೂ ಅವಶ್ಯಕವಾಗಿರುವ ಆಧುನಿಕ ತಂತ್ರಜ್ಞಾನಗಳನ್ನು ಸಂದರ್ಭಾನುಸಾರ ಬಳಸುವುದರ ಜೊತೆಗೆ ನೈಜ ಭಾರತೀಯ ಮೌಲ್ಯ, ಮನೋಭಾವಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಕಂಡುಕೊಳ್ಳುವAತೆ ಮಾಡುವುದು, ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ವಿಶ್ವದಲ್ಲಿ ಎಲ್ಲ ರಂಗದಲ್ಲಿ ಆಗಿರುವಂತಹ ಪ್ರಗತಿಯು ಕ್ಷಣ-ಕ್ಷಣಕ್ಕೂ ಸಂಗ್ರಹಿಸಿದ ಜ್ಞಾನದಿಂದಾಗಿದೆ. ಈ ಜ್ಞಾನದ ಜೊತೆಗೆ ಕೌಶಲಗಳು ಬೆರೆತಾಗ ಮತ್ತಷ್ಟು ಸಂಶೋಧನೆ, ಅಭಿವೃದ್ಧಿ, ಪ್ರಗತಿಗಳಾಗಿರುವುದನ್ನು ಕಾಣಬಹುದು. ಉದಾಹರಣೆಗೆ, ಒಂದು ಚಕ್ರ ಉರುಳುತ್ತೆ ಎಂಬುದನ್ನು ಮೊದಲಿಗೆ ಕಂಡುಕೊAಡರು. ಚಕ್ರದ ಕುರಿತಾದ ಜ್ಞಾನ ವಿಸ್ತಾರಗೊಂಡAತೆ ಕೌಶಲಗಳನ್ನು ಉಪಯೋಗಿಸಿ ಚಕ್ರಗಳನ್ನು ವಾಹನಕ್ಕೆ, ರಾಟೆ, ವಿವಿಧ ಯಂತ್ರೋಪಕರಣಗಳಿಗೆ ಹೀಗೆ ನಾನಾ ಬಗೆಯಲ್ಲಿ ಬಳಕೆ ಮಾಡಿಕೊಂಡರು. ಇಂದಿನ ದಿನಗಳಲ್ಲಿ ಚಕ್ರದಿಂದ ಅನೇಕ ಸಂಶೋಧನೆಗಳು ಮತ್ತು ಸಾಧನೆಗಳಾಗಿವೆ. ಹೀಗೆ ಸಾಧಿಸಿದ ಪ್ರಗತಿ ಕೂಡಾ ಒಂದೇ ದಿನದಲ್ಲಿ ಆಗಿದ್ದಲ್ಲ. ವಿದ್ಯೆ, ಕಣ – ಕಣವಾಗಿ ಸಂಗ್ರಹಿಸಿದ ವಿಷಯ, ಕೌಶಲಗಳಿಂದ ಆಗಿದೆ.
ಒಮ್ಮೆ ನಾಯಕನೊಬ್ಬ ತನ್ನ ನಂತರದ ನಾಯಕನಿಗಾಗಿ ತಲಾಶ್ ನಡೆಸುತ್ತಿದ್ದ. ವಿವಿಧ ಪರೀಕ್ಷೆಗಳನ್ನು ಒಡ್ಡುತ್ತಿದ್ದ. ತಲಾ ನಾಲ್ಕು ಜನರುಳ್ಳ ಎರಡು ತಂಡಗಳನ್ನು ಮಾಡಿ ಅವರ ಕೈಯಲ್ಲಿ ಒಂದೊAದು ಕೊಡವನ್ನು ನೀಡಲಾಯಿತು. ಬಳಿಕ ಅವರನ್ನುದ್ದೇಶಿಸಿ ‘ನಾಳೆ ಬೆಳಗ್ಗೆ ೧೦ ಗಂಟೆಯೊಳಗೆ ಈ ಕೊಡದ ತುಂಬ ನೀರನ್ನು ತುಂಬಿಸಬೇಕು’ ಎಂಬ ಆದೇಶವನ್ನು ಕೊಟ್ಟನು. ಅವರನ್ನು ಹುಲ್ಲುಗಾವಲಿರುವ ಪ್ರದೇಶದಲ್ಲಿ ಬಿಡಲಾಯಿತು. ತಂಡಗಳಲ್ಲಿ ಇದ್ದವರ ಬಳಿ ಉಟ್ಟ ಬಟ್ಟೆ ಹೊರತು ಬೇರಾವುದೇ ಸಲಕರಣೆ, ವ್ಯವಸ್ಥೆಗಳಿರಲಿಲ್ಲ. ಇದ್ದದ್ದು ಒಂದೊ0ದು ಕೊಡ ಮಾತ್ರ. ‘ಎ’ ತಂಡದ ನಾಲ್ವರು ಕುಳಿತು ಚರ್ಚಿಸಿ ನೀರನ್ನು ಹೇಗೆ ತುಂಬುವುದೆ0ದು ಯೋಚನೆ ಮಾಡಿದರು. ಬಾವಿ ಸಿಗುತ್ತದೋ, ಕೊಳ ಸಿಗುತ್ತದೋ ಎಂದು ಹುಲ್ಲುಗಾವಲಿನಲ್ಲಿ ಅಲೆಯತೊಡಗಿದರು. ‘ಬಿ’ ತಂಡದ ಸದಸ್ಯರು ಕೂಡ ಕುಳಿತು ಸಮಾಲೋಚಿಸಿದರು. ಅವರಲ್ಲಿ ಒಬ್ಬ ‘ಇಲ್ಲಿ ಯಾವುದೇ ಕೆರೆ, ಬಾವಿಗಳು ಇರುವಂತೆ ತೋಚುತ್ತಿಲ್ಲ. ಆದರೆ ನಾಳೆ ಬೆಳಗ್ಗೆ 10 ಗಂಟೆಯೊಳಗೆ ಕೊಡದ ತುಂಬ ನೀರು ತುಂಬಬಹುದು. ಅದು ಹೇಗೆಂದರೆ ರಾತ್ರಿಯಾದ ಮೇಲೆ ಹುಲ್ಲಿನ ಮೇಲೆ ಇಬ್ಬನಿ ಮೂಡುತ್ತದೆ ಅದನ್ನು ಸಂಗ್ರಹಿಸಬೇಕು. ಅದನ್ನು ಸಂಗ್ರಹಿಸಲು ನಮ್ಮ ಬಳಿ ಯಾವುದೇ ಸಾಧನಗಳಿಲ್ಲ. ಹಾಗಾಗಿ ನಮ್ಮ ಬಳಿಯಿರುವ ಅಂಗಿಯನ್ನು ಹುಲ್ಲಿನ ಮೇಲೆ ಸವರುತ್ತ ಹೋದಾಗ ನೀರಿನಾಂಶವನ್ನು ಬಟ್ಟೆ ಹೀರುತ್ತದೆ. ಬಟ್ಟೆಯನ್ನು ಹಿಂಡಿದಾಗ ನೀರು ದೊರೆಯುತ್ತದೆ’ ಎಂದ. ತಂಡದ ಮೂರು ಮಂದಿಯನ್ನು ಆ ಕೆಲಸಕ್ಕೆ ಒಪ್ಪಿಸಿ ಕೆಲಸವನ್ನು ಹಂಚಿಕೆ ಮಾಡಿದ. ಮರುದಿನ ಊರಿನ ನಾಯಕ ಬಂದಾಗ ‘ಬಿ’ ತಂಡದವರಲ್ಲಿ ತುಂಬಿದ ಕೊಡವಿತ್ತು. ‘ಎ’ ತಂಡದವರು ಖಾಲಿ ಕೊಡದೊಂದಿಗೆ ಮರಳಿದರು. ‘ಬಿ’ ತಂಡದಲ್ಲಿ ನಾಯಕನಂತೆ ಇದ್ದ ಯುವಕ ತಾವು ಹೇಗೆ ನೀರನ್ನು ಸಂಗ್ರಹಿಸಿದೆವು ಎಂಬೆಲ್ಲ ವಿಚಾರಗಳನ್ನು ವಿಸ್ತೃತವಾಗಿ ತಿಳಿಸಿದ. ಊರಿನ ನಾಯಕ ಯುವಕನ ಜಾಣ್ಮೆ ಹಾಗೂ ನಾಯಕತ್ವ ಗುಣವನ್ನು ಮೆಚ್ಚಿಕೊಂಡ. ಇದು ಒಂದು ಉದಾಹರಣೆಯಷ್ಟೇ. ಇಂದು ಕಾರ್ಪೋರೇಟ್ ಸಂಸ್ಥೆಗಳು, ಉದ್ಯಮಗಳು ಕಷ್ಟಪಟ್ಟು ಕೆಲಸ ಮಾಡುವವರಿಗಿಂತ ಹೆಚ್ಚಾಗಿ ಜಾಣ್ಮೆಯಿಂದ ಕೆಲಸ ಮಾಡುವವರಿಗೆ ಆದ್ಯತೆ ನೀಡುತ್ತವೆ. ಹಾಗಾಗಿ ಯುವ ಸಮೂಹವನ್ನು ತರಬೇತಿಗಳೊಂದಿಗೆ ಕೌಶಲಯುತರನ್ನಾಗಿಸಬೇಕಾದುದು ಅಗತ್ಯ.
ಸಂಸಾರದ ನಿರ್ವಹಣೆಯಿಂದ ಹಿಡಿದು ಬದುಕಿನ ಎಲ್ಲ ರಂಗದಲ್ಲಿಯೂ ಆಡಳಿತ ನಿರ್ವಹಣೆಯ ವಿಷಯ ಸೇರಿಕೊಳ್ಳುತ್ತದೆ. ಸಂಸಾರ ನಿರ್ವಹಿಸುವುದು ಒಂದು ಕಲೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಷ್ಟೋ ಜನ ಆರ್ಥಿಕ ಸಂಕಷ್ಟದಿ0ದ ಬಳಲಿದ್ದಾರೆ. ದಿನನಿತ್ಯದ ಖರ್ಚುಗಳಿಗೆ ಪರದಾಡಿದ್ದಾರೆ. ಉಳಿತಾಯ ಮಾಡಿದವರು ಮಾತ್ರ ಸಂಸಾರವನ್ನು ಸಮರ್ಪಕ ರೀತಿಯಲ್ಲಿ ಸರಿದೂಗಿಸಿಕೊಂಡು ಹೋಗುವಲ್ಲಿ ಯಶಸ್ಸು ಕಂಡಿದ್ದಾರೆ. ಹನಿ ಹನಿ ನೀರು ಕೂಡಿ ಹಳ್ಳವಾದ ಹಾಗೆ ಸಣ್ಣ ಉಳಿತಾಯಗಳು ಕಷ್ಟಕಾಲದಲ್ಲಿ ನೆರವಾಗುತ್ತವೆ. ಇದಕ್ಕೆ ಕೌಶಲದ ಅಗತ್ಯವಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ತನ್ನ ಸದಸ್ಯರಲ್ಲಿ ವಾರಕ್ಕೆ ರೂ. 10 ರಿಂದ ರೂ. 20 ರಂತೆ ಉಳಿತಾಯ ಮಾಡುವಂತೆ ಪ್ರೇರೇಪಿಸಿದ್ದು ಇದರಿಂದ ಕಳೆದ ಇಪ್ಪತ್ತೆöÊದು ವರ್ಷದಲ್ಲಿ ರೂ. 4,200 ಕೋಟಿ ಉಳಿತಾಯವಾಗಿದೆ. ಅನೇಕ ಬಾರಿ ಉಳಿತಾಯದ ಸಣ್ಣ ಮೊತ್ತವನ್ನು ಕಂಡು ಇಷ್ಟೇನಾ! ಎಂದು ಮೂಗು ಮುರಿದವರಿದ್ದಾರೆ. ಆದರೆ ಸಂಗ್ರಹವಾದ ಉಳಿತಾಯದ ಹಣದ ಮೂಲಕ ಸಾಲ ಪಡೆದು ವ್ಯವಹಾರದಲ್ಲಿ ತೊಡಗಿ ಯಶಸ್ವಿಯಾದ ಅನೇಕ ಫಲಾನುಭವಿಗಳಿದ್ದಾರೆ. ಒಂದೇ ದಿನದಲ್ಲಿ ಕೋಟಿಗಟ್ಟಲೆ ಸಂಪಾದನೆ ಆಗುವುದಿಲ್ಲ. ಬೀಜ ಗಿಡವಾಗಿ, ಮರವಾಗಿ ಫಸಲು ಕೊಡಲು ಸಾಕಷ್ಟು ಸಮಯ ತೆಗೆದುಕೊಳ್ಳುವಂತೆ ಹಣ ಸಂಪಾದನೆಗೂ ಸಮಯ ಅಗತ್ಯ. ಸೂಕ್ತ ಬಂಡವಾಳದ ಮೂಲಕ ಧನಸಂಗ್ರಹ ಸಾಧ್ಯ ಎಂಬುದನ್ನು ಅರಿಯಬೇಕು. ಇವೆಲ್ಲವು ಕೌಶಲದಿಂದ ಮಾತ್ರ ಸಾಧ್ಯ. ಶಿಕ್ಷಣ ಮತ್ತು ಕೌಶಲ ಒಂದೇ ನಾಣ್ಯದ ಎರಡು ಮುಖಗಳು. ಅವುಗಳು ಜೊತೆಗಿದ್ದರೆ ರಾಷ್ಟçದ ಅಭಿವೃದ್ಧಿಯೂ ಸುಲಭ ಸಾಧ್ಯ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *