ಸ್ವಾತಂತ್ರ‍್ಯ ನಮ್ಮ ಋಣ

ಎಲ್ಲಾ ‘ನಿರಂತರ’ ಓದುಗರಿಗೆ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಒಂದು ದೇಶದ ಸ್ವತಂತ್ರ್ಯ ಎಷ್ಟು ಅಮೂಲ್ಯ ಮತ್ತು ಮಹತ್ವ ಎನ್ನುವುದು ಅಂದಿನ ಸ್ವತಂತ್ರ್ಯ ಹೋರಾಟಗಾರರಿಗೆ ಮಾತ್ರ ತಿಳಿದಿತ್ತು. ನಮ್ಮ ಪೂರ್ವಜರ ಮಹಾನ್ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರ್ಯದ ಬದುಕನ್ನು ನಡೆಸುತ್ತಿದ್ದೇವೆ. ಆದರೆ ಸ್ವತಂತ್ರ್ಯದ ನಿಜವಾದ ಮೌಲ್ಯ ಮತ್ತು ಮಹತ್ವದ ಬಗ್ಗೆ ಸರಿಯಾದ ಅರಿವನ್ನು ನಾವು ಪರಿಪೂರ್ಣವಾಗಿ ಹೊಂದಿಲ್ಲ.
ಆಗಸ್ಟ್ 15, 1947ರವರೆಗೆ ಅಂದಿನ ಸ್ವತಂತ್ರ್ಯಹೋರಾಟಗಾರರು ಸ್ವತಂತ್ರ್ಯಕ್ಕಾಗಿ ದೇಶಾದ್ಯಂತ ಸಾಕಷ್ಟು ದಂಗೆಗಳನ್ನು ಕೈಗೊಂಡು ತಮ್ಮ ಪ್ರಾಣತ್ಯಾಗಕ್ಕೂ ಹೆದರದೆ ಹೋರಾಟವನ್ನು ಮಾಡಿದರು. 1767ರಿಂದ 1799ರವರೆಗೆ ಆಂಗ್ಲೋ-ಮೈಸೂರು ಯುದ್ಧ, 1775ರಿಂದ 1818ರವರೆಗೆ ಆಂಗ್ಲೋ-ಮರಾಠ ಯುದ್ಧ, 1824ರಲ್ಲಿ ಕಿತ್ತೂರು ದಂಗೆ, 1857ರಲ್ಲಿ ಸಿಪಾಯಿ ದಂಗೆ, ಧೋಂಡಿಯವಾಗ್ ದಂಗೆ, 1905ರಿಂದ 1911ರವರೆಗೆ ಸ್ವದೇಶಿ ಚಳುವಳಿ, ಬಂಗಾಳ ವಿಭಜನೆ ವಿರೋಧಿ ಚಳುವಳಿ, 1914ರಿಂದ 1917ರವರೆಗೆ ಗದರ್ ದಂಗೆ, 1919ರಲ್ಲಿ ಜಲಿಯನ್‌ವಾಲಾಭಾಗ್ ಹತ್ಯಾಕಾಂಡ, 1920ರಲ್ಲಿ ಅಸಹಕಾರ ಚಳುವಳಿ, 1925ರ ಕಾಕೋರಿ ಪಿತೂರಿ-ರೈಲು ದರೋಡೆ, 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಹೀಗೆ ಲಕ್ಷಾಂತರ ಮಹಾನ್ ತ್ಯಾಗಿಗಳು ಇನ್ನೂ ಅನೇಕ ಹೋರಾಟಗಳನ್ನು ಕೈಗೊಂಡರು. ಈ ದಂಗೆಗಳಲ್ಲಿ ಅನೇಕ ಸ್ವತಂತ್ರ್ಯಹೋರಾಟಗಾರರಿಗೆ ತಾವು ಬ್ರಿಟಿಷರ ಗುಂಡಿಗೆ ಬಲಿಯಾಗುತ್ತೇವೆಂದು ಗೊತ್ತಿದ್ದರೂ ಹೋರಾಟದಿಂದ ಹಿಂಜರಿಯಲಿಲ್ಲ. ತನ್ನ ಪ್ರಾಣತ್ಯಾಗದೊಂದಿಗೆ ಸ್ವತಂತ್ರ್ಯ ಲಭಿಸಿದರೂ, ಆ ಸ್ವತಂತ್ರ್ಯವನ್ನು ಸವಿಯಲು ತಾನಿರುವುದಿಲ್ಲ ಎಂದು ತಿಳಿದಿದ್ದರೂ, ತನ್ನ ಜನ್ಮಭೂಮಿಗಾಗಿ, ತನ್ನ ತಾಯ್ನಾಡಿಗಾಗಿ, ಮುಂದಿನ ಭಾರತಾಂಬೆಯ ಮಕ್ಕಳಿಗಾಗಿ ಪ್ರಾಣತ್ಯಾಗಕ್ಕೆ ಸಿದ್ಧರಾದರೆಂದರೆ ಅವರಂತಹ ತ್ಯಾಗಪುರುಷರು ಮತ್ತೊಬ್ಬರಿರಲಾರರು. ಸಾಮಾನ್ಯ ಪ್ರಜೆ, ರೈತರು, ಕೂಲಿ ಕಾರ್ಮಿಕರು, ದೀನದಲಿತರು, ಶಿಕ್ಷಣವಂತರು, ಅವಿದ್ಯಾವಂತರು, ಬಡವರು, ಶ್ರೀಮಂತರು ಎಂಬ ಯಾವ ಬೇಧಭಾವಗಳಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಅಲ್ಲಲ್ಲಿ ಹೋರಾಟ ಮಾಡುತ್ತಿದ್ದರು. ಇಡೀ ದೇಶವನ್ನೇ ಒಗ್ಗೂಡಿಸುವಂತಹ ವ್ಯವಸ್ಥೆಗಳು, ಸಂಪರ್ಕಗಳು, ಮಾಧ್ಯಮಗಳು ಅಂದು ಇಲ್ಲದೇ ಇದ್ದುದರಿಂದ ಹೋರಾಟಗಳು ಎಷ್ಟೇ ತೀವ್ರವಾಗಿದ್ದರೂ ಸ್ಥಳೀಯವಾಗಿ ಅಲ್ಲಲ್ಲಿ ಆಗುತ್ತಿದ್ದುದರಿಂದ ಬ್ರಿಟಿಷರು ಅವುಗಳನ್ನು ಸುಲಭವಾಗಿ ಹತ್ತಿಕ್ಕುತ್ತಿದ್ದರು.
ಚಂದ್ರಶೇಖರ್ ಆಜಾದ್, ಸುಭಾಶ್ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಮಂಗಲ್‌ಪಾoಡೆ, ಝಾನ್ಸಿರಾಣಿ ಲಕ್ಷಿö್ಮÃಬಾಯಿ, ಭಗತ್ ಸಿಂಗ್, ಲಾಲಾ ಲಜಪತ್‌ರಾಯ್, ವೀರ ಸಾವರ್ಕರ್, ಕೃಷ್ಣಗೋಪಾಲ ಜೋಷಿ, ರಾಜಾಗುರು, ಸುಖದೇವ್, ವೀರಪಾಂಡ್ಯ ಕಟ್ಟಬೊಮ್ಮನ್, ಬೇಗಮ್ ಹಜರತ್‌ಮಹಲ್, ಪ್ರೀತಿಲತಾ ವಡ್ಡೇದಾರ್, ರಾಣಿ ಅಬ್ಬಕ್ಕದೇವಿ, ರಾಮ್‌ಪ್ರಸಾದ್ ಬಿಸ್ಮಿಲ್, ಅಶ್ಫಾಕಲ್ಲಾ ಖಾನ್ ಮೊದಲಾದ ಮಹಾನ್ ಹೋರಾಟಗಾರರು ಬ್ರಿಟಿಷರ ವಿರುದ್ಧ ತೀವ್ರ ಹೋರಾಟವನ್ನು ಮಾಡಿದ್ದರೂ ಕೂಡ ಅವುಗಳು ಒಂದು ಪ್ರಾಂತ್ಯದ ಹೋರಾಟವಾದ್ದರಿಂದ ಬ್ರಿಟಿಷರು ಆ ಹೋರಾಟವನ್ನು ಸುಲಭವಾಗಿ ಹತ್ತಿಕ್ಕುತ್ತಿದ್ದರು. ಅಷ್ಟಕ್ಕೇ ನಿಲ್ಲಿಸದೆ ಸ್ವತಂತ್ರ್ಯಹೋರಾಟಗಾರರ ಹತ್ಯೆಯೂ ಆಗುತ್ತಿತ್ತು. ಅನೇಕ ಶತಮಾನಗಳವರೆಗೆ ಈ ಹೋರಾಟಗಳು ಆಗುತ್ತಲೇ ಇದ್ದವು ಎಂದರೆ ವಸಾಹತುಶಾಹಿ ಆಡಳಿತದಲ್ಲಿ ಜನರ ಬದುಕು ಎಷ್ಟೊಂದು ದುಸ್ಥಿತಿಯಲ್ಲಿತ್ತೆಂಬುದು ಅರ್ಥವಾಗುತ್ತದೆ. 18-19ನೇ ಶತಮಾನದಲ್ಲಿ ಭೀಕರ ಬಡತನ, ಸಾಮಾಜಿಕ ಪಿಡುಗುಗಳು, ಅನಾರೋಗ್ಯ, ನಿರುದ್ಯೋಗ ಮುಂತಾದ ತೀವ್ರತರದ ಸಮಸ್ಯೆಗಳು ಇದ್ದರೂ ಕೂಡ ಸ್ವತಂತ್ರ್ಯಕ್ಕಾಗಿ ಇವುಗಳ್ಯಾವುದನ್ನೂ ಲೆಕ್ಕಿಸದೆ ಹೋರಾಡುವ ತುಡಿತ ಅವರಲ್ಲಿತ್ತು. ಇದರರ್ಥ ಮೇಲಿನ ಎಲ್ಲ ಸಮಸ್ಯೆಗಳಿಗಿಂತ ತೀವ್ರವಾದ ಸಮಸ್ಯೆ ವಸಾಹತುಶಾಹಿ ವ್ಯವಸ್ಥೆಯಲ್ಲಿ ಬದುಕುವುದಾಗಿತ್ತು.
ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ದೇಶವೇ ಒಗ್ಗೂಡಿ ಸ್ವತಂತ್ರ್ಯ ಹೋರಾಟಕ್ಕಿಳಿದರೆ ಮಾತ್ರ ಸ್ವತಂತ್ರ್ಯ ಪಡೆಯಲು ಸಾಧ್ಯ ಎಂಬ ಸತ್ಯವನ್ನು ಕಂಡುಕೊoಡರು. ಅವರು ದೇಶದೆಲ್ಲೆಡೆ ಸಂಚರಿಸಿ ರಾಷ್ಟಪ್ರೇಮದ ಸಂಚಲನವನ್ನು ಮೂಡಿಸಿದರು. ಅಹಿಂಸಾ ಮಾರ್ಗದಿಂದ ಅತ್ಯಂತ ತೀವ್ರವಾದ ಹೋರಾಟವನ್ನು ಮಾಡಬಹುದೆಂದು ಜಗತ್ತಿಗೆ ತೋರಿಸಿಕೊಟ್ಟರು. ಲಾಲ್ ಬಹಾದ್ದೂರ್ ಶಾಸ್ತಿç, ಜವಾಹರ್‌ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಮುಂತಾದ ಮಹಾನ್ ವ್ಯಕ್ತಿಗಳು ಮಹಾತ್ಮಾ ಗಾಂಧೀಜಿಯವರಿಗೆ ಪ್ರಬಲವಾದ ಶಕ್ತಿಗಳಾಗಿದ್ದರು. ದೇಶದೆಲ್ಲೆಡೆ ಹಂತಹoತದ ಯೋಜನಾಬದ್ಧವಾದ ಸ್ವತಂತ್ರ್ಯ ಹೋರಾಟಗಳನ್ನು ಕೈಗೊಂಡರು. ಈ ಹೋರಾಟದ ತೀವ್ರತೆಯನ್ನು ತಡೆಯಲಾರದೆ ಕೊನೆಗೂ ಬ್ರಿಟಿಷರು ಭಾರತವನ್ನು ಬಿಟ್ಟು ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಆಗಸ್ಟ್ 15, 1947ರಲ್ಲಿ ನಮ್ಮ ದೇಶಕ್ಕೆ ಅಮೂಲ್ಯವಾದ ಸ್ವತಂತ್ರ್ಯ ದೊರಕಿತು. ಈ ಅಮೂಲ್ಯವಾದ ಸ್ವತಂತ್ರ್ಯ ನಮಗೆ ಸಿಕ್ಕಿರುವುದು ನಮ್ಮ ಪೂರ್ವಜರ ಮಹಾನ್ ತ್ಯಾಗದಿಂದ. ಈ ತ್ಯಾಗದ ಋಣ ನಮ್ಮ ಮೇಲೆ ಇದೆಯೆ ಹೊರತು ಅದು ನಮ್ಮ ಹಕ್ಕಲ್ಲ. ಆದ್ದರಿಂದ ಸ್ವತಂತ್ರ್ಯವನ್ನು ವಿವೇಚನೆಯಿಂದ ಸರ್ವರ ಮೌಲ್ಯಯುತವಾದ ಬದುಕಿಗಾಗಿ ಸದ್ವಿನಿಯೋಗ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಜವಾಬ್ದಾರಿಯುತ ಪ್ರಜೆಗಳಾದ ನಾವು ಈ ಸ್ವತಂತ್ರ್ಯವನ್ನು ಎಂದೆoದಿಗೂ ಸದ್ಬಳಕೆ ಮಾಡಿಕೊಳ್ಳೋಣ.

Facebook
Twitter
WhatsApp
LinkedIn
Telegram