ಸ್ವಸಹಾಯ ಸಂಘಗಳಿಗೆ ರಕ್ಷಣೆ ನೀಡುವ ‘ಪ್ರಗತಿರಕ್ಷಾ ಕವಚ’

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ಗ್ರಾಮಾಭಿವೃದ್ಧಿ ಯೋಜನೆಯ ನಮ್ಮ ಸ್ವಸಹಾಯ ಸಂಘಗಳಿoದ ಇದೀಗ ಸುಮಾರು 40 ಲಕ್ಷ ಸದಸ್ಯರು ಸಾಲಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನವರು ಮಹಿಳೆಯರೇ ಆಗಿರುವುದರಿಂದ ಉದ್ದೇಶಗಳಿಗೆ ಪಡೆದುಕೊಂಡ ಸಾಲಗಳನ್ನು ಮನೆಯಲ್ಲಿ ದುಡಿಯುತ್ತಿರುವ ಗಂಡಸರಿಗೆ ನೀಡಿ ವ್ಯವಹಾರ ನಡೆಸುತ್ತಾರೆ. ಪ್ರತಿ ವಾರ ಕಂತನ್ನು ಪಾವತಿಸುತ್ತಾರೆ. ಅಕಸ್ಮಾತ್ ಸಾಲ ಪಡೆದುಕೊಂಡ ಸದಸ್ಯರಾಗಲಿ ಅಥವಾ ಅವರು ಪಡೆದುಕೊಂಡ ಹಣವನ್ನು ವಿನಿಯೋಗಿಸುವ ಕುಟುಂಬದ ಸದಸ್ಯರಾಗಲಿ ಮರಣ ಹೊಂದಿದರೆ ವ್ಯವಹಾರ ಕುಂಠಿತವಾಗಿ ಸಾಲ ಮರುಪಾವತಿ ಕಷ್ಟವಾಗುತ್ತದೆ. ಕಂತು ಬಾಕಿಯಾದೊಡನೆ ಪ್ರಥಮವಾಗಿ ಸಮಸ್ಯೆಯಾಗುವುದು ಆ ಸ್ವಸಹಾಯ ಸಂಘದ ಇತರ ಸದಸ್ಯರಿಗೆ. ಯಾಕೆಂದರೆ ಕಂತುಬಾಕಿ ಇರುವ ಸಂಘಗಳಿಗೆ ಬ್ಯಾಂಕ್‌ನವರು ಸಾಲವನ್ನು ನೀಡುವುದಿಲ್ಲ. ಹಾಗಾಗಿ ಯಾರೇ ಸದಸ್ಯರು ಕಂತು ಬಾಕಿ ಮಾಡಿದರೂ ಇತರ ಸದಸ್ಯರಿಗೆ ಆರ್ಥಿಕ ನೆರವು ಪಡೆದುಕೊಳ್ಳಲು ಕಷ್ಟವಾಗುತ್ತದೆ.
ಈ ಹಿನ್ನೆಲೆಯಲ್ಲಿ ಯೋಜನೆ ಕಂಡುಕೊoಡ ಉತ್ತರ ‘ಪ್ರಗತಿರಕ್ಷಾ ಕವಚ’. ಈ ಕಾರ್ಯಕ್ರಮದಲ್ಲಿ ಎಲ್ಲಾ ಸ್ವಸಹಾಯ ಸಂಘಗಳ ಸದಸ್ಯರು ತಾವು ಪಡೆದುಕೊಂಡ ಸಾಲದ ಮೊತ್ತಕ್ಕೆ ಸಮಾನವಾಗಿ ಜೀವವಿಮೆ ಮಾಡಿಸುತ್ತಾರೆ. ಈ ವಿಮೆಯ ಅವಧಿ ಒಂದು ವರ್ಷ ಆಗಿರುತ್ತದೆ. ಈ ಅವಧಿಯಲ್ಲಿ ಸದಸ್ಯರು ಪಡೆದುಕೊಂಡ ಸಾಲದ ಒಟ್ಟು ಮೊತ್ತ ಅಥವಾ ಈ ವಿಮಾ ಕಾರ್ಯಕ್ರಮವನ್ನು ಪ್ರಾರಂಭಿಸಿದ ಆಗಸ್ಟ್ 01ರಿಂದ ಚಾಲ್ತಿ ಇರುವ ಸದಸ್ಯರ ಸಾಲದ ಮೊತ್ತಕ್ಕೆ ಸರಿಯಾಗಿ ವಿಮೆ ಮಾಡಿಸಲಾಗುತ್ತದೆ. ಹಿಂದಿನ ಸಾಲ ಚಾಲ್ತಿಯಲ್ಲಿದ್ದು ಮತ್ತೆ ಅವರು ಸಾಲ ಪಡೆದುಕೊಂಡರೆ ಆ ಮೊತ್ತಕ್ಕೆ ಹೆಚ್ಚುವರಿ ವಿಮೆಯನ್ನು ಮಾಡಿಸಲಾಗುತ್ತದೆ. ಈ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ ಸಾಲ ಪಡೆದುಕೊಂಡವರನ್ನು ಮಾತ್ರವಲ್ಲದೆ ಸಾಲವನ್ನು ಬಳಕೆ ಮಾಡುವ ವಿನಿಯೋಗದಾರರ ಹೆಸರಿನಲ್ಲಿಯೂ ಇದೇ ಮೊತ್ತಕ್ಕೆ ಸರಿಯಾಗಿ ವಿಮೆ ಮಾಡಿಸಲಾಗುತ್ತದೆ. ಹೀಗಾಗಿ ವಿಮೆ ಮಾಡಿದ ಸದಸ್ಯರು ಅಥವಾ ಅವರ ಸಾಲದ ವಿನಿಯೋಗದಾರರು ಮರಣ ಹೊಂದಿದರೂ ವಿಮಾ ಸೌಲಭ್ಯ ದೊರೆಯುತ್ತದೆ. ಅಂದರೆ ಅವರು ಪಡೆದುಕೊಂಡ ಸಾಲವನ್ನು ವಿಮಾ ಕಂಪೆನಿಯು ಚುಕ್ತಾ ಮಾಡುತ್ತದೆ. ಇದರಿಂದಾಗಿ ಸಂಘಗಳಲ್ಲಿ ಕಂತು ಬಾಕಿ ಕಂಡು ಬರುವುದಿಲ್ಲ. ಮಾತ್ರವಲ್ಲ ಮರಣ ಹೊಂದಿದ ಸದಸ್ಯರ ಕುಟುಂಬದಲ್ಲಿಯೂ ಮರುಪಾವತಿಯ ಬಗ್ಗೆ ಒತ್ತಡ ಇರುವುದಿಲ್ಲ.
ಈ ಕಾರ್ಯಕ್ರಮವನ್ನು ನಮ್ಮ ಸಂಘಗಳು ಸರಿಯಾಗಿ ಅರ್ಥಮಾಡಿಕೊಂಡು ಈ ಕಾರ್ಯಕ್ರಮಕ್ಕೆ ಸಂಘದ ಸದಸ್ಯರು ಮತ್ತು ವಿನಿಯೋಗದಾರರನ್ನು ಸೇರಿಸುವ ಸಮಯದಲ್ಲಿ ಯಾವುದೇ ತಪಾವತುಗಳು ಆಗದಂತೆ ನೋಡಿಕೊಂಡಲ್ಲಿ ಸಂಘಗಳಿಗೆ ಬಹಳಷ್ಟು ಲಾಭವಾಗುವುದು. ಆದರೆ ನಾನು ಗಮನಿಸಿದಂತೆ ನೋಂದಾವಣೆ ಸಮಯದಲ್ಲಿ ಗಮನಕೊಡದೆ ಇರುವುದರಿಂದ ಅರ್ಹರಲ್ಲದ ಸದಸ್ಯರ ನೋಂದಾವಣೆ, ಹೆಸರಿನಲ್ಲಿ ವ್ಯತ್ಯಾಸ, ವಯಸ್ಸಿನಲ್ಲಿ ವ್ಯತ್ಯಾಸ ಈ ರೀತಿ ಅನೇಕ ತಪಾವತುಗಳು ಉಂಟಾಗಿ ಮರಣ ಹೊಂದಿದಲ್ಲಿ ಕ್ಲೈಮ್ ಪಡೆದುಕೊಳ್ಳಲು ಸಮಸ್ಯೆ ಉಂಟಾಗುತ್ತದೆ.
ಆದಾಗ್ಯೂ ಪ್ರಗತಿರಕ್ಷಾ ಕವಚ ಕಾರ್ಯಕ್ರಮದಲ್ಲಿ ವಿಮಾ ಕಂಪೆನಿಯಿAದ ಉತ್ತಮ ಸೌಲಭ್ಯ ಲಭ್ಯವಾಗಿದೆ. ಈ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ‘ಭಾರತೀಯ ಜೀವ ವಿಮಾ ನಿಗಮ’ದವರು ಕಳೆದ ಮೂರು ವರ್ಷಗಳಲ್ಲಿ 70,000ಕ್ಕೂ ಮಿಕ್ಕಿದ ಕ್ಲೈಮ್‌ಗಳನ್ನು ಅಂಗೀಕರಿಸಿದ್ದಾರೆ. ಮತ್ತು ರೂ. 386 ಕೋಟಿ ಮೊತ್ತದ ಪಾವತಿಯನ್ನು ಮಾಡಿದ್ದಾರೆ. ಇದರಿಂದ ವಿಮಾ ಕಂಪೆನಿಗೆ ನಷ್ಟವಾದರೂ ಸಹಿತ ದುರ್ಬಲ ವರ್ಗದ ಸ್ವಸಹಾಯ ಚಳವಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಜೀವ ವಿಮಾ ನಿಗಮ ಸಂಸ್ಥೆಯವರು ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕಳೆದ ವರ್ಷ ಕೋವಿಡ್ 9ನೇ ಅಲೆ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಕಷ್ಟು ಜೀವ ಹಾನಿಯಾಗಿದ್ದು 35,000ಕ್ಕೂ ಮಿಕ್ಕಿದ ಕ್ಲೈಮ್ ಗಳನ್ನು ವಿಮಾ ಕಂಪೆನಿಯು ಪಾವತಿಸಬೇಕಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜೀವ ವಿಮಾ ನಿಗಮದವರು ಈ ಬಾರಿಯ ಪ್ರಗತಿರಕ್ಷಾ ಕವಚದ ಮೇಲಿರುವ ಶುಲ್ಕವನ್ನು ಹೆಚ್ಚಿಸಿರುತ್ತಾರೆ. ರೂ.1,000ಕ್ಕೆ ವಿಮೆ ದರ ರೂ.೫.೧೧ರಷ್ಟು ಮೊತ್ತದ ಶುಲ್ಕವನ್ನು ವಿಧಿಸುತ್ತಿದೆ. ವಿನಿಯೋಗದಾರರ ವಿಮೆ ಮೊತ್ತವನ್ನು ಸೇರಿಸಿದರೆ ರೂ. 1ಲಕ್ಷ ಸಾಲ ಪಡೆದುಕೊಂಡ ಒಬ್ಬರು ಸದಸ್ಯರು ಅದಕ್ಕೆ ವಿಮಾ ಮೊತ್ತವಾಗಿ ರೂ.1,022 (ಸದಸ್ಯರು ಮತ್ತು ವಿನಿಯೋಗದಾರರಿಗೆ ಸೇರಿ) ಪಾವತಿಸಬೇಕಾಗುತ್ತದೆ. ಆಗಸ್ಟ್ 1ರಿಂದ ಪ್ರಾರಂಭಗೊಳ್ಳಬೇಕಾದ ಈ ಕಾರ್ಯಕ್ರಮಕ್ಕೆ ಈಗಾಗಲೆ ಸಂಘಗಳಿAದ ವಿಮಾ ಶುಲ್ಕವನ್ನು ಪಡೆದುಕೊಂಡು ವಿಮಾ ಕಂಪೆನಿಗೆ ಪಾವತಿಸಲಾಗಿದೆ.
ವಿಮ ಶುಲ್ಕ ಕಡಿಮೆಯಾಗಬೇಕೆಂದರೆ ಮರಣ ಪ್ರಮಾಣ ಕಡಿಮೆಯಾಗಬೇಕು. ಮತ್ತು ನಾವು ಮಾಡುವ ತಪಾವತುಗಳು ಕಡಿಮೆಯಾಗಬೇಕು. ಆದುದರಿಂದ ಈ ನಿಟ್ಟಿನಲ್ಲಿ ಯೋಜನೆಯ ಸದಸ್ಯರು ಮತ್ತು ಕಾರ್ಯಕರ್ತರು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.
1. ನಾವೆಲ್ಲರೂ ಎಚ್ಚರಿಕೆಯಿಂದ ಇದ್ದು ಕೊರೊನಾ 3ನೇ ಅಲೆ ಬಾರದಂತೆ ತಡೆಯೋಣ. ಎಲ್ಲರೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳೋಣ.
ಆ ಮೂಲಕ ಮರಣ ಪ್ರಮಾಣವನ್ನು ಕಡಿಮೆಗೊಳಿಸೋಣ.
2. ಪ್ರಗತಿರಕ್ಷಾ ಕವಚ ನೋಂದಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ತಪಾವತುಗಳು ಆಗದಂತೆ ಎಚ್ಚರಿಕೆ ವಹಿಸೋಣ.
ಆರೋಗ್ಯವಾಗಿರೋಣ, ವಿಮಾ ಕಂಪೆನಿಯನ್ನು ದೂರವಾಗಿರಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *